Home
ಸುದ್ದಿಜಾಲ

GruhaLakshmi Amount Status: ಗೃಹಲಕ್ಷ್ಮಿ ಅಮೌಂಟ್‌ ಸ್ಟೇಟಸ್‌ ವಿವರ ತಿಳಿಯಲು ಈ ಆ್ಯಪ್‌ ಬಳಸಿ!

ಗೃಹಲಕ್ಷ್ಮಿ ಯೋಜನೆಯ ಸಂದೇಶ ಬಂದಿದೆ, ಆದರೆ ಅಕೌಂಟ್‌ನಲ್ಲಿ ಇನ್ನು ಕೂಡ ಹಣ ಜಮೆ ಆಗಿಲ್ಲ. ನಾವು ಯಾರನ್ನು ಕೇಳಬೇಕು, ನಮಗೆ ಮಾತ್ರ ಹಣ ಇನ್ನು ಯಾಕೆ ಬಂದಿಲ್ಲ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಗೃಹಲಕ್ಷ್ಮಿಯ ಹಣ ಕೆಲವು ಫಲಾನುಭವಿಗಳ ಖಾತೆಗೆ ಇನ್ನು ಜಮೆ ಆಗದಿರುವುದು.

ಹೌದು, ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ಮನೆ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ಹಣ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ಈಗಾಗಲೇ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಸಂದೇಶ ಬಂದಿದೆ, ಆದರೆ ಇನ್ನು ಕೂಡ ಹಣ ಬಂದಿಲ್ಲ. ಹಾಗಾದ್ರೆ ನಿಮ್ಮ ಖಾತೆಗೆ ಬರಬೇಕಾದ ಹಣ ಏನಾಯ್ತು? ನಿಮ್ಮ ಹಣ ಸ್ಟೇಟಸ್‌ ಚೆಕ್‌ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹಲಕ್ಷ್ಮಿ ಅಮೌಂಟ್‌ ಸ್ಟೇಟಸ್‌ ವಿವರ ತಿಳಿಯಲು ಈ ಆ್ಯಪ್‌ ಬಳಸಿ!

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತು ಒಂದು ವಾರವೇ ಕಳೆದು ಹೋಗಿದೆ. ಈ ನಡುವೆ ಲಕ್ಷಾಂತರ ಅರ್ಹ ಫಲಾನುಭವಿಗಳ ಖಾತೆಗೆ ಇನ್ನು ಕೂಡ ಹಣ ಜಮೆ ಆಗಿಲ್ಲ. ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಮಾಡಿರುವುದಾಗಿ ಸರ್ಕಾರದಿಂದ ಸಂದೇಶ ಬಂದಿದೆ. ಆದರೆ ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಕ್ರೆಡಿಟ್‌ ಆಗಿಲ್ಲ, ಇದಕ್ಕೆ ಕಾರಣ ಫಲಾನುಭವಿಗಳ ಬ್ಯಾಂಕ್‌ ಖಾತೆಗಳು ನಿಷ್ಕ್ರೀಯವಾಗಿರುವುದು, ಬ್ಯಾಂಕ್‌ ಅಕೌಂಟ್‌ನೊಂದಿಗೆ ಆಧಾರ್‌ ಲಿಂಕ್‌ ಮಾಡಿಸದಿರುವುದು ಕೂಡ ಸೇರಿದೆ.

ಇಲ್ಲಿಯವರೆಗೆ ರಾಜ್ಯಾದ್ಯಂತ ಶೇ.45ರಷ್ಟು ಅರ್ಹ ಫಲಾನುಭವಿಗಳಿಗೆ ಇನ್ನು ಕೂಡ ಹಣ ಜಮೆ ಆಗಿಲ್ಲ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆಯ್ಕೆಯಾಗಿರುವ 5,27,768 ಅರ್ಜಿಯಲ್ಲಿ 69, 642 ಮನೆಯೊಡತಿಗೆ ಮಾತ್ರ ಎರಡು ಸಾವಿರ ರೂ. ಹಣ ಸಂದಾಯವಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,22,917 ಅರ್ಜಿಗಳಲ್ಲಿ 94,338 ಮಂದಿಗೆ ಮಾತ್ರ ಹಣ ಸಂದಾಯವಾಗಿದೆ. ಇನ್ನು ಹತ್ತು ದಿನಗಳ ಅವಧಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಹಣ ಜಮೆ ಆಗಲಿದೆ ಎಂದು ಹೇಳಲಾಗಿದೆ.

ಒಂದು ವಾರವೇ ಕಳೆದರು ಸರ್ಕಾರ ಡಿಬಿಟಿ ಮಾಡಿರುವ ಹಣ ಯಾಕೆ ಅಕೌಂಟ್‌ಗೆ ಬಂದಿಲ್ಲ, ಅನ್ನೋ ಪ್ರಶ್ನೇ ಸಾಮಾನ್ಯ. ಆದರೆ ಇದಕ್ಕೆ ನೇರ ಕಾರಣ ಫಲಾನುಭವಿಗಳು ನೀಡಿರುವ ಮಾಹಿತಿಯ ಕೊರತೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿರುವ ಬಹುತೇಕ ಮಂದಿಯ ಬ್ಯಾಂಕ್‌ ಅಕೌಂಟ್‌ ನಿಷ್ಕ್ರೀಯವಾಗಿದೆ. ಅಲ್ಲದೆ ಬ್ಯಾಂಕ್ ಅಕೌಂಟ್ ಕೆವೈಸಿ, ಆಧಾರ್ ಲಿಂಕ್ ಆಗದ ಹಣ ಸಂದಾಯ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

ಸಂದೇಶ ಬಂದಿದೆ, ಆದರೆ ಹಣ ಬಂದಿಲ್ಲ ಅಂತಾ ಯೋಚನೆ ಮಾಡುವ ಬದಲು ನಿಮ್ಮ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗದಿರಲು ಕಾರಣ ಏನು ಅಂತಾ ತಿಳಿಯುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ಡಿಬಿಟಿ ಕರ್ನಾಟಕ ಆಪ್ ಮೂಲಕ ಡಿಬಿಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ನಿಮ್ಮ ಮೊಬೈಲ್ ನಲ್ಲಿ ಡಿಬಿಡಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ವಿವರಗಳನ್ನು ತಿಳಿಯಬಹುದು.

ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಕೊಟ್ರೆ ಒಟಿಪಿ ಬರುತ್ತೆ. ಗೃಹಲಕ್ಷ್ಮಿ ಹಣದ ವಿವರ ಪರಿಶೀಲಿಸಲು ಅರ್ಜಿ ಸಂಖ್ಯೆ ಹಾಕಿದರೆ ಸ್ಟೇಟಸ್ ಸಿಗಲಿದೆ.

Best Mobiles in India

English summary
GruhaLakshmi Amount Status: How to check gruhalakshmi amount status dbt: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+