Home
ಸುದ್ದಿಜಾಲ

ಭಾರತದಲ್ಲಿ ವಿಪಿಎನ್ ಬ್ಯಾನ್‌ ಆಗಲಿದೆಯಾ? ಅಷ್ಟಕ್ಕೂ ವಿಪಿಎನ್‌ ಅಂದರೆ ಏನು?

ವಿಪಿಎನ್‌ ಸೇವೆಗಳು ಈ ಪದವನ್ನು ನೀವು ಕೇಳಿರಲೇಬೇಕು. ನಿಷೇದಿತ ವೆಬ್‌ಸೈಟ್‌ಗಳನ್ನು ಕೂಡ ವಿಪಿಎನ್‌ ಮೂಲಕ ಪ್ರವೇಶಿಸುವುದು ಸುಲಭ. ಇದೇ ಕಾರಣಕ್ಕೆ ಹೆಚ್ಚಿನ ಕಡೆ ವಿಪಿಎನ್‌ ಸೇವೆಗಳನ್ನು ಬಳಸುತ್ತಾರೆ. ಅಷ್ಟೇ ಅಲ್ಲ ಖಾಸಗಿ ಸಂಸ್ಥೆಗಳು ತಮ್ಮ ಮಾಹಿತಿ ಬೇರೆ ಕಡೆ ಸೋರಿಕೆಯಾಗದಂತೆ ಮಾಡಲು ವಿಪಿಎನ್‌ ಸೇವೆಗಳನ್ನು ಬಳಸುತ್ತಿದ್ದಾರೆ. ಆದರೆ ಇದೀಗ ವಿಪಿಎನ್‌ ಸೇವೆಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಬೇಕು ಅನ್ನೊ ಮಾತು ಕೇಳಿ ಬಂದಿದೆ. ಅಲ್ಲದೆ ಭಾರತ ಸರ್ಕಾರವು ಶೀಘ್ರದಲ್ಲೇ ವಿಪಿಎನ್‌ ಬಳಕೆಯನ್ನು ನಿಷೇಧಿಸಬಹುದು ಎಂದು ಸುಳಿವು ನೀಡಿದೆ.

ವಿಪಿಎನ್‌

ಹೌದು ಕೆಲವು ದಿನಗಳಿಂದ ಭಾರತದಲ್ಲಿ ವಿಪಿಎನ್‌ ಅನ್ನು ಬ್ಯಾನ್‌ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರಲ್ಲೂ ಕೇಂದ್ರ ಸಂಸದೀಯ ಸಮಿತಿ ವಿಪಿಎನ್‌ ಬ್ಯಾನ್‌ ಮಾಡುವಂತೆ ಸೂಚನೆ ಕೂಡ ನೀಡಿದೆ. ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ವಿಪಿಎನ್‌ ಅನ್ನು ಬ್ಯಾನ್‌ ಮಾಡಬೇಕು ಅಂತಾ ಹೇಳ್ತಾ ಇರೋದು ಯಾಕೆ? ವಿಪಿಎನ್‌ ಬಳಸುವುದರಿಂದ ಭಾರತದ ಭದ್ರತೆಗೆ ಅಪಾಯ ಇದೆಯಾ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ವರ್ಚುವಲ್ ಪ್ರೈವೇಟ್ ನೆಟ್ವರ್ಕ್‌

ವಿಪಿಎನ್‌, ವರ್ಚುವಲ್ ಪ್ರೈವೇಟ್ ನೆಟ್ವರ್ಕ್‌ ಅನ್ನು ಬಳಸುವುದರಿಂದ ನಿಮ್ಮ ಇಂಟರ್‌ನೆಟ್‌ ಬಳಕೆಯಲ್ಲಿ ಬೇರಯವರ ಹಸ್ತಕ್ಷೇಪ ಇರದಂತೆ ತಡೆಯಬಹುದು. ವಿಪಿಎನ್‌ ಬಳಸುವುದರಿಂದ ಬೇರೆಯವರ ಹಸ್ತಕ್ಷೇಪ ಇರದಂತೆ ಎನ್‌ಕ್ರಿಪ್ಟ್‌ ಮಾಡಲಾಗಿದೆ. ಆದರೆ ಇದೀಗ ವಿಪಿಎನ್‌ ಸೇವೆಗಳು ರಾಷ್ಟ್ರದ ಭದ್ರತೆಗೆ "ತಾಂತ್ರಿಕ ಸವಾಲು'' ಆಗಿದೆ. ಇಂತಹ ಸೇವೆಗಳು ಸೈಬರ್ ಅಪರಾಧಿಗಳು ಅಪೇಕ್ಷಿಸದ ಕಾರ್ಯಾಚರಣೆಗಳಿಗೆ ಅವಕಾಶ ನೀಡುತ್ತವೆ. ಸೈಬರ್‌ ಅಪರಾಧಿಗಳು ಯಾರು ಅಂತಾ ಪತ್ತೆ ಹಚ್ಚುವುದಕ್ಕೆ ಈ ವಿಪಿಎನ್‌ ಸೇವೆ ಅಡ್ಡಿಯನ್ನುಂಟು ಮಾಡುತ್ತಿದೆ ಅನ್ನೊದನ್ನ ಸಂಸದೀಯ ಸಮಿತಿ ಹೇಳಿದೆ.

