ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ! ಯಾರಿಗೆಲ್ಲಾ ಅನ್ವಯಿಸುತ್ತೆ ಈ ನಿಯಮ!
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಅನ್ನೊದು ಒಂದು ಗೀಳಾಗಿ ಪರಿಣಮಿಸಿದೆ. ಯುವಜನರನ್ನು ಅತಿ ಹೆಚ್ಚು ಸೆಳೆದಿರುವ ಆನ್‌ಲೈನ್ ಗೇಮಿಂಗ್ ಒಂದು ವ್ಯಸನವಾಗಿ ಕೂಡ ಪರಿಣಮಿಸುತ್ತಿದೆ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್‌ಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಹೌದು, ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಬೆಟ್ಟಿಂಗ್‌ಗೆ ಉತ್ತೇಜಿಸುತ್ತಿರುವ ಗೇಮ್‌ಗಳನ್ನು ಬ್ಯಾನ್ ಮಾಡುವ ಸೂಚನೆ ನೀಡಿದೆ. ಇದಕ್ಕಾಗಿಯೇ ಆನ್‌ಲೈನ್ ಗೇಮಿಂಗ್ ವಿಚಾರದಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಮೂಲಕ ಆನ್‌ಲೈನ್ ಗೇಮಿಂಗ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದವರಿಗೆ ಚಾಟಿ ಬೀಸಿದೆ. ಹಾಗಾದ್ರೆ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ವಿರುದ್ದ ತೆಗೆದುಕೊಂಡಿರುವ ಹೊಸ ನಿಯಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆನ್‌ಲೈನ್ ಗೇಮಿಂಗ್ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಬೆಟ್ಟಿಂಗ್ ಮತ್ತು ಬಾಜಿ ಕಟ್ಟುವುದಕ್ಕೆ ಅವಕಾಶ ನೀಡುವ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಲು ಮುಂದಾಗಿದೆ. ಅಲ್ಲದೆ ಗೇಮಿಂಗ್ ಅಪ್ಲಿಕೇಶನ್‌ಗಳ ಮೇಲೆ ನಿಗಾವಹಿಸಲು ಹೊಸದಾಗಿ SROs ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಬೆಟ್ಟಿಂಗ್, ಬಾಜಿ ಕಟ್ಟುವುದಕ್ಕೆ ಅವಕಾಶ ನೀಡುತ್ತಿವೆಯಾ ಎಂಬೆಲ್ಲಾ ವಿಚಾರವನ್ನು ತಿಳಿಸುವುದು SRO ಗಳ ಜವಾಬ್ದಾರಿಯಾಗಿದೆ.
ಇನ್ನು ಕೇಂದ್ರ ಸರ್ಕಾರದ ಐಟಿ ಸಚಿವಾಲಯವು ಐಟಿ ನಿಯಮಗಳು 2023 ಅನ್ನು ಹೊಸದಾಗಿ ಅಂಗೀಕರಿಸಿದೆ. ಇದು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ನೋಂದಣಿ ಮತ್ತು ಕಂಟ್ರೋಲ್‌ಗಾಗಿ "ಮಧ್ಯವರ್ತಿಗಳು" ಎಂದು ಸೆಲ್ಫ್-ರೆಗ್ಯೂಲೆಟರಿ ಸಂಸ್ಥೆಯ ಸ್ಥಾಪನೆಯನ್ನು ಕಡ್ಡಾಯಗೊಳಸಿದೆ. ಇದರಿಂದ ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಅಪ್ಲಿಕೇಶನ್‌ಗಳಿಗೆ ಬ್ಯಾನ್ ಬಿಸಿ ತಟ್ಟಿದೆ.

