ಈ ರೀತಿಯ ವಂಚನೆಯನ್ನು ನೀವು ಊಹಿಸಲು ಸಾಧ್ಯವಿಲ್ಲ!.. ಇದು ನಿಮಗೂ ಕೂಡ ಎಚ್ಚರಿಕೆ!
ಈ ರೀತಿಯ ವಂಚನೆಯ ಬಗ್ಗೆ ನೀವು ಕೇಳಿರಲು ಸಾಧ್ಯವೇ ಇಲ್ಲ. ವಂಚಕರು ಮೋಸ ಮಾಡುವುದಕ್ಕೆ ಏನೆಲ್ಲಾ ಟ್ರಿಕ್ಸ್ ನಡೆಸುತ್ತಾರೆ ಅನ್ನೊದನ್ನ ಇದೊಂದು ಬೆಸ್ಟ್ ಎಕ್ಸಾಂಫಲ್ ಅಂತಾನೇ ಹೇಳಬಹುದು. ನಿಜ ಹರಿಯಾಣದ ಗುರುಗ್ರಾಮ್ ನಲ್ಲಿ ನಡೆದಿರುವ ಈ ಪ್ರಕರಣ ಎಂತಹವರನ್ನು ಬೆಸ್ತು ಬೀಳುವಂತೆ ಮಾಡೋದು ಖಂಡಿತ.
ಹೌದು, ಗುರುಗ್ರಾಮ್‌ದಲ್ಲಿ ಹೊಸ ವಂಚನೆಯ ಪ್ರಕರಣದ ಬಗ್ಗೆ ವರದಿಯಾಗಿದೆ. ಫಾರ್ಟ್ ಟೈಂ ಜಾಬ್ ಅಂತಾ ಆನ್‌ಲೈನ್‌ನಲ್ಲಿ ಅರ್ಜಿ ಹಾಕೋರಿಗೆ ಹೇಗೆಲ್ಲಾ ಮೋಸ ಮಾಡ್ತಾರೆ ಅನ್ನೊದು ಇದರಲ್ಲಿ ತಿಳಿಯಬಹುದು. ಸಿನಿಮಾ ರಿವ್ಯೂ ಮಾಡಿದರೆ ಹಣ ಗಳಿಸಬಹುದು ಅಂತಾ ಆಸೆ ಹುಟ್ಟಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 76 ಲಕ್ಷ ರೂ ವಂಚಿಸಲಾಗಿದೆ. ಹಾಗಾದ್ರೆ ಈ ಪ್ರಕರಣದಲ್ಲಿ ಮಹಿಳೆಯನ್ನು ವಂಚಕರು ಹೇಗೆಲ್ಲಾ ವಂಚಿಸಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗುರುಗ್ರಾಮದ ನ್ಯೂ ಕಾಲೋನಿ ನಿವಾಸಿಯಾಗಿರುವ ಮೀರಾ ಎಂಬ ಮಹಿಳೆ ಪಾರ್ಟ್ ಟೈಂ ಜಾಬ್‌ಗಾಗಿ ಟೆಲಿಗ್ರಾಮ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಇದನ್ನೇ ಆಧಾರವಾಗಿಟ್ಟುಕೊಂಡ ತೇಜಸ್ವಿ ಎಂಬ ಮಹಿಳೆ ಮೀರಾಳಿಗೆ ವಾಟ್ಸಾಪ್‌ನಲ್ಲಿ ಉದ್ಯೋಗ ಸಂಬಂಧಿತ ಸಂದೇಶ ಕಳುಹಿಸಿದ್ದಾಳೆ. ಅಲ್ಲದೆ Bitmaxfilm.com ಅಪ್ಲಿಕೇಶನ್‌ನಲ್ಲಿ ನೀವು ಸಿನಿಮಾದ ರಿವ್ಯೂ ಹಾಗೂ ರೇಟಿಂಗ್ ನೀಡಿದರೆ ನಿಮಗೆ ಹಣ ಸಿಗಲಿದೆ ಎಂದು ಹೇಳಿದ್ದಾಳೆ. ಪ್ರತಿ ದಿನ ಒಂದು ಸೆಟ್ ಪೂರ್ಣಗೊಳಿಸಿದರೆ ಹಣ ಸಿಗಲಿದೆ ಎಂದು ಹೇಳಿದ್ದಾರೆ.
ಅಲ್ಲದೆ ಪ್ರತಿ ಸೆಟ್‌ಗೆ 28 ಚಲನಚಿತ್ರಗಳನ್ನು ರಿವ್ಯೂ ಮತ್ತು ರೇಟಿಂಗ್ ಮಾಡಬೇಕಾಗಿದದೆ. ಅಲ್ಲದೆ ಇದಕ್ಕಾಗಿ ನಿಮ್ಮ ಅಕೌಂಟ್ ಕ್ರಿಯೆಟ್ ಮಾಡಲು 10,500 ರೂಪಾಯಿಗಳೊಂದಿಗೆ ರೀಚಾರ್ಜ್ ಮಾಡಬೇಕು ಎಂದಿದ್ದಾರೆ. ಅಲ್ಲದೆ ನೀವು ನಂತರ ನಿಮ್ಮ ಹಣವನ್ನು ನೀವು ಹಿಂದಕ್ಕೆ ಪಡೆಯಬಹುದು ಎಂಬ ಭರವಸೆಯನ್ನು ಸಹ ನೀಡಲಾಗಿದೆ. ಇದನ್ನು ನಂಬಿದ ಸಂತ್ರಸ್ಥೆ ಮೊದಲಿಗೆ 29,500ರೂ., ನಂತರ 82,541 ರೂ. ಠೇವಣಿ ಇಟ್ಟಿದ್ದಾಳೆ.

