ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?
ಗ್ಯಾಜೆಟ್ ಲೋಕದಲ್ಲಿ ಹ್ಯಾಮರ್ ಕಂಪೆನಿ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳು ಹೊಸ ಸಂಚಲನವನ್ನೇ ಸೃಷ್ಟಿಸಿವೆ. ಇದೀಗ ಮತ್ತೊಮ್ಮೆ ಅಂತಹ ಸಂಚಲನ ಸೃಷ್ಟಿಸುವ ನಿರೀಕ್ಷೆಯಲ್ಲಿ ಹೊಸ ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಭಾರತಕ್ಕೆ ಎಂಟ್ರಿ ನೀಡಿದೆ. ಇದು ಬ್ಲೂಟೂತ್ 5.1 ಅನ್ನು ಬೆಂಬಲಿಸಲಿದೆ.
ಹೌದು, ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಸಾಮಾನ್ಯ ಬಳಕೆಯಲ್ಲಿ ಮೂರು ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದು ನೂರಕ್ಕೂ ಹೆಚ್ಚು ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದೆ. ಇದರೊಂದಿಗೆ ಮೂರು ವಿಭಿನ್ನ UI ಮೆನು ಶೈಲಿಗಳಿಂದ ಆಯ್ಕೆ ಮಾಡುವ ಅವಕಾಶವನ್ನು ಸಹ ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ವಿಶೇಷತೆ
ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ 1.39 ಇಂಚಿನ HD IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ಇದರಲ್ಲಿ ನೀವು 100ಕ್ಕೂ ಹೆಚ್ಚು ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳು ಮತ್ತು ಮೂರು ವಿಭಿನ್ನ UI ಮೆನು ಸ್ಟೈಲ್‌ಗಳಿಂದ ಆಯ್ಕೆ ಮಾಡಬಹುದಾಗಿದೆ.
ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಬ್ಲೂಟೂತ್ 5.1 ಅನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ. ಇದು ತ್ವರಿತ ಡಯಲ್ ಪ್ಯಾಡ್ ಮತ್ತು ಹೆಚ್ಚುವರಿ ಅನುಕೂಲಕ್ಕಾಗಿ ಎಮರ್ಜೆನ್ಸಿ ಕಾಲಿಂಗ್ ಬೆಂಬಲವನ್ನು ಸಹ ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಮಲ್ಟಿ ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ಒದಗಿಸಲಿದ್ದು, IP67 ರೇಟಿಂಗ್‌ನೊಂದಿಗೆ ಬರಲಿದೆ. ಇದರಿಂದ ದೂಳು ಮತ್ತು ನೀರಿನಿಂದ ಸ್ಮಾರ್ಟ್‌ವಾಚ್ ರಕ್ಷಣೆಯನ್ನು ಪಡೆಯಲಿದೆ.
ಇದಲ್ಲದೆ ಎಲ್ಲಾ ಸ್ಮಾರ್ಟ್‌ವಾಚ್ ಮಾದರಿಯಲ್ಲಿಯೇ ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಕೂಡ ಹೆಲ್ತ್ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅದರಂತೆ ಈ ಸ್ಮಾರ್ಟ್‌ವಾಚ್‌ನಲ್ಲಿ ಹೃದಯ ಬಡಿತ, SpO2 ಲೆವೆಲ್, ರಕ್ತದೊತ್ತಡ ಮತ್ತು ಸ್ಲಿಪಿಂಗ್ ಮಾದರಿಗಳನ್ನು ಟ್ರ್ಯಾಕ್ ಮಾಡುವ ಫೀಚರ್ಸ್‌ಗಳನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ ವಾಯ್ಸ್ ಕಮಾಂಡ್‌ಗಳಿಗೆ AI ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಸಹ ನೀಡಲಿದೆ.
ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಹೊಂದಿರುವ ಹೆಚ್ಚುವರಿ ಫೀಚರ್ಸ್‌ಗಳಲ್ಲಿ ಇನ್‌ಬಿಲ್ಟ್ ಗೇಮ್ಸ್, ಸಿಟ್ಟಿಂಗ್ ರಿಮೈಂಡರ್, ಮೆಸೇಜ್ ನೋಟಿಫಿಕೇಶನ್, ವೆದರ್ ಅಪ್ಡೇಟ್, ಫೈಂಡ್ ಮೈ ಫೋನ್, ಕ್ಯಾಲೆಂಡರ್, ಕ್ಯಾಲ್ಕುಲೇಟರ್, ಸ್ಟಾಪ್‌ವಾಚ್ ಮತ್ತು ಕ್ಯಾಮೆರಾ ಕಂಟ್ರೋಲ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಸಾಮಾನ್ಯ ಮೋಡ್‌ನಲ್ಲಿ 5 ದಿನಗಳ ಬಳಕೆ ಮತ್ತು ಬ್ಲೂಟೂತ್ ಕರೆಯನ್ನು ಬಳಸುವಾಗ 2 ದಿನಗಳ ಬಾಳಿಕೆಯನ್ನು ನೀಡಲಿದೆ.
ಬೆಲೆ ಮತ್ತು ಲಭ್ಯತೆ
ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್ ಮೆಟಾಲಿಕ್ ಸ್ಟ್ರಾಪ್ ರೂಪಾಂತರದ ಆಯ್ಕೆಯ ಬೆಲೆ 2,299ರೂ ಹೊಂದಿದೆ. ಆದರೆ ಇದು ಪ್ರಸ್ತುತ ಅಮೆಜಾನ್‌ನಲ್ಲಿ 2,199ರೂ. ಬೆಲೆಗೆ ಮಾರಾಟವಾಗುತ್ತಿದೆ. ಇನ್ನು ಹ್ಯಾಮರ್ ಆಕ್ಟಿವ್ 3.0 ಸ್ಮಾರ್ಟ್‌ವಾಚ್‌ನ ಸಿಲಿಕೋನ್ ಸ್ಟ್ರಾಪ್ ರೂಪಾಂತರದ ಬೆಲೆ 1,999ರೂ.ಆಗಿದೆ.
ಇನ್ನು ಹ್ಯಾಮರ್ ಕಂಪೆನಿ ಇತ್ತೀಚಿಗೆ ಹ್ಯಾಮರ್ ಏಸ್ 3.0 ಸ್ಮಾರ್ಟ್ ವಾಚ್ ಪರಿಚಯಿಸಿತ್ತು. ಇದು 1.85 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿದ್ದು, 500nits ವರೆಗೆ ಬ್ರೈಟ್‌ನೆಸ್ ನೀಡಲಿದೆ. ಇದರಿಂದ ನೀವು ಯಾವುದೇ ಪ್ರಖರತೆಯ ಬೆಳಕಿನಲ್ಲಿದ್ದರೂ ಸ್ಪಷ್ಟವಾಗಿ ವಾಚ್ ಅನ್ನು ವೀಕ್ಷಣೆ ಮಾಡಬಹುದು. ಈ ಸ್ಮಾರ್ಟ್‌ವಾಚ್ ಪ್ರಮುಖವಾಗಿ ಬ್ಲೂಟೂತ್ ಕಾಲ್ ಫೀಚರ್ಸ್ ಪಡೆದುಕೊಂಡಿದ್ದು, ಈ ಮೂಲಕ ವಾಚ್ ಧರಿಸಿರುವವರು ನೇರವಾಗಿ ವಾಚ್ ಮೂಲಕವೇ ಕರೆಗಳನ್ನು ಕಂಟ್ರೋಲ್ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ 50 ಫೋನ್ ನಂಬರ್‌ಗಳನ್ನು ಸೇವ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದ್ದು, ಈ ಮೂಲಕ ಕರೆ ಮಾಡಲು ಅನುಮತಿ ನೀಡಲಾಗಿದೆ.


Click it and Unblock the Notifications








