Home
ಸುದ್ದಿಜಾಲ

ಕೆಣಕಿದ್ರೆ ಬಿಡ್ತಿವಾ..! 16 ಪಾಕಿಸ್ತಾನಿ YouTube ಬ್ಯಾನ್.. ಜಿಯೋ ನ್ಯೂಸ್‌ ಕೂಡ ಬಂದ್.. ಶೋಯೆಬ್‌ ಅಖ್ತರ್‌ಗೂ ಶಾಕ್!

ನನ್ನನ್ನು ಕೆಣಕಿದರೆ ಸುಮ್ಮನೆ ಬಿಡೊ ಮಾತೇ ಇಲ್ಲ! ನಾವೂ ಅಷ್ಟೇ ನಿಮ್ಮನ್ನು ಕೆಣಕುತ್ತಲೇ ಇರ್ತಿವೆ. ಇದು 'ಪಾಪಿ' ಪಾಕಿಸ್ತಾನಕ್ಕೆ ಮೋದಿ ಸರ್ಕಾರದ ಎಚ್ಚರಿಕೆ. ಹೌದು, ಭಾರತವನ್ನು ಕೆಳಕಿದ 'ಪಾಪಿ' ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ (Narendra Modi) ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಪಹಲ್ಗಾಮ್ ದಾಳಿಯ (Pahalgam Attack) ನಂತರ ಭಾರತದಿಂದ 'ಸೈಬರ್‌ʼ ಸಮರ ಶುರುವಾಗಿದೆ. ಪಹಲ್ಗಾಮ್ ದಾಳಿ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದ 16 ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್‌ಗಳನ್ನು (Youtube) ಬ್ಯಾನ್ ಮಾಡಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಫುಲ್ ಫೇಮಸ್ ಮಾಡಿದ್ದ ಚಾನೆಲ್‌ ಸಹ ಇದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಅವರ ಯೂಟ್ಯೂಬ್ ಚಾನೆಲ್ ಸೇರಿದಂತೆ, ಹಲವು ಪಾಕಿಸ್ತಾನಿ ಯೂಟ್ಯೂಬ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಶಾಕ್ ಮೇಲೆ ಶಾಕ್​ ನೀಡಿದೆ. ಈ ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್‌ಗಳು, ಪಹಲ್ಗಾಮ್‌ ದಾಳಿ ಬಗ್ಗೆ ಸುಳ್ಳು ಸುದ್ದಿ, ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದ್ದವು. ಈ ಕಾರಣದಿಂದ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿವೆ.

ಕೆಣಕಿದ್ರೆ ಬಿಡ್ತಿವಾ: 16 ಪಾಕ್‌ YouTube ಬ್ಯಾನ್, Jio News ಬಂದ್! ಪಟ್ಟಿ ನೋಡಿ

ಸಿಎಂ 'ಸಿದ್ದು' ಫೇಮಸ್ ಮಾಡಿದ್ದ ಚಾನೆಲ್ ಬ್ಯಾನ್!

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿರುವ ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿ (Pahalgam Terror Attack) ನಡೆದದಿತ್ತು. ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದರು. 'ಪಾಕಿಸ್ತಾನದ ಮೇಲೆ ಯುದ್ದದ ಅಗತ್ಯವಿಲ್ಲ' ಎಂದು ಹೇಳಿದ್ದರು. ಈ ಮೂಲಕ ಪಾಕಿಸ್ತಾನಿ​ ಮಾಧ್ಯಮಗಳಲ್ಲಿ ಫುಲ್ ಫೇಮಸ್ ಆಗಿದ್ದರು. ಕೆಲ ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಯನ್ನೇ ದಿನವಿಡೀ ಪ್ರಸಾರ ಮಾಡಲಾಗಿತ್ತು. ಇದೀಗ ಸಿಎಂ ಸುದ್ದಿ ಪ್ರಸಾರ ಮಾಡಿದ ನ್ಯೂಸ್ ಚಾನೆಲ್ ಬ್ಯಾನ್ ಆಗಿದೆ. ಇದರ ಜೊತೆಗೆ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದ 6 ಯೂಟ್ಯೂಬ್ ಚಾನೆಲ್‌ಗಳನ್ನು ಭಾರತ ನಿಷೇಧಿಸಿದೆ. ಈ ಬಗ್ಗೆ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಜಿಯೋ ನ್ಯೂಸ್‌ ಪ್ರಸಾರವೂ ಬಂದ್!

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಯ ನಂತರ ಕೆಲ ಯೂಟ್ಯೂಬ್ ಚಾನೆಲ್‌ಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದವು. ಇದನ್ನು ಮನಗಂಡ ಗೃಹ ಸಚಿವಾಲಯವು ಸೂಕ್ತ ಕ್ರಮಕ್ಕೆ ಸೂಚನೆ ನೀಡಿತ್ತು. ಅದರಂತೆ, ಈ ಕ್ರಮ ತೆಗೆದುಕೊಳ್ಳಲಾಗಿದೆ. ಡಾನ್ ನ್ಯೂಸ್, ARY ನ್ಯೂಸ್, ಸಮಾ ಟಿವಿ ಮತ್ತು ಜಿಯೋ ನ್ಯೂಸ್‌ ಸೇರಿದಂತೆ ಹಲವು ಸುದ್ದಿ ವಾಹಿನಿಗಳ ಆನ್‌ಲೈನ್ ಪ್ರಸಾರವನ್ನು ಸಹ ನಿಷೇಧಿಸಲಾಗಿದೆ.

ಯಾವೆಲ್ಲಾ ಯೂಟ್ಯೂಬ್ ಚಾನೆಲ್ ನಿಷೇಧ?

ಕೇಂದ್ರ ಸರ್ಕಾರವು ಜಿಯೋ ನ್ಯೂಸ್, ಡಾನ್, ರಫ್ತಾರ್, ಬೋಲ್ ನ್ಯೂಸ್, ಎಆರ್‌ವೈ ನ್ಯೂಸ್, ಸಮಾ ಟಿವಿ, ಸುನೋ ನ್ಯೂಸ್‌ನಂತಹ ಪ್ರಮುಖ ಸುದ್ದಿ ಸಂಸ್ಥೆಗಳ ಯೂಟ್ಯೂಬ್ ಚಾನೆಲ್‌ಗಳನ್ನು ಬಂದ್​ ಮಾಡಿದೆ. ಜಿಯೋ ನ್ಯೂಸ್​ನಲ್ಲಿ ಯುದ್ಧ ಬೇಡ ಎಂದಿದ್ದ ಸಿದ್ದರಾಮಯ್ಯ ಕುರಿತ ಸುದ್ದಿ ಪ್ರಸಾರ ಮಾಡಲಾಗಿತ್ತು. ಮುನೀಬ್ ಫಾರೂಕ್, ಉಮರ್ ಚೀಮಾ, ಅಸ್ಮಾ ಶಿರಾಜಿ ಮತ್ತು ಇರ್ಷಾದ್ ಭಟ್ಟಿ ಸೇರಿದಂತೆ ಪ್ರಸಿದ್ಧ ಪತ್ರಕರ್ತರ ಯೂಟ್ಯೂಬ್ ಚಾನೆಲ್‌ಗಳನ್ನು ಬಂದ್ ಮಾಡಲಾಗಿದೆ. ಉಜೈರ್ ಕ್ರಿಕೆಟ್, ದಿ ಪಾಕಿಸ್ತಾನ್ ರೆಫರೆನ್ಸ್, ರಾಜಿ ನಾಮಾ ಮತ್ತು ಸಮಾ ಸ್ಪೋರ್ಟ್ಸ್ ಸೇರಿದಂತೆ ಇತರರ ನಿಷೇಧಿತ ಖಾತೆಯೂ ಈ ಪಟ್ಟಿಗೆ ಸೇರಿವೆ.

ಭಾರತದಲ್ಲಿ ನಿಷೇಧಿಸಲಾಗಿರುವ ಚಾನೆಲ್‌ಗಳಿವು!

Sawera Pasha, CBA (Arsalan Naseer), Rizwan Haider, Wasay Habib, Tanveer Says, Aap ka Mohsin Ali, Basit Ali, Shoaib Akhtar, Muhammad Furqan Bhatti, BBN SPORTS, Sana Amjad, Arzoo Kazmi, Caught Behind, Sports Central by DRM, A Sports, Hasna Mana Hai, How Does It Work Podcast, ARY News, Dawn News, BOL News, SAMAA TV, Samaa Sports, Geo News, GEO SUPER, Syed Muzammil Official, Muzammil Speaks, The Pakistan Reference, Raftar Sports, Uzair Cricket, Raftar, Raftar Now, GNN, Umar Cheema Exclusive, Asma Shirazi, Muneeb Farooq, SUNO News HD, Razi Naama.

Best Mobiles in India

English summary
Government of India Bans 16 Pakistani Youtube Channels After Pahalgam Attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+