ಆನ್‌ಲೈನ್ ಗೇಮಿಂಗ್‌ಗಾಗಿ ಹೊಸ ನಿಯಮಗಳು
ಕೇಂದ್ರದ ಹೊಸ ನಿಯಮದ ಪ್ರಕಾರ ಬೆಟ್ಟಿಂಗ್‌ನಲ್ಲಿ ತೊಡಗಿರುವ ಆನ್‌ಲೈನ್ ಗೇಮ್‌ಗಳ ಮೇಲೆ ಚಾಟಿ ಬೀಸಲಾಗಿದೆ. ಆನ್‌ಲೈನ್ ಗೇಮ್‌ಗಳಿಗೆ ಅವಕಾಶ ನೀಡುವಾಗ ಎಸ್‌ಆರ್‌ಒಗಳ ಸಲಹೆಯನ್ನು ಪಡೆಯಲಾಗುತ್ತದೆ. ಇನ್ನು ಎಸ್‌ಆರ್‌ಒ ಗಳಲ್ಲಿ ಸರ್ಕಾರವು ಉದ್ಯಮದ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಮಕ್ಕಳ ತಜ್ಞರು, ಮನೋವಿಜ್ಞಾನ ತಜ್ಞರು ಮುಂತಾದ ಇತರ ತಜ್ಞರನ್ನು ನೇಮಿಸಲಿದೆ.
ಇದರಿಂದ ಮೊದಲಿಗೆ, ಸರ್ಕಾರವು ಮೂರು SRO ಗಳಿಗೆ ಸೂಚನೆ ನೀಡುತ್ತದೆ, ನಂತರ ಆ ಗೇಮ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಅನುಮತಿ ನೀಡುವುದರ ಬಗ್ಗೆ ಯೋಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಆನ್‌ಲೈನ್ ಗೇಮಿಂಗ್ ಮೂಲಕ ಬೆಟ್ಟಿಂಗ್‌ನಂತಹ ದಂದೆಗೆ ಪ್ರೇರಣೆ ನೀಡುತ್ತಿದ್ದ ಅಪ್ಲಿಕೇಶನ್‌ಗಳು ಮೂಲೆಗುಂಪಾಗಲಿವೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಶೀಘ್ರದಲ್ಲೇ ಹಲವು ಗೇಮಿಂಗ್ ಅಪ್ಲಿಕೇಶನ್‌ಗಳು ಬ್ಯಾನ್ ಆಗೋದು ಪಕ್ಕಾ ಆಗಿದೆ. ಏಕೆಂದರೆ ಇತ್ತೀಚ್ಚಿನ ದಿನಗಳಲ್ಲಿ ಆನ್‌ಲೈನ್ ಗೇಮಿಂಗ್ ಮುಖವಾಡದಲ್ಲಿ ಯುವಜನರನ್ನು ಬೆಟ್ಟಿಂಗ್ ಗೀಳಿಗೆ ನೂಕುವ ಹಲವು ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗ್ತಿವೆ. ಇವುಗಳಿಂದ ಎಷ್ಟೋ ಮಂದಿ ಸಾಲದ ಸುಳಿಗೆ ಸಿಲುಕು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಕೂಡ ನಡೆದಿವೆ.
ಇದೆಲ್ಲದರ ಪರಿಣಾಮ ಇದೀಗ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಮೇಲೆ ಕಣ್ಣಿಡುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಹೊಸ ಹೆಜ್ಜೆಯನ್ನು ಇಟ್ಟಿದೆ. ಇದಕ್ಕಾಗಿಯೇ ಎಸ್ಆರ್‌ಒ ಎನ್ನುವ ಸಂಸ್ಥೆಯನ್ನು ಸಹ ಸ್ಥಾಪಿಸಲು ಮುಂದಾಗಿದೆ. ಆನ್‌ಲೈನ್ ಗೇಮಿಂಗ್‌ಗಳ ನೀತಿ ನಿರೂಪಣೆಯಲ್ಲಿ ಎಸ್‌ಆರ್‌ಒಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಹೇಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ಗೇಮ್‌ಗಳ ವಿಚಾರದಲ್ಲಿ ಹೊಸ ಬದಲಾವಣೆ ಉಂಟಾಗುವ ನಿರೀಕ್ಷೆಯನ್ನು ಇಡಲಾಗಿದೆ.


Click it and Unblock the Notifications








