ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಕ್ರೆಡಿಟ್‌ಕಾರ್ಡ್‌ ವಂಚನೆ ಬಗ್ಗೆ ಎಚ್ಚರದಿಂದಿರಿ!

|

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಅನ್ನೊದು ಹೆಚ್ಚುತ್ತಲೇ ಇದೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲೆ ನಡೆದಿರುವ ಸೈಬರ್‌ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯ ಇದೀಗ ವಿಶ್ವಾದ್ಯಂತ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಘಟನೆಗಳ ವಿರುದ್ಧ ಸರ್ಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿ ಸೆರ್ಟ್-ಇನ್ ಎಚ್ಚರಿಸಿದೆ. ಅಲ್ಲದೆ ಆನ್‌ಲೈನ್ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್‌ನಲ್ಲಿ, ಗ್ರಾಹಕರು ಹಂಚಿಕೊಂಡ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯಲು ಸೈಬರ್ ಅಪರಾಧಿಗಳು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಸ್ಕಿಮ್ಮಿಂಗ್ ಕೋಡ್ ಅನ್ನು ಲಿಂಕ್‌ ಮಾಡುವುದರ ಬಗ್ಗೆ ಎಚ್ಚರಿಕೆ ನೀಡಿದೆ.

ಕ್ರೆಡಿಟ್‌ ಕಾರ್ಡ್

ಹೌದು, ಆನ್‌ಲೈನ್‌ ಕ್ರೆಡಿಟ್‌ ಕಾರ್ಡ್‌ ಸ್ಕಿಮ್ಮಿಂಗ್‌ ಬಗ್ಗೆ ಸರ್ಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿ ಎಚ್ಚರಿಕೆ ನೀಡಿದೆ. ಅದರಲ್ಲೂ ಆನ್‌ಲೈನ್‌ ಕ್ರೆಡಿಟ್‌ ಕಾರ್ಡ್‌ ಸ್ಕಿಮ್ಮಿಂಗ್‌ನಲ್ಲಿ ಗ್ರಾಹಕರ ಮಾಹಿತಿಯನ್ನು ಹೇಗೆ ಕದಿಯುತ್ತಾರೆ. ಇದಕ್ಕಾಗಿ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳಲ್ಲಿ ಸ್ಕಿಮ್ಮಿಂಗ್‌ ಕೋಡ್‌ ಲಿಂಕ್‌ ಹೇಗೆ ಸೇರಿಸುತ್ತಾರೆ. ಅಲ್ಲದೆ ಸೆರ್ಟ್-ಇನ್ ಪ್ರಕಾರ, ದಾಳಿಕೋರರು ಸಾಮಾನ್ಯವಾಗಿ ಇ-ಕಾಮರ್ಸ್ ಸೈಟ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಅದರಲ್ಲೂ LAMP (Linux, Apache, MySQL, and PHP) ಮೂಲಕ ಸ್ಕಿಮ್ಮಿಂಗ್‌ ಕೋಡ್‌ ಸೈಬರ್‌ ದಾಳಿ ನಡೆಯುತ್ತಿದೆ ಎನ್ನಲಾಗ್ತಿದೆ.

ಹ್ಯಾಕರ್ಸ್

ನಿಮಗೆಲ್ಲಾ ತಿಳಿದಿರುವ ಹಾಗೇ ಆನ್‌ಲೈನ್‌ ಶಾಪಿಂಗ್‌ ಭಾರಿ ಜನಪ್ರಿಯತೆ ಪಡೆದುಕೊಳ್ತಿದೆ. ಅದರಲ್ಲೂ ಕೊರೋನಾದಂತಹ ಈ ಸಂದರ್ಭದಲ್ಲಿ ಆನ್‌ಲೈನ್‌ ಶಾಪಿಂಗ್‌ ಇನ್ನು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಗ್ರಾಹಕರು ಎಚ್ಚರಿಕೆಯಿಂದರಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಶಾಪಿಂಗ್‌ ಪ್ರಿಯರಿಗೆ ಹ್ಯಾಕರ್ಸ್‌ಗಳು ಸುಲಭವಾಗಿ ಯಾಮಾರಿಸುವ ಸಾದ್ಯತೆ ಇದೆ. ಅದರಲ್ಲೂ ಸೆರ್ಟ್-ಇನ್ ಸಲಹಾ ಮಾಲ್ವೇರ್ಬೈಟ್ಸ್ ನೀಡಿರುವ ಮಾಹಿತಿ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್‌ಲೈನ್‌ ಶಾಪಿಂಗ್‌ ಜನಪ್ರಿಯತೆ ಸೈಬರ್‌ ದಾಳಿ ಹೆಚ್ಚಾಗುತ್ತಿದೆ.

