ಗೃಹಲಕ್ಷ್ಮಿ ಹಣ ಪರಿಶೀಲಿಸಲು ಹೋದ ಮಹಿಳೆಗೆ ಬಿಗ್ ಶಾಕ್! ನೀವು ಕೂಡ ಒಮ್ಮೆ ಚೆಕ್ ಮಾಡಿಕೊಳ್ಳಿ!
ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ ಅಂತಾ ಚೆಕ್ ಮಾಡಿಸಲು ಹೋದ ಮಹಿಳೆಗೆ ಬಿಗ್ ಶಾಕ್ ಎದುರಾಗಿದೆ. ಪ್ರತಿ ತಿಂಗಳು ಬರುವ ಎರಡು ಸಾವಿರ ರೂ. ಗಳ ಬಗ್ಗೆ ತಿಳಿದುಕೊಳ್ಳಲು ಹೋದ ಮಹಿಳೆಗೆ ತನ್ನ ಖಾತೆಯಲ್ಲಿದ್ದ 64 ಸಾವಿರ ರೂ ಹಣ ಮಾಯಾವಾಗಿರೋದು ತಿಳಿದಿದೆ. ಇತ್ತ ಗೃಹಲಕ್ಷ್ಮಿ ಹಣವೂ ಇಲ್ಲ ಅತ್ತ ತನ್ನ ಖಾತೆಯಲ್ಲಿಟ್ಟದ್ದ ಹಣವೂ ಇಲ್ಲದೆ ಮಹಿಳೆ ಕಂಗಾಲಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಗೃಹಲಕ್ಷ್ಮಿ ಹಣ ಪರಿಶೀಲಿಸಲು ತೆರಳಿದ ಮಹಿಳೆಗೆ ಈಗಾಗಲೇ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಾಯಾವಾಗಿರುವುದು ತಿಳಿದುಬಂದಿದೆ. ಆದರೆ ಈ ಹಣವನ್ನು ವರ್ಗಾವಣೆ ಮಾಡಿರುವುದಕ್ಕೆ ಇಲ್ಲಿಯ ತನಕ ಮಹಿಳೆಗೆ ಯಾವುದೇ ಸಂದೇಶವಾಗಲಿ, ಒಟಿಪಿ ಆಗಲಿ ಬಂದಿಲ್ಲ ಎನ್ನಲಾಗಿದೆ. ಹಾಗಾದ್ರೆ ಮಹಿಳೆಯ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿದ್ದು ಹೇಗೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹ ಲಕ್ಷ್ಮಿ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದಿದೆಯಾ ಅಂತಾ ಚೆಕ್ ಮಾಡುವ ಮಹಿಳೆಯರ ಸಂಖ್ಯೆ ಇತ್ತಿಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅದರಂತೆ ಕುಂದಗೋಳ ತಾಲೂಕಿನ ಯರಿನಾರಾಯಣಪುರದ ಮಲ್ಲವ್ವ ಮುಳ್ಳಹಳ್ಳಿ ಎಂಬ ಮಹಿಳೆ ತನ್ನ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿದ್ದಾಳೆ. ಬ್ಯಾಂಕ್‌ಗೆ ಬಂದು ತನ್ನ ಖಾತೆಯನ್ನು ಪರಿಶೀಲನೆ ಮಾಡಿಸುತ್ತಿದ್ದಂತೆ ಆ ಮಹಿಳೆಗೆ ಬಿಗ್ ಶಾಕ್ ಎದುರಾಗಿದೆ. ಏಕೆಂದರೆ ಗೃಹಲಕ್ಷ್ಮಿ ಹಣವಿರಲಿ ಇಷ್ಟು ದಿನ ತಾನು ಬ್ಯಾಂಕ್ ಖಾತೆಯಲ್ಲಿಟ್ಟದ್ದ ಹಣವೂ ಕೂಡ ಮಾಯಾವಾಗಿರುವುದು ಕಂಡುಬಂದಿದೆ. ಈ ಕುರಿತ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಈ ವಿಚಾರ ತಿಳಿಯುತ್ತಿದ್ದ ಹಾಗೇ ಮಹಿಳೆ ಬ್ಯಾಂಕ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಇದರ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಇದರಿಂದ ಶಾಕ್‌ಗೆ ಒಳಗಾಗಿರುವ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಮಹಿಳೆಯ ಖಾತೆಯಿಂದ ಹಣ ಕಡಿತವಾಗಿರುವುದರ ಬಗ್ಗೆ ಅಥವಾ ಹಣ ವರ್ಗಾವಣೆಯ ವಿಚಾರವಾಗಿ ಯಾವುದೇ ಒಟಿಪಿ (OTP) ಅಥವಾ ಸಂದೇಶವೂ ಬಂದಿಲ್ಲ. ಆದ್ರೂ ಖಾತೆಯಲ್ಲಿದ್ದ 64 ಸಾವಿರ ರೂಪಾಯಿ ಮಂಗಮಾಯವಾಗಿದೆ.

