Home
ಸುದ್ದಿಜಾಲ

Gruhalakshmi Scheme: ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಈ ದಿನಾಂಕದಂದು ನಿಮ್ಮ ಕೈ ಸೇರಲಿದೆ!

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದಿದೆ. ಈ ಯೋಜನೆಯಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000ರೂ. ನೀಡಲಾಗುತ್ತಿದೆ. ಕಳೆದ ತಿಂಗಳ ಅಂತ್ಯದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸೇರುವಲ್ಲಿ ವಿಳಂಬವಾಗುತ್ತಿದೆ.

ಹೌದು, ಗೃಹಲಕ್ಷ್ಮಿ ಯೋಜನೆಯ ಸಂದೇಶ ಬಂದು ಎರಡು ವಾರವೇ ಕಳೆದು ಹೋದರು ಎಷ್ಟೋ ಮಂದಿಗೆ ಇನ್ನು ಕೂಡ ಹಣ ಕ್ರೆಡಿಟ್‌ ಆಗಿಲ್ಲ. ನಮ್ಮ ಅರ್ಜಿ ಯಶಸ್ವಿಯಾಗಿದೆ, ಆದರೆ ಹಣ ಇನ್ನು ನಮ್ಮ ಬ್ಯಾಂಕ್‌ ಖಾತೆಗೆ ಬಂದಿಲ್ಲ, ನಾವು ಯಾರನ್ನು ಕೇಳಬೇಕು ಅನ್ನೊ ಗೊಂದಲ ಎಲ್ಲರಲ್ಲೂ ಇದೆ. ಅಷ್ಟೇ ಅಲ್ಲ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಹಣ ಯಾವ ದಿನಾಂಕದಂದು ನಮ್ಮ ಖಾತೆಗೆ ಬಂದು ಸೇರಲಿದೆ ಅನ್ನೊ ಚರ್ಚೆ ಶುರುವಾಗಿದೆ. ಇದಕ್ಕೆ ಸರ್ಕಾರ ನೀಡಿರುವ ಉತ್ತರವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಮುಂದೆ ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಈ ದಿನಾಂಕದಂದು ನಿಮ್ಮ ಕೈ ಸೇರಲಿದೆ!

ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಯಾವ ದಿನಾಂಕದಂದು ಬರಲಿದೆ?
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ ಹಣ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಆಗಲಿದೆ. ಹಾಗಾದ್ರೆ ಪ್ರತಿ ತಿಂಗಳು ಯಾವ ದಿನಾಂಕದಂದು ಗೃಹಲಕ್ಷ್ಮಿ ಹಣ ಜಮೆ ಆಗಲಿದೆ ಅನ್ನೋ ಪ್ರಶ್ನೆ ಸಹಜವಾಗಿಯೇ ಬರಲಿದೆ. ಈ ಪ್ರಶ್ನೆಗೆ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಉತ್ತರವನ್ನು ನೀಡಿದ್ದಾರೆ. ಸಚಿವರು ನೀಡಿದ ಮಾಹಿತಿಯಂತೆ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು 15ನೇ ತಾರೀಖಿನ ಒಳಗಡೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ.

ಗೃಹಲಕ್ಷ್ಮಿ ಯೋಜನೆಗೆ ಇಲ್ಲಿಯವರೆಗೆ 1.20 ಕೋಟಿ ಅರ್ಜಿಗಳು ಆಯ್ಕೆಯಾಗಿವೆ. ಇದರಲ್ಲಿ ಸುಮಾರು 63 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸಂದಾಯವಾಗಿದೆ. ಆದರೆ ಇನ್ನು ಕೂಡ 45 % ಫಲಾನುಭಿಗಳಿಗೆ ಹಣ ಸಂದಾಯವಾಗುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಈಗಾಗಲೇ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಿದೆ. ಆದರೆ ಫಲಾನುಭವಿಗಳ ಖಾತೆಗೆ ಇನ್ನು ಕೂಡ ಹಣ ಜಮೆ ಆಗಿಲ್ಲ. ಇದಕ್ಕೆ ಕಾರಣ ಅರ್ಜಿದಾರರು ಅರ್ಜಿ ಸಲ್ಲಿಸಿದ ಸಮಯದಲ್ಲಿ ನೀಡಿದ್ದ ಬ್ಯಾಂಕ್‌ ಖಾತೆಗಳು ನಿಷ್ಕ್ರೀಯವಾಗಿವೆ ಎನ್ನಲಾಗಿದೆ.

ಗೊಂದಲವಿದ್ದರೆ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ
ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಏನಾದರೂ ಗೊಂದಲವಿದ್ದರೆ 1902 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇಲ್ಲವೇ 8147500500 ನಂಬರ್‌ಗೆ ಸಂದೇಶವನ್ನು ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತವಾಗಿದೆ ಎಂದು ಸಂದೇಶ ಬಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಸೂಕ್ತವಾಗಲಿದೆ.

ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಿದೆಯಾ?
ಖಂಡಿತ ಇಲ್ಲ, ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಅಂತಿಮ ದಿನಾಂಕವಿಲ್ಲ. ಗೃಹಲಕ್ಷ್ಮಿ ಯೋಜನೆಗೆ ನೀವು ಯಾವಾಗ ಬೇಕಾದರೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಆದರಿಂದ ನೀವು ಇನ್ನು ಕೂಡ ಅರ್ಜಿ ಸಲ್ಲಿಸಿಲ್ಲದಿದ್ದರೆ ಕೂಡಲೇ ಅರ್ಜಿ ಸಲ್ಲಿಸಿರಿ. ಇದಲ್ಲದೆ ರಾಜ್ಯದ ಬಹುತೇಕ ಕಡೆ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥರ ಹೆಸರಿನ ಕಾಲಂನಲ್ಲಿ ಗಂಡನ ಹೆಸರು ಇರುವುದರಿಂದ ಅನೇಖ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗಿಲ್ಲ. ಇದೀಗ ಸರ್ಕಾರ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ ನೀಡಿರುವುದರಿಂದ ಮನೆಯ ಮುಖ್ಯಸ್ಥರ ಹೆಸರನ್ನು ಬದಲಾಯಿಸವಹುದಾಗಿದೆ.

Best Mobiles in India

English summary
Gruhalakshmi Scheme: Gruhalakshmi Scheme Amount will credit every month on this date
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+