ಎಟಿಎಂ ಸ್ಕಿಮ್ಮಿಂಗ್ ನಿಂದ 1 ಕೋಟಿ ರುಪಾಯಿ ವಂಚನೆ- ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶಗಳು

By Gizbot Bureau
|

ದೇಶದ ಅತೀ ದೊಡ್ಡ ರಾಷ್ಟ್ರೀಯ ಬ್ಯಾಂಕ್ ಆಗಿರುವ ಎಸ್ ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ದ ಹಲವು ಎಟಿಎಂ ಕಾರ್ಡ್ ಗಳನ್ನು ಬ್ಯಾಂಕ್ ಖಾತೆಯಿಂದ ಹಣ ಕದಿಯುವುದಕ್ಕಾಗಿ ಬಳಸಲಾಗಿರುವ ಬಗ್ಗೆ ವರದಿಯಾಗಿದ್ದು ಅಂದಾಜು 1 ಕೋಟಿ ರುಪಾಯಿ ತ್ರಿಪುರಾದ ಅಗರ್ತಲಾದಲ್ಲಿ ವಂಚಿಸಿ ಕದಿಯಲಾಗಿದೆ. ಕಾರ್ಡ್ ಸ್ಕಿಮ್ಮಿಂಗ್ ನಿಂದ ಈ ರೀತಿಯ ಮೋಸವನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಎಟಿಎಂ ಮೋಸಗಾರಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಯಾವುವು? ಇಲ್ಲಿದೆ ನೋಡಿ.

ಫೇಕ್ ಎಸ್ ಬಿ ಐ ಎಟಿಎಂ ಕಾರ್ಡ್

ಫೇಕ್ ಎಸ್ ಬಿ ಐ ಎಟಿಎಂ ಕಾರ್ಡ್ ಗಳನ್ನು ಬಳಸಿ ಹ್ಯಾಕರ್ ಗಳು ಒಂದು ಕೋಟಿಯನ್ನು ವಿತ್ ಡ್ರಾ ಮಾಡಿದ್ದಾರೆ.

45 ವಿಭಿನ್ನ ಖಾತೆಗಳಿಂದ ಕದಿಯಲಾಗಿದೆ

ಹಣವನ್ನು 45 ವಿಭಿನ್ನ ಬ್ಯಾಂಕ್ ಖಾತೆಗಳಿಂದ ವಿತ್ ಡ್ರಾ ಮಾಡಲಾಗಿದೆ ಎಂದು ವರದಿಯಾಗಿದೆ.

ಟರ್ಕಿಯ ಹ್ಯಾಕರ್ ಗಳು ಎಂದು ಪೋಲೀಸರಿಗೆ ಶಂಕೆ

ಈ ಕೇಸಿನಲ್ಲಿ ಟರ್ಕಿಯ ಹ್ಯಾಕರುಗಳು ಕೆಲಸ ಮಾಡಿರುವ ಬಗ್ಗೆ ಪೋಲೀಸರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಎಟಿಎಂ ಕ್ಲೋನಿಂಗ್ ಡಿವೈಸ್ ಗಳ ಮೂಲಕ ಲಕ್ಷಾಂತರ ರುಪಾಯಿಯನ್ನು ಕದ್ದು ಗುವಾಹಟಿಯಲ್ಲಿ ಟರ್ಕಿಯ ಹ್ಯಾಕರ್ ಗಳು ಸಿಕ್ಕಿ ಬಿದ್ದಿದ್ದರು.

ಘಟನೆ ನಡೆದ ನಂತರ ಹಲವು ಬಳಕೆದಾರರ ಎಟಿಎಂ ಕಾರ್ಡ್ ನ್ನು ಬ್ಲಾಕ್ ಮಾಡಿದ ಎಸ್ ಬಿಐ

ಘಟನೆ ನಡೆದ ನಂತರ ಹಲವು ಬಳಕೆದಾರರ ಎಟಿಎಂ ಕಾರ್ಡ್ ನ್ನು ಬ್ಲಾಕ್ ಮಾಡಿದ ಎಸ್ ಬಿಐ

ಹ್ಯಾಕಿಂಗ್ ದಾಳಿಯ ನಂತರ ಎಸ್ ಬಿಐ ಹಲವು ಗ್ರಾಹಕರ ಎಟಿಎಂ ಕಾರ್ಡ್ ಗಳನ್ನು ಬ್ಲಾಕ್ ಮಾಡಿದೆ. ಈ ಕಾರ್ಡ್ ಗಳನ್ನು ಪ್ರಾಥಮಿಕವಾಗಿ ನಗರದ ನಾಲ್ಕು ಎಟಿಎಂ ಕಾರ್ಡ್ ಗಳಲ್ಲಿ ಬಳಸಲಾಗುತ್ತಿತ್ತು.

