ಜೂಮ್ ಮತ್ತು ಗೂಗಲ್ ಮೀಟ್ ವೆಬ್‌ಸೈಟ್‌ಗಳ ಮೇಲೆ ಬಿತ್ತು ಹ್ಯಾಕರ್‌ಗಳ ಕಣ್ಣು!
ಜಾಗತಿಕವಾಗಿ ಇಂದು ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಇಡೀ ಮಾನವ ಕುಲ ಟೆಕ್ನಾಲಜಿ ಮೂಲಕವೇ ತನಗೆ ಬೇಕಾದನ್ನು ಪಡೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಟೆಕ್ನಾಲಜಿ ಅನ್ನೊದು ಹೇಗೆ ಉಪಯುಕ್ತವಾಗುತ್ತಿದೆಯೋ ಅಷ್ಟೇ ಪರಿಣಾಮಕಾರಿಯಾಗಿ ಅದನ್ನ ಕೆಟ್ಟ ಕೆಲಸಗಳಿಗೂ ಬಳಸಿಕೊಳ್ಳುತ್ತಿದ್ದಾರೆ. ಟೆಕ್ನಾಲಜಿ ಮನುಷ್ಯನಿಗೆ ಉಪಯುಕ್ತವೂ ಹೌದು ಹಾಗೇಯೇ ಕಂಟಕವೂ ಕೂಡ ಹೌದು, ನಿಮಗೆಲ್ಲಾ ತಿಳಿದಿರುವಂತೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಇನ್ಯಾವುದೋ ದೇಶದಲ್ಲಿ ಕುಳಿತಿರುವ ವ್ಯಕ್ತಿಯ ಅಕೌಂಟ್ ಹಣವನ್ನೇ ಎಗರಿಸಬಲ್ಲ ಚಾಲಾಕಿ ಹ್ಯಾಕರ್ಸ್‌ಗಳ ಗುಂಪು ಕಾಟ ನೀಡುತ್ತಲೇ ಇದೆ. ಸೈಬರ್ ಕ್ರೈಂ ಅಷ್ಟರ ಮಟ್ಟಿಗೆ ಜಾಗೃತವಾಗಿದೆ. ಇದೇ ಹ್ಯಾಕರ್ಸ್‌ಗಳು ಇದೀಗ ಜೂಮ್ ಮತ್ತು ಗೂಗಲ್ ಮೀಟ್ ವೆಬ್‌ಸೈಟ್‌ಗಳನ್ನು ಸಹ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ.

ಹೌದು, ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ನಕಲಿ ವೆಬ್ ಕ್ರಿಯೆಟ್ ಮಾಡೋದು, ಮಾಲ್ವೇರ್ ವೆಬ್‌ಸೈಟ್‌ಗಳನ್ನ ತೆರೆಯುವುದು ಈ ಮೂಲಕ ಗ್ರಾಹಕರನ್ನ ವಂಚಿಸಿ ಹ್ಯಾಕರ್ಸ್ ಬಲೆಗೆ ಬಿಳಿಸಿಕೊಳ್ಳುವುದು ಹ್ಯಾಕರ್ರ್ಸ್‌ಗಳ ಪಾಲಿಗೆ ಸುಲಭವಾಗಿ ಬಿಟ್ಟಿದೆ. ಇಷ್ಟು ದಿನ ಟಾಕ್‌ಟಾಕ್ ವೆಬ್‌ಸೈಟ್ ಹ್ಯಾಕ್, ವೊಡಾಫೋನ್ ಹ್ಯಾಕ್, ಹೀಗೆ ಬಹುತೇಕ ಎಲ್ಲಾ ಮಾದರಿಯ ವೆಬ್‌ಸೈಟ್‌ಗಳನ್ನ ಆನ್‌ಲೈನ್‌ನಲ್ಲಿ ಹ್ಯಾಕಿಂಗ್ ಮಾಡುತ್ತಿದ್ದ ಹ್ಯಾಕರ್ಸ್ ಕಣ್ಣು ಇದೀಗ ಜೂಮ್ ಮತ್ತು ಗೂಗಲ್ ಮೀಟ್ ಗ್ರೂಪ್ ವೀಡಿಯೋ ಕಾಲ್ ಆಪ್‌ಗಳ ಮೇಲೆ ಬಿದಿದ್ದೆಯಂತೆ.

