ಕರ್ನಾಟಕ ಸರ್ಕಾರದಿಂದ ರೈತರಿಗೆ ಉಚಿತ ಮೈಕ್ರೋಚಿಪ್, ಸಿ.ಸಿ.ಕ್ಯಾಮರಾ!..ಇದು ತಲೆತಿರುಗುವ ಕೆಲಸ!!

|

ಶ್ರೀಗಂಧದ ತವರು ಎಂದೆ ಹೆಸರಾಗಿರುವ ಕರ್ನಾಟಕದಲ್ಲಿ ಶ್ರೀಗಂಧದ ಮರ ಗಿಡಗಳನ್ನು ಉಳಿಸಲು ಸರ್ಕಾರ ತಂತ್ರಜ್ಞಾನದ ಮೊರೆಹೋಗಿದೆ. ಮತ್ತೆ ಶ್ರೀಗಂಧದ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸರ್ಕಾರ ಸಜ್ಜಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ರೈತರು ಗಂಧ ಬೆಳೆಯುವಂತೆ ಮಾಡಲು ಹೊಸ ಯೋಜನೆ ರೂಪಿಸುತ್ತಿರುವುದು ಈಗ ವೈರಲ್ ವಿಷಯವಾಗಿದೆ.

ಹೌದು, ನೀವು ಕೇಳುತ್ತಿರುವುದು ಸತ್ಯ. ಪ್ರತಿ ಗಂಧದ ಗಿಡಗಳಲ್ಲಿಯೂ ಮೈಕ್ರೋಚಿಪ್ ಅನ್ನು ಅಳವಡಿಸಿ, ಹಾಡಹಗಲೇ ಗಂಧದ ಮರವನ್ನೇ ಕದ್ದೊಯ್ಯುವವರನ್ನು ಮಟ್ಟ ಹಾಕುವಂತಹ ಯೋಜನೆಗೆ ಸರ್ಕಾರ ಕೈ ಹಾಕಿದೆ. ಇದಕ್ಕಾಗಿ, ರೈತರಿಗೆ ಮೈಕ್ರೋಚಿಪ್, ಸಿಗ್ನಲ್‌ ಚಿಪ್‌ ಮತ್ತು ಗಂಧದ ಮರಗಳನ್ನು ಕಾಯಲು ಸಿ.ಸಿ. ಕ್ಯಾಮರಾಗಳನ್ನು ಪೂರೈಸುವ ಚಿಂತನೆ ನಡೆಸಿದೆ.

ಕರ್ನಾಟಕ ಸರ್ಕಾರದಿಂದ ರೈತರಿಗೆ ಉಚಿತ ಮೈಕ್ರೋಚಿಪ್, ಸಿ.ಸಿ.ಕ್ಯಾಮರಾ!

ಗಂಧದ ಮರಗಳನ್ನು ಬೆಳಯುವ ಬಗ್ಗೆ ಕರ್ನಾಟಕದ ರೈತರು ಹೊಂದಿರುವ ಒಲವನ್ನು ಕಾಪಾಡಲು ಗಂಧದ ಬೆಳೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಉಚಿತವಾಗಿ ಮೈಕ್ರೋಚಿಪ್ ನೀಡುವ ಕುರಿತು ಕೂಡ ಅಭಯ ನೀಡುತ್ತಿದೆ. ಹಾಗಾದರೆ, ಏನಿದು ಮರ ಕಾಪಾಡಲು ಚಿಪ್‌ಸೆಟ್ ನೀಡುವ ಸ್ಟೋರಿ? ರೈತರಿಗೆ ತಂತ್ರಜ್ಞಾನ ಸಹಾಯಕವಾಗಿದೆಯೇ ಎಂಬುದನ್ನು ಮುಂದೆ ತಿಳಿಯಿರಿ.

ಮರ ಕಾಪಾಡಲು ಚಿಪ್‌ಸೆಟ್!

ಮರ ಕಾಪಾಡಲು ಚಿಪ್‌ಸೆಟ್!