ಆನ್‌ಲೈನ್‌ ಶಾಪಿಂಗ್‌

ಆನ್‌ಲೈನ್‌ ಶಾಪಿಂಗ್‌ ಮಾತ್ರವಲ್ಲದೆ ಆನ್‌ಲೈನ್‌ ಕ್ರೆಡಿಟ್‌, ಆನ್‌ಲೈನ್‌ ಟ್ರೆಡಿಗ್‌ ಇವೆಲ್ಲವೂ ಸಹ ಹ್ಯಾಕರ್ಸ್‌ಗಳ ಪಾಲಿಗೆ ಸುಲಭ ಮಾರ್ಗವಾಗಿವೆ. ಒಮ್ಮೆ ನೀವು ಯಾಮಾರಿ ನಿವು ಎಂಟ್ರಿ ನೀಡಿದರೆ ನಿಮ್ಮ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಪಡೆದು ನಿಮ್ಮ ಹಣವನ್ನ ಎಗರಿಸಿಬಿಡುತ್ತಾರೆ. ಇದರಿಂದಾಗಿ ನೀವು ಯಾವುದೇ ಆನ್‌ಲೈನ್‌ ಪೋರ್ಟ್‌ಲ್‌ಗೆ ಎಂಟ್ರಿ ನೀಡುವ ಮುನ್ನ ಆದರ ಸತ್ಯಾಸತ್ಯತೆಯನ್ನ ಪರಶೀಲಿಸಬೇಕು. ಜೊತೆಗೆ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ಆಪ್‌ಡೇಟ್‌ / ಪ್ಯಾಚ್‌ಗಳನ್ನು ಒಇಎಂಯನ್ನು ಅನ್ವಯಿಸುವುದು. ಅಲ್ಲದೆ ವೆಬ್ ಅಪ್ಲಿಕೇಶನ್, ವೆಬ್ ಸರ್ವರ್, ಡೇಟಾಬೇಸ್ ಸರ್ವರ್‌ನ ನಿಯತಕಾಲಿಕವಾಗಿ ಮತ್ತು ಪ್ರತಿ ಪ್ರಮುಖ ಕಾನ್ಫಿಗರೇಶನ್ ಬದಲಾವಣೆಯನ್ನು ಮಾಡುತ್ತಿರುವುದು ಉತ್ತಮವಾಗಿರುತ್ತದೆ.

ಆನ್‌ಲೈನ್‌

ಇನ್ನು ಆನ್‌ಲೈನ್‌ ನಲ್ಲಿ ಸುಲಭವಾಗಿ ಗ್ರಾಹಕರನ್ನು ಯಾಮಾರಿಸುವ 7 'ಹ್ಯಾಕ್' ವೆಬ್‌ಸೈಟ್‌ಗಳನ್ನ ಯಾವುವು ಅನ್ನೊದು ಇಲ್ಲಿದೆ ನೋಡಿ.
dpcdn-cloud [.] com
joblly [.] com
cdn-xhr [.] com
rackxhr [.] com
thxrq [.] com
hivnd [.] net
ASP.NET

Best Mobiles in India

English summary
The government's cybersecurity agency Cert-In has warned against incidents of credit card skimming on e-commerce websites worldwide.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X