ಕಂಪ್ಯೂಟರ್ ಮತ್ತು ಮೊಬೈಲ್‌ಗಳನ್ನು ಹ್ಯಾಕ್ ಮಾಡಿ ಅದರಲ್ಲಿರುವ ಫೋಟೋಗಳು, ವಿವಿಧ ದಾಖಲೆ, ಫೈಲ್ಗಳನ್ನೇ ನಿಷ್ಕ್ರಿಯಗೊಳಿಸಿ ಬ್ಲಾಕ್ವೆುೕಲ್ ಮಾಡುವ ಅಂತಾರಾಷ್ಟ್ರೀಯ ಖದೀಮರ ಜಾಲವೊಂದು ಸಕ್ರಿಯವಾಗಿದೆ. ಪ್ರಸ್ತುತ ಜೂಮ್ ಮತ್ತು ಗೂಗಲ್ ಮೀಟ್‌ನಂತಹ ವೀಡಿಯೊ ಕಾನ್ಫರೆನ್ಸಿಂಗ್ ಆಪ್‌ಗಳ ಜನಪ್ರಿಯತೆ ಹ್ಯಾಕರ್‌ಗಳ ಪಾಲಿಗೆ ವರದಾನವಾಗಿದೆಯಂತೆ. ಏಕೆಂದರೆ ಮಾಲ್ವೇರ್ ಹೊಂದಿರುವ ವೆಬ್‌ಸೈಟ್‌ಗಳನ್ನು ತೆರೆಯಲು ಜನರನ್ನು ಸೆಳೆಯುವುದಕ್ಕೆ ಹ್ಯಾಕರ್ಸ್ ಈ ರೀತಿಯ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾರೆ.

ಸದ್ಯ, ಚೆಕ್‌ಪಾಯಿಂಟ್ ವರದಿಯ ಪ್ರಕಾರ ಕಳೆದ ಮೂರು ವಾರಗಳಲ್ಲಿ 2,449 ಜೂಮ್-ಸಂಬಂಧಿತ ಡೊಮೇನ್‌ಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ, 32 ಡೊಮೇನ್‌ಗಳು ದುರುದ್ದೇಶಪೂರಿತವೆಂದು ಕಂಡುಬಂದಿದೆ ಮತ್ತು 320 ಅನ್ನು "ಅನುಮಾನಾಸ್ಪದ" ಎಂದು ಕರೆಯಲಾಗುತ್ತಿದೆ. ಇದರರ್ಥ ಮೂಲತಃ ಹ್ಯಾಕರ್‌ಗಳು ಬಳಕೆದಾರರ ಮೇಲೆ ಆಕ್ರಮಣ ಮಾಡಲು ನಕಲಿ ಜೂಮ್ ಅಥವಾ ಗೂಗಲ್ ಮೀಟ್ ವೆಬ್‌ಸೈಟ್‌ಗಳನ್ನು ರಚಿಸಿದ್ದಾರೆ. ಇನ್ನು ಜೂಮ್ ಮತ್ತು ಗೂಗಲ್ ಮೀಟ್ ಬಳಕೆದಾರರು ಈ ಶಂಕಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ, ಅವರು ಬಳಸುವ ಕಂಪ್ಯೂಟರ್ ಮೇಲೆ ಹ್ಯಾಕರ್ ನಿಯಂತ್ರಣ ಸಾಧಿಸುವ ಸಾಧ್ಯತೆಗಳಿವೆ.