ಸಿಕ್ಕ ಸಿಕ್ಕಲ್ಲಿ ಒತ್ತಬೇಡಿ ಹೆಬ್ಬೆಟ್ಟು!
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೂಡ ಬಯೋಮೆಟ್ರಿಕ್ ಆಧಾರಿತವಾಗಿದೆ. ಆದರೆ ಸಿಕ್ಕ ಸಿಕ್ಕಲ್ಲಿ ನಿಮ್ಮ ಬಯೋಮೆಟ್ರಿಕ್ ನೀಡಿದ್ರೆ ಇಂತಹ ಘಟನೆಗಳು ನಡೆಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿಯೂ ಸಹ ಈ ಮಹಿಳೆ ಸ್ಥಳ ಖರೀದಿಗಾಗಿ ಕುಂದಗೋಳದ ನೋಂದಣಿ ಕಛೇರಿಯಲ್ಲಿ ಹೆಬ್ಬಟ್ಟು ಒತ್ತಿದ್ದಳು ಎನ್ನಲಾಗಿದೆ. ಇದಾದ ನಂತರವೇ ಆಕೆಯ ಖಾತೆಯಿಂದ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಹಿಳೆಯ ಖಾತೆಯಿಂದ ಖದೀಮರು ಏಳು ಬಾರಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಅಕ್ರೋಬರ್ 24 ರಿಂದ ನವೆಂಬರ್ 3 ರವರೆಗೆ ಹಣ ವರ್ಗಾವಣೆಯಾಗಿದೆ.

ಗೃಹಲಕ್ಷ್ಮಿಯ ಆಸೆಗೆ ಬಂದ ಮಹಿಳೆ ಇದೀಗ ತನ್ನ ಖಾತೆಯಲ್ಲಿಟ್ಟಿದ್ದ ಹಣ ಮಾಯಾವಾಗಿರುವ ವಿಚಾರ ತಿಳಿದುಕೊಂಡಿದ್ದಾಳೆ. ಸದ್ಯ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದ ಮಹಿಳೆ, ಇದೀಗ ಕುಂದಗೋಳ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಹಾಗೇ ನೋಡಿದ್ರೆ ಕುಂದಗೋಳ ತಾಲೂಕಿನಲ್ಲಿ ಇದೇ ಮಾದರಿಯಲ್ಲಿ ಮೂರರಿಂದ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರ ಹಿಂದೆ ವ್ಯವಸ್ಥಿತವಾದ ಜಾಲವೊಂದು ಕೆಲಸ ಮಾಡುತ್ತಿದೆಯಾ ಎಂಬ ಅನುಮಾನ ಬರುವಂತೆ ಮಾಡಿದೆ. ನಿಮ್ಮ ಖಾತೆಯಲ್ಲಿಯೂ ಇದೇ ರೀತಿ ವಿನಾಕಾರಣ ಹಣ ಕಡಿತವಾಗಿದ್ದರೆ ಇಲ್ಲ ಹಣ ವರ್ಗಾವಣೆ ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತವಾಗಿದೆ.


Click it and Unblock the Notifications








