Home
ಸುದ್ದಿಜಾಲ

ನಿಮಗಿನ್ನೂ ಗೃಹಲಕ್ಷ್ಮಿ ಅರ್ಜಿ ನೋಂದಣಿ ಮಾಡಿಸಲು ಸಂದೇಶ ಬಂದಿಲ್ಲವೇ ಕೂಡಲೇ ಈ ಕೆಲಸ ಮಾಡಿ!

ಅಯ್ಯೊ ಎಲ್ಲರಿಗೂ ಗೃಹಲಕ್ಷ್ಮಿ (Gruha Lakshmi) ಯೋಜನೆ ಅರ್ಜಿ ನೋಂದಣಿ ಮಾಡಿಸಲು ಮೊಬೈಲ್‌ಗೆ ಸಂದೇಶ ಬಂದಿದೆ. ನಮ್ಮ ಮನೆಯವರಿಗೆ ಬಂದಿಲ್ಲ ಅನ್ನೋ ಚಿಂತೆ ಕಾಡ್ತಾ ಇದ್ದೀಯಾ? ಅರೆ ನಮ್ಮ ಪಕ್ಕದ್ಮನೆ ಅವರಿಗೆ ಬಂದಿದೆ ನಮಗೆ ಇನ್ನೂ ಬಂದಿಲ್ಲ ಯಾಕೆ ಹಾಗೇ ಹೀಗೆ ಅನ್ನೊ ಟೆನ್ಶನ್‌ ಶುರುವಾಗಿದೆಯಾ? ಇದಕ್ಕಾಗಿ ನೀವು ಚಿಂತಿಸಿಬೇಕಿಲ್ಲ.

ಹೌದು, ನಿಮ್ಮ ಮೊಬೈಲ್‌ಗೆ ಗೃಹಲಕ್ಷ್ಮಿ ಅರ್ಜಿ ನೋಂದಣಿಗೆ ದಿನಾಂಕ ಹಾಗೂ ಸ್ಥಳದ ಬಗ್ಗೆ ಇನ್ನು ಕೂಡ ಸಂದೇಶ ಬಾರದೇ ಇದ್ದರೆ ನಿಮಗೆ ಬೇರೆಯದ್ದೆ ಮಾರ್ಗವಿದೆ. ನೀವು ಸರ್ಕಾರ ನೀಡಿರುವ ನಂಬರ್‌ಗೆ ಸಂದೇಶ ಕಳುಹಿಸಿದರು ಸಹ ನಿಮಗಿನ್ನೂ ಸಂದೇಶ ಬಂದಿಲ್ಲವಾದರೆ ನೀವು ಕೂಡಲೇ ಈ ಕೆಲಸ ಮಾಡಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ನೋಂದಣಿ ದಿನಾಂಕ ತಿಳಿದುಕೊಳ್ಳಲು ನೀವು ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮಗಿನ್ನೂ ಗೃಹಲಕ್ಷ್ಮಿ ಅರ್ಜಿ ನೋಂದಣಿ ಸಂದೇಶ ಬಂದಿಲ್ಲವೇಕೂಡಲೇ ಈ ಕೆಲಸ ಮಾಡಿ!

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿ ಒಂದು ವಾರವೇ ಕಳೆದಿದೆ. ಈಗಾಗಲೇ ರಾಜ್ಯದ್ಯಂತ ಮಹಿಳೆಯರು ಜಿಟಿಜಿಟಿ ಮಳೆಯ ನಡುವೆಯೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಾಯಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸುವುದಕ್ಕೆ ಸರ್ವರ್‌ ಡೌನ್‌ ಪ್ರಾಬ್ಲಂ ಕೂಡ ಉಂಟಾಗಿದೆ. ಇದರ ನಡುವೆಯೂ ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಇದರ ನಡುವೆ ಇನ್ನು ಕೆಲವರ ಮೊಬೈಲ್‌ಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ನೋಂದಣಿ ದಿನಾಂಕ ಹಾಗೂ ಸ್ಥಳದ ಮಾಹಿತಿಯುಳ್ಳ ಸಂದೇಶ ಬಾರದಿರುವುದು ಚಿಂತೆಗೆ ದೂಡಿದೆ.