ಪ್ರತಿ ಗಂಧದ ಗಿಡಗಳಲ್ಲಿಯೂ ಮೈಕ್ರೋಚಿಪ್ ಅನ್ನು ಅಳವಡಿಸುವ ಸಲುವಾಗಿ ಕರ್ನಾಟಕ ಸರ್ಕಾರ ರೈತರಿಗೆ ಉಚಿತವಾಗಿ ಮೈಕ್ರೋಚಿಪ್ ನೀಡುವ ಕುರಿತು ಕೂಡ ಅಭಯ ನೀಡುತ್ತಿದೆ. ಕಳ್ಳರು ಶ್ರೀಗಂಧದ ಮರಗಳನ್ನು ಕದಿಯಲು ಯತ್ನಿಸಿದರೆ ಈ ಚಿಪ್‌ಸೆಟ್ ಸಹಾಯದಿಂದ ಅವರ ಪ್ರಯತ್ನವನ್ನು ವಿಫಲವಾಗಿಸುವ ಯೋಜನೆ ಇದಾಗಿದೆ.

ಹೇಗೆ ಕೆಲಸ ಮಾಡುತ್ತದೆ ಚಿಪ್‌ಸೆಟ್

ಹೇಗೆ ಕೆಲಸ ಮಾಡುತ್ತದೆ ಚಿಪ್‌ಸೆಟ್

ಎಲ್ಲಿಯಾದರೂ ಶ್ರೀಗಂಧದ ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದನ್ನು ಬೆಳೆದವರಿಗೆ ಸಿಗ್ನಲ್‌ ರವಾನಿಸುವ ತಂತ್ರಜ್ಞಾನ ಇದಾಗಿದೆ. ಇನ್‌ ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿ ಸಂಸ್ಥೆ ಸಲಹೆ ಮೇರೆಗೆ ಶೀಘ್ರವೇ ರೈತರ ಹೊಲಕ್ಕೆ ಪೂರೈಸಲು ಸರ್ಕಾರ ಸಜ್ಜಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಪ್‌ ಮತ್ತು ಸಿಗ್ನಲ್‌ ತಂತ್ರಜ್ಞಾನ

ಚಿಪ್‌ ಮತ್ತು ಸಿಗ್ನಲ್‌ ತಂತ್ರಜ್ಞಾನ

ಗಂಧದ ಗಿಡದಲ್ಲಿ ತೊಗಟೆ ಕಿತ್ತು ಅದರಡಿ ಒಂದು ಇಂಚು ಚದರಳತೆ ಗಾತ್ರದ ಮೈಕ್ರೋಚಿಪ್ ಅಳವಡಿಸಲಾಗುತ್ತದೆ. ಮರ ಬೆಳೆದಂತೆ ಮೈಕ್ರೋಚಿಪ್ ಗಿಡದ ಒಳಗೆ ಸೇರಿಕೊಳ್ಳುತ್ತದೆ. ಇದರಿಂದ ಆ ಗಿಡವನ್ನು ಯಾರೇ ಕತ್ತರಿಸಿಕೊಂಡು ಹೋದರೂ ಅದು ಎಲ್ಲಿದೆ ಎನ್ನುವುದನ್ನು ಮೊಬೈಲ್ ಸಿಗ್ನಲ್‌ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಸಂದೇಶ ಕೂಡ ಲಭ್ಯವಾಗಲಿದೆ!

ಸಂದೇಶ ಕೂಡ ಲಭ್ಯವಾಗಲಿದೆ!

ಗಿಡವನ್ನು ಕದ್ದರೆ ಅದರ ರಕ್ಷಣೆ ಮಾಡುವುದು ಅಸಾಧ್ಯವಾಗಿರುವುದರಿಮದ ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿ ಸಂಸ್ಥೆಯು ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಗಂಧದ ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದರ ಮಾಲೀಕರಿಗೆ ಮೊಬೈಲ್ ಸಂದೇಶ ನೀಡುವ ತಂತ್ರಜ್ಞಾನವೊಂದನ್ನು ಅಭಿವೃದ್ದಿಪಡಿಸುತ್ತಿದೆ.

