TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಡ್ರೋನ್ ನೀತಿಯನ್ನು ಅಂತಿಮಗೊಳಿಸಿದ್ದು, ಕೇಂದ್ರ ಸರ್ಕಾರವು ಸದ್ಯದಲ್ಲೇ ಇದನ್ನು ಪ್ರಕಟಿಸಲಿದೆ ಎಂದು ಭದ್ರತೆಗೆ ಸಂಬಂಧಿಸಿದ ವಿಚಾರಗಳು ಹಾಗೂ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ವಿಷಯಗಳನ್ನು ಸಂಬಂಧಿಸಿದವರ ಜೊತೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಾನವರಹಿತ ವಾಯುಯಾನ ವ್ಯವಸ್ಥೆಗೆ ಸಂಬಂಧಿಸಿದ ಕರಡನ್ನು ಸಚಿವಾಲಯ ಕಳೆದ ವರ್ಷವೇ ಸಿದ್ಧಪಡಿಸಿತ್ತು. ಭದ್ರತೆ ಹಾಗೂ ಅಂತರರಾಷ್ಟ್ರೀಯ ಮಾನದಂಡ ಕುರಿತ ಕೆಲ ಸಂಕೀರ್ಣ ವಿಚಾರಗಳು ಇನ್ನಷ್ಟೇ ಇತ್ಯರ್ಥವಾಗಬೇಕಿವೆ. ಆದಾಗ್ಯೂ ಶೀಘ್ರದಲ್ಲಿ ಡ್ರೋನ್ ನೀತಿಯನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ವಿದೇಶಗಳಲ್ಲಿ ಜನಪ್ರಿಯವಾಗಿರುವ ಡ್ರೋಣ್ ಮೂಲಕ ಸರಕುಗಳನ್ನು ಪೂರೈಸುವ ಸೇವೆಯನ್ನು ಭಾರತದಲ್ಲಿಯೂ ನೀಡಬೇಕು ಎನ್ನುವ ಬೇಡಿಕೆಗೆ ವಿಮಾನಯಾನ ನಿರ್ದೇಶನಾಲಯ ಕರುಡು ನಿಯಮ ರಚಿಸಿದೆ ಎನ್ನಲಾಗಿದೆ. ಒಮ್ಮೆ ಈ ಕರಡು ನಿಯಮವನ್ನು ಅಂತಿಮಗೊಳಿಸಿ ಜಾರಿಗೆ ತಂದರೆ ವಾಣಿಜ್ಯ ಬಳಕೆಗೆ ಡ್ರೋಣ್ ಬಳಸಬಹುದಾಗಿದೆ.!!
ಒಳ್ಳೆಯ ಉದ್ದೇಶಗಳಿಗೆ ಮಾತ್ರ ಡ್ರೋಣ್ ಬಳಸುವಂತಾಗಬೇಕು ಮತ್ತು ಡ್ರೋಣ್ ಹಾರಾಟದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಸಿಗಬೇಕು ಎನ್ನು ನಿಟ್ಟಿನಲ್ಲಿ ಈ ಕರಡು ನಿಯಮಗಳನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ, ಡ್ರೋಣ್ ಹಾರಾಟಕ್ಕೆ ರೂಪಿತವಾಗಿರಬಹುದಾದ ನಿಯಮಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
ಡ್ರೋಣ್‌ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ!!
ದೇಶದಲ್ಲಿ ವಿದೇಶಿ ಕಂಪೆನಿಗಳು ಇಲ್ಲವೇ ಪ್ರಜೆಗಳು ನಾಗರಿಕ ಡ್ರೋನ್ ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡಿದ್ದು ಡ್ರೋಣ್‌ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತಿದ್ದು, ಈ ಯುಐಎನ್ ಅನ್ನು ಕೇವಲ ಭಾರತೀಯ ಪ್ರಜೆಗೆ ನೀಡಲಾಗುವುದು ಎಂದು ತಿಳಿಸಿದೆ.!!
ಐದು ರೀತಿಯಲ್ಲಿ ಡ್ರೋಣ್ ವಿಂಗಡನೆ.!!
ಡ್ರೋಣ್ ಹಾರಾಟದ ಬಗ್ಗೆ ಸ್ಪಷ್ಟತೆ ಹೊಂದಲು ಸರ್ಕಾರ ನಿರ್ಧರಿಸಿದೆ.ಹಾಗಾಗಿ, ಡ್ರೋಣ್‌ನಲ್ಲಿ 1.) 250 ಗ್ರಾಂ ತೂಕ- ನ್ಯಾನೊ , 2.) 250 ಗ್ರಾಂನಿಂದ 2 ಕೆ.ಜಿ-ಮೈಕ್ರೊ, 3.) 2 ಕೆ.ಜಿಗಿಂತ ಹೆಚ್ಚು-ಮಿನಿ., 4.) 150 ಕೆ.ಜಿ.-ಸಣ್ಣ 5.) 150 ಕೆ.ಜಿಗಿಂತ ಹೆಚ್ಚು- ದೊಡ್ಡ ಡ್ರೋಣ್‌ಗಳೆಂದು ಐದು ವರ್ಗದಲ್ಲಿ ವಿಂಗಡಿಸಲಾಗಿದೆ.!!
ಒಳಾವರಣ ಹಾರಾಟಕ್ಕೂ ನಿರ್ಬಂಧ!!
ಮನರಂಜನೆಗಾಗಿ ಡ್ರೋಣ್ ಹಾರಾಟ ನಡೆಸುವವರಿಗೆ ಅವುಗಳ ಜವಾಬ್ದಾರಿ ಕೂಡ ಸೇರಿದೆ.! ಅವುಗಳ ಭದ್ರತೆ ಮತ್ತು ಸುರಕ್ಷತೆಯತ್ತ ಗಮನ ನೀಡಬೇಕು. ಹಾರಾಟದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆದಿರಬೇಕು. ಇದು ಒಳಾವರಣದಲ್ಲಿ ಹಾರಾಟ ಮಾಡಿದ್ದರೂ ಅನ್ವಯವಾಗುತ್ತದೆ ಎಂದು ತಿಳಿದುಬಂದಿದೆ.!!
250 ಗ್ರಾಂ ಡ್ರೋಣ್‌ಗೆ ಯುಐಎನ್ ಅವಶ್ಯವಿಲ್ಲ!!
250 ಗ್ರಾಂಗಿಂತ ಕಡಿಮೆ ತೂಕದ, ಕೇವಲ 50 ಅಡಿಗಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಹಾಗೂ ಸರ್ಕಾರಿ ಭದ್ರತಾ ಏಜೆನ್ಸಿಗಳ ಡ್ರೋನ್‌ಗಳಿಗೆ ಯಾವುದೇ ಯುಐಎನ್ ಅವಶ್ಯವಿಲ್ಲ ಎಂದು ಹೇಳಲಾಗಿದೆ. ಹಾಗಾಗಿ, ಚಿಕ್ಕ ಡ್ರೋಣ್‌ಗಳನ್ನು ಖರೀದಿಸಲು ಹೆಚ್ಚು ಕಷ್ಟವಾಗುವುದಿಲ್ಲ ಎನ್ನಬಹುದು.!!
ಕಳಪೆ ಡ್ರೋನ್‌ಗಳಿಗೆ ತಡೆ!
ಹೊಸ ಕರಡು ನಿಯಮದಲ್ಲಿ ಕಳಪೆ ಗುಣಮಟ್ಟದ ಡ್ರೋನ್‌ಗಳ ಹಾರಾಟಕ್ಕೆ ತಡೆ ಹಾಕಾಲು ಸರ್ಕಾರ ಮುಂದಾಗಿದೆ. ಅನುಮತಿ ನೀಡಿದ ಪ್ರದೇಶದಿಂದ ಹೊರಗೆ ಹಾರಾಟ ನಡೆಸುವ ಇವು ಭದ್ರತೆ ಮತ್ತು ಸುರಕ್ಷತೆಗೆ ತೊಂದರೆ ನೀಡುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ಚೀನಾದ ಬಹುತೇಕ ಡ್ರೋಣ್‌ಗಳು ಮಕಾಡೆ ಮಲಗಲಿವೆ.!!