Home
ಸುದ್ದಿಜಾಲ

ಚೀನಾಗೆ ಬಿಗ್‌ ಶಾಕ್‌ ನೀಡಿದ ಭಾರತ! 138 ಬೆಟ್ಟಿಂಗ್‌ ಆ್ಯಪ್‌ಗಳಿಗೆ ಗೇಟ್‌ಪಾಸ್‌!

ಚೀನಾ ಮೂಲದ ಆ್ಯಪ್‌ಗಳಿಗೆ ಭಾರತ ಸರ್ಕಾರ ಮತ್ತೊಮ್ಮೆ ಬಿಗ್‌ ಶಾಕ್‌ ನೀಡಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಈಗಾಗಲೇ ಹಲವು ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದ್ದ ಕೇಂದ್ರ ಸರ್ಕಾರ ಇದೀಗ 138 ಬೆಟ್ಟಿಂಗ್ ಆ್ಯಪ್‌ಗಳ ಜೊತೆಗೆ 94 ಲೋನ್‌ ಆ್ಯಪ್‌ಗಳನ್ನು ಬ್ಯಾನ್‌ ಮಾಡಲು ಮುಂದಾಗಿದೆ. ಚೀನಾ ಮೂಲಕ ಈ ಆ್ಯಪ್‌ಗಳಿಂದ ದೇಶದ ಸರ್ವಭೌಮತ್ವ ಹಾಗೂ ಸುರಕ್ಷತೆಯ ದೃಷ್ಟಿಯಿಂದ ದಕ್ಕೆಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನಾಗೆ ಬಿಗ್‌ ಶಾಕ್‌ ನೀಡಿದ ಭಾರತ! 138 ಬೆಟ್ಟಿಂಗ್‌ ಆ್ಯಪ್‌ಗಳಿಗೆ ಗೇಟ್‌ಪಾಸ್‌!

ಹೌದು, ಚೀನಾ ಮೂಲದ ಅಪ್ಲಿಕೇಶನ್‌ಗಳ ಮೇಳೆ ಭಾರತ ಸರ್ಕಾರದ ಬ್ಯಾನ್‌ ಅಸ್ತ್ರ ಮತ್ತೆ ಮುಂದುವರೆದಿದೆ. ದೇಶದ ಸುರಕ್ಷತೆಗೆ ದಕ್ಕೆ ತರುವ ಆ್ಯಪ್‌ಗಳನ್ನು ಬ್ಯಾನ್‌ ಮಾಡುವ ಮೂಲಕ ಚೀನಾಗೆ ಬಿಗ್‌ ಶಾಕ್‌ ನೀಡಿದೆ. ಇನ್ನು ಈ ಅಪ್ಲಿಕೇಶನ್‌ಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಐಟಿ ಕಾನೂನು ಮೂಲಕ ಬ್ಯಾನ್‌ ಮಾಡಲು ಮುಂದಾಗಿದೆ. ಇದು ಕೇಂದ್ರ ಗೃಹ ಸಚಿವಾಲಯದ ಶಿಪಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಹಾಗಾದ್ರೆ ಭಾರತ ಸರ್ಕಾರ ಚೀನಾ ಮೂಲಕ ಆ್ಯಪ್‌ಗಳನ್ನು ಮತ್ತೆ ಬ್ಯಾನ್‌ ಮಾಡಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಭಾರತದ ಐಟಿ ಕಾನೂನು ಸೆಕ್ಷನ್‌ 69 ರ ಅಡಿಯಲ್ಲಿ ಚೀನಾ ಮೂಲದ ಬೆಟ್ಟಿಂಗ್‌ ಆ್ಯಪ್‌ಗಳನ್ನು ನಿಷೇದ ಮಾಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಲಾಖೆಗೆ ಶಿಪಾರಸ್ಸು ಮಾಡಿದೆ. ಈ ಶಿಪಾರಸ್ಸಿನ ಅನ್ವಯ ಚೀನಾ ಮೂಲದ 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು 94 ಲೋನ್‌ ಆ್ಯಪ್‌ಗಳನ್ನು ಬ್ಯಾನ್‌ ಮಾಡುವ ಸಾಧ್ಯತೆಯಿದೆ. ಈ ಆ್ಯಪ್‌ಗಳು ದೇಶದ ಭದ್ರತೆಗೆ ದಕ್ಕೆ ತರುವ ಕೆಲಸವನ್ನು ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಚೀನಾಗೆ ಬಿಗ್‌ ಶಾಕ್‌ ನೀಡಿದ ಭಾರತ! 138 ಬೆಟ್ಟಿಂಗ್‌ ಆ್ಯಪ್‌ಗಳಿಗೆ ಗೇಟ್‌ಪಾಸ್‌!

