Home
ಸುದ್ದಿಜಾಲ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ! ಅರ್ಜಿ ಸಲ್ಲಿಸದಿದ್ದರೆ ಏನಾಗಲಿದೆ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಕೂಡ ಒಂದಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ತಿಂಗಳು 200 ಯೂನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಸದ್ಯ ಈ ಯೋಜನೆ ಅಡಿಯಲ್ಲಿ ಜುಲೈ ತಿಂಗಳ ಲಾಭ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ.

ಹೌದು, ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಈ ಯೋಜನೆಗೆ ನೀವು ವರ್ಷಪೂರ್ತಿ ಅರ್ಜಿಸಲ್ಲಿಸಬಹುದು. ಆದರೆ ಇಂದು ನೀವು ಜುಲೈ ತಿಂಗಳಲ್ಲಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಬೇಕಾದರೆ ಇಂದು ಕೊನೆಯ ದಿನಾಂಕವಾಗಿದೆ. ಹಾಗಾದ್ರೆ ಈ ಯೋಜನೆಗೆ ಇಂದು ನೀವು ಅರ್ಜಿ ಸಲ್ಲಿಸದಿದ್ದರೆ ಏನಾಗಲಿದೆ? ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿಯ ಸ್ಟೇಟಸ್‌ ಏನಾಗಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ!

ಅರ್ಜಿ ಸಲ್ಲಿಸದಿದ್ದರೆ ಏನಾಗಲಿದೆ?
ಗೃಹಜ್ಯೋತಿ ಯೋಜನೆಯ ಮೊದಲ ಬಿಲ್‌ ಪ್ರಕ್ರಿಯೆ ಬುಧವಾರದಿಂದ ಪ್ರಾರಂಭವಾಗಲಿದೆ. ಆದರಿಂದ ಜುಲೈ ತಿಂಗಳ ಗೃಹಜ್ಯೋತಿ ಲಾಭ ಪಡೆದುಕೊಳ್ಳಬೇಕಾದರೆ ಇಂದು ಸಂಜೆಯೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಗೃಹಜ್ಯೋತಿ ಯೋಜನೆಗೆ ಇನ್ನು ಕೂಡ ಅರ್ಜಿ ಸಲ್ಲಿಸಿಲ್ಲವೆಂದರೆ ಇಂದೇ ಅರ್ಜಿ ಸಲ್ಲಿಸಿ. ಇಲ್ಲದೇ ಹೋದರೆ ನೀವು ಅರ್ಜಿ ಸಲ್ಲಿಸುವ ತನಕ ವಿದ್ಯುತ್‌ ಬಿಲ್‌ ಪಾವತಿಸಬೇಕಾಗುತ್ತದೆ.

ಗೃಹಜ್ಯೋತಿ ಯೋಜನೆ ಲಾಭ ಪಡೆಯುಬೇಕಾದರೆ ಯೋಜನೆಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಇದಕ್ಕೆ ಯಾವುದೇ ಅಂತಿಮ ದಿನಾಂಕ ನಿಗದಿಪಡಿಸಿಲ್ಲ. ಆದರೆ ಜುಲೈ ತಿಂಗಳ ಯೋಜನೆ ಲಾಭ ಪಡೆಯಬೇಕಾದರೆ ಇಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏಕೆಂದರೆ ಈ ತಿಂಗಳ ಬಿಲ್‌ ಪ್ರಕ್ರಿಯೆ ನಾಳೆಯಿಂದ ಶುರುವಾಗಲಿದೆ. ಆದರಿಂದ ಜುಲೈನಲ್ಲಿ ವಿದ್ಯುತ್ ಬಳಕೆಯ ಬಿಲ್‌ ಜನ್‌ರೇಟ್‌ ಆಗುವ ಮುನ್ನವೇ ನೀವು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈಗಾಗಲೇ ರಾಜ್ಯದ್ಯಾಂತ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ನಡೆದಿದೆ. ಅರ್ಜಿ ಸಲ್ಲಿಸುವವರು ತಮ್ಮ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅರ್ಜಿ ಸಲ್ಲಿಸಿದವರಿಗೆಲ್ಲಾ ಈ ತಿಂಗಳಿನಿಂದಲೇ ಗೃಹಜ್ಯೋತಿ ಯೋಜನೆಯ ಲಾಭ ದೊರೆಯಲಿದೆ. ಅಂದರೆ 200 ಯೂನಿಟ್‌ವರೆಗೂ ವಿದ್ಯುತ್ ಉಚಿತವಾಗಿ ದೊರೆಯಲಿದೆ. ಅದರಿಂದ ನೀವು ಇಂದೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.

ಏಕೆಂದರೆ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳು ಪ್ರತಿ ತಿಂಗಳ ಮೊದಲ ವಾರದಲ್ಲಿ ಗ್ರಾಹಕರಿಗೆ ವಿದ್ಯುತ್‌ ಬಿಲ್ ನೀಡುತ್ತವೆ. ಇದಕ್ಕಾಗಿ ಆಯಾ ತಿಂಗಳ 25 ನೇ ತಾರೀಕಿನವರೆಗೆ ಬಳಸಿದ ವಿದ್ಯುತ್ ಪ್ರಮಾಣ ಆಧಾರದ ಮೇಲೆ ಬಿಲ್ ಜನ್‌ರೇಟ್‌ ಮಾಡಲಿವೆ. ಇದೇ ಕಾರಣಕ್ಕೆ ಇಂದು ಜುಲೈ ತಿಂಗಳ ವಿದ್ಯುತ್‌ ಬಿಲ್‌ ಜನ್‌ರೇಟ್‌ ಆಗುವ ಮುನ್ನವೇ ನೀವು ಅರ್ಜಿಸಲ್ಲಿಸುವುದು ಅನಿವಾರ್ಯವಾಗಿದೆ.

ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿಗೆ ಬಂದಿದ್ದು, ಇದು ಮೊದಲ ತಿಂಗಳ ಪ್ರಕ್ರಿಯೆಯಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಒಟ್ಟು 1.20 ಕೋಟಿ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಂದರೆ ವಿದ್ಯುತ್ ಇಲಾಖೆ ಹೇಳಿರುವಂತೆ ಶೇ.90ರಷ್ಟು ಮಂದಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಇನ್ನು ಕೂಡ 10 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಳ್ಳುವುದು ಬಾಕಿ ಇರಬಹುದು. ಆದರಿಂದ ನೀವು ಕೂಡ ಅರ್ಜಿ ಸಲ್ಲಿಸದಿದ್ದರೆ ಇಂದು ಕೊನೆಯ ಅವಕಾಶವಾಗಿದೆ.

ಗೃಹಜ್ಯೋತಿಗೆ ಅರ್ಜಿ ಸಲ್ಲಿಸುವುದು ಹೇಗಿದೆ?
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭವಾಗಿದೆ. ಇದನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ನೀವು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಕ್ಲಿಕ್‌ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಲಿಂಕ್ ಅನ್ನು ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಮೂಲಕ ಸರಳವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್, ಆರ್‌ಆರ್‌ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

Best Mobiles in India

English summary
Gruha Jyothi Scheme Application Submission Last Date: details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+