ಬೇರೆಯವರೆಲ್ಲಾ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಮಗೆ ಮಾತ್ರ ಇನ್ನು ಸಂದೇಶ ಬಂದಿಲ್ಲ, ಸರ್ಕಾರ ನೀಡಿರುವ ಸಂಖ್ಯೆಗೆ ಸಂದೇಶ ಕಳುಹಿಸಿದರೂ ಕೂಡ ಯಾವುದೇ ರಿಪ್ಲೇ ಬಂದಿಲ್ಲ, ಹೀಗೆ ಒಂದಿಲ್ಲೊಂದು ಮಾತುಗಳು ಕೇಳಿ ಬರುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ನೀವು ಸಂದೇಶಕ್ಕಾಗಿ ಕಾದು ಕೂರುವ ಅವಶ್ಯಕತೆಯಿಲ್ಲ. ಬದಲಿಗೆ ನಿಮ್ಮ ಹತ್ತಿರದ ಗ್ರಾಮ್‌ ಒನ್‌, ಸೇವಾ ಸಿಂದು ಕೇಂದ್ರ, ಬಾಪೂಜಿ ಕೇಂದ್ರಗಳಿಗೆ ಬೇಟಿ ನೀಡಿ ಇದರ ಬಗ್ಗೆ ವಿಚಾರಿಸಬಹುದು. ಅದು ಕೂಡ ಸಾದ್ಯವಾಗದೇ ಹೋದರೆ ನೀವು ಮನೆಯಲ್ಲಿಯೇ ಕುಳಿತು ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ನಿಗದಿಯಾದ ನಿಮ್ಮ ದಿನಾಂಕ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ನಿಮಗಿನ್ನೂ ಗೃಹಲಕ್ಷ್ಮಿ ಅರ್ಜಿ ನೋಂದಣಿ ಸಂದೇಶ ಬಂದಿಲ್ಲವೇಕೂಡಲೇ ಈ ಕೆಲಸ ಮಾಡಿ!

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ದಿನಾಂಕ ತಿಳಿಯಲು 8147500500 ಸಂಖ್ಯೆಗೆ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಅನ್ನು ಎಸ್‌ಎಂಎಸ್‌ ಕಳುಹಿಸಲು ಅವಕಾಶ ಕಲ್ಪಿಸಿದೆ. ಈ ನಂಬರ್‌ಗೆ ನೀವು ಸಂದೇಶ ಕಳುಹಿಸಿದ ಎರಡು ಸೆಕೆಂಡುಗಳಲ್ಲಿಯೇ ನಿಮ್ಮ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ ಹಾಗೂ ಸ್ಥಳದ ವಿವರವನ್ನು ಪಡೆದುಕೊಳ್ಳಬಹುದಾಗಿದೆ. ಆದರೂ ಕೂಡ ಕೆಲವರಿಗೆ ಈ ಸಂಖ್ಯೆಗೆ ಸಂದೇಶ ಕಳುಹಿಸಿದ ನಂತರವೂ ಯಾವುದೇ ಸಂದೇಶ ಬರುತ್ತಿಲ್ಲ. ಈ ಸಮಸ್ಯೆ ಬಹುತೇಕ ಕಡೆ ಎದುರಾಗಿದೆ.

ಇಂತಹ ಸನ್ನಿವೇಶದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಗದಿಯಾದ ದಿನಾಂಕ ತಿಳಿಯಲು ಮತ್ತೊಂದು ಅವಕಾಶವಿದೆ. ಇದಕ್ಕಾಗಿ ನೀವು ಮೊದಲಿಗೆ ಸೇವಾಸಿಂಧು ಪೋರ್ಟಲ್‌ಗೆ ಬೇಟಿ ನೀಡಬೇಕಾಗುತ್ತದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಗೆ ನಿಗದಿಯಾದ ಐಕಾನ್‌ ಅನ್ನು ಕ್ಲಿಕ್‌ ಮಾಡಿರಿ. ಇದೀಗ ನಿಮಗೆ ಯೋಜನೆಯ ಫಲಾನುಭವಿಗಳು ತಮ್ಮ ನೋಂದಣಿಯ ವೇಳಾಪಟ್ಟಿಯನ್ನು ಪರಿಶೀಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಕಾಣಿಸಲಿದೆ.

ನಿಮಗಿನ್ನೂ ಗೃಹಲಕ್ಷ್ಮಿ ಅರ್ಜಿ ನೋಂದಣಿ ಸಂದೇಶ ಬಂದಿಲ್ಲವೇಕೂಡಲೇ ಈ ಕೆಲಸ ಮಾಡಿ!

ಇಲ್ಲಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಇದರಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿಯ ವಿವರಗಳು ಎಂಬ ಪೇಜ್‌ ತೆರಯಲಿದೆ. ಇದರಲ್ಲಿ ನಿಮಗೆ ರೇಷನ್‌ ಕಾರ್ಡ್‌ ನಂಬರ್‌ ಅನ್ನು ನಮೂದಿಸುವುದಕ್ಕೆ ಪ್ರತ್ಯೇಕ ಬಾಕ್ಸ್‌ ಅನ್ನು ನೀಡಲಾಗಿದೆ. ಇದರಲ್ಲಿ ಪಡಿತರ ಚೀಟಿಯ ಸಂಖ್ಯೆ ನಮೂದಿಸಿದ ನಂತರ ಕ್ಯಾಪ್ಚಾವನ್ನು ಸರಿ ಪಡಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯ ದಿನಾಂಕದ ವಿವರಗಳು ಕಾಣಿಸಲಿದೆ.

Best Mobiles in India

English summary
Gruha Lakshmi registration: enroll SMS not received; everything you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+