ವಿಪಿಎನ್

ಸದ್ಯ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಭಾರತದಲ್ಲಿ ವಿಪಿಎನ್ ಸೇವೆಗಳನ್ನು ಶಾಶ್ವತವಾಗಿ ಬ್ಯಾನ್‌ ಮಾಡಬೇಕೆಂದು ಸೂಚನೆ ನೀಡಿದೆ. ಅಲ್ಲದೆ ಭಾರತದಾದ್ಯಂತ ಲಭ್ಯವಿರುವ ವಿಪಿಎನ್‌ಗಳನ್ನು ಗುರುತಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ಮತ್ತು ಇಂಟರ್‌ನೆಟ್ ಸೇವಾ ಪೂರೈಕೆದಾರರಿಗೆ ಶಿಫಾರಸು ಮಾಡಿದೆ. ಆದರೆ ವಿಪಿಎನ್‌ ಸೇವೆಯನ್ನು ಇತರೆ ಸೇವೆಗಳಲ್ಲಿಯೂ ಕೂಡ ಬಳಕೆ ಮಾಡಲಾಗುತ್ತೆ. ಸೈಬರ್‌ ಅಪರಾಧದ ಕಾರಣದಿಂದ ವಿಪಿಎನ್‌ ಅನ್ನು ಬ್ಯಾನ್‌ ಮಾಡಿದರೆ, ಇತರ ಕಾರ್ಯಾಚರಣೆಗಳಿಗೆ ಇದು ಅಡ್ಡ ಪರಿಣಾಮ ಬೀರಲಿದೆ ಎನ್ನಲಾಗಿದೆ. ಹಾಗಾದರೆ VPN ಭಾರತಕ್ಕೆ ಅವಶ್ಯಕತೆ ಇದೆಯಾ ಇಲ್ಲವೇ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಿಪಿಎನ್ ಎಂದರೇನು?

ವಿಪಿಎನ್ ಎಂದರೇನು?

ವಿಪಿಎನ್‌ ಬ್ಯಾನ್‌ ಆಗಬೇಕು ಅನ್ನೊ ಈ ಸಮಯದಲ್ಲಿ ಸಹಜವಾಗಿ ಎಲ್ಲರಿಗೂ ಕಾಡುವ ಪ್ರಶ್ನೆ ವಿಪಿಎನ್‌ ಅಂದರೆ ಏನು? ಇದನ್ನು ಎಲ್ಲಿ ಬಳಸಲಾಗುತ್ತದೆ ಅನ್ನೊ ಪ್ಶ್ನಶ್ನೆ ಕಾಡಲಿದೆ? ವಿಪಿಎನ್‌ ಅಂದ್ರೆ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್. ಇದನ್ನು ಬಳಸಿಕೊಂಡು ನೀವು ನಿಮ್ಮದೇ ಆದ ಪ್ರೈವೆಟ್‌ ಇಂಟರ್‌ನೆಟ್‌ ಅನ್ನು ಕ್ರಿಯೆಟ್‌ ಮಾಡಿಕೊಳ್ಳಬಹುದು. ಅಲ್ಲದೆ ನಿಮ್ಮ ಇಂಟರ್‌ನೆಟ್‌ನಲ್ಲಿ ಬೇರೆಯವರು ಹಸ್ತಕ್ಷೇಪ ಮಾಡದಂತೆ ಇದನ್ನು ಎನ್‌ಕ್ರಿಪ್ಟ್‌ ಮಾಡಲಾಗಿದೆ. ಆದರೆ ವಿಪಿಎನ್‌ ಎನ್‌ಕ್ರಿಪ್ಟ್‌ ಆಗಿರುವುದೇ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಸೈಬರ್‌ ಅಪರಾಧಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಪಿಎನ್‌ ಸೇವೆ ಬಳಸುತ್ತಿರುವುದರಿಂದ ಅಪರಾಧ ತಡೆಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.

ವಿಪಿಎನ್ ಹೇಗೆ ಕೆಲಸ ಮಾಡುತ್ತದೆ?