ಮೈಕ್ರೋಚಿಪ್ ಅಳವಡಿಕೆ ಉಚಿತ?

ಮೈಕ್ರೋಚಿಪ್ ಅಳವಡಿಕೆ ಉಚಿತ?

ರೈತರನ್ನು ಕರೆಯಿಸಿಕೊಂಡು ಅವರಿಗೆ ಗಂಧ ಬೆಳೆದರೆ ಆಗುವ ಉಪಯೋಗದ ಕುರಿತು ಮನವರಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಲಾಗಿದೆ. ಅರಣ್ಯ ಇಲಾಖೆಯು ಆಯಾ ಜಿಲ್ಲಾ ಕೇಂದ್ರಗಳಲ್ಲಿ ರೈತರಿಗೆ ಉಚಿತವಾಗಿ ಮೈಕ್ರೋಚಿಪ್ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದು ಕಾರ್ಯರೂಪಕ್ಕೆ ಇನ್ನಷ್ಟೆ ಬರಬೇಕಿದೆ.

ಮಿತಿಗಳ ಬಗ್ಗೆ ತಿಳಿಸಿಲ್ಲ.!

ಮಿತಿಗಳ ಬಗ್ಗೆ ತಿಳಿಸಿಲ್ಲ.!

ರೈತರಿಗೆ ಮರಕ್ಕೊಂದು ಚಿಪ್‌ಸೆಟ್ ಒದಗಿಸುವ ಯೋಜನೆ ಏನೋ ಕೇಳಲು ಚೆನ್ನಾಗಿದೆ. ಆದರೆ, ರೈತರಿಗೆ ವೀಡುವ ಚಿಪ್‌ಸೆಟ್ ಕೆಲಸ ಮಾಡುತ್ತದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ, ಮರಕ್ಕೆ ಮೈಕ್ರೋಚಿಪ್ ಅಳವಡಿಸಿದರೆ ಅದರ ನಿರ್ವಹಣೆ ಹೇಗೆ? ಅದರಿಂದ ಸಂದೇಶ ಪಡೆಯಲು ಸಿಗ್ನಲ್ ಸಂಪರ್ಕ ನೀಡುವವರು ಯಾರು ಎಂಬ ಮಾಹಿತಿಯನ್ನೇ ನೀಡಿಲ್ಲ.

ನೋಕಿಯಾ ಕಂಪನಿಯ ಬಗ್ಗೆ ನಿಮಗೆ ಗೊತ್ತಿಲ್ಲ ಈ ಕುತೂಹಲಕಾರಿ ಅಂಶಗಳು..!

ನೋಕಿಯಾ ಕಂಪನಿಯ ಬಗ್ಗೆ ನಿಮಗೆ ಗೊತ್ತಿಲ್ಲ ಈ ಕುತೂಹಲಕಾರಿ ಅಂಶಗಳು..!

ವಿಶ್ವ ಮೊಬೈಲ್ ಕ್ಷೇತ್ರದಲ್ಲಿ ಎಂದಿಗೂ ಅಳಿಯದ ಒಂದು ಹೆಸರಿದೆ. ಭಾರತದಂತಹ ಬಹು ವೈವಿಧ್ಯ ರಾಷ್ಟ್ರದಲ್ಲಿ ಗ್ರಾಮೀಣ ಭಾಗಕ್ಕೂ ತನ್ನ ಬ್ರಾಂಡ್‌ ಹೆಸರನ್ನೂ ಪಸರಿಸಿದ ಒಂದು ಕಂಪನಿಯಿದೆ. ಜನರನ್ನು ಬೆಸೆಯುತ್ತಾ ಜನರ ನಾಡಿಮಿಡಿತದಲ್ಲಿ ಬೆರೆತಿದ್ದ ಬ್ರಾಂಡ್‌ ಒಂದಿದೆ. ಏನಪ್ಪ ಇಷ್ಟು ಹೊಗಳುತ್ತಿದ್ದಿವಿ ಎಂದು ಕೊಂಡ್ರಾ, ಇದು ಹೊಗಳಿಕೆಯಲ್ಲ ನಿಜ ಕೂಡ. ಜಾಗತಿಕ ಮೊಬೈಲ್ ಲೋಕದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾದ ನೋಕಿಯಾ ಸಂಸ್ಥೆ ಮೇಲಿನ ಹೊಗಳಿಕೆಗೆ ಅರ್ಹವಾಗಿಯೇ ಭಾಜನವಾಗುತ್ತದೆ.

