ಟೆಲಿಕಾಂ ಮೇಲೆ GST ಪರಿಣಾಮ ಏನು..? ಜುಲೈ 1 ರಿಂದ 4G ಮತ್ತು ಡೇಟಾ ಬೆಲೆ ಎಷ್ಟಾಗಲಿದೆ..??

Written By:

ದೇಶದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ನಂತರದ ದಿನದಲ್ಲಿ ದೇಶದ ಜನರಿಗೆ ಹಿಂದೆಂದೂ ಕಂಡಿರದ ಸೇವೆಯನ್ನು ನೀಡಲು ಮುಂದಾಗಿತ್ತು. ಫ್ರೀ ಎಂದರೆ ಜನ ಮುಗಿಬಿಳುತ್ತಾರೆ ಎಂದು ತಿಳಿದಿದ್ದ ರಿಲಯನ್ಸ್, ಗ್ರಾಹಕರಿಗೆ ಜಿಯೋ ಹೆಸರಿನಲ್ಲಿ ಉಚಿತ ಕರೆ ಮಾಡುವ ಮತ್ತು ಉಚಿತ ವೇಗದ ಇಂಟರ್‌ನೆಟ್ ನೀಡಿತು. ಇದು ಹೊಸ ಕ್ರಾಂತಿಗೆ ವೇದಿಕೆಯಾಯಿತು.

ಟೆಲಿಕಾಂ ಮೇಲೆ GST ಪರಿಣಾಮ ಏನು..? ಜುಲೈ 1 ರಿಂದ 4G ಮತ್ತು ಡೇಟಾ ಬೆಲೆ??

ಜಿಯೋ ಹಿಂದೆಯೇ ಇತರೆ ಟೆಲಿಕಾಂ ಕಂಪನಿಗಳು ಒಂದರ ಹಿಂದೆ ಒಂದರಂತೆ ದರ ಕಡಿತವನ್ನು ಘೋಷಣೆ ಮಾಡಲು ಮುಂದಾದವು. ಇದರಿಂದಾಗಿ ಜನರು ಬಹುತೇಕ ಉಚಿತ ಕರೆ ಮತ್ತು ಉಚಿತ ಡೇಟಾವನ್ನು ಪಡೆಯುವಂತಾಗಿತ್ತು. ಸದ್ಯ ಜುಲೈ ರಿಂದ GST ಜಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಪೋನ್‌ ಬಿಲ್ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಲಿಕಾಂ ಸೇವೆಗಳ ಮೇಲೆ 18% ಟಾಕ್ಸ್:

ಟೆಲಿಕಾಂ ಸೇವೆಗಳ ಮೇಲೆ 18% ಟಾಕ್ಸ್:

ದೇಶದಲ್ಲಿ GST ಜಾರಿಗೆ ಬರುವುದರಿಂದ ಜುಲೈ ಒಂದರಿಂದ ಟೆಲಿಕಾಂ ಸೇವೆಗಳ ಮೇಲೆ ಶೇ.18 ರಷ್ಟು ತೆರಿಗೆ ವಿಧಿಸಲಾಗುವುದು. ಇದರಿಂದ ನಿಮ್ಮ ಕರೆ ಮತ್ತು ಡೇಟಾ ಬೆಲೆಯೂ ಏರಿಕೆಯಾಗಲಿದೆ. ಇದು ಹೇಗೆ ತಿಳಿಯಲಿದೆ ಎಂದರೆ ನಿಮ್ಮ ಫೋಸ್ಟ್ ಪೇಯ್ಡ್ ಬಿಲ್ ನಲ್ಲಿ ಏರಿಕೆಯಾದರೆ, ಪ್ರೀಪೇಯ್ಡ್ ರೀಜಾರ್ಜ್ ಮಾಡಿಸಿದ ಸಂದರ್ಭದಲ್ಲಿ ಕಡಿಮೆ ಮೊತ್ತದ ಹಣವೂ ದೊರೆಯಲಿದೆ.

1000 ರೂ. ಬಿಲ್ ಮೇಲೆ 30 ರೂ. ಹೆಚ್ಚಿಗೆ:

1000 ರೂ. ಬಿಲ್ ಮೇಲೆ 30 ರೂ. ಹೆಚ್ಚಿಗೆ:

ನೀವು ಪ್ರತಿ ತಿಂಗಳು 1000 ರೂ. ಪೋಸ್ಟ್ ಪೇಯ್ಡ್ ಬಿಲ್ ಪಾವತಿ ಮಾಡುತ್ತಿದ್ದರೇ, ಅದರೊಂದಿಗೆ ಹೆಚ್ಚಿಗೆ 30 ರೂಗಳನ್ನು ಪಾವತಿ ಮಾಡಬೇಕಾಗಿದೆ. ಇದಲ್ಲದೇ ನೀವು ಪ್ರೀಪೇಯ್ಡ್ ಗ್ರಾಹಕರಾಗಿದ್ದಲ್ಲಿ 100 ರೂ. ರೀಚಾರ್ಜ್ ಮಾಡಿಸಿದರೆ ನೀವು ರೂ.82.20 ಟಾಕ್ ಟೈಮ್ ಪಡೆಯುವಿರಿ.

ಉಚಿತ ಸೇವೆಗಳ ಮೇಲೆ ಪರಿಣಾಮವೇನು..?

ಉಚಿತ ಸೇವೆಗಳ ಮೇಲೆ ಪರಿಣಾಮವೇನು..?

ಈಗಾಗಲೇ ಗ್ರಾಹಕರಿಗೆ ಜಿಯೋ ಸೇರಿದಂತೆ ಏರ್‌ಟೆಲ್, ವೊಡಾಪೋನ್, ಐಡಿಯಾ ಉಚಿತ ಕರೆ ಮಾಡುವ ಸೇವೆ ಮತ್ತು ಡೇಟಾ ಆಫರ್ ಗಳನ್ನು ನೀಡಿವೆ. ಗ್ರಾಹಕರು ಈ ಸೇವೆಗಳ ಲಾಭವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ GST ಜಾರಿಗೆ ಬಂದ ನಂತರದಲ್ಲಿ ಈ ಸೇವೆಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬಿರಲಿದೆ ಎಂಬುದನ್ನು ನೋಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Come July 1, the Indian telecom sector is set to witness another revolution: the Goods and Services Tax (GST). to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot