Home
ಸುದ್ದಿಜಾಲ

Gruhalakshmi Scheme: ಗೃಹಲಕ್ಷ್ಮಿ ಹಣ ಜಮಾವಣೆಯಲ್ಲಿ ಸಮಸ್ಯೆ ಆಗಲು ಕಾರಣ ಏನ್‌ ಗೊತ್ತಾ?

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಒಂದು ಮೂರು ವಾರಗಳು ಕಳೆದಿವೆ. ಇನ್ನು ಕೂಡ ಅನೇಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಹಣ ಕೈಗೆ ಸೇರಿಲ್ಲ. ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ಖಾತೆಗೆ ಹಣವನ್ನು ಡಿಬಿಟಿ ಮಾಡಿದೆ. ಆದರೂ ಸಹ ಕೆಲವು ಮಂದಿಗೆ ಗೃಹಲಕ್ಷ್ಮಿ ಸಂದೇಶ ಬಂದಿದ್ದರೂ ಹಣ ಯಾಕೆ ಬಂದಿಲ್ಲ ಅಂತಾ ಸಾಕಷ್ಟು ಮಂದಿ ಪ್ರಶ್ನಿಸುವಂತಾಗಿದೆ.

ಹೌದು, ರಾಜ್ಯದಲ್ಲಿ ಇನ್ನು ಕೂಡ ಹಲವು ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ. ಇನ್ನು ಕೂಡ 30% ರಷ್ಟು ಮಂದಿಗೆ ಹಣ ಜಮೆ ಆಗುವುದು ಬಾಕಿಯಿದೆ. ಅಷ್ಟೇ ಅಲ್ಲ ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳಿಗೂ ಇದೇ ತಿಂಗಳು ಹಣ ಜಮೆ ಆಗಲಿದೆಯಾ ಅನ್ನೋದು ಅನುಮಾನವಿದೆ. ಹಾಗಾದ್ರೆ ಈ ತಿಂಗಳು ಎಷ್ಟು ಮಂದಿಗೆ ಹಣ ಜಮೆ ಆಗಬಹುದು, ಹಣ ಕೈ ಸೇರಿಲ್ಲದವರು ಮಾಡಬೇಕಾಗಿರುವುದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Gruhalakshmi Scheme: ಗೃಹಲಕ್ಷ್ಮಿ ಹಣ ಜಮಾವಣೆಯಲ್ಲಿ ಸಮಸ್ಯೆ ಆಗಲು ಕಾರಣ ಏನು?

ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಕೈ ಸೇರಿದೆಯಾ?
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಲ್ಲಿ 30% ರಷ್ಟು ಮಂದಿಗೆ ಹಣ ಸಂದಾಯವಾಗಿಲ್ಲ. ಪ್ರತಿ ದಿನಗಳ 6-7 ಲಕ್ಷ ಜನರಿಗೆ ಅಂತ ಲೆಕ್ಕನೋಡಿದರೆ ಇನ್ನೂ 10 ರಿಂದ 12 ದಿನಗಳಲ್ಲಿ ಇನ್ನುಳಿದ ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ. ಅಂದರೆ ಈ ತಿಂಗಳ ಅಂತ್ಯದ ವೇಳೆಗೆ ಗೃಹಲಕ್ಷ್ಮಿ ಯೋಜನೆಯಡಿ ಆಯ್ಕೆಯಾದ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಆಗಲಿದೆ.

ಈಗಾಗಲೇ ಸಚಿವೆ ಲಕ್ಷ್ಮಿ ಹೆಬಾಳ್ಕರ್ ಕೂಡ ಗೃಹಲಕ್ಷ್ಮಿ ಹಣ ಇದೇ ತಿಂಗಳು ಎಲ್ಲಾ ಫಲಾನುಭವಿಗಳ ಖಾತೆಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಒಂದು ಕೋಟಿ 28 ಲಕ್ಷ ಮಂದಿಯಷ್ಟು ಫಲಾನುಭವಿಗಳು ಇದ್ದಾರೆ. ಇಲ್ಲಿಯವರೆಗೂ ಒಂದು ಕೋಟಿ 10 ಲಕ್ಷ ಮಂದಿ ಆಯ್ಕೆಯಾಗಿದ್ದು, ಇದರಲ್ಲಿ 82 ಲಕ್ಷ ಮಂದಿಯ ಬ್ಯಾಂಕ್‌ ಖಾತೆಗೆ 2 ಸಾವಿರ ರೂಪಾಯಿ ಹಣ ಜಮಾ ಆಗಿದೆ. ಇನ್ನು ಗೃಹಲಕ್ಷ್ಮಿಗಾಗಿ ಪ್ರತಿ ತಿಂಗಳು 2,100 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಸದ್ಯ ಇಲ್ಲಿಯ ತನಕ 28 ಲಕ್ಷ ಮಂದಿಗೆ ಇನ್ನು ಕೂಡ 2 ಸಾವಿರ ರೂಪಾಯಿ ಹಣ ಬಂದಿಲ್ಲ ಎನ್ನಲಾಗಿದೆ. ಇವರಲ್ಲಿ ಹಲವು ಮಂದಿಯ ಬ್ಯಾಂಕ್‌ ಖಾತೆಗಳು ನಿಷ್ಕ್ರೀಯವಾಗಿರುವುದು ಸಮಸ್ಯೆಯಾಗಿದೆ. ಇನ್ನು ಕೆಲವರ ಖಾತೆಗಳಿಗೆ ಆಧಾರ್‌ ಜೋಡಣೆಯಾಗಿಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಇದಲ್ಲದೆ ಡಿಬಿಟಿ ವ್ಯವಸ್ಥೆಯಡಿಯಲ್ಲಿ RBI ನಿಯಮಗಳ ಅನ್ವಯ ಹಣ ಹಾಕಬೇಕಾಗಿರುವುರಿಂದ ಹಣ ಜಮೆ ಆಗುವುದು ಕೂಡ ತಡವಾಗುತ್ತಿದೆ.

ಗೃಹಲಕ್ಷ್ಮಿ ಹಣ ಜಮಾವಣೆಯಲ್ಲಿ ಆಗುತ್ತಿರುವ ಸಮಸ್ಯೆಗಳೇನು?
ಡಿಬಿಟಿ ಹಣವನ್ನು ಹಾಕುವ ಸಂದರ್ಭದಲ್ಲಿ, ಪ್ರತಿಯೊಂದು ಅರ್ಜಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿದೆ. ಇದರಿಂದ ತಡವಾಗಲಿದ್ದು, ಒಮ್ಮೆ ಹಣ ಜಮೆ ಆದರೆ ಮುಂದಿನ ತಿಂಗಳುಗಳಿಂದ ಎಲ್ಲವೂ ಸರಿ ಹೋಗಲಿದೆ ಎನ್ನಲಾಗಿದೆ. ಇನ್ನು ಫಲಾನುಭವಿಗಳಲ್ಲಿ 41 ಸಾವಿರ ಮನೆಯೊಡತಿಯರ ಹೆಸರಿನ ಇನ್ಶಿಯಲ್ ಸಮಸ್ಯೆ ಕೂಡ ಹಣ ಜಮಾವಣೆ ಆಗದಿರುವುದಕ್ಕೆ ಕಾರಣವಾಗಿದೆ. ಆಧಾರ್​ ಕಾರ್ಡ್​ನಲ್ಲಿ ಒಂದು ರೀತಿ, ರೇಷನ್​ ಕಾರ್ಡ್​​ನಲ್ಲಿ ಒಂದು ರೀತಿಯ ಇನ್ಯಿಯಲ್‌ ಇರುವುದು ಇದಕ್ಕೆ ಕಾರಣ.

ಇನ್ನು ಫೋಟೋ ಇಮೇಜ್​ ಆಧಾರ್ ಕಾರ್ಡ್​ನಲ್ಲಿ ಒಂದು ರೀತಿ ಇದ್ದರೆ, ಬ್ಯಾಂಕ್​ ಪಾಸ್​​ಬುಕ್​​ನಲ್ಲಿ ಒಂದು ರೀತಿ ಇದೆ. ಈ ಸಮಸ್ಯೆಯಿಂದ ಬ್ಯಾಂಕ್​​ಗೆ ದುಡ್ಡು ಹೋದರೂ ಅವರ ಖಾತೆಗೆ ಹಣ ಜಮಾ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಇ-ವೇರಿಫಿಕೇಷನ್ ಸಮಸ್ಯೆ ಎಂದು ಹೇಳಲಾಗಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ ಉಳಿದ ಐದು ಲಕ್ಷ 56 ಸಾವಿರ ಜನರ ಆಧಾರ್ ಕಾರ್ಡ್​ ಮತ್ತು ಬ್ಯಾಂಕ್​ ಖಾತೆಗೆ ಜೋಡಣೆ ಆಗಿಲ್ಲ ಎನ್ನಲಾಗಿದೆ. ಇನ್ನು ಕೆಲವು ಫಲಾನುಭವಿಗಳ ಬ್ಯಾಂಕ್‌ ಖಾತೆ ಇ-ಕೆವೈಸಿ ಆಗದ ಕಾರಣ ಹಣ ವರ್ಗಾವಣೆ ಆಗಿಲ್ಲ ಎನ್ನಲಾಗಿದೆ.

Best Mobiles in India

English summary
Gruhalakshmi Scheme: Do you know the reason for the problem in Gruhalakshmi money Credit?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+