ಬಿಟ್‌ಕಾಯಿನ್ ಖರೀದಿಸುತ್ತಿದ್ದೀರಾ?..ಮನೆ,ಮಠ ಕಳೆದುಕೊಳ್ಳಬಹುದು ಎಚ್ಚರ!?

ಆನ್‌ಲೈನ್ ವರ್ಚುವಲ್ ಕರೆನ್ಸಿ ಬಿಟ್‌ಕಾಯಿನ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಕೇವಲ ಒಂದು ವಾರದಲ್ಲಿ ಒಂದು ಬಿಟ್‌ಕಾಯಿನ್ ಬೆಲೆ 2 ಲಕ್ಷ ರೂ,ಗಳಷ್ಟು ಹೆಚ್ಚಾಗಿ ಒಂದು ಬಿಟ್‌ ಕಾಯಿನ್ ಬೆಲೆ ಪ್ರಸ್ತುತ 5 ಲಕ್ಷ ರೂ.ಗಳಷ್ಟಾಗಿದೆ.

|

ಆನ್‌ಲೈನ್ ವರ್ಚುವಲ್ ಕರೆನ್ಸಿ ಬಿಟ್‌ಕಾಯಿನ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಕೇವಲ ಒಂದು ವಾರದಲ್ಲಿ ಒಂದು ಬಿಟ್‌ಕಾಯಿನ್ ಬೆಲೆ 2 ಲಕ್ಷ ರೂ,ಗಳಷ್ಟು ಹೆಚ್ಚಾಗಿದೆ.!! ಒಂದು ಬಿಟ್‌ ಕಾಯಿನ್ ಬೆಲೆ ಪ್ರಸ್ತುತ 5 ಲಕ್ಷ ರೂ,ಗಳಾಗಿದ್ದು ಇದರಿಂದ ಭಾರತದಲ್ಲಿ ಬಿಟ್‌ಕಾಯಿನ್ ಖರೀದಿಸುವವರ ಭರಾಟೆ ಹೆಚ್ಚಾಗುತ್ತಿದೆ.!!

ಇದೇ ಸುದ್ದಿಯ ಜೊತೆಗೆ ಇನ್ನೊಂದು ಶಾಕಿಂಗ್ ಸುದ್ದಿ ಕೂಡ ಹೊರಬಿದ್ದಿದ್ದು, ಬಿಟ್‌ಕಾಯಿನ್ ರೀತಿಯ ಕ್ರಿಪ್ಟೊ ಕರೆನ್ಸಿಗಳ ಬಳಕೆಯನ್ನು ಹತ್ತಿಕ್ಕಬೇಕು ಮತ್ತು ದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಡೀಲರ್‌ಗಳ ವಹಿವಾಟನ್ನು ಸ್ಥಗಿತಗೊಳಿಸಲು ಮಿತಿಯೊಂದು ಶಿಫಾರಸು ಮಾಡಿದೆ. ಕ್ರಿಪ್ಟೊ ಕರೆನ್ಸಿಗಳ ಬಳಕೆ ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.!!

 ಬಿಟ್‌ಕಾಯಿನ್ ಖರೀದಿಸುತ್ತಿದ್ದೀರಾ?..ಮನೆ,ಮಠ ಕಳೆದುಕೊಳ್ಳಬಹುದು ಎಚ್ಚರ!?

ಇನ್ನು ಇದರ ನಿಯಂತ್ರಣ, ಸಾಧಕ-ಬಾಧಕಗಳ ಬಗ್ಗೆ ಸರಕಾರ ಕೂಡ ಪರಿಶೀಲನೆ ನಡೆಸುತ್ತಿದೆ. ಹಾಗಾಗಿ, ಎಲ್ಲರೂ ಬಿಟ್‌ಕಾಯಿನ್ ಖರೀದಿಸಲುವ ಮುನ್ನ ಯೋಚನೆ ಮಾಡುವುದು ಒಳ್ಳೆಯದು.!! ಇನ್ನು ಬಿಟ್‌ಕಾಯಿನ್ ಎಂದರೆ ಏನು? ಇದು ಹೇಗೆ ಅಸ್ತಿತ್ವದಲ್ಲಿದೆ? ಇದರ ಹುಟ್ಟು ಹೇಗಾಯಿತು ಎಂಬ ಕುತೋಹಲ ಪ್ರಶ್ನೆಗಳು ನಿಮಗಿದೆಯೇ? ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಬಿಟ್‌ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.!!

ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ಗೂಚರಿಸದ ಹಣ ಈ ಬಿಟ್‌ಕಾಯಿನ್. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಬಿಟ್‌ಕಾಯಿನ್ ಅಂತರಜಾಲದಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ.!!

ಬಿಟ್‌ಕಾಯಿನ್ ಪೂರ್ತಿ ಡಿಜಿಟಲ್!!

ಬಿಟ್‌ಕಾಯಿನ್ ಪೂರ್ತಿ ಡಿಜಿಟಲ್!!

ಬಿಟ್‌ಕಾಯಿನ್ ಗೂಚರಿಸದ ಹಣವಾಗಿರುವುದರಿಂದ ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್‌ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ.!! ಶೇರುಗಳು ನಮ್ಮ ಕಣ್ಣಿಗೆ ಕಾಣದಂತೆ ಡಿಮ್ಯಾಟ್‌ ರೂಪದಲ್ಲಿರುತ್ತವಲ್ಲ ಹಾಗೆ. ಇದು ಕೂಡ ಅಂತರ್ಜಾಲ ಹಣವಾಗಿ ನಮ್ಮ ಬಳಿಇದ್ದರೂ ಪೂರ್ತಿ ಡಿಜಿಟಲ್!!

ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

2009ರಲ್ಲಿ ಈ ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು, ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿ ಬಿಟ್‌ಕಾಯಿನ್‌ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.!!

ಬಿಟ್‌ಕಾಯಿನ್ ಬೆಲೆ ಎಷ್ಟು?

ಬಿಟ್‌ಕಾಯಿನ್ ಬೆಲೆ ಎಷ್ಟು?

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ಬಿಟ್‌ಕಾಯಿನ ಬೆಲೆ ಪ್ರಸ್ತುತ 4,74,044.49 ರೂಪಾಯಿಗಳು.!! ಕೇವಲ ಮೂರು ತಿಂಗಳ ಹಿಂದಷ್ಟೆ ಒದು ಬಿಟ್‌ಕಾಯಿನ್ ಬೆಲೆ ಕೇವಲ 2 ಲಕ್ಷರೂಪಾಯಿಗಳಾಗಿತ್ತು.!!

ಬಿಟ್‌ಕಾಯಿನ್ ಸುರಕ್ಷಿತವೇ?

ಬಿಟ್‌ಕಾಯಿನ್ ಸುರಕ್ಷಿತವೇ?

ಸದ್ಯ ಬಿಟ್‌ಕಾಯಿನ್‌ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್‌ ಮೇಲೆ ನಿರ್ಭಂದ ಹೇರಬಹುದು. ಆದರೆ, ಆನ್‌ಲೈನ್ ಪ್ರಪಂಚದಲ್ಲಿ ಮಾತ್ರ ಹೆಚ್ಚು ನಂಬಿಕೆ ಉಳಿಸಿಕೊಂಡಿದೆ.!!

ಫ್ಲಿಪ್‌ಕಾರ್ಟ್ ಫೋನ್ ಪೇಯಿಂದ 699.ರೂಗೆ ಫ್ಲಿಪ್‌ಕಾರ್ಟ್ ಫೋನ್ ಪೇಯಿಂದ 699.ರೂಗೆ "ಪಿಒಎಸ್" ಸಾಧನ ಬಿಡುಗಡೆ!!..ಏನಿದು ಗೊತ್ತಾ?

Best Mobiles in India

English summary
Bitcoin has gained more than 600 percent (USD 6,000) since the start of the year, up from USD 968 on December 31, 2016.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X