ವಿಪಿಎನ್ ಹೇಗೆ ಕೆಲಸ ಮಾಡುತ್ತದೆ?

ಇನ್ನು ವಿಪಿಎನ್‌ ಪಬ್ಲಿಕ್‌ Wi-Fi ನೆಟ್‌ವರ್ಕ್‌ನಲ್ಲಿ ನಿಮ್ಮ ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸವನ್ನು ಹೈಡ್‌ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತದೆ. ಲೋಕಲ್‌ ವೈಫೈ ನೆಟ್‌ವರ್ಕ್‌ ಮೂಲಕ ವರ್ಗಾಯಿಸಲ್ಪಡುವ ಡೇಟಾದ ಮೇಲೆ VPN ಎನ್‌ಕ್ರಿಪ್ಟ್‌ ಕ್ರಿಯೆಟ್‌ ಮಾಡಲಿದೆ. ಅಲ್ಲದೆ ಡೇಟಾವನ್ನು ಮತ್ತೊಂದು ಸ್ಥಳದಲ್ಲಿ ಎಕ್ಸಿಟ್‌ ಆಗುವಂತೆ ಮಾಡಲಿದೆ. ಇದರ ಪರಿಣಾಮವಾಗಿ, ಬಳಕೆದಾರರು ಬಳಸುತ್ತಿರುವ ಲೋಕಲ್‌ ನೆಟ್‌ವರ್ಕ್‌ ಇರುವ ಜಾಗದ ಬದಲು ಬೇರೆ ಜಾಗವನ್ನು ತೋರಿಸಲಿದೆ.

VPN ಅನ್ನು ಯಾಕೆ ಬಳಸಲಾಗುತ್ತದೆ?

VPN ಅನ್ನು ಯಾಕೆ ಬಳಸಲಾಗುತ್ತದೆ?

ನೀವು ಇಂಟರ್‌ನೆಟ್‌ ಬಳಸುತ್ತಿರುವುದನ್ನು ಬೇರೆಯವರಿಗೆ ತಿಳಿಯದಂತೆ ಮಾಡುವಲ್ಲಿ ವಿಪಿಎನ್‌ ಕಾರ್ಯನಿರ್ವಹಿಸಲಿದೆ. ಇದರಿಂದ ನಿಮ್ಮ ಆನ್‌ಲೈನ್ ಕಾರ್ಯಾಚರಣೆಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇದನ್ನು ಬಳಸಲಾಗುತ್ತದೆ. ವಿಪಿಎನ್‌ ಸೇವೆಯ ಪ್ಲಸ್ ಪಾಯಿಂಟ್‌ ಎಂದರೆ ಆನ್‌ಲೈನ್‌ನಲ್ಲಿ ವರ್ಗಾಯಿಸಲ್ಪಡುವ ಡೇಟಾಕ್ಕೆ ಅವರು ಒದಗಿಸುವ ಎನ್‌ಕ್ರಿಪ್ಶನ್. ಇದೇ ಕಾರಣಕ್ಕೆ ನೀವು ಬೇರೆಯವರ ಕಣ್ಣಿಗೆ ಬೀಳದಂತೆ ಕಾರ್ಯನಿರ್ವಹಿಸಬಹುದು. ಆದರೆ ವಿಪಿಎನ್ ಬಳಕೆ ಇತ್ತಿಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಕಂಡು ಬರುತ್ತಿದೆ.

VPN

ಇದಲ್ಲದೆ VPN ಪ್ರೈವೆಸಿಯನ್ನು ಕಾಪಾಡುವ 1 ಮಾರ್ಗ ಕೂಡ ಆಗಿದೆ. ನೀವು ಇಂಟರ್ ನೆಟ್‌ ಬಳಕೆ ಮಾಡುವಾಗ ನಿಮ್ಮ ಸಿಸ್ಟಂನ IP ಅಡ್ರೆಸ್‌ ಮೂಲಕ ನಿಮ್ಮನ್ನು ಟ್ರ್ಯಾಕಿಂಗ್ ಮಾಡಬಹುದು. ಆದರೆ VPN ಮೂಲಕ ನಿಮ್ಮ ಐಪಿ ಅಡ್ರೆಸ್‌ ಅನ್ನು ಮರೆ ಮಾಡಬಹುದಾಗಿದೆ. ಇದರಲ್ಲಿ ನಿಮ್ಮ ಸರ್ಚಿಂಗ್‌ ಹಿಸ್ಟರಿ ಮತ್ತು ಆನ್‌ಲೈನ್ ಆಕ್ಟಿವಿಟಿಗಳನ್ನು ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರಿಂದಲೂ ಮರೆಮಾಡಬಹುದಾಗಿದೆ. ಒಂದು ವ್ಯವಸ್ಥೆಗೆ VPN ಗಳು ನಕಲಿ IP ವಿಳಾಸವನ್ನು ಸೃಷ್ಟಿಸುವುದರಿಂದ, ಇಂಟರ್ನೆಟ್ ಸೇವೆಗಳನ್ನು ಮೋಸಗೊಳಿಸಲು ಸಹ ಅವುಗಳನ್ನು ಬಳಸಬಹುದು.

