Home
ಸುದ್ದಿಜಾಲ

ವೀಡಿಯೋ ಲೈಕ್‌ ಮಾಡಿ ಹಣ ಗಳಿಸಿ! ಲಿಂಕ್‌ ಕ್ಲಿಕ್‌ ಮಾಡುವ ಈ ಸುದ್ದಿಯನ್ನೊಮ್ಮೆ ಗಮನಿಸಿ!

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ನಲ್ಲಿಯೂ ಕೂಡ ಹಣ ಸಂಪಾದನೆ ಮಾಡುವುದಕ್ಕೆ ಹಲವು ಅವಕಾಶಗಳಿವೆ. ಅದರೆ ಇದಕ್ಕೆ ಸೂಕ್ತ ಮಾಹಿತಿಯನ್ನು ಹೊಂದಿರುವುದು ಅವಶ್ಯಕವಾಗಿದೆ. ಸೂಕ್ತ ಮಾಹಿತಿ ಇಲ್ಲದಿದ್ದರೆ ಏನಾಗಲಿದೆ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಗುರುಗ್ರಾಮದ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ಹಣ ಗಳಿಸಲು ಹೋಗಿ ಹಣ ಕಳೆದುಕೊಂಡಿದ್ದಾರೆ.

ಹೌದು, ಗುರುಗ್ರಾಮ್‌ ನಿವಾಸಿಯೊಬ್ಬರು ಆನ್‌ಲೈನ್‌ ವಂಚಕರ ಮಾತನ್ನು ನಂಬಿ 8.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಯೂಟ್ಯೂಬ್‌ ವೀಡಿಯೋಗಳನ್ನು ಲೈಕ್‌ ಮಾಡಿದರೆ ಹಣ ನೀಡುತ್ತೇವೆ ಎಂದು ಹೇಳಿ ವಂಚಕರು ವಂಚಿಸಿದ್ದಾರೆ. ಅಷ್ಟಕ್ಕೂ ಇಲ್ಲಿ ಗುರುಗ್ರಾಮ್‌ ನಿವಾಸಿ ಹಣ ಕಳೆದುಕೊಂಡಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೀಡಿಯೋ ಲೈಕ್‌ ಮಾಡಿ ಹಣ ಗಳಿಸಿ! ಲಿಂಕ್‌ ಕ್ಲಿಕ್‌ ಮಾಡುವ ಈ ಸುದ್ದಿಯನ್ನು ಗಮನಿಸಿ!

ಯೂಟ್ಯೂಬ್‌ ವೀಡಿಯೋಗಳನ್ನು ಲೈಕ್‌ ಮಾಡುವುದು ಹಾಗೂ ಶೇರ್‌ ಮಾಡಿದರೆ ಹಣ ನೀಡುವುದಾಗಿ ಎಷ್ಟೋ ಸೈಟ್‌ಗಳು ಹೇಳುತ್ತಾ ಬಂದಿವೆ. ಆದರೆ ಅಂತಹ ಯೂಟ್ಯೂಬ್‌ ವೀಡಿಯೋಗಳನ್ನು ಶೇರ್‌ ಹಾಗೂ ಲೈಕ್‌ ಮಾಡುವ ಮುನ್ನ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು ಸೂಕ್ತ. ಇಲ್ಲಿಯೂ ಕೂಡ ಯೂಟ್ಯೂಬ್‌ ವೀಡಿಯೋಗಳನ್ನು ಲೈಕ್‌ ಮಾಡಿದರೆ ನಿಮಗೆ ಇಂತಿಷ್ಟು ಹಣ ನೀಡುವುದಾಗಿ ವಂಚಕರು ಗುರುಗ್ರಾಮದ ನಿವಾಸಿಗೆ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಸಂತ್ರಸ್ತ ಇದೀಗ ತಾನೇ ಹಣ ಕಳೆದುಕೊಂಡಿದ್ದಾರೆ.

ಯೂಟ್ಯೂಬ್‌ನಲ್ಲಿ ವೀಡಿಯೋ ಲೈಕ್‌ ಮಾಡಿದರೆ ಪ್ರತಿ ಲೈಕ್‌ಗೆ 50 ರೂಪಾಯಿ ನೀಡುವುದಾಗಿ ವಂಚಕರು ಹೇಳಿದ್ದಾರೆ. ಅಲ್ಲದೆ ವಂಚಕರು ಯೂಟ್ಯೂಬ್‌ ಲೈಕ್‌ ಮೂಲಕ ಹಣ ಸಂಪಾದಿಸುವ ಮಾಹಿತಿಯ ಸಂದೇಶವನ್ನು ವಾಟ್ಸಾಪ್‌ ಮೂಲಕ ಸಂತ್ರಸ್ತನಿಗೆ ಕಳುಹಿಸಿದ್ದಾರೆ. ಜೊತೆಗೆ 'ವ್ಯಾಪಾರಿ ಕಾರ್ಯಗಳಿಗಾಗಿ' ಅಂತ ಹಣ ಟ್ರಾನ್ಸಫರ್‌ ಮಾಡುವಂತೆ ರಿಕ್ವೆಸ್ಟ್‌ ಕಳುಹಿಸಿದಾರೆ.

ವಂಚಕರ ಮಾತಿಗೆ ಮರುಳಾದ ಸಂತ್ರಸ್ತ ಮಾರ್ಚ್ 27, 28, 29 ಮತ್ತು 30 ರ ನಡುವೆ ವಿವಿಧ ವಹಿವಾಟುಗಳಲ್ಲಿ ಸುಮಾರು 8.5 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಹಣವನ್ನು ಕಳುಹಿಸಿದ ನಂತರ ವಂಚಕರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾದಾಗ ತಾವು ಮೋಸಹೋಗಿರುವುದು ಸಂತ್ರಸ್ತನಿಗೆ ತಿಳಿದುಬಂದಿದೆ.

