ಪ್ರಧಾನಿ ಊರಿನಲ್ಲಿ ಅವಿವಾಹಿತ ಮಹಿಳೆಯರಿಗೆ ಫೋನ್ ನಿಷೇಧ

By Shwetha
|

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಡಿಜಿಟಲ್ ಇಂಡಿಯಾ ಪ್ರಗತಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಅವರದೇ ರಾಜ್ಯದ ಜಿಲ್ಲೆಯಿಂದ ಅಘಾತಕಾರಿ ಸುದ್ದಿಯೊಂದು ಕೇಳಿ ಬಂದಿದ್ದು ವಿವಾಹವಾಗದೇ ಇರುವ ಮಹಿಳೆಯರಿಗೆ ಮೊಬೈಲ್ ಫೋನ್‌ಗಳನ್ನೇ ನಿಷೇಧಿಸಲಾಗಿದೆ.

ಗುಜಾರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ವಿವಾಹವಾಗದೇ ಇರುವ ಮಹಿಳೆಯರಿಗೆ ಮೊಬೈಲ್ ಫೋನ್‌ಗಳನ್ನೇ ನಿಷೇಧಿಸಲಾಗಿದೆ. ಅಹ್ಮದಾಬಾದ್‌ನಿಂದ 100 ಕಿಮೀ ದೂರದಲ್ಲಿರುವ ಕಾಪ್ ಪಂಚಾಯತ್ ಸೂರಜ್ ಹಳ್ಳಿಯಲ್ಲಿ ಮೊಬೈಲ್ ಫೋನ್ ಬಳಸುವ ಅವಿವಾಹಿತ ಮಹಿಳೆಗೆ ರೂ 2,100 ಅನ್ನು ದಂಡವಾಗಿ ವಿಧಿಸಲಾಗುತ್ತದೆ ಅಂತೆಯೇ ಇದನ್ನು ತಿಳಿಸುವ ವ್ಯಕ್ತಿಗೆ ರೂ 200 ಅನ್ನು ಬಹುಮಾನವಾಗಿ ನೀಡಲಾಗುತ್ತದೆ.

ಹುಡುಗಿಯರಿಗೆ ಸೆಲ್ ಫೋನ್ ಏಕೆ ಬೇಕು?

ಹುಡುಗಿಯರಿಗೆ ಸೆಲ್ ಫೋನ್ ಏಕೆ ಬೇಕು?

ಹುಡುಗಿಯರಿಗೆ ಸೆಲ್ ಫೋನ್ ಏಕೆ ಬೇಕು? ಇಂಟರ್ನೆಟ್‌ನಿಂದಾಗಿ ಸಮಯ ಮತ್ತು ದುಡ್ಡು ಪೋಲಾಗುತ್ತದೆ. ಮಧ್ಯಮ ವರ್ಗದ ಜನರು ನಾವಾಗಿರುವುದರಿಂದ ಹುಡುಗಿಯರು ಫೋನ್ ಬಳಸುವ ಸಮಯವನ್ನು ಓದಿಗೆ ಮತ್ತು ಇತರ ಚಟುವಟಿಕೆಗಳನ್ನು ನಡೆಸಲು ಬಳಸಬೇಕು ಎಂಬುದಾಗಿ ಸೂರಜ್ ಹಳ್ಳಿಯ ಸರ್‌ಪಂಚ್ ದೇವೇಶಿ ವಂಕಾರ್ ತಿಳಿಸಿದ್ದಾರೆ.

ನಿಯಮ

ನಿಯಮ

ನಿಯಮದಲ್ಲಿ ಒಂದೇ ಒಂದು ಸಹಾನುಭೂತಿ ಎಂದರೆ ಯಾರಾದರೂ ಸಂಬಂಧಿ ಹುಡುಗಿಯ ಬಳಿ ಮಾತನಾಡಬೇಕು ಎಂದಾದಲ್ಲಿ, ಹೆತ್ತವರು ತಮ್ಮದೇ ಫೋನ್ ಅನ್ನು ಅವರಿಗೆ ಮಾತನಾಡಲು ನೀಡುವುದಾಗಿದೆ.

2,500 ಜನಸಂಖ್ಯೆ ಈ ನಿಯಮವನ್ನು ಸ್ವೀಕರಿಸಿದ್ದಾರೆ

2,500 ಜನಸಂಖ್ಯೆ ಈ ನಿಯಮವನ್ನು ಸ್ವೀಕರಿಸಿದ್ದಾರೆ

ವಂಕಾರ್ ಹೇಳುವಂತೆ ಸಂಪೂರ್ಣ 2,500 ಜನಸಂಖ್ಯೆ ಈ ನಿಯಮವನ್ನು ಸ್ವೀಕರಿಸಿದ್ದಾರೆ ಎಂಬುದಾಗಿದೆ.

ಗುಜರಾತ್‌ನ ಇತರ ಪ್ರಾಂತ್ಯ

ಗುಜರಾತ್‌ನ ಇತರ ಪ್ರಾಂತ್ಯ

ಫೆಬ್ರವರಿ 12 ರಿಂದ ಸೂರಜ್ ಜಿಲ್ಲೆಯಲ್ಲಿ ಮೊಬೈಲ್ ನಿಷೇಧವನ್ನು ಹೇರಲಾಗಿದೆ. ಇದು ಗುಜರಾತ್‌ನ ಇತರ ಪ್ರಾಂತ್ಯಗಳಿಗೆ ಶೀಘ್ರವೇ ಹಬ್ಬಲಿದೆ. ಟಾಕೂರ್ ಸಮುದಾಯ ಮೊಬೈಲ್ ನಿಷೇಧದ ಹಿಂದಿನ ಕೈವಾಡವಾಗಿದ್ದು ಓಬಿಸಿ ಸಮುದಾಯವಾದ ರಾಬ್ರಿ ಮತ್ತು ವಾಂಕರ್ಜತೆಗೂಡಿ ಇದನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪುರುಷರನ್ನು ಮದ್ಯಪಾನ ಸೇವನೆ ನಿಷೇಧ

