'ಜಿಸ್ಯಾಟ್ 7ಎ' ಕಕ್ಷೆಗೆ!..ಕೇವಲ 35 ದಿನಗಳಲ್ಲಿ ಇಸ್ರೊದಿಂದ 3ನೇ ಯಶಸ್ವಿ ಕಾರ್ಯಾಚರಣೆ!

|

ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವರ್ಷದಲ್ಲಿ ಯಶಸ್ವಿ ಏಳನೇ ಉಡಾವಣೆ ನಡೆಸಿ ಮತ್ತೊಂದು ದಾಖಲೆ ಬರೆದಿದೆ. ಇದೇ ಬುಧವಾರ ದೇಶದ ಮತ್ತೊಂದು ಅತ್ಯಾಧುನಿಕ ಸಂವಹನ ಉಪಗ್ರಹವ ಒಂದನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಇಸ್ರೊ ತನ್ನ ಶಕ್ತಿಯನ್ನು ತೋರಿಸಿದೆ.

ಇಸ್ರೊದ ನಾಲ್ಕನೇ ತಲೆಮಾರಿನ ಉಡಾವಣಾ ವಾಹನ ಜಿಎಸ್‌ಎಲ್‌ವಿ-ಎಫ್‌11 ಮೂಲಕ ಜಿಸ್ಯಾಟ್ 7ಎ ಉಪಗ್ರಹವನ್ನು ಬುಧವಾರ ಸಂಜೆ 4.10ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆ ಮಾಡಿದೆ. ಒಟ್ಟು 2,250 ಕೆ.ಜಿ ತೂಕದ ಈ ಉಪಗ್ರಹವು ಭಾರತದ ವಾಯುಪಡೆಯ ಸಂವಹನ ವ್ಯವಸ್ಥೆಯನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿದೆ.

'ಜಿಸ್ಯಾಟ್ 7ಎ' ಕಕ್ಷೆಗೆ!..35 ದಿನಗಳಲ್ಲಿ ಇಸ್ರೊದಿಂದ 3ನೇ ಯಶಸ್ವಿ ಕಾರ್ಯಾಚರಣೆ!

ಉಡಾವಣೆಯಾಗಿರುವ ಜಿಸ್ಯಾಟ್ 7ಎ ಉಪಗ್ರಹವು ತನ್ನ ಒಳಗೆ ಇರುವ ವ್ಯವಸ್ಥೆಯ ಮೂಲಕ ಸ್ವಯಂಚಾಲಿತವಾಗಿ ತನ್ನ ಅಂತಿಮ ಕಕ್ಷೆಗೆ ಸೇರಿಕೊಳ್ಳಲಿದೆ ಎಂದು ಇಸ್ರೊ ಹೇಳಿದೆ. ಉಡಾವಣಾ ವಾಹನದಿಂದ ಪ್ರತ್ಯೇಕಗೊಂಡ ಕೆಲವು ದಿನಗಳ ಬಳಿಕ ತನ್ನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ಈ ಉಪಗ್ರಹವು ಅಂತಿಮ ಕಕ್ಷೆ ಸೇರಲಿದೆ ಎಂದು ಇಸ್ರೊ ತಿಳಿಸಿದೆ.

ಭಾರತೀಯ ವಾಯುಪಡೆಯ ವಿಮಾನ ಸಂವಹನಕ್ಕೆ ನೆರವು ನೀಡುವ ಈ ಉಪಗ್ರಹವು ಎಂಟು ವರ್ಷ ಕಾರ್ಯನಿರ್ವಹಿಸಲಿದೆ. ಜಿಎಸ್‌ಎಲ್‌ವಿ-ಎಫ್‌11 ಮೂಲಕ 69ನೇ ಉಡಾವಣೆ ಇದಾಗಿದ್ದು, ಇನ್ನಷ್ಟು ಎತ್ತರದ ಕಕ್ಷೆಗೆ ಏರಿಸುವ ಕಾರ್ಯಾಚರಣೆಗೆ ಬೆಂಗಳೂರಿನ ಕೇಂದ್ರದಿಂದ ಗುರುವಾರ ಬೆಳಿಗ್ಗೆ ಚಾಲನೆ ನೀಡಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

'ಜಿಸ್ಯಾಟ್ 7ಎ' ಕಕ್ಷೆಗೆ!..35 ದಿನಗಳಲ್ಲಿ ಇಸ್ರೊದಿಂದ 3ನೇ ಯಶಸ್ವಿ ಕಾರ್ಯಾಚರಣೆ!

2018ರ ಏಳನೇ ಉಡಾವಣೆ ಹಾಗೂ ಈ ವರ್ಷದ ಕೊನೆಯ ಕಾರ್ಯಾಚರಣೆಯಾಗಿದೆ. ಈ ವರ್ಷದ ಮತ್ತೊಂದು ವಿಶೇಷವೆಂದರೆ, ಕೇವಲ 35 ದಿನಗಳಲ್ಲಿ ಇಸ್ರೊದ ಮೂರನೇ ಯಶಸ್ವಿ ಕಾರ್ಯಾಚರಣೆ ಇದಾಗಿದ್ದು, ಈ ಮೂಲಕ ದೇಶದ ತಂತ್ರಜ್ಞಾನವನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ಯುತ್ತಿರುವ ಇಸ್ರೊ ಸಾಧನೆ ಪುಟದಲ್ಲಿ ಇದು ಮತ್ತೊಂದು ದಾಖಲೆಯಾಗಿದೆ.

Best Mobiles in India

English summary
GSLV-F11 successfully launches GSAT-7A. Indian Space Research Organisation's (ISRO) Geosynchronous Satellite Launch Vehicle (GSLV-F11) successfullylaunched the communication satellite GSAT-7A from the Satish Dhawan Space Centre (SDSC) in Sriharikota today. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X