ನಿಮ್ಮ ಕ್ಯಾಮರಾವೇ ಹ್ಯಾಕರ್ ಗಳಿಗೆ ನಿಮ್ಮ ಬಗ್ಗೆ ತಿಳಿಸುತ್ತಿರಬಹುದು !
ಇಂತಹದ್ದೊಂದು ಸುದ್ದಿ ಎಂತಹವರನ್ನೂ ಕೂಡ ಬೆಚ್ಚಿಬೀಳಿಸುತ್ತೆ. ನಿಮ್ಮ ಮೊಬೈಲ್ ಕ್ಯಾಮರಾವೇ ನಿಮಗೆ ಮೋಸ ಮಾಡುವುದೇ? ಹೌದು. ಹ್ಯಾಕರ್ ಗಳು ಅದೆಷ್ಟು ಮುಂದುವರಿದು ಬಿಟ್ಟಿದ್ದಾರೆ ಎಂದರೆ ನಿಮ್ಮ ಆಂಡ್ರಾಯ್ಡ್ ಫೋನಿನ ಕ್ಯಾಮರಾವನ್ನೇ ಬಳಸಿ ನಿಮ್ಮ ಮೇಲೆ ಕಣ್ಣಿಟ್ಟು ನಿಮ್ಮ ವಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿ ನಿಮ್ಮನ್ನ ಯಾಮಾರಿಸುವ ಸಾಧ್ಯತೆ ಇದೆ. ಯಾವುದಕ್ಕೂ ಹುಷಾರಾಗಿರಿ.

ಭದ್ರತಾ ಸಂಸ್ಥೆಯಾಗಿರುವ ಚೆಕ್ಮಾರ್ಕ್ಸ್ ಇದನ್ನು ಕಂಡು ಹಿಡಿದಿದ್ದು ಎಚ್ಚರಿಕೆಯನ್ನು ನೀಡಿದೆ. ಫೋನಿನಲ್ಲಿರುವ ಆಪ್ ಗಳಿಗೆ ನೀಡಲಾಗಿರುವ ಪರ್ಮಿಷನ್ ಗಳನ್ನು ಬಳಸಿ ನಿಮ್ಮ ಆಂಡ್ರಾಯ್ಡ್ ಫೋನಿನ ಕ್ಯಾಮರಾದ ಸಹಾಯದಿಂದ ತೆಗೆದುಕೊಂಡಿರುವ ಫೋಟೋಗಳು ಮತ್ತು ವೀಡಿಯೋಗಳು ಹ್ಯಾಕರ್ ಗಳ ಪಾಲಾಗಬಹುದು. ನಿಮ್ಮ ಕ್ಯಾಮರಾವೇ ನಿಮಗೆ ಮುಳುವಾಗಿ ಬಿಡಬಹುದು.

ಕ್ಯಾಮರಾ ಅಪ್ಲಿಕೇಷನ್ ಗಳಲ್ಲಿ ದೋಷ:
ಆಂಡ್ರಾಯ್ಡ್ ಫೋನಿನ ಪರಿಸರ ವ್ಯವಸ್ಥೆಯಲ್ಲಿ ಕ್ಯಾಮರಾ ಅಪ್ಲಿಕೇಷನ್ ಗಳಲ್ಲಿನ ದೋಷಗಳ ಬಗ್ಗೆ ಸಂಶೋಧಕರು ಪ್ರಸ್ತಾಪಿಸಿದ್ದಾರೆ. ಗೂಗಲ್ ಪಿಕ್ಸಲ್ ಫೋನ್ ಗಳಲ್ಲಿನ ಕ್ಯಾಮರಾ ಅಪ್ಲಿಕೇಷನ್ ಮತ್ತು ಸ್ಯಾಮ್ ಸಂಗ್ ಶ್ರೇಣಿಯ ಸ್ಮಾರ್ಟ್ ಫೋನ್ ಗಳಲ್ಲಿನ ಕ್ಯಾಮರಾ ಅಪ್ಲಿಕೇಷನ್ ಗಳು ಅತೀ ಹೆಚ್ಚು ದುರ್ಬಲವಾಗಿದೆ ಎಂದು ಅವರು ಹೇಳುತ್ತಾರೆ.

