ಭಾರತದಲ್ಲಿ ವಾಟ್ಸಾಪ್‌ ಬ್ಯಾನ್‌ ಆಗುತ್ತಾ? ಸರ್ಕಾರ ಹೇಳಿದ್ದೇನು ಗೊತ್ತಾ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ನೆಚ್ಚಿನ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ತನ್ನ ಹೊಸ ಗೌಪ್ಯತೆ ಮತ್ತು ಸೇವಾ ನಿಯಮದಿಂದಾಗಿ ವಿವಾದಕ್ಕೆ ಕೂಡ ಕಾರಣವಾಗಿದೆ. ಬಳಕೆದಾರರು ಹೊಸ ಸೇವಾ ನಿಯಮವನ್ನು ಒಪ್ಪಿಕೊಳ್ಳಲೇಬೇಕೆಂಬ ವಾಟ್ಸಾಪ್‌ನ ವಾದಕ್ಕೆ ಎಲ್ಲರೂ ವಿರೋದ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ತನ್ನ ನಿಲುವು ಕೂಡ ಬದಲಾಯಿಸಿದೆ. ಆದರೆ ಇದೀಗ ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಾ ಅನ್ನೊ ಪ್ರಶ್ನೆ ಕೂಡ ಮೂಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಹೊಸ ಗೌಪ್ಯತೆ ನಿಯಮ ಒಪ್ಪಿಕೊಳ್ಳುವುದಕ್ಕೆ ಇದೇ ಮೇ 15ರ ಗಡುವು ನೀಡಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ವಾಟ್ಸಾಫ್‌ ಈ ಗಡುವನ್ನು ತೆರವುಗೊಳಿಸಿದೆ. ಅಲ್ಲದೆ ಹೊಸ ಸೇವಾ ನಿಯಮ ಒಪ್ಪಿಕೊಳ್ಳದ ಅಕೌಂಟ್‌ಗಳನ್ನು ಡಿಲೀಟ್‌ ಮಾಡುವುದಿಲ್ಲ ಎನ್ನುವ ಮಾತನ್ನು ಸಹ ಹೇಳಿದೆ. ಇದರ ನಡುವೆ ಭಾರತ ಸರ್ಕಾರ ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಹೊಸ ಆಯ್ಕೆಗಳನ್ನು ನೋಡುತ್ತೇವೆ ಎನ್ನುವ ಸೂಚನೆ ನೀಡಿದೆ. ಹಾಗಾದ್ರೆ ಭಾರತದಲ್ಲಿ ವಾಟ್ಸಾಪ್‌ ಕಥೆ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಹೊಸ ಗೌಪ್ಯತೆ ನಿಯಮಗಳ ಸುತ್ತ ಸರ್ಕಾರವು ಸಾಧ್ಯವಾದಷ್ಟು ಉತ್ತಮ ಆಯ್ಕೆಗಳನ್ನು ನೋಡುತ್ತಿದೆ ಎಂದು ಭಾರತದ ಎಲೆಕ್ಟ್ರಾನಿಕ್ಸ್ ಸಚಿವಾಲಯದ ಹಿರಿಯ ಮತ್ತು ಐಟಿ ಅಧಿಕಾರಿಗಳು ಹೇಳಿದ್ದಾರೆ. ಗೌಪ್ಯತೆ ನೀತಿಯಲ್ಲಿ ಬದಲಾವಣೆಯನ್ನು ಸ್ವೀಕರಿಸಲು ವಾಟ್ಸಾಪ್ ತನ್ನ ಬಳಕೆದಾರರಿಗೆ ಮೇ 15 ಅನ್ನು ನಿಗದಿಪಡಿಸಿತ್ತು. ಆದರೆ ನಂತರ ಬಳಕೆದಾರರು ವಿವಾದಾತ್ಮಕ ನವೀಕರಣವನ್ನು ಸ್ವೀಕರಿಸುವ ಗಡುವನ್ನು ರದ್ದುಗೊಳಿಸಿತು. ಆದರೂ ವಾಟ್ಸಾಪ್‌ ಮೂಲ ಕಂಪನಿ ಫೇಸ್‌ಬುಕ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬ ಬಳಕೆದಾರರ ಕಳವಳದಿಂದಾಗಿ ವಾಟ್ಸಾಪ್ ತೀವ್ರ ಹಿನ್ನಡೆ ಅನುಭವಿಸಿದೆ.