ಪುರುಷರನ್ನು ಮದ್ಯಪಾನ ಸೇವನೆ ನಿಷೇಧ

ಪುರುಷರನ್ನು ಮದ್ಯಪಾನ ಸೇವನೆಯಿಂದ ಮುಕ್ತರಾಗಿಸಲು ಮಹಿಳೆಯರು ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಮೊಬೈಲ್ ನಿಷೇಧವನ್ನು ಟಾಕೂರ್ ಸಮುದಾಯದವರು ಹೇರಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಅವಿವಾಹಿತ ಮಹಿಳೆಯರು ಮೊಬೈಲ್ ಬಳಸಬಾರದು

ಅವಿವಾಹಿತ ಮಹಿಳೆಯರು ಮೊಬೈಲ್ ಬಳಸಬಾರದು

ಮಹಿಳೆಯರ ಜೀವನ ಶೈಲಿಗೆ ನಿಯಮ ಮತ್ತು ನೀತಿಗಳನ್ನು ಹೇರಲು ಈ ಸಮುದಾಯದವರು ಮುಂದಾಗಿದ್ದು, ಅವಿವಾಹಿತ ಮಹಿಳೆಯರು ಮೊಬೈಲ್ ಬಳಸಬಾರದು ಎಂಬ ನಿಯಮ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬನಾಸ್ಕಾಂತ ಜಿಲ್ಲೆ

ಬನಾಸ್ಕಾಂತ ಜಿಲ್ಲೆ

ಬನಾಸ್ಕಾಂತ ಜಿಲ್ಲೆಯಲ್ಲಿರುವ ಲುದಾರ್ ಈ ನಿಷೇಧವನ್ನು ಹೇರಿಸಿಕೊಂಡ ಪ್ರಥಮ ಹಳ್ಳಿ ಎಂದೆನಿಸಿದೆ. ಪುರುಷರ ಮದ್ಯ ಸೇವನೆ ಪ್ರಕರಣಕ್ಕೆ ಸಮನಾಗಿ ಮಹಿಳೆಯರು ಮೊಬೈಲ್ ಬಳಸಬಾರದು ಎಂಬ ನಿಯಮ ಈಗ ಹಳ್ಳಿಗಳಲ್ಲಿ ಗಮನಾರ್ಹವಾಗಿ ಮುಂದುವರಿಯುತ್ತಿದೆ.

ಹೆಚ್ಚಿನ ಅಡ್ಡಿ

ಹೆಚ್ಚಿನ ಅಡ್ಡಿ

ಪುರುಷರ ಮದ್ಯಸೇವನೆ ಮತ್ತು ಅವಿವಾಹಿತ ಮಹಿಳೆಯರ ಫೋನ್ ಬಳಸಬಾರದು ಎಂಬ ನಿಷೇಧ ಸಮಾಜದಲ್ಲಿ ಹೆಚ್ಚಿನ ಅಡ್ಡಿಯನ್ನುಂಟು ಮಾಡುತ್ತಿದೆ. ಯುವತಿಯರು ಇದರಿಂದ ತಪ್ಪು ದಾರಿಗೆ ಹೋಗಬಹುದು. ಕುಟುಂಬಗಳನ್ನು ಇದು ಒಡೆಯಬಹುದು ಮತ್ತು ಸಂಬಂಧಕ್ಕೆ ಹುಳಿ ಹಿಂಡಬಹುದು ಎಂಬುದಾಗಿ ಉತ್ತರ ಗುಜರಾತ್‌ನ ಸಮುದಾಯ ನಾಯಕ ರೈ ಕಾರಂಜಿ ಠಾಕೂರ್ ತಿಳಿಸಿದ್ದಾರೆ.

ನಿಷೇಧ

ನಿಷೇಧ

ಈ ನಿಷೇಧ ಹಳ್ಳಿಯವರ ಉಪಾಯವಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?</a><br /><a href='Freedom 251' ಮೊಬೈಲ್‌ ಬುಕ್‌ ಆಗದಿರಲು ಕಾರಣವೇನು ಗೊತ್ತೇ?
ಗೂಗಲ್‌ನಿಂದ ಜಿಮೇಲ್‌ ಬಳಸದವರಿಗಾಗಿ ಅಚ್ಚರಿ 'Gmailify' ಫೀಚರ್
10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?" title="ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?
'Freedom 251' ಮೊಬೈಲ್‌ ಬುಕ್‌ ಆಗದಿರಲು ಕಾರಣವೇನು ಗೊತ್ತೇ?
ಗೂಗಲ್‌ನಿಂದ ಜಿಮೇಲ್‌ ಬಳಸದವರಿಗಾಗಿ ಅಚ್ಚರಿ 'Gmailify' ಫೀಚರ್
10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?" loading="lazy" width="100" height="56" />ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?
'Freedom 251' ಮೊಬೈಲ್‌ ಬುಕ್‌ ಆಗದಿರಲು ಕಾರಣವೇನು ಗೊತ್ತೇ?
ಗೂಗಲ್‌ನಿಂದ ಜಿಮೇಲ್‌ ಬಳಸದವರಿಗಾಗಿ ಅಚ್ಚರಿ 'Gmailify' ಫೀಚರ್
10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?

Best Mobiles in India

English summary
Prime Minister Narendra Modi may be promoting his Digital India drive across the world but a village in his native district of Mehsana in Gujarat has banned mobile phones for unmarried women.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X