ಮೂರೇ ಮೂರು ಸೆಕೆಂಡ್‌ನಲ್ಲಿ ಆಧಾರ್ ಹ್ಯಾಕ್ ಮಾಡಬಹುದಂತೆ...!

By GizBot Bureau
|

ಇತ್ತೀಚಿನ ದಿನಗಳಲ್ಲಿ ಆಧಾರ್ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸುದ್ದಿಯನ್ನು ಮಾಡುತ್ತಿದೆ. ಹೊಸದೊಂದು ನಂಬರ್ ಅನ್ನು ಸ್ಮಾರ್ಟ್ ಫೋನ್ ಗಳಲ್ಲಿ ಸೇರಿಸುವ ಮೂಲಕ ಸುದ್ದಿಯಾಗಿದ್ದ ಆಧಾರ್, ಟ್ರಾಯ್ ಅಧ್ಯಕ್ಷರ ಚಾಲೆಂಜ್ ಹೆಸರಿನಲ್ಲಿಯೂ ಸೆಕ್ಯೂರಿಟಿಯ ಬಗ್ಗೆ ಸಾಕಷ್ಟು ಪ್ರಶ್ನೇಗಳ ಏಳುವಂತೆ ಮಾಡಿತ್ತು. ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದು, ಹ್ಯಾಕರ್ ಗಳು ಕೇವಲ ಮೂರು ಸೆಕೆಂಡ್ ನಲ್ಲಿ ನಾವು ಆಧಾರ್ ಅನ್ನು ಹ್ಯಾಕ್ ಮಾಡಲು ಶಕ್ತರಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ಆಧಾರ್ ನಂಬರ್ ಕೊಟ್ಟರೆ ಸಾಕು ನಿಮ್ಮ ಸಂಪೂರ್ಣ ಜಾತಕವನ್ನು ಹೊರಗೆ ಹಾಕುತ್ತವೆ ಎಂದು ಹ್ಯಾಕರ್ ಗಳು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಇದೇ ಮಾದರಿಯಲ್ಲಿ ಬ್ಲಾಗ್ ವೊಂದರಲ್ಲಿ ಆಧಾರ್ ಸೆಕ್ಯೂರಿಟಿಗೆ ಸೆಡ್ಡು ಹೊಡೆದಿರುವ ಹ್ಯಾಕರ್ ಗಳ ಗುಂಪೊಂದು ಕೇವಲ ಮೂರು ಸೆಕೆಂಡ್ ಗಳಲ್ಲಿಯೇ ನಿಮ್ಮ ಆಧಾರ್ ಸೆಕ್ಯೂರಿಟಿಯನ್ನು ಕ್ರಾಕ್ ಮಾಡುತ್ತೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಮೂರೇ ಮೂರು ಸೆಕೆಂಡ್‌ನಲ್ಲಿ ಆಧಾರ್ ಹ್ಯಾಕ್ ಮಾಡಬಹುದಂತೆ...!

ಇದಕ್ಕಾಗಿ ಯಾವುದೇ ದೊಡ್ಡ ಮಟ್ಟದಲ್ಲಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದಿರುವ ಹ್ಯಾಕರ್ಸ್, ಇದಕ್ಕಾಗಿ ಬೆಸಿಕ್ ಮ್ಯಾಥಮೆಟಿಕ್ಸ್ ಮತ್ತು ಆಲ್ಗೋರಿಧಮ್ ಅನ್ನು ಬಳಕೆ ಮಾಡಿಕೊಂಡು ಆಧಾರ್ ಸೆಕ್ಯೂರಿಟಿಯನ್ನು ಕ್ರಾಕ್ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಆಧಾರ್ ಹ್ಯಾಕ್ ಅತ್ಯಂತ ಸುಲಭ ಎನ್ನುವುದನ್ನು ಮತ್ತೊಮ್ಮೆ ಸಾಭೀತು ಮಾಡಲು ಮುಂದಾಗಿದ್ದಾರೆ.

ಇ ಆಧಾರ್ ಪಾಸ್ ವರ್ಡ್ ಗಳು ತೀರ ಸಣ್ಣ ಪ್ರಮಾಣದಾಗಿದ್ದು, ಚಿಕ್ಕದಾಗಿದೆ. ಇದರಿಂದಾಗಿ ಸುಲಭವಾಗಿ ನಾವು ಹ್ಯಾಕ್ ಮಾಡಬಹುದಾಗಿದೆ. ಅಲ್ಲದೇ ಆಧಾರ್ ಹೆಚ್ಚಿನ ಸೆಕ್ಯೂರ್ ಪಾಸ್ ವರ್ಡ್ ಗಳನ್ನು ಜನರೆಟ್ ಮಾಡಲು ಶಕ್ತವಾಗಿಲ್ಲ. ಇದಲ್ಲದೇ ಆಧಾರ್ ಪಾಸ್ ವರ್ಡ್ ಕುರಿತ ಸಂಪೂರ್ಣ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಕಲಿಕೆ ಹಂತದಲ್ಲಿರುವ ಹ್ಯಾಕರ್ ಗಳು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ಹಂತ ಹಂತವಾಗಿ ತಿಳಿಸಿಕೊಟ್ಟಿದೆ.

ಅಲ್ಲದೇ ಹೇಗೆ ಪಾಸ್ ವರ್ಡ್ ಗಳನನ್ನು ಕ್ರಾಕ್ ಮಾಡಬಹುದು ಮತ್ತು ಮಾಡುತ್ತಾರೆ. ಯಾವ ವಿಧಾನವನ್ನು ಬಳಕೆ ಮಾಡಿಕೊಂಡರೆ ಪಾಸ್ ವರ್ಡ್ ತೆರೆಯಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ವಿವರಿಸಿದೆ. ಅಲ್ಲದೇ ಕೇವಲ 1.73 ಸೆಕೆಂಡ್ ನಲ್ಲಿ ಆಧಾರ್ ಮಾಹಿತಿಯನ್ನು ಬಹಿರಂಗ ಮಾಡಬಹುದು ಎಂದು ತಿಳಿಸಿದೆ.

Best Mobiles in India

English summary
Hacker claims he can crack eAadhaar password in under 3 seconds. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X