ಭಾರತ

ಇದೆಲ್ಲವನ್ನೂ ಭಾರತ ಸರ್ಕಾರ ಗಮನಿಸುತ್ತಿದೆ. ಈಗಾಗಲೇ ಜರ್ಮನಿ ಸರ್ಕಾರ ವಾಟ್ಸಾಪ್‌ನ ಈ ಗೌಪ್ಯತೆ ನೀತಿಯನ್ನು ನಿಷೇಧಿಸಿದೆ. ಇದರ ಬಗ್ಗೆ ನಾವು ಏನು ಮಾಡಬಹುದೆಂದು ಸಚಿವಾಲಯವು ಪೂರ್ವಭಾವಿಯಾಗಿ ನೋಡುತ್ತಿದೆ ಎಂದು MeitY ವಿಶೇಷ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಜ್ಯೋತಿ ಅರೋರಾ ಅಸ್ಸೋಚಾಮ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಜಾರ್ಖಂಡ್ ಸರ್ಕಾರದ ಅಧಿಕಾರಿಯೊಬ್ಬರು ಗ್ರಾಮೀಣ ಪ್ರದೇಶದ ಜನರು ವಾಟ್ಸಾಪ್ ಹೊಸ ಗೌಪ್ಯತೆ ನಿಯಮಗಳನ್ನು ಸ್ವೀಕರಿಸಲು ಮುಂದಾಗುತ್ತಿದ್ದಾರೆ ಎಂಬ ಕಳವಳಕ್ಕೆ ಕೇಂದ್ರ ಸರ್ಕಾರ ಈ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ಇದನ್ನು ಗಮನಿಸದರೆ ಭಾರತದಲ್ಲಿ ವಾಟ್ಸಾಪ್‌ ಕತೆ ಮುಕ್ತಾಯವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸೈಬರ್‌

ದೇಶದ ಸೈಬರ್‌ ವ್ಯವಸ್ಥೆಯ ರಕ್ಷಣೆಗಾಗಿ ಸರ್ಕಾರ ಯಾವುದೇ ನಿಧಾ್ರ ತೆಗೆದುಕೊಂಡರೂ ಅಚ್ಚರಿಯಿಲ್ಲ. ಏಕೆಂದರೆ ಈಗಾಗಲೇ ಭಾರತ ಸರ್ಕಾರ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿ ಆಗಿದೆ. ದೇಶದ ಸಾರ್ವಭೌಮತ್ವಕ್ಕೆ ದಕ್ಕೆ ತರುವ ಯಾವೊಂದು ಅಪ್ಲಿಕೇಶನ್‌ ಬಳಕೆಯನ್ನು ಸರ್ಕಾರ ಸಹಿಸುವುದಿಲ್ಲ ಎನ್ನುವುದು ಸ್ಪಷ್ಟ. ಇದೇ ಕಾರಣಕ್ಕೆ ವಾಟ್ಸಾಪ್‌ನ ಹೊಸ ನಿಯಮಗಳು ಭಾರತದ ಬಳಕೆದಾರರಿಗೆ ದಕ್ಕೆ ಉಂಟು ಮಾಡುವ ಸನ್ನಿವೇಶ ಕಂಡುಬಂದರೆ ವಾಟ್ಸಾಪ್‌ ಬ್ಯಾನ್‌ ಆಗುವ ಸಾಧ್ಯತೆ ಇದೆ. ಈಗಾಗಲೇ ಇದಕ್ಕೆ ಪೂರ್ವಭಾವಿ ಸಿದ್ಧತೆ ನಡೆದಿರುವುದು ಸರ್ಕಾರದ ಮಾತುಗಳಲ್ಲಿ ಕಂಡು ಬರುತ್ತಿದೆ.

Most Read Articles
Best Mobiles in India

English summary
The government is "pro-actively" looking at best possible options around WhatsApp new privacy rules, a senior Ministry of Electronics and IT official said on Thursday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X