GST ಬದಲಾವಣೆ: TV, AC ಮತ್ತು ಫ್ರಿಡ್ಜ್‌ಗಳ ಮೇಲೆ ಬೆಲೆ ಇಳಿಕೆ ಎಷ್ಟು?
ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯು ಸೆಪ್ಟೆಂಬರ್ 3, 2025 ರಂದು ನಡೆದ ಸಭೆಯಲ್ಲಿ ಮಹತ್ವವಾ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಸಭೆಯಲ್ಲಿ ಹವಾನಿಯಂತ್ರಣಗಳು(AC), ದೊಡ್ಡ ಪರದೆಯ ಟಿವಿಗಳು, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮಷಿನ್ಗಳಂತಹ ಪ್ರಮುಖ ಗ್ರಾಹಕ ಸರಕುಗಳ ಮೇಲಿನ ತೆರಿಗೆ ದರವನ್ನು 28% ನಿಂದ ನೇರವಾಗಿ 18% ಕ್ಕೆ ಇಳಿಸಲಾಗಿದೆ. ಇದಲ್ಲದೆ, 12% ತೆರಿಗೆ ಸ್ಲ್ಯಾಬ್ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಈಗ ಕೇವಲ 5% ಮತ್ತು 18% ಸ್ಲ್ಯಾಬ್‌ಗಳು ಮಾತ್ರ ಉಳಿದಿವೆ. ಹಾಗಾದರೆ, ಮುಂದೆ ನೀವು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸುವ ವೇಳೆ ಆಗುವಂತಹ ಲಾಭಗಳು ಯಾವುವು ಎಂಬುದರ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
ಸರಕು ಮತ್ತು ಸೇವಾ ತೆರಿಗೆ ಇಳಿಕೆಯ ಈ ಕ್ರಮವು ನೇರವಾಗಿ ಮನೆಗಳಿಗೆ ಉಳಿತಾಯ ತರುತ್ತದೆ. ಮಾರುಕಟ್ಟೆ ತಜ್ಞರ ಅಂದಾಜಿನ ಪ್ರಕಾರ, AC ಗಳ ಬೆಲೆ 1,500 ರಿಂದ 2,500 ರೂ.ಗಳಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬ್ಲೂ ಸ್ಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ತ್ಯಾಗರಾಜನ್ ಈ ನಿರ್ಧಾರವನ್ನು "ಉತ್ತಮ ನಡೆ" ಎಂದು ಕರೆದಿದ್ದಾರೆ. ಪ್ಯಾನಾಸೋನಿಕ್ ಲೈಫ್ ಸೊಲ್ಯೂಷನ್ಸ್ ಇಂಡಿಯಾದ ಅಧ್ಯಕ್ಷ ಮನೀಶ್ ಶರ್ಮಾ ಪ್ರಕಾರ, ಈ ಬದಲಾವಣೆಯಿಂದ ಬೆಲೆಗಳಲ್ಲಿ ಸರಾಸರಿ 6-7% ಇಳಿಕೆಯಾಗಬಹುದು. ಗೋದ್ರೇಜ್ ಅಪ್ಲೈಯನ್ಸಸ್‌ನ ಕಮಲ್ ನಂದಿ ಅವರು, ಈ ಕ್ರಮ ಭಾರತದಲ್ಲಿ ಎಸಿ ಬಳಕೆಯನ್ನು ಅದರ ಪ್ರಸ್ತುತ 9-10% ನಿಂದ ಇನ್ನಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಇತ್ತ ಟಿವಿ ಮಾರುಕಟ್ಟೆಯು ಸಹ ಈ ನಿರ್ಧಾರದಿಂದ ಲಾಭ ಪಡೆಯಲಿದೆ. 32 ಇಂಚುಗಳಿಗಿಂತ ಹೆಚ್ಚಿನ ಟಿವಿಗಳ ಮೇಲೆ ಜಿಎಸ್‌ಟಿ ಈಗ 18% ಆಗಿರುವುದರಿಂದ ಬೆಲೆ ಇಳಿಕೆ ಸಾಧ್ಯ. ಎಸ್‌ಪಿಪಿಎಲ್ ಸಿಇಒ ಅವ್ನೀತ್ ಸಿಂಗ್ ಮಾರ್ವಾ ಪ್ರಕಾರ, ಈ ಬದಲಾವಣೆ ಬ್ರ್ಯಾಂಡ್‌ಗಳಿಗೆ ವರ್ಷದಿಂದ ವರ್ಷಕ್ಕೆ 20% ಬೆಳವಣಿಗೆಯನ್ನು ತರುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ, 32 ಇಂಚಿನ ಸ್ಮಾರ್ಟ್ ಟಿವಿಗಳಿಗೆ ಜಿಎಸ್‌ಟಿಯನ್ನು 5% ಗೆ ಇಳಿಸುವುದು ಮಾರುಕಟ್ಟೆಯಲ್ಲಿ "ಗೇಮ್ ಚೇಂಜರ್" ಆಗಬಹುದು ಎಂದು ಹೇಳಿದ್ದಾರೆ. ಒಟ್ಟಾರೆ, ಸರಕು ಮತ್ತು ಸೇವಾ ತೆರಿಗೆ ಇಳಿಕೆಯಿಂದ 32 ಇಂಚುಗಳಿಗಿಂತ ಹೆಚ್ಚಿನ ಟಿವಿಗಳ ಬೆಲೆಯಲ್ಲಿ ಭಾರೀ ಬೆಲೆ ಇಳಿಕೆಯನ್ನು ಸೂಚಿಸಿದೆ.