1865ರಿಂದ ಇಲ್ಲಿಯವರೆಗೂ ನೋಕಿಯಾದ ಹಾದಿ ಯಾರು ತುಳಿಯದ ಹಾದಿಯೇ. ಸುಮಾರು 150 ವರ್ಷಗಳ ಬಹುದೊಡ್ಡ ಅವಧಿಯಲ್ಲಿ ಜನರಲ್ಲಿನ ನಂಬಿಕೆಯನ್ನು ಹಾಗೇ ಉಳಿಸಿಕೊಳ್ಳುವುದು ಎಂದರೆ ಬಹುದೊಡ್ಡ ಕಾರ್ಯವೇ ಸರಿ. ಹಲವು ಜನರಿಗೆ ನೋಕಿಯಾ ಹೆಸರು ಗೊತ್ತಿರುವುದು ಕೇವಲ ಮೊಬೈಲ್ ಸಂಬಂಧಿ ಕ್ಷೇತ್ರದಲ್ಲಿ ಮಾತ್ರ. ಆದರೆ, ನೋಕಿಯಾ ಮೊಬೈಲ್ ಹೊರತಾಗಿ ಅನೇಕ ಕೈಗಾರಿಕೆಗಳಲ್ಲಿ ತನ್ನ ಕಾರ್ಯವನ್ನು ವಿಸ್ತರಿಸಿರುವುದು ಬಹಳಷ್ಟು ಜನಕ್ಕೆ ಗೊತ್ತೆ ಇಲ್ಲ. ಇದಷ್ಟೇ ಅಲ್ಲದೇ ಅನೇಕ ವೈಶಿಷ್ಟ್ಯಗಳನ್ನು ನೋಕಿಯಾ ಹೊಂದಿದೆ.

1. 1865ರಲ್ಲಿಯೇ ಹುಟ್ಟಿದ ಕಂಪನಿ

1. 1865ರಲ್ಲಿಯೇ ಹುಟ್ಟಿದ ಕಂಪನಿ

ನೋಕಿಯಾ ಕಂಪನಿ 1865ರಲ್ಲಿ ದಕ್ಷಿಣ ಫಿನ್‌ಲ್ಯಾಂಡ್‌ನಲ್ಲಿ ಪೇಪರ್ ಉತ್ಪನ್ನ ಕಂಪನಿಯಾಗಿ ಆರಂಭವಾಯಿತು. ಗಣಿಗಾರಿಕೆ ಇಂಜಿನಯರ್ ಫ್ರೇಡರಿಕ್ ಈಡೇಸ್ಟ್ಯಾಮ್ ಪ್ರಾರಂಭಿಸಿದನು. 1868ರಲ್ಲಿ ನೋಕಿಯಾ ನಗರದ ಸಮೀಪ ಮತ್ತೊಂದು ಮಿಲ್‌ನ್ನು ಈಡೇಸ್ಟ್ಯಾಮ್ ಪ್ರಾರಂಭಿಸುತ್ತಾನೆ. 1871ರಲ್ಲಿ ಈಡೇಸ್ಟ್ಯಾಮ್ ತನ್ನ ಸ್ನೇಹಿತ ಲಿಯೋ ಮಸ್ಲೀನ್‌ ಜತೆ ಈ ಮಿಲ್‌ನ್ನು ಸಹಭಾಗಿತ್ವ ಕಂಪನಿಯನ್ನಾಗಿ ಪರಿವರ್ತನೆ ಮಾಡುತ್ತಾನೆ. ನಂತರ ಈ ಸಂಸ್ಥೆಗೆ ನೋಕಿಯಾ ಕಂಪನಿ ಎಂದು ಹೆಸರಿಡಲಾಗುತ್ತದೆ.