2020ರಲ್ಲಿ ಚೀನಾ ಮತ್ತು ಭಾರತದ ನಡುವೆ ಉಂಟಾದ ಗಡಿ ಸಂಘರ್ಷದ ನಂತರ ಚೀನಾ ಮೂಲದ ಆ್ಯಪ್‌ಗಳನ್ನು ಹಂತಹಂತವಾಗಿ ಬ್ಯಾನ್‌ ಮಾಡಲಾಗ್ತಿದೆ. ಈಗಾಗಲೇ ದೇಶದ ಸುರಕ್ಷತೆಗೆ ದಕ್ಕೆ ಹಾಗೂ ಅಪಾಯ ತರುವಂತಹ ಅಪ್ಲಿಕೇಶನ್‌ಗಳನ್ನು ಗುರುತಿಸಿ ಬ್ಯಾನ್‌ ಮಾಡಲಾಗಿದೆ. ಇದೀಗ ಬೆಟ್ಟಿಂಗ್‌ ಆ್ಯಪ್‌ಗಳು ಕೂಡ ದೇಶದಲ್ಲಿ ಕಾನೂನ ಬಾಹಿರ ಕೆಲಸ ನಡೆಸುತ್ತಿರುವುದು ಕಂಡುಬಂದಿರುವುದರಿಂದ ಬ್ಯಾನ್‌ ಮಾಡಲು ಕೇಂದ್ರ ಗೃಹ ಸಚಿವಾಲಯ ಶಿಪಾರಸ್ಸು ಮಾಡಿದೆ.

ಸದ್ಯ ಇದೀಗ ಬ್ಯಾನ್‌ ಮಾಡಲಾಗಿರುವ ಆ್ಯಪ್‌ಗಳು ಭಾರತದಲ್ಲಿ ಬಳಕೆದಾರರು ಬೃಹತ್‌ ಸಾಲದ ಸುಳಿಗೆ ಸಿಲುಕಿಸುವ ಹಾಗೂ ಅವರ ಡೇಟಾವನ್ನು ಕದಿಯುವ ಕೆಲಸವನ್ನು ಮಾಡುತ್ತಿವೆ. ಜೊತೆಗೆ ದೇಶದಲ್ಲಿ ಬೇಹುಗಾರಿಕೆ ನಡೆಸುತ್ತಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಚೀನಾ ಮೂಲದ ಆ್ಯಪ್‌ಗಳ ಮೇಲೆ ನಿರಂತರ ಸಮರ ಸಾರಿದೆ. ಇನ್ನು ಈ ಆ್ಯಪ್‌ಗಳನ್ನು ಭಾರತ ಸರ್ಕಾರ ಏಕಾಏಕಿ ಬ್ಯಾನ್‌ ಮಾಡಿಲ್ಲ. ಕಳೆದ ಆರು ತಿಂಗಳಿನಿಂದ ಈ ಆ್ಯಪ್‌ಗಳ ಮೇಲೆ ಕೇಂದ್ರ ಸರ್ಕಾರ ನಿಗಾವಹಿಸಿದ್ದು, ಅವುಗಳ ವಿಶ್ಲೇಷಣೇಯನ್ನು ಮಾಡಿದೆ. ಅದರಂತೆ ಈ ಆ್ಯಪ್‌ಗಳು ಥರ್ಡ್‌ ಪಾರ್ಟಿ ಲಿಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರೋದು ಬಹಿರಂಗವಾಗಿದೆ. ಇದೇ ಕಾರಣಕ್ಕೆ ಈ ಆ್ಯಪ್‌ಗಳನ್ನು ಬ್ಯಾನ್‌ ಮಾಡಲಾಗಿದೆ.

ಚೀನಾಗೆ ಬಿಗ್‌ ಶಾಕ್‌ ನೀಡಿದ ಭಾರತ! 138 ಬೆಟ್ಟಿಂಗ್‌ ಆ್ಯಪ್‌ಗಳಿಗೆ ಗೇಟ್‌ಪಾಸ್‌!

ಇದಲ್ಲದೆ ಕೇಂದ್ರ ಗುಪ್ತಚರ ಸಂಸ್ಥೆಗಳು ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಈ ಆ್ಯಪ್‌ಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯಕ್ಕೆ ಮನವಿ ಕೂಡ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಟಿಕ್‌ಟಾಕ್‌ ಸೇರಿದಂತೆ ಅನೇಕ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಿದೆ. ತೀರಾ ಇತ್ತೀಚಿಗೆ ಸ್ವೀಟ್ ಸೆಲ್ಫಿ ಎಚ್‌ಡಿ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಬ್ಯೂಟಿ ಕ್ಯಾಮೆರಾ, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೈವರ್, ಒನ್ಮಿಯೋಜಿ ಅರೆನಾ, ಒನ್ಮಿಯೋಜಿ ಅರೆನಾ, ಚೆಸ್, ಆಪ್‌ಲಾಕ್ ನಂತಹ ಆ್ಯಪ್‌ಗಳನ್ನು ಬ್ಯಾನ್‌ ಮಾಡಿರುವುದನ್ನು ನೆನಪಿಸಿಕೊಳ್ಳಬಹುದು.

Best Mobiles in India

English summary
government is planning to ban 138 betting apps and 94 loan lending apps with Chinese links
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+