ಕಳೆದ ಜೂನ್ ತ್ರೈಮಾಸಿಕದಲ್ಲಿ ಅಕಾಲಿಕ ಮಳೆಯ ಕಾರಣ AC ಉತ್ಪನ್ನಗಳ ಮಾರಾಟ ಕುಸಿದಿತ್ತು. ವೋಲ್ಟಾಸ್, ಬ್ಲೂ ಸ್ಟಾರ್ ಮತ್ತು ಹ್ಯಾವೆಲ್ಸ್ ಕಂಪನಿಗಳು ತಮ್ಮ ಎಸಿ ವಿಭಾಗದಲ್ಲಿ 34% ವರೆಗಿನ ಆದಾಯ ಕುಸಿತವನ್ನು ವರದಿ ಮಾಡಿದ್ದವು. ಹೊಸ ತೆರಿಗೆ ಇಳಿಕೆ ಈ ಕುಸಿತವನ್ನು ಸಮತೋಲನಗೊಳಿಸುವಲ್ಲಿ ಸಹಾಯಕವಾಗಲಿದೆ. ಇತ್ತ ಈ ಬದಲಾವಣೆ ಹಲವು ಕಾರಣಗಳಿಗೆ ಮುಖ್ಯವಾಗಿದೆ. ಮೊದಲು, ಗ್ರಾಹಕರು ಕಡಿಮೆ ಬೆಲೆಯಲ್ಲಿ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುತ್ತದೆ, ಇದರಿಂದ ಉಳಿತಾಯದೊಂದಿಗೆ ಜೀವನಮಟ್ಟ ಸುಧಾರಿಸುತ್ತದೆ. ಜೊತೆಗೆ, ಹಬ್ಬದ ಋತುವಿನಲ್ಲಿ ಈ ನಿರ್ಧಾರ ಮಾರಾಟಕ್ಕೆ ಉತ್ತೇಜನ ನೀಡುತ್ತದೆ ಮತ್ತು ಆರ್ಥಿಕ ಚಟುವಟಿಕೆಗೆ ಚೈತನ್ಯ ತುಂಬುತ್ತದೆ.
ಸ್ಥಳೀಯ ಮಟ್ಟದಲ್ಲಿಯೂ ಇದರ ಪರಿಣಾಮ ಸ್ಪಷ್ಟವಾಗಲಿದೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ಎಸಿ, ಟಿವಿ, ರೆಫ್ರಿಜರೇಟರ್‌ಗಳಂತಹ ಉಪಕರಣಗಳನ್ನು ಖರೀದಿಸುವ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಸ್ಥಳೀಯ ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಏರಿಕೆ ಉಂಟಾಗುತ್ತದೆ. ಸೇವೆ ಮತ್ತು ಮರುಮರಮ್ಮತ್ತು ವಲಯದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ನಿರ್ಧಾರವು ಹಬ್ಬದ ಋತುವಿನ ಆರಂಭದ ಸಮಯದಲ್ಲಿ ಬಂದಿರುವುದರಿಂದ ವಿಶೇಷ ಮಹತ್ವ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನ ಭಾಷಣದಲ್ಲಿ ನೀಡಿದ್ದ "ದೀಪಾವಳಿ ಉಡುಗೊರೆ" ಭರವಸೆಯನ್ನು ಈ ಕ್ರಮ ಸಾಕಾರಗೊಳಿಸುತ್ತದೆ ಎನ್ನಬಹುದು. ಗ್ರಾಹಕರ ಖರೀದಿ ಶಕ್ತಿ ಹೆಚ್ಚುವ ಮೂಲಕ ಆರ್ಥಿಕತೆಯಲ್ಲೂ ಚೈತನ್ಯ ಮೂಡುವ ನಿರೀಕ್ಷೆಯಿದೆ.


Click it and Unblock the Notifications