ಸ್ಕಿಮ್ಮಿಂಗ್ ಸಾಧನಗಳನ್ನು ಬಳಸಿ ಹಣವನ್ನು ವಿತ್ ಡ್ರಾ ಮಾಡಲಾಗಿದೆ.

ಪೋಲೀಸರ ಪ್ರಕಾರ ಈ ಎಟಿಎಂಗಳಲ್ಲಿ ಹಣವನ್ನು ಪಡೆಯುವುದಕ್ಕಾಗಿ ಸೈಬರ್ ಕ್ರಿಮಿನಲ್ ಗಳು ಸ್ಕಿಮ್ಮಿಂಗ್ ಡಿವೈಸ್ ಗಳನ್ನು ಬಳಕೆ ಮಾಡಿದ್ದಾರೆ.

ಎಟಿಎಂ ಸ್ಕಿಮ್ಮಿಂಗ್ ಸದ್ಯ ನಡೆಯುತ್ತಿರುವ ಸಾಮಾನ್ಯ ವಂಚನೆಯಾಗಿದೆ

ಎಟಿಎಂ ಸ್ಕಿಮ್ಮಿಂಗ್ ಅನ್ನುವುದು ಇತ್ತೀಚೆಗೆ ನಡೆಯುತ್ತಿರುವ ಸಾಮಾನ್ಯ ಎಟಿಎಂ ಮೋಸಗಾರಿಕೆಯಾಗಿದೆ. ಎಟಿಎಂ ಮತ್ತು ಪಿಓಎಸ್ ಯಂತ್ರಗಳನ್ನು ವ್ಯಕ್ತಿಯ ವಯಕ್ತಿಕ ಮಾಹಿತಿಗಳನ್ನು ಕದಿಯುವ ಸಲುವಾಗಿ ಬಳಕೆ ಮಾಡಲಾಗುತ್ತದೆ.

ಸ್ಕಿಮ್ಮಿಂಗ್ ಕಾರ್ಯ ನಿರ್ವಹಿಸುವುದು ಹೇಗೆ

ಸ್ಕಿಮ್ಮಿಂಗ್ ಕಾರ್ಯ ನಿರ್ವಹಿಸುವುದು ಹೇಗೆ

ಎಟಿಎಂ ಕೀಪ್ಯಾಡ್ ಗೆ ಕ್ರಿಮಿನಲ್ ಗಳು ಸ್ಕಿಮ್ಮರ್ ಎಂದು ಕರೆಯಲಾಗುವ ಡಿವೈಸ್ ನ್ನು ಅಟ್ಯಾಚ್ ಮಾಡುತ್ತಾರೆ. ಈ ತೆಳುವಾದ ಕ್ಲಾನಿಂಗ್ ಡಿವೈಸ್ ನ್ನು ನಂತರ ಕಾರ್ಡಿನ ಮಾಹಿತಿಗಳನ್ನು ಕದಿಯುವುದಕ್ಕಾಗಿ ಬಳಸಲಾಗುತ್ತದೆ.ಎಟಿಎಂನಲ್ಲಿ ಕಾರ್ಡ್ ನ್ನು ಹಾಕಿದಾಗ ಕಾರ್ಡಿನ ಮಾಹಿತಿಯು ಈ ತೆಳುವಾದ ಡಿವೈಸ್ ಗೆ ಸೇರಿಕೊಂಡಿರುತ್ತದೆ.

ಕ್ಯಾಮರಾಗಳು ಕೆಲಸ ಮಾಡುತ್ತಿರುವಾಗಲೂ ಕೂಡ ಇದು ಸಾಧ್ಯ

ಎಟಿಎಂ ಕಾರ್ಡ್ ಗಳನ್ನು ಪಂಚ್ ಮಾಡಿದಾಗ ಅದು ಕ್ಲೋನ್ ಆಗುತ್ತದೆ ಮತ್ತು ಕೀಪ್ಯಾಡ್ ಗೆ ಲಗತ್ತಿಸಲಾಗಿರುವ ಡಿವೈಸ್ ಮೂಲಕ ಗ್ರಾಹಕರ ಪಿನ್ ನಂಬರ್ ಹ್ಯಾಕರ್ ಗಳಿಗೆ ರವಾನಿಸಲ್ಪಡುತ್ತದೆ. ನೀವು ಕ್ಯಾಮರಾವನ್ನು ಎಟಿಎಂ ಸೆಂಟರ್ ನಲ್ಲಿ ಅಳವಡಿಸಿರಲಾಗುತ್ತದೆಯಲ್ಲ ಎಂದು ಅಂದುಕೊಳ್ಳುತ್ತಿರಬಹುದು. ಆದರೆ ಕ್ಯಾಮರಾ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಯಾಕೆಂದರೆ ಪಿನ್ ನಂಬರ್ ಗ್ರಾಹಕರು ಎಂಟರ್ ಮಾಡಿದಾಗಲೇ ಕಳ್ಳರಿಗೆ ರವಾನೆಯಾಗಿರುತ್ತದೆ.