ಇದಾದ ಮೇಲೆ ವಂಚಕರು ಮೀರಾಳಿಗೆ 30 ಟಿಕೆಟ್‌ಗಳನ್ನು ಪೂರ್ಣಗೊಳಿಸವುದಕ್ಕೆ ಸೂಚಿಸಿದ್ದಾರೆ. ಆದರೆ ಲೆವೆಲ್ ಹೆಚ್ಚಾದ ಕಾರಣ ಇವರ ಅಕೌಂಟ್‌ನಲ್ಲಿ 5,48,658 ಮೈನಸ್ ಬ್ಯಾಲೆನ್ಸ್ ತೋರಿಸಿದೆ. ಅಲ್ಲದೆ ಇದನ್ನು ಪೂರ್ಣಗೊಳಿಸಲು 9,59,357ರೂ. ಗಳಿಗೆ ಟಿಕೆಟ್ ಪಡೆಯಲು ಹೇಳಿದ್ದಾರೆ. ಹೀಗೆ ನೀವು ಎಂಟನೇ ಹಂತವನ್ನು ತಲುಪಿದ್ದೀರಿ, ಇದೀಗ 35 ಟಿಕೆಟ್‌ಗಳನ್ನು ಪೂರ್ಣಗೊಳಿಸಿ ಎಂಬ ಸೂಚನೆ ಬಂದಿದೆ. ಹೀಗೆ ಹಂತಹಂತವಾಗಿ ಠೇವಣಿ ಇಡುತ್ತಾ ಹೋಗಿ 76,84,493 ರೂ ಜಮಾ ಮಾಡಿ ಮೋಸ ಹೋಗಿದ್ದಾರೆ.

ಇನ್ನು ಹೀಗೆ 76,84,493ರೂ ಹಣ ಜಮಾ ಆದ ನಂತರ ಹೆಚ್ಚಿನ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ. ಆಗ ಮೀರಾಗೆ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಅಷ್ಟರಲ್ಲಿ ವಂಚಕರು ಹಣ ಎಗರಿಸಿಕೊಂಡು ಹೋಗಿದ್ದಾರೆ. ಸದ್ಯ ಸಂತ್ರಸ್ತೆ ಸೈಬರ್ ಕ್ರೈಮ್, ವೆಸ್ಟ್, ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66-ಡಿ ಅಡಿಯಲ್ಲಿ ಅಪರಿಚಿತ ವಂಚನೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಹಣ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಕೆಲ ದಿನಗಳ ಹಿಂದೆ ಇದೆ ಗುರುಗ್ರಾಮದ ನಿವಾಸಿಯೊಬ್ಬನಿಗೆ ಯೂಟ್ಯೂಬ್ ವೀಡಿಯೋಗಳನ್ನು ಲೈಕ್ ಮಾಡಿದರೆ ಹಣ ನೀಡುವುದಾಗಿ ಹೇಳಿ 8.5 ಲಕ್ಷ ರೂ.ಗಳನ್ನು ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೋ ಲೈಕ್ ಮಾಡಿದರೆ ಪ್ರತಿ ಲೈಕ್‌ಗೆ 50 ರೂಪಾಯಿ ನೀಡುವುದಾಗಿ ವಂಚಕರು ಹೇಳಿದ್ದರು ಎನ್ನಲಾಗಿದೆ.


Click it and Unblock the Notifications