ಅಧ್ಯಯನ:
ನಮ್ಮ ತಂಡವು ಗೂಗಲ್ ಕ್ಯಾಮರಾ ಅಪ್ಲಿಕೇಷನ್ ನ್ನು ಸಂಶೋಧಿಸಲು ಪ್ರಾರಂಭಿಸಿತು ಮತ್ತು ಅನುಮತಿ ಬೈಪಾಸ್ ಸಮಸ್ಯೆಗಳಿಂದ ಉಂಟಾಗುವ ದೋಷಗಳಿಗೆ ಸಂಬಂಧಿಸಿದಂತೆ ಅನೇಕ ಅಂಶಗಳನ್ನು ಕಂಡು ಹಿಡಿಯಲಾಗಿದೆ. ನಂತರ ಅಧ್ಯಯನವನ್ನು ಇನ್ನಷ್ಟು ಆಳಕ್ಕೆ ತೆಗೆದುಕೊಂಡು ಹೋದಾಗ ಆಂಡ್ರಾಯ್ಡ್ ಪರಿಸರ ವ್ಯವಸ್ಥೆಯಲ್ಲಿ ಇತರೆ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ಫೋನ್ ಗಳಲ್ಲೂ ಕೂಡ ಇದೇ ರೀತಿಯ ಸಮಸ್ಯೆಗಳಿರುವುದು ಕಂಡು ಬಂದಿದೆ. ಅದರಲ್ಲಿ ಸ್ಯಾಮ್ ಸಂಗ್ ಸಂಸ್ಥೆ ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದು ಮಿಲಿಯನ್ ಗಟ್ಟಲೆ ಸ್ಮಾರ್ಟ್ ಫೋನ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ ಎಂದಿದೆ ಚೆಕ್ಮಾರ್ಕ್ಸ್.

ಹ್ಯಾಕರ್ ಗಳು ಏನು ಮಾಡಬಹುದು?
ನಿಮ್ಮ ಫೋನಿನಲ್ಲಿರುವ ಫೋಟೋಗಳು ಮತ್ತು ವೀಡಿಯೋಗಳನ್ನು ಕೂಡ ಹ್ಯಾಕರ್ ಗಳು ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧ್ಯಯನಕಾರರು ಮತ್ತು ಕ್ಯಾಮರಾ ಅಪ್ಲಿಕೇಷನ್ ಕ್ಲೋಸ್ ಆಗಿದ್ದರೂ ಕೂಡ ಅದನ್ನು ಅವರು ನೋಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು. ಹ್ಯಾಕರ್ ಗಳು ಫೋನಿನ ಪ್ರಾಕ್ಸಿಮಿಟಿ ಸೆನ್ಸರ್ ನ್ನು ಕೂಡ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಗೂಗಲ್ ಪ್ರತಿಕ್ರಿಯೆ:
ಗೂಗಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತಮಗೆ ಚೆಕ್ ಮಾರ್ಕ್ಸ್ ನಿಂದ ಮಾಹಿತಿ ಸಿಕ್ಕಿದೆ ಮತ್ತು ಇದಕ್ಕಾಗಿ ಪ್ಯಾಚ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ ಜೊತೆಗೆ ಇತರೆ ಎಲ್ಲಾ ಆಂಡ್ರಾಯ್ಡ್ ತಯಾರಕರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಚೆಕ್ ಮಾರ್ಕ್ ಬಗ್ಗೆ ಗೂಗಲ್ ಪ್ರಶಂಸೆ:
ಚೆಕ್ ಮಾರ್ಕ್ ನಮಗೆ ಈ ಬಗ್ಗೆ ಗಮನಕ್ಕೆ ತಂದಿರುವ ಬಗ್ಗೆ ನಾವು ಪ್ರಶಂಸೆ ವ್ಯಕ್ತಪಡಿಸುತ್ತೇವೆ ಮತ್ತು ಈ ರೀತಿಯ ವಿಚಾರವನ್ನು ಬಹಿರಂಗ ಪಡಿಸಿರುವುದನ್ನು ಸಂಘಟಿಸುವ ನಿಟ್ಟಿನಲ್ಲಿ ಗೂಗಲ್ ಇತರೆ ಆಂಡ್ರಾಯ್ಡ್ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. 2019 ರ ಜುಲೈ ನಲ್ಲಿ ಗೂಗಲ್ ಕ್ಯಾಮರಾ ಅಪ್ಲಿಕೇಷನ್ ಗೆ ಪ್ಲೇ ಸ್ಟೋರ್ ಅಪ್ ಡೇಟ್ ಮೂಲಕ ಪ್ರಭಾವಿತ ಗೂಗಲ್ ಸಾಧನಗಳಲ್ಲಿ ಈ ಸಮಸ್ಯೆಯನ್ನು ಪ್ಯಾಚ್ ಮಾಡುವ ಮೂಲಕ ಪರಿಹರಿಸಲಾಗಿದೆ ಎಂದು ಗೂಗಲ್ ತಿಳಿಸಿದೆ.


Click it and Unblock the Notifications