ಕಾರ್ಡ್ ಗಳನ್ನು ಕ್ಲೋನ್ ಮಾಡುವುದಕ್ಕಾಗಿ ಕದ್ದ ವಿವರಗಳನ್ನು ಬಳಸಲಾಗುತ್ತದೆ

ಕಾರ್ಡ್ ಗಳನ್ನು ಕ್ಲೋನ್ ಮಾಡುವುದಕ್ಕಾಗಿ ಕದ್ದ ವಿವರಗಳನ್ನು ಬಳಸಲಾಗುತ್ತದೆ

ಹೀಗೆ ಎಟಿಎಂನಿಂದ ಕದಿಯಲಾಗುವ ಮಾಹಿತಿಗಳನ್ನು ಬಳಸಿ ಹಣವನ್ನು ಇತರೆ ಎಟಿಎಂಗಳಲ್ಲಿ ವಿತ್ ಡ್ರಾ ಮಾಡಲಾಗುತ್ತದೆ. ಇದೇ ರೀತಿ ಘಟನೆಗಳು ಮೇಲಿನ ಕೇಸ್ ಗಳಲ್ಲೂ ಕೂಡ ಆಗಿದೆ.

ಎಟಿಎಂನಲ್ಲಿ ತೆಳುವಾದ ಫಿಲ್ಮ್ ನ್ನು ಕ್ರಿಮಿನಲ್ ಗಳು ಬಳಸಿ ಕೀಸ್ಟ್ರೋಕ್ ಗಳನ್ನು ಕದಿಯತ್ತಾರೆ

ಕೆಲವು ಕೇಸ್ ಗಳಲ್ಲಿ ಕ್ರಿಮಿನಲ್ ಗಳು ತೆಳುವಾದ ಫಿಲ್ಮ್ ನ್ನು ಕೂಡ ಎಟಿಎಂ ಕೀಪ್ಯಾಡ್ ಗಳಿಗೆ ಅಳವಡಿಸುತ್ತಾರೆ ಅಥವಾ ಪಿಓಎಸ್ ಮಷೀನ್ ಗಳಿಗೆ ಅಳವಡಿಸಿ ಕೀಸ್ಟ್ರೋಕ್ ಗಳನ್ನು ಕ್ಯಾಪ್ಚರ್ ಮಾಡುತ್ತಾರೆ.

ಗ್ರಾಹಕರಿಗೆ ಎಚ್ಚರಿಕೆಯ ಮೇಲ್ ಕಳುಹಿಸಿದ ಎಸ್ ಬಿಐ

ಗ್ರಾಹಕರಿಗೆ ಎಚ್ಚರಿಕೆಯ ಮೇಲ್ ಕಳುಹಿಸಿದ ಎಸ್ ಬಿಐ

ಈ ವರ್ಷದ ಆರಂಭದಲ್ಲಿ ಎಸ್ ಬಿಐ ತನ್ನ ಗ್ರಾಹಕರಿಗೆ ಎಟಿಎಂ ಸಂಬಂಧಿತ ಸ್ಕಿಮ್ಮಿಂಗ್ ಮೋಸಗಾರಿಕೆಯ ಬಗ್ಗೆ ಎಚ್ಚರಿಕೆಯ ಇಮೇಲ್ ನ್ನು ಕಳುಹಿಸಿತ್ತು.

ಎಟಿಎಂನಲ್ಲಿ ನಗದು ಪಡೆಯುವ ಮಿತಿಯನ್ನು ಕಡಿಮೆ ಮಾಡಿದ ಎಸ್ ಬಿಐ

2018 ಅಕ್ಟೋಬರ್ ನಲ್ಲಿ ಎಸ್ ಬಿಐ ಎಟಿಎಂ ನಿಂದ ಕ್ಯಾಷ್ ವಿತ್ ಡ್ರಾ ಮಾಡುವ ಮಿತಿಯನ್ನು ಪ್ರತಿದಿನಕ್ಕೆ 40,000 ಇದ್ದದ್ದನ್ನು 20,000 ರುಪಾಯಿಗಳಿಗೆ ಇಳಿಸಿತ್ತು. ಈ ಹೆಜ್ಜೆಯನ್ನು ತೆಗೆದುಕೊಳ್ಳುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಈ ಎಟಿಎಂ ಸ್ಕಿಮ್ಮಿಂಗ್ ಮೋಸಗಾರಿಕೆ ಕೂಡ ಆಗಿದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
Hackers Steal Rs. 1 Crore Using ATM Cards.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X