ಇನ್ನು ಚೆಕ್‌ಪಾಯಿಂಟ್ ನಿಯಮಿತ ಬಳಕೆದಾರರನ್ನು ಎಚ್ಚರಿಸುವಂತಹ ಘಟನೆಗಳ ಸರಣಿಯನ್ನು ವಿವರಿಸಿದೆ. ಇತ್ತೀಚೆಗೆ, "ಮೈಕ್ರೋಸಾಫ್ಟ್ ತಂಡಗಳಲ್ಲಿನ ತಂಡಕ್ಕೆ ನಿಮ್ಮನ್ನು ಸೇರಿಸಲಾಗಿದೆ" ಎಂಬ ವಿಷಯ ಹೊಂದಿರುವ ಫಿಶಿಂಗ್ ಇಮೇಲ್‌ಗಳಿಗೆ ಹಲವು ಮಂದಿ ಹ್ಯಾಕರ್ಸ್‌ಗಳ ಪಾಲಿಗೆ ಬಲಿಪಶುಗಳಾಗಿದ್ದಾರೆ. ಇದಲ್ಲದೆ ಜನವರಿ 2020 ರಿಂದ ಇಲ್ಲಿಯವರೆಗೆ, ಒಟ್ಟು 6,576 ಜೂಮ್-ಸಂಬಂಧಿತ ಡೊಮೇನ್‌ಗಳನ್ನು ಜಾಗತಿಕವಾಗಿ ನೋಂದಾಯಿಸಲಾಗಿದೆ, ಇದರಿಂದ ಹ್ಯಾಕರ್ಸ್‌ಗಳ ಪಾಲಿಗೆ ಸುಲಭ ತುತ್ತಾಗುವ ಸಾಧ್ಯತೆ ಜಾಸ್ತಿಯಾಗ್ತಿದೆ.

ಇದಲ್ಲದೆ ಸ್ಲೀಪಿಂಗ್ ಕಂಪ್ಯೂಟರ್‌ನ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್‌ನಲ್ಲಿ 500 ಸಾವಿರಕ್ಕೂ ಹೆಚ್ಚು ಜೂಮ್ ಖಾತೆಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗಿದೆ. ಇದಲ್ಲದೆ, ಈ ಕೆಲವು ಖಾತೆಗಳನ್ನು ಒಂದು ಪೈಸೆಗಿಂತ ಕಡಿಮೆ ಅಥವಾ ಉಚಿತವಾಗಿ ನೀಡಲಾಗಿದೆ. ಇದೆಲ್ಲವೂ ಹ್ಯಾಕರ್ಸ್‌ಗಳ ಕೈ ಚಳಕವಾಗಿದೆ. ಅಲ್ಲದೆ ಸೈಬರ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸಂಸ್ಥೆಯಾದ ಸೈಬಲ್ ಪ್ರಕಾರ, ಹ್ಯಾಕಿಂಗ್ ಸಮುದಾಯದಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಲು ಅನೇಕ ಜೂಮ್ ಖಾತೆಗಳನ್ನು ಹ್ಯಾಕರ್ ಫೋರಂಗಳಲ್ಲಿ ತೋರಿಸಲಾಗ್ತಿದೆ. ಇನ್ನು ಸಂದೇಶಗಳ ಮೂಲಕ ಹಂಚಲಾದ URL ಗಳನ್ನು ಕ್ಲಿಕ್ ಮಾಡುವ ಮೊದಲು ಜನರು ಎರಡು ಬಾರಿ ಪರಿಶೀಲಿಸಬೇಕಾಗಿದೆ ಎಂಬುದು ಚೆಕ್‌ಪಾಯಿಂಟ್ ಸ್ಪಟಷ್ಟ ಪಡಿಸಿದ್ದು, ಜೂಮ್, ಗೂಗಲ್ ಮೀಟ್ ಮತ್ತು ಮೈಕ್ರೋಸಾಫ್ಟ್ ತಂಡಗಳಂತಹ ಸೇವೆಗಳ ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ತೆರೆಯಿರಿ ಎಂದು ಎಚ್ಚರಿಸಲಾಗಿದೆ.


Click it and Unblock the Notifications








