Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಗೇಮಿಂಗ್‌ ಆಡುವಾಗ ಎಚ್ಚರವಾಗಿರಿ

By Ashwath

ನೀವೆನಾದ್ರೂ ಅನ್‌ಲೈನ್‌ನಲ್ಲಿ ವೀಡಿಯೋ ಗೇಮ್‌ ಆಡ್ತೀರಾ ? ಹಾಗಾದ್ರೆ ಇನ್ನು ಮುಂದೆ ಎಚ್ಚರವಾಗಿರಿ. ಕ್ಯಾಸ್ಪರಸ್ಕಿ ಸೆಕ್ಯುರಿಟಿ ನೆಟ್‌ವರ್ಕ್‌ ಅನ್‌ಲೈನ್‌ ಗೇಮಿಂಗ್‌ ಆಡುವವರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ. ಪ್ರತಿದಿನ 7 ಸಾವಿರ ಜನರ ಮಾಹಿತಿಗಳು ಹ್ಯಾಕ್‌ ಆಗುತ್ತಿದೆ ಎಂದು ಕ್ಯಾಸ್ಪರಸ್ಕಿ ಸೆಕ್ಯುರಿಟಿ ನೆಟ್‌ವರ್ಕ್ ಹೇಳಿದೆ.
ಹ್ಯಾಕರ್‌ಗಳ ದಾಳಿಗೆ ಒಳಗಾಗುತ್ತಿರುವ ಮೂರನೇ ದೊಡ್ಡ ದೇಶ ಭಾರತವಾಗಿದ್ದು, ವೈರಸ್‌ಗಳನ್ನು ಬಿಡುವ ಮೂಲಕ ನಿಮ್ಮ ಅನ್‌ಲೈನ್‌ ಅಕೌಂಟ್‌, ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡುತ್ತಾರೆ ಎಂದು ಕ್ಯಾಸ್ಪರಸ್ಕಿ ಹೇಳಿದೆ.

ಆನ್‌ಲೈನ್‌ನಲ್ಲಿ ಗೇಮಿಂಗ್‌ ಆಡುವಾಗ ಎಚ್ಚರವಾಗಿರಿ

ಹೇಗೆ ಹ್ಯಾಕ್‌ ಮಾಡುತ್ತಾರೆ?
ಅನ್‌ಲೈನ್‌ನಲ್ಲಿ ಗೇಮಿಂಗ್‌ಗಾಗಿಯೇ ಕೆಲವು ಜಾಲತಾಣಗಳಿವೆ.ಈ ಜಾಲತಾಣಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಹೆಸರಿನಲ್ಲಿ ವೆಬ್‌ಸೈಟ್‌ ಸ್ಥಾಪಿಸಿರುತ್ತವೆ. ಅಪ್ಪಿತಪ್ಪಿ ನೀವು ಈ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಗೇಮಿಂಗ್‌ ಪಾಸ್‌ವರ್ಡ್ ನಮೂದಿಸಿದ್ರೆ ನೀವು ನೊಂದಾಯಿತ ಜಾಲತಾಣದಲ್ಲಿ ನಮೂದಿಸಿದ ಅಕೌಂಟ್‌ನ್ನು ಹ್ಯಾಕ್‌ ಮಾಡುತ್ತಾರೆ. ಈ ರೀತಿಯಾಗಿ ಹ್ಯಾಕ್‌ ಮಾಡುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿದಿನ ಗೇಮಿಂಗ್‌ ಹೆಸರಿನಲ್ಲಿ 5 ಸಾವಿರ ನಕಲಿ ವೆಬ್‌ಸೈಟ್‌ಗಳು ತಲೆ ಎತ್ತುತ್ತಿವೆ ಎಂದು ಕ್ಯಾಸ್ಪರಸ್ಕಿ ಹೇಳಿದೆ.

ಅತೀ ಹೆಚ್ಚು ಗೇಮಿಂಗ್‌ ಹ್ಯಾಕಿಂಗ್‌ಗೆ ಒಳಗಾಗುವ ದೇಶದಲ್ಲಿ ರಷ್ಯಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾ ದ್ವಿತೀಯ ಸ್ಥಾನದಲ್ಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+