Gruhalakshmi Scheme: ಗೃಹಲಕ್ಷ್ಮಿ ಹಣ ಇನ್ನು ಕೂಡ ಕೆಲವರ ಅಕೌಂಟ್‌ಗೆ ಜಮೆ ಆಗದಿರಲು ಕಾರಣ ಏನು?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತು ಒಂದು ವಾರ ಕಳೆದು ಹೋಗಿದೆ. ಆದರೆ ಇನ್ನು ಕೂಡ ಹೆಚ್ಚಿನ ಫಲಾನುಭವಿಗಳ ಅಕೌಂಟ್‌ಗೆ ಹಣ ಜಮೆ ಆಗಿಲ್ಲ ಎನ್ನಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಜಮೆ ಆಗಿರುವ ಸಂದೇಶ ಬಂದಿದ್ದರೂ ಸಹ ಕೆಲವರಿಗೆ ಬ್ಯಾಂಕ್‌ನಲ್ಲಿ ಹಣ ವಿಥ್‌ಡ್ರಾ ಮಾಡುವುದಕ್ಕೆ ಕೂಡ ಸಮಸ್ಯೆ ಆಗುತ್ತಿದೆ.
ಹೌದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಆಯ್ಕೆಯಾಗಿರುವ ಹೆಚ್ಚಿನ ಜನರಿಗೆ ಇನ್ನು ಕೂಡ ಹಣ ತಲುಪಿಲ್ಲ. ಇದರಲ್ಲಿ ತಾಂತ್ರಿಕ ತೊಂದರೆ ಕೂಡ ಇದೆ ಎನ್ನಲಾಗಿದೆ. ಅಲ್ಲದೆ ಫಲಾನುಭವಿಗಳು ನೀಡಿರುವ ಬ್ಯಾಂಕ್ ಖಾತೆಗಳಲ್ಲಿ ಕೆಲವು ನಿಷ್ಕ್ರೀಯವಾಗಿವೆ ಎಂದು ಹೇಳಲಾಗಿದೆ. ಹಾಗಾದ್ರೆ ಫಲಾನುಭವಿಗಳ ಖಾತೆಗೆ ಹಣ ತಲುಪುವುದಕ್ಕೆ ವಿಳಂಬವಾಗುತ್ತಿರುವುದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಾಸಿಕ 2,000ರೂ ಗಳನ್ನು ನೇರವಾಗಿ ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡಲಾಗುತ್ತದೆ. ಈ ಯೋಜನಗೆ ಆಗಸ್ಟ್ ತಿಂಗಳಾಂತ್ಯದಲ್ಲಿ ಚಾಲನೆ ನೀಡಲಾಗಿದೆ. ಈಗಾಗಲೇ ಲಕ್ಷಾಂತರ ಫಲಾನುಭವಿಗಳ ಅಕೌಂಟ್‌ಗೆ ಹಣ ಜಮೆ ಆಗಿದೆ. ಆದರೆ ಇನ್ನು ಕೆಲವು ಫಲಾನುಭವಿಗಳು ಯೋಜನೆಯ ಅಭಿನಂದನೆ ಸಂದೇಶ ಸ್ವೀಕಾರ ಮಾಡಿದ್ದರು ಕೂಡ ಅಕೌಂಟ್‌ಗೆ ಹಣ ಜಮೆ ಆಗಿಲ್ಲ ಎಂದು ದೂರುತ್ತಿದ್ದಾರೆ.
ಇದನ್ನು ಗಮನಿಸಿರುವ ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ ಆಯ್ಕೆಯಾದ ಎಲ್ಲಾ ಫಲಾನಭವಿಗಳ ಅಕೌಂಟ್‌ಗೆ ಇನ್ನು ಕೂಡ ಹಣ ತಲುಪಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದೆ ಆದರೂ ಫಲಾನುಭವಿಗಳ ಖಾತೆಗೆ ಹಣ ತಲುಪುವುದಕ್ಕೆ ವಿಳಂಬವಾಗುತ್ತಿರುವುದಕ್ಕೆ ಹಲವು ಕಾರಣಗಳನ್ನು ಸರ್ಕಾರ ಪಟ್ಟಿಮಾಡಿದೆ.
ಗೃಹಲಕ್ಷ್ಮಿ ಹಣ ಜಮೆ ಆಗದಿರುವುದಕ್ಕೆ ಕಾರಣ ಏನು?
ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಕೆಲವರ ಅಕೌಂಟ್‌ಗೆ ಹಣ ಬಂದಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಅರ್ಜಿ ಸಲ್ಲಿಸುವಾಗ ನೀಡಿರುವ ಬ್ಯಾಂಕ್ ಅಕೌಂಟ್‌ಗಳಲ್ಲಿ ಕೆಲವು ನಿಷ್ಕ್ರೀಯವಾಗಿವೆ ಎನ್ನಲಾಗಿದೆ. ಇನ್ನು ಕೆಲವು ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಸರ್ಕಾರ ಹಣ ಜಮೆ ಮಾಡಿದ್ದರು ಸಹ ಫಲಾನುಭವಿಗಳ ಖಾತೆಗೆ ಕ್ರೆಡಿಟ್ ಆಗುವಲ್ಲಿ ವಿಳಂಬವಾಗುತ್ತಿದೆ.
ಅದರಂತೆ ಇಲ್ಲಿಯವರೆಗೆ ಎಂಟು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ. ಇದನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ಸಚಿವರು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಅಂಗನವಾಡಿ ಕಾರ್ಯಕರ್ತರ ಮೂಲಕ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡುವ ಹಾಗೂ ಅವರ ಬ್ಯಾಂಕ್ ಖಾತೆಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ.
ರಾಜ್ಯ ಸರ್ಕಾರದ ಪ್ರಕಾರ 1.28 ಕೋಟಿ ಅರ್ಹ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಆದರೆ ಇಲ್ಲಿಯ ತನಕ 1.12 ಕೋಟಿ ಗೃಹಿಣಿಯರು ಮಾತ್ರ ಯೋಜನೆಗೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಕೂಡ 16 ಲಕ್ಷಕ್ಕೂ ಅಧಿಕ ಮಹಿಳೆಯರು ಹೆಸರು ನೋಂದಣಿ ಮಾಡಿಸುವುದು ಬಾಕಿಯಿದೆ ಎನ್ನಲಾಗಿದೆ. ಇನ್ನು ಹೆಸರು ನೋಂದಣಿ ಬಾಕಿ ಇರುವವರಲ್ಲಿ ಕೆಲವರಿಗೆ ಪಡಿತರ ಚೀಟಿ ಇಲ್ಲದಿರುವುದು, ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾದಿರುವವರು ಕೂಡ ಇದ್ದಾರೆ.
ಏನಿದೆ ತಾಂತ್ರಿಕ ಸಮಸ್ಯೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ 1.12 ಕೋಟಿ ಅರ್ಹ ಫಲಾನುಭವಿಗಳಲ್ಲಿ ಇಲ್ಲಿಯವರೆಗೆ 59 ಲಕ್ಷ ಮಂದಿ ಖಾತೆಗೆ ಮಾತ್ರ 2000ರೂ ಹಣ ಜಮೆ ಆಗಿದೆ. ಇನ್ನುಳಿದ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುವಲ್ಲಿ ಬ್ಯಾಂಕ್ ಖಾತೆಯಲ್ಲಿನ ತಾಂತ್ರಿಕ ತೊಡಕು ಎದುರಾಗಿದೆ. ಇದರಲ್ಲಿ ಬಹುತೇಕ ಅಕೌಂಟ್‌ಗಳು ಸಾಕಷ್ಟು ದಿನದಿಂದ ಚಲಾವಣೆಯಲ್ಲಿ ಇಲ್ಲದಿರುವುದು ಕೂಡ ಕಾರಣವಾಗಿದೆ. ಕೆಲವರ ಬ್ಯಾಂಕ್‌ಗಳು ನಿಷ್ಕ್ರಿಯವಾಗಿರುವುದರಿಂದ ಹಣವೇ ಜಮೆಯಾಗುತ್ತಿಲ್ಲ. ಆದರಿಂದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬ್ಯಾಂಕ್‌ಗಳನ್ನು ಭೇಟಿ ಮಾಡಿ ಚಾಲ್ತಿಯಲ್ಲಿರುವ ಖಾತೆಗಳ ವಿವರಗಳನ್ನು ಸೂಚಿಸಲಾಗಿದೆ.


Click it and Unblock the Notifications








