'ಬಿಎಸ್‌ಎನ್ಎಲ್' ನೆರವಿಗೆ ಕೇಂದ್ರ ಸರ್ಕಾರ!..ಆದರೆ ಉಳಿವು ಸಾಧ್ಯವಿಲ್ಲ?!

|

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಸಿಲುಕಿ ನಲುಗುತ್ತಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಬಿಎಸ್‌ಎನ್ಎಲ್ ನೆರವಿಗೆ ಕೇಂದ್ರ ಸರ್ಕಾರ ಬಂದಿದೆ. ಸಂಸ್ಥೆಯ ಕಾರ್ಯನಿರ್ವಹಣೆ ಮುಂದುವರೆಸಲು, ವೇತನ ಪಾವತಿಸಲು ಮತ್ತು ಸಾಲ ಮರುಪಾವತಿಗೆ ಸರ್ಕಾರವು ಶೀಘ್ರದಲ್ಲಿಯೇ 900 ಕೋಟಿ ನೆರವು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

'ಬಿಎಸ್‌ಎನ್ಎಲ್' ನೆರವಿಗೆ ಕೇಂದ್ರ ಸರ್ಕಾರ!..ಆದರೆ ಉಳಿವು ಸಾಧ್ಯವಿಲ್ಲ?!

ಸಂಸ್ಥೆಯ ಉಳಿವಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವುದಕ್ಕೂ ಸಹ ಸರ್ಕಾರ ಅನುಮೋದನೆ ನೀಡುವ ನಿರೀಕ್ಷೆ ಇದ್ದು, 2,500 ಕೋಟಿ ಮೊತ್ತದ ಸಾಲ ಪಡೆಯಲು ಆಡಳಿತ ಮಂಡಳಿ ಈಗಾಗಲೇ ವಿವಿಧ ಬ್ಯಾಂಕ್‌ಗಳ ಜತೆ ಮಾತುಕತೆ ನಡೆಸಿದೆ. ಸಾಲ ಮಂಜೂರಾದರೆ 6 ತಿಂಗಳವರೆಗೆ ಮಾತ್ರ ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಬಹುದು ಎಂದು ಹೇಳಲಾಗಿದೆ.

ಆದರೆ, BSNL ಸದ್ಯಕ್ಕೆ 13 ಸಾವಿರ ಕೋಟಿ ಮೊತ್ತದ ಸಾಲದ ಹೊರೆ ಎದುರಿಸುತ್ತಿದೆ. ಅಧಿಕ ಸಿಬ್ಬಂದಿ ಮತ್ತು 4ಜಿ ತ ಲಭ್ಯವಾಗದೆ ಮಾರುಕಟ್ಟೆ ವಿಸ್ತರಿಸಲು ಸಾಧ್ಯವಾಗದ ಬಿಕ್ಕಟ್ಟು ಎದುರಿಸುತ್ತಿದೆ. ಹಾಗಾಗಿ, ಬಿಎಸ್‌ಎನ್‌ಎಲ್‌ ಮರುಜೀವ ಪಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ.! ಆದರೆ, ಸಂಸ್ಥೆಯನ್ನು ಉಳಿಸಲು ಈ ಕೆಳಗೆ ಪಟ್ಟಿ ಮಾಡಿರುವ ಅಂಶಗಳಿಂದ ಮಾತ್ರ ಸಾಧ್ಯ ಎನ್ನುತ್ತಾರೆ ತಜ್ಞರು.

ಬಿಎಸ್‌ಎನ್ಎಲ್ ಉಳಿಯಲೇಬೇಕು!

ಬಿಎಸ್‌ಎನ್ಎಲ್ ಉಳಿಯಲೇಬೇಕು!

ಖಾಸಗೀಕರಣದಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆಯೇನೋ ಸಿಗುತ್ತದೆ ಆದರೆ, ಸರ್ಕಾರಿ ಸಂಸ್ಥೆಗಳ ಅಳಿವು ಅಪಾಯಕರ. ಅದು ಖಾಸಗಿ ಸಂಸ್ಥೆಗಳ ಏಕಸ್ವಾಮ್ಯ ಹಾಗೂ ಸುಲಿಗೆಗೆ ಕಾರಣವಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ಬಿಎಸ್‌ಎನ್‌ಎಲ್‌ ಮರುಜೀವ ಪಡೆಯುವುದು ಅಗತ್ಯವಾಗಿದೆ. ಇದಕ್ಕೆ ಸರ್ಕಾರದ ಹಣದ ಸಹಾಯ ಮಾತ್ರ ಮುಖ್ಯ ಎಂಬುದು ಸುಳ್ಳು.

4ಜಿ ತರಂಗಾಂತರ ಬೇಕಿದೆ!

4ಜಿ ತರಂಗಾಂತರ ಬೇಕಿದೆ!

ಇಂದು ಖಾಸಗಿ ಕಂಪನಿಗಳು ಊಹಾತೀತ ವೇಗ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್‌ ಮಾತ್ರ ತಾನಿನ್ನೂ ಪೇಪರ್‌ ಜಮಾನದಲ್ಲೇ ನಿಂತಿದೆ. ಇದಕ್ಕೆ ಸರ್ಕಾರ ಕೂಡ ಕಾರಣವಾಗಿದ್ದು, 4ಜಿ ತರಂಗಾಂತರವನ್ನು ಬಿಎಸ್‌ಎನ್‌ಎಲ್‌ಗೆ ತರದೇ ಹಿಂದೆಬೀಳಿಸಿದೆ. ಹಾಗಾಗಿ, ಕೂಡಲೇ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರ ನೀಡಬೇಕು.

ಬಿಎಸ್‌ಎನ್ಎಲ್ಗೆ ಬೇಕು ಜನಪ್ರಿಯತೆ!

ಬಿಎಸ್‌ಎನ್ಎಲ್ಗೆ ಬೇಕು ಜನಪ್ರಿಯತೆ!

ಖಸಾಗಿ ಟೆಲಿಕಾಂಗಳಿಗೆ ಇರುವ ಜನಪ್ರಿಯತೆ ಈಗ ಬಿಎಸ್‌ಎನ್ಎಲ್ಗೆ ಸಿಗುತ್ತಿಲ್ಲ. ಇದರ ಜೊತೆಗೆ ಬಿಎಸ್‌ಎನ್ಎಲ್ ಸೇವೆಗಳು ಆಕರ್ಷಕವಾಗಿಲ್ಲ. ಇದಕ್ಕಾಗಿ ಸರ್ಕಾರದ ದಿಟ್ಟ ನಾಯಕರು ಬಿಎಸ್‌ಎನ್ಎಲ್ಗೆ ಬೆನ್ನೆಲುಬಾಗಿ ನಿಲ್ಲಬೇಕು. ಬಿಎಸ್‌ಎನ್ಎಲ್ಗೆ ಸರ್ಕಾರದ ಅಡಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ನೀಡಿ ಸಂಸ್ಥೆಯ ಆಡಳಿತವನ್ನು ಚುರುಕುಗೊಳಿಸಬೇಕು.

ಆಡಳಿತಯಂತ್ರದಲ್ಲಿ ಬೇಕು ಗಟ್ಟಿತನ!

ಆಡಳಿತಯಂತ್ರದಲ್ಲಿ ಬೇಕು ಗಟ್ಟಿತನ!

ಖಾಸಗಿ ಕಂಪನಿಗಳು ಟೆಲಿಕಾಂನಲ್ಲಿ ಗಟ್ಟಿಯಾಗಿ ಹೂಡಿವೆ. ಕಡಿಮೆ ಶುಲ್ಕ, ಉಚಿತ ಸಿಮ್‌, ಶೀಘ್ರ ಸೇವೆ, ನಂಬರ್‌ ಸುಲಭ ಪೋರ್ಟಬಿಲಿಟಿ, ದರಗಳಲ್ಲಿ ಸ್ಪರ್ಧಾತ್ಮಕತೆ ಇತ್ಯಾದಿಗಳ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿವೆ. ಆದರೆ, ಇತರೆ ಸರ್ಕಾರಿ ಸಂಸ್ಥೆಗಳಂತೆಯೇ ಬಿಎಸ್‌ಎನ್‌ಎಲ್ ಆಡಳಿತ ಯಂತ್ರವನ್ನು ಗಟ್ಟಿಗೊಳಿಕೊಳ್ಳದೇ ಸ್ಪರ್ಧೆ ನೀಡುವಲ್ಲಿ ವಿಫಲವಾಗುತ್ತಿದೆ.

ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬೇಕು

ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬೇಕು

ಟೆಲಿಕಾಂನಂಥ ಸ್ಪರ್ಧಾತ್ಮಕ ವಲಯದಲ್ಲಿ ಸೇವೆ ಸಲ್ಲಿಸಲು ಅಗತ್ಯವಾದ ವಿನಯಶೀಲತೆ, ಗ್ರಾಹಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಚುರುಕುತನ ಬಿಎಸ್‌ಎನ್ಎಲ್ ನೌಕರರಿಗೆ ಇಲ್ಲ ಎಂಬ ಅಪವಾದವಿದೆ. ಕಾಲಕಾಲಕ್ಕೆ ತನ್ನ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ನೀಡದೇ ಬಿಎಸ್‌ಎನ್‌ಎಲ್‌ ಹಿಂದೆ ಬಿದ್ದಿದೆ. ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಸಿಬ್ಬಂದಿ ಕೌಶಲ್ಯಾಭಿವೃದ್ಧಿ ಪಾತ್ರ ಹೆಚ್ಚು.

ವೃತ್ತಿಪರತೆ ಇಲ್ಲದೆ ಹೋದರೆ?

ವೃತ್ತಿಪರತೆ ಇಲ್ಲದೆ ಹೋದರೆ?

ಬಿಎಸ್‌ಎನ್‌ಎಲ್‌ಭಾರತದಲ್ಲಿ ಇಂದಿಗೂ ಬಲಿಷ್ಠವಾದ ಜಾಲವನ್ನು ಹೊಂದಿದೆ. ಆದರೆ ಸಿಬ್ಬಂದಿಗಳಿಗೆ ಸರಕಾರಿ ನೌಕರಿ ಎಂಬ ಮನೋಭಾವನೆ ಬದಲಿಸಿಕೊಳ್ಳುವ ಮತ್ತು ವೃತ್ತಿಪರತೆ ಪ್ರದರ್ಶಿಸುವ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಿದೆ. ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರತೆ ಇಲ್ಲದೆ ಹೋದರೆ, ಸರಕಾರ ಎಷ್ಟು ಕೋಟಿ ನಿಧಿ ಒದಗಿಸಿದರೂ ಸಂಸ್ಥೆ ಉಳಿಯಲಾರದು.

ನೆರವಿನ ಅಗತ್ಯತೆ ಇಲ್ಲ!

ನೆರವಿನ ಅಗತ್ಯತೆ ಇಲ್ಲ!

ಒಂದು ವೇಳೆ ಬಿಎಸ್‌ಎನ್‌ಎಲ್‌ ಕೂಡ ಖಾಸಾಗಿ ಕಂಪೆನಿಗಳಂತೆ ಕಾರ್ಯನಿರ್ವಹಿಸಿದರೆ ಸರ್ಕಾರದ ನೆರವಿನ ಅಗತ್ಯತೆ ಇಲ್ಲ. ಇಂಥಹ ಸರ್ಕಾರಿ ನಿಯಮಿತ ಸಂಸ್ಥೆಗಳು ಉಳಿಯಬೇಕಾದ್ದು ಸರಕಾರಿ ನೆರವಿನಿಂದಲ್ಲ. ಅವು ತಮ್ಮ ಕಾಲ ಮೇಲೆ ತಾವೇ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ನಷ್ಟದಲ್ಲೇ ದೂಡುವ ಸರ್ಕಾರಿ ಸಂಸ್ಥೆಯನ್ನು ಉಳಿಸಲು ಸರ್ಕಾರಕ್ಕೂ ಸಾಧ್ಯವಿಲ್ಲ.

Best Mobiles in India

English summary
The government is negotiating with banks for a term loan worth Rs 2,500 crore, a move that would help the ailing state-owned telecom company Bharat Sanchar Nigam (BSNL) stay afloat . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X