ವೀಡಿಯೋ ಲೈಕ್‌ ಮಾಡಿ ಹಣ ಗಳಿಸಿ! ಲಿಂಕ್‌ ಕ್ಲಿಕ್‌ ಮಾಡುವ ಈ ಸುದ್ದಿಯನ್ನು ಗಮನಿಸಿ!

ಏನಿದು ಯುಟ್ಯೂಬ್‌ ವೀಡಿಯೋ ಲೈಕ್‌ ಸ್ಕ್ಯಾಮ್‌

ಮೆಲ್ನೋಟಕ್ಕೆ ಸಾಮಾನ್ಯ ಜನರನ್ನು ಸುಲಭವಾಗಿ ಮರಳು ಮಾಡುವ ಸ್ಕ್ಯಾಮ್‌ ಇದಾಗಿದೆ. ಯುಟ್ಯೂ ವೀಡಿಯೋಗಳನ್ನು ಲೈಕ್‌ ಮಾಡಿದರೆ ಹಣ ನೀಡುವುದಾಗಿ ಹೇಳಿ ಮಾಲ್ವೇರ್‌ ಸೊಂಕನ್ನು ಶೇರ್‌ ಮಾಡುವುದು ನಡೆಯುತ್ತಿದೆ. ಮಾಲ್ವೇರ್‌ ಸೊಂಕಿನ ಮೂಲಕ ಸಂತ್ರಸ್ತರ ಖಾತೆಗೆ ಎಂಟ್ರಿ ನೀಡಿ ಹಣ ದೋಚುವುದು ನಡೆಯುತ್ತಿದೆ.

ಇತ್ತೀಚಿಗೆ ಪುಣೆಯಲ್ಲಿರುವ ಮಾಜಿ ಸೈನಿಕರೊಬ್ಬರಿಗೆ ಕೂಡ ಇದೇ ರೀತಿಯ ವಂಚನೆ ನಡೆದಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಫೆಬ್ರವರಿ 13 ಮತ್ತು 26 ರ ನಡುವೆ ಈ ವಂಚನೆಯ ಪ್ರಕರಣ ನಡೆದಿದೆ. ವಂಚಕರು ಆನ್‌ಲೈನ್‌ನಲ್ಲಿ ವೀಡಿಯೋ ಶೇರ್‌ ಮಾಡಿದರೆ ಹಣ ಗಳಿಸುವ ಅವಕಾಶವಿದೆ ಎಂದು ಸಂತ್ರಸ್ಥನನ್ನು ವಂಚಿಸಿದ್ದಾರೆ. ವಂಚಕರ ದಾಳಕ್ಕೆ ಸಿಲುಕಿದ ಸಂತ್ರಸ್ಥ ಪ್ರಾರಂಭದಲ್ಲಿ ವೀಡಿಯೋ ಶೇರ್‌ ಮಾಡಿ ಹಣವನ್ನು ಕೂಡ ಗಳಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಪ್ರೀಪೇಯ್ಡ್ ಟಾಸ್ಕ್‌ಗಾಗಿ 1,000ರೂ ಪಾವತಿಸುವಂತೆ ಕೇಳಲಾಗಿದೆ. ಹೀಗೆ ಹಂತ ಹಂತವಾಗಿ ಹೆಚ್ಚಿನ ಆದಾಯದ ಆಸೆ ನೀಡುವ ಮೂಲಕ ಅವರ ಹಣವನ್ನು ವಂಚಿಸಿದ್ದಾರೆ.

ವೀಡಿಯೋ ಲೈಕ್‌ ಮಾಡಿ ಹಣ ಗಳಿಸಿ! ಲಿಂಕ್‌ ಕ್ಲಿಕ್‌ ಮಾಡುವ ಈ ಸುದ್ದಿಯನ್ನು ಗಮನಿಸಿ!

ಪ್ರಾರಂಭದಲ್ಲಿ ಸಿಕ್ಕಿದ ಲಾಭವನ್ನು ನಂಬಿದ ಸಂತ್ರಸ್ಥ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಹೆಚ್ಚಿನ ಹಣವನ್ನು ಠೇವಣಿ ಇಟ್ಟಿದ್ದಾರೆ. ಆದರೆ ವಂಚಕರು ಕ್ಷಣಾರ್ಧದಲ್ಲಿ ಹಣವನ್ನು ಎಗರಿಸಿದ್ದಾರೆ. ಅದರಂತೆ 60 ಲಕ್ಷ ರೂಪಾಯಿ ಮೌಲ್ಯದ ಉಳಿತಾಯ ಮತ್ತು ಪೆನ್ಯನ್‌ ಹಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ತಮ್ಮ ಮಗನಿಂದ ಸಾಲಪಡೆದಿದ್ದ 40 ಲಕ್ಷ ರೂಪಾಯಿಗಳನ್ನು ಕೂಡ ಕಳೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ, ಸಂತ್ರಸ್ತ ಠೇವಣಿ ಮಾಡಿದ ಹಣವು ಐದು ಬ್ಯಾಂಕ್‌ಗಳ 12 ಖಾತೆಗಳಿಗೆ ಹೋಗಿದೆ.

Best Mobiles in India

English summary
Later on, scammers asked the victim to deposit money in 'merchant accounts'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+