2. ನದಿ ಹೆಸರು ಕಂಪನಿಗೆ

2. ನದಿ ಹೆಸರು ಕಂಪನಿಗೆ

ನೋಕಿಯಾ ಕಂಪನಿಯ ಹೆಸರಿನ ಹಿಂದೆಯೂ ಒಂದು ಕಥೆ ಇದೆ. ನೋಕಿಯಾನ್‌ವಿರ್ಟಾ ಎಂಬ ನದಿ ದಂಡೆಯ ಮೇಲೆ ಕಂಪನಿ ಪ್ರಾರಂಭವಾಗಿದ್ದರಿಂದ ನೋಕಿಯಾ ಎಂಬ ಹೆಸರನ್ನು ಸಂಸ್ಥೆಗೆ ಇಟ್ಟಿದ್ದಾರಂತೆ. ನೋಕಿಯಾನ್‌ವಿರ್ಟಾ ಎಂಬ ಪದ ಪುರಾತನ್ ಫಿನ್ನಿಸ್ ಪದವಾಗಿದೆ. ಇದರ ಮೂಲ ಅರ್ಥ ಸೇಬಲ್ (ಸಾಬೂನು).

3. ದೊಡ್ಡ ಕಾರ್ಯವ್ಯಾಪ್ತಿ

3. ದೊಡ್ಡ ಕಾರ್ಯವ್ಯಾಪ್ತಿ

ನೋಕಿಯಾ ಕಂಪನಿ 1960ರಲ್ಲಿ ಎಲೆಕ್ರಾನಿಕ್ಸ್‌ ಉದ್ಯಮಕ್ಕೆ ಬರುವ ಮುಂಚೆ ರಬ್ಬರ್, ಎಲೆಕ್ಟ್ರಿಸಿಟಿ ಮತ್ತು ಕೇಬಲ್ ಉದ್ಯಮಗಳಲ್ಲಿ ಪ್ರಭಲವಾಗಿತ್ತು. ನೋಕಿಯಾದ ರಬ್ಬರ್ ಬೂಟ್‌ಗಳು ಕ್ಲಾಸಿಕ್ ಬೋನಾ ಫೈಡ್‌ ವಿನ್ಯಾಸ ಹೊಂದಿದ್ದು, ಇಂದಿಗೂ ಸಹ ಮಾರಾಟವಾಗುತ್ತಿವೆ.

4. ನೋಕಿಯಾ ಟ್ಯೂನ್

4. ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ, ಕೇಳದವರೂ ಸಹ ಇಲ್ಲ ಎನ್ನಬಹುದು. ಈ ನೋಕಿಯಾ ಟ್ಯೂನ್ ಮೂಲತಃ ಗ್ರಾನ್‌ ವಾಲ್ಸ್‌ ಟ್ಯೂನ್ ಹೊಂದಿದೆ. ಇದನ್ನು 19ನೇ ಶತಮಾನದಲ್ಲಿ ಸ್ಪಾನಿಷ್ ಸಂಗೀತಕಾರ ಫ್ರಾನ್ಸಿಸ್ಕೊ ಟರ್ರೆಗಾ ಗೀಟಾರ್ ಮೂಲಕ ಸೃಷ್ಟಿಸಿದ್ದರು. ಈ ಟ್ಯೂನ್ ಹೆಸರನ್ನು ಜನ ನೆನಪಲ್ಲಿಟ್ಟುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ಅರಿತ ನೋಕಿಯಾ 1998ರಲ್ಲಿ ಈ ಟ್ಯೂನ್‌ಗೆ ನೋಕಿಯಾ ಟ್ಯೂನ್ ಎಂದು ಹೆಸರಿಟ್ಟಿತು.

5. ನೋಕಿಯಾ ಮತ್ತು 4

5. ನೋಕಿಯಾ ಮತ್ತು 4

ನೋಕಿಯಾ ಮತ್ತು 4ರ ಮಧ್ಯೆ ರೋಚಕ ಕಥೆ ಇದೆ. ನೋಕಿಯಾ ಏಷ್ಯಾದಲ್ಲಿ ಬಿಡುಗಡೆ ಮಾಡಿದ ಯಾವ ಫೋನ್‌ ಮಾಡೆಲ್ ಸಂಖ್ಯೆಗಳಲ್ಲಿ 4ನ್ನು ಅಳವಡಿಸಿಲ್ಲ ಎಂಬುದು ಯಾರಿಗಾದರೂ ಗೊತ್ತೆ? ಏಷ್ಯಾದ ರಾಷ್ಟ್ರಗಳಲ್ಲಿ ಈ ಸಂಖ್ಯೆ ನತದೃಷ್ಟ್ ಎಂದು ಗುರುತಿಸಿಕೊಂಡಿರುವುದು ಇದಕ್ಕೆ ಕಾರಣ ಅಂತೆ.

6. ಪ್ರಶಂಸನೀಯ ಕಂಪನಿ

6. ಪ್ರಶಂಸನೀಯ ಕಂಪನಿ

ನೋಕಿಯಾ ಕಂಪನಿ 2006ರ ಫಾರ್ಚೂನ್ ಲಿಸ್ಟ್‌ನಲ್ಲಿ ವಿಶ್ವದ ಅತಿ ಪ್ರಶಂಸನೀಯ ಕಂಪನಿಗಳಲ್ಲಿ 20ನೇ ಸ್ಥಾನವನ್ನು ಪಡೆದಿತ್ತು. ನೆಟ್‌ವರ್ಕ್‌ ಕಮ್ಯುನಿಕೇಷನ್‌ನಲ್ಲಿ ಮೊದಲ ಸ್ಥಾನ, ಹಾಗೂ ಯುನೈಟೆಡ್ ಸ್ಟೇಟ್ ಅಲ್ಲದ ಕಂಪನಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು.

7. ಕ್ಯಾಮೆರಾ ಗುಣಮಟ್ಟ

7. ಕ್ಯಾಮೆರಾ ಗುಣಮಟ್ಟ

ನೋಕಿಯಾ ಸ್ಮಾರ್ಟ್‌ಫೋನ್‌ಗಳು ಗುಣಮಟ್ಟದ ಕ್ಯಾಮೆರಾ ಹೊಂದಿರುವುದರಿಂದ ಮೊಬೈಲ್ ಲೋಕದಲ್ಲಿ ತನ್ನದೇ ಆದ ಗೌರವವನ್ನು ಕಾಪಾಡಿಕೊಂಡಿವೆ. ಇನ್ನೊಂದು ಬಹಳ ಆಸಕ್ತಿದಾಯಕ ಅಂಶವೇನೆಂದರೆ ಪ್ರಸ್ತುತ ವಿಶ್ವದ ಅತಿ ದೊಡ್ಡ ಡಿಜಿಟಲ್ ಕ್ಯಾಮೆರಾ ಉತ್ಪಾದಕರು ನೋಕಿಯಾ ಎಂಬುದನ್ನು ನಂಬಲೇಬೇಕು. ನೋಕಿಯಾ ಕಂಪನಿಯ ಕ್ಯಾಮೆರಾ ಒಳಗೊಂಡಿರುವ ಫೋನ್‌ಗಳು ಸಾಂಪ್ರದಾಯಿಕ ಕ್ಯಾಮೆರಾ ಉತ್ಪಾದಕರನ್ನು ಮೀರಿಸಿದೆ.

8. ಮೊದಲ ವಾಣಿಜ್ಯ ಜಿಎಸ್‌ಎಮ್ ಕರೆ

8. ಮೊದಲ ವಾಣಿಜ್ಯ ಜಿಎಸ್‌ಎಮ್ ಕರೆ

1991ರಲ್ಲಿ ವಿಶ್ವದ ಮೊದಲ ಕಮರ್ಷಿಯಲ್ ಜಿಎಸ್‌ಎಮ್ ಕರೆ ಮಾಡಲಾಯಿತು. ಈ ಕರೆಯನ್ನು ನೋಕಿಯಾದ ಸರಬರಾಜು ನೆಟ್‌ವರ್ಕ್ ಹೆಲ್ಸಿಂಕಿಯಿಂದ ಫಿನ್‌ಲ್ಯಾಂಡ್‌ ಪ್ರಧಾನ ಮಂತ್ರಿ ಹ್ಯಾರಿ ಹೋಳ್ಕೆರಿ ನೋಕಿಯಾ ಫೋನ್ ಬಳಸಿ ಮಾಡಿದರು.