VPN

VPN ಬಳಸುವ ಮೂಲಕ ನಿಷೇಧಿತ ಸೇವೆಗಳಿಗೆ ಕೂಡ ನೀವು ಎಂಟ್ರಿ ನೀಡಬಹುದು. ಉದಾಹರಣೆಗೆ ಭಾರತದಲ್ಲಿ ಕೆಲವು ಪೋರ್ನ್‌ ಸೈಟ್‌ಗಳನ್ನು ನಿಷೇದಿಸಲಾಗಿದೆ ಆದರೆ ವಿಪಿಎನ್ ಮೂಲಕ ಪ್ರವೇಶಿಸಬಹುದು. ಈ ಕಾರಣಗಳಿಗಾಗಿ, VPN ಗಳನ್ನು ಕಾರ್ಪೊರೇಟ್‌ಗಳು ತಮ್ಮ ಉದ್ಯೋಗಿಗಳಿಗೆ ಕೆಲಸ ಮಾಡುವಾಗ ಹೈಡ್‌ ಮಾಡಿದ ವಿಪಿಎನ್‌ ಬಳಸಲು ಹೇಳುತ್ತಾರೆ. ವರ್ಕ್‌ ಫ್ರಮ್‌ ಮಾಡುವಾಗ VPN ಗಳು ಯಾವುದೇ ಉದ್ಯೋಗಿಗಳ ಅನಧಿಕೃತ ಪ್ರವೇಶ ಅಥವಾ ಚಟುವಟಿಕೆಗಳನ್ನು ಪತ್ತೆಹಚ್ಚುವುದನ್ನು ತಡೆಯಬಹುದು. ಇದು, ಕಂಪನಿಯ ಡೇಟಾದ ಸಮಗ್ರತೆಯನ್ನು ರಕ್ಷಿಸುತ್ತದೆ ಮತ್ತು ಅನೇಕ ಆನ್ಲೈನ್ ​​ಬೆದರಿಕೆಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಸಂಸದೀಯ ಸಮಿತಿ ಏಕೆ ವಿಪಿಎಎನ್‌ ಬ್ಯಾನ್‌ ಮಾಡಲು ಹೇಳಿದೆ?

ಸಂಸದೀಯ ಸಮಿತಿ ಏಕೆ ವಿಪಿಎಎನ್‌ ಬ್ಯಾನ್‌ ಮಾಡಲು ಹೇಳಿದೆ?

ಇಂಟರ್‌ನೆಟ್‌ ಬಳಕೆದಾರರಿಗೆ ಗೌಪ್ಯತೆಯನ್ನು ರಕ್ಷಿಸಲು VPN ಗಳು ಸಹಾಯ ಮಾಡುವುದರಿಂದ, ಸೈಬರ್ ಅಪರಾಧಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಪಿಎನ್‌ಗಳನ್ನು ಬಳಸುತ್ತಾರೆ. ವಿಪಿಎನ್‌ ಬಳಸುವವರ ಐಪಿ ವಿಳಾಸಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿರುವುದರಿಂದ ವಿಪಿಎನ್‌ ಬ್ಯಾನ್‌ ಮಾಡಬೇಕೆಂದು ಹೇಳಿದೆ. ಸದ್ಯ ಸಂಸದೀಯ ಸಮಿತಿ ತನ್ನ ಮನವಿಯಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ವಿಐಪಿಎನ್‌ಗಳನ್ನು ನಿಷೇಧಿಸಲು ದೇಶದ ಇಂಟರ್‌ನೆಟ್ ಸೇವಾ ಪೂರೈಕೆದಾರರಾದ ಮಿಟಿವೈ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಬೇಕು ಎಂದು ಸೂಚಿಸಿದೆ. ಇದಲ್ಲದೆ, ಈ ವಿಪಿಎನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉಲ್ಲೇಖಿತ ಘಟಕಗಳೊಂದಿಗೆ ಸಮನ್ವಯ ಕಾರ್ಯವಿಧಾನವನ್ನು ರಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.

Best Mobiles in India

English summary
Here is a look at why the committee is worried and how VPN can be used for both good and bad online.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+