9. ಮೋರ್ಸ್‌ ಕೋಡ್‌

9. ಮೋರ್ಸ್‌ ಕೋಡ್‌

ನೋಕಿಯಾ ಫೋನ್‌ನಲ್ಲಿ ವಿಶೇಷ ಟೋನ್‌ಗಳಿರುತ್ತವೆ ಎಂಬುದನ್ನು ಜನ ನಂಬಿದ್ದರು. ಎಸ್‌ಎಂಎಸ್‌ ಟೋನ್‌ ಎಸ್‌ಎಂಎಸ್‌ನ ಮೋರ್ಸ್‌ ಕೋಡ್ ಹೊಂದಿತ್ತು. ಅದೇ ರೀತಿ ಅಸೆಂಡಿಂಗ್ ಟೋನ್ ನೋಕಿಯಾದ ಟ್ಯಾಗ್‌ಲೈನ್ ಕನೆಕ್ಟಿಂಗ್ ಪೀಪಲ್ ಎಂಬುದರ ಮೋರ್ಸ್‌ ಕೋಡ್ ಆಗಿದೆ.

10. ಸ್ಯಾಟಲೈಟ್‌ ಕರೆ

10. ಸ್ಯಾಟಲೈಟ್‌ ಕರೆ

ವಿಶ್ವದ ಮೊದಲ ಸ್ಯಾಟಲೈಟ್‌ ಕರೆಯನ್ನು 1994ರಲ್ಲಿ ನೋಕಿಯಾ ಜಿಎಸ್‌ಎಮ್‌ ಹ್ಯಾಂಡ್‌ಸೆಟ್‌ನಿಂದ ಮಾಡಲಾಯಿತು.

11. ಲುಮೀಯಾ ಸ್ಮಾರ್ಟ್‌ಫೋನ್‌

11. ಲುಮೀಯಾ ಸ್ಮಾರ್ಟ್‌ಫೋನ್‌

ನೋಕಿಯಾ ಕಂಪನಿ 2013ರ ಎರಡನೇ ತ್ರೈಮಾಸಿಕದಲದಲ್ಲಿ 7.4 ಮಿಲಿಯನ್ ನೋಕಿಯಾ ಲೂಮೀಯಾ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿತ್ತು.

12. ಫೋನ್ ಮಾರಾಟದಲ್ಲಿ ದಾಖಲೆ

12. ಫೋನ್ ಮಾರಾಟದಲ್ಲಿ ದಾಖಲೆ

ನೋಕಿಯಾದ ನೋಕಿಯಾ 1100 (2003) ಹ್ಯಾಂಡ್‌ಸೆಟ್ 25 ಕೋಟಿ ಮಾರಾಟವನ್ನು ಕಂಡಿದ್ದು, ಇಂದಿಗೂ ದಾಖಲೆಯಾಗಿಯೇ ಉಳಿದಿದೆ.

13. ಮೊದಲ ಫೋನ್

13. ಮೊದಲ ಫೋನ್

1982ರಲ್ಲಿ ನೋಕಿಯಾ ಮೊಬೈಲ್ ಸೆನೆಟರ್ ಎಂಬ ಮೊದಲ ಫೋನ್ ಬಿಡುಗಡೆ ಮಾಡಿತ್ತು. ಅದರ ತೂಕ ಸುಮಾರು 10 ಕೆಜಿ ಇತ್ತು ಎಂದರೆ ನಂಬಲೇಬೇಕು.

Best Mobiles in India

English summary
Govt of Karnataka to offer free GPS tracking chip on Sandalwood trees to control smuggling. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X