Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 13 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸತ್ಯ ನಾಡೆಲ್ಲಾ 'ಹುಟ್ಟು ಹಬ್ಬ': ಸಿಇಓ ಬಗೆಗಿನ 9 ಕುತೂಹಲಕಾರಿ ಸಂಗತಿಗಳು!
ಸತ್ಯ ನಾಡೆಲ್ಲಾ'ರವರಿಗೆ "ಹುಟ್ಟು ಹಬ್ಬದ ಶುಭಾಷಯಗಳು". ಹೌದು ಇಂದು ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ 'ರವರ ಹುಟ್ಟು ಹಬ್ಬ. ಅಂದಹಾಗೆ ಸತ್ಯ ನಾಡೆಲ್ಲಾ'ರವರಿಗೆ ಇಂದಿಗೆ (ಆಗಸ್ಟ್ 19) 49 ವರ್ಷ ಆಗಿದೆ. ಬಹುಸಂಖ್ಯಾತರಿಗೆ ತಿಳಿಯದ ವಿಷಯ ಅಂದ್ರೆ ಸತ್ಯ ನಾಡೆಲ್ಲಾ'ರವರು ಭಾರತ ಮೂಲದ ಅಮೆರಿಕನ್ ಬ್ಯುಸಿನೆಸ್ ಕಾರ್ಯನಿರ್ವಾಹಕರು.
ಮೈಕ್ರೋಸಾಫ್ಟ್ ಕಂಪನಿಯ ಪ್ರಖ್ಯಾತ ಸಿಇಓ 'ಸತ್ಯಾ ನಾಡೆಲ್ಲಾ'ರವರು 2014 ರ ಫೆಬ್ರವರಿಯಲ್ಲಿ ಉನ್ನತ ಸ್ಥಾನವೇರಿದರು. 2000 ದಿಂದ 14 ವರ್ಷಗಳ ಕಾಲ ಮೈಕ್ರೋಸಾಫ್ಟ್ ಸಿಇಓ ಆಗಿದ್ದ 'ಸ್ಟೀವ್ ಬಾಲ್ಮರ್'ರವರ ನಂತರ ಸಾಫ್ಟ್‌ವೇರ್ ದೈತ್ಯ ಕಂಪನಿ ಮೈಕ್ರೋಸಾಫ್ಟ್ ಸಿಇಓ ಆಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ಮೂಲದ ಸತ್ಯ ನಾಡೆಲ್ಲಾ'ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರ ಬಗೆಗಿನ 9 ಕುತೂಹಲಕಾರಿ ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇವೆ.
ಮೈಕ್ರೋಸಾಫ್ಟ್ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳು

ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಸತ್ಯ ನಾಡೆಲ್ಲಾ'ರವರ ಶಿಕ್ಷಣ
ಸತ್ಯ ನಾಡೆಲ್ಲಾ'ರವರು ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು 'ಹೈದರಾಬಾದ್ ಖಾಸಗಿ ಶಾಲೆಯಲ್ಲಿ ಮುಗಿಸಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಅಧ್ಯಯನಕ್ಕೆ ಮಣಿಪಾಲ್ ವಿಶ್ವವಿದ್ಯಾಲಯಕ್ಕೆ ತೆರಳಿದರು. 1988 ರಲ್ಲಿ ಪದವಿ ನಂತರ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ತೆರಳಿದರು. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿಯನ್ನು ಸಹ ಪಡೆದಿದ್ದಾರೆ.

1992 ರಲ್ಲಿ ಮೈಕ್ರೋಸಾಫ್ಟ್ ಕಂಪನಿ ಸೇರಿದರು
ನಾಡೆಲ್ಲಾ'ರವರು 1992 ರಲ್ಲಿ ಮೈಕ್ರೋಸಾಫ್ಟ್ ಕಂಪನಿ ಸೇರುವ ಮುನ್ನ 'ಸನ್ ಮೈಕ್ರೋಸಿಸ್ಟಮ್' ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದರು.

ಚೈಲ್ಡ್‌ವುಡ್ ಸ್ವೀಟ್‌ಹಾರ್ಟ್‌ನೊಂದಿಗೆ ಮದುವೆ
ಸತ್ಯ ನಾಡೆಲ್ಲಾ'ರವರು ತಮ್ಮ ಸ್ಕೂಲ್‌ಮೇಟ್ ಅನುಪಮ'ರವರನ್ನು 1992 ರಲ್ಲಿ ಮದುವೆಯಾದರು. ಇದೇ ವರ್ಷದಲ್ಲಿ ನಾಡೆಲ್ಲಾ'ರವರು ಮೈಕ್ರೋಸಾಫ್ಟ್‌ಗೆ ಸೇರಿದರು. ಸತ್ಯ ನಾಡೆಲ್ಲಾ'ರವರಿಗೆ 2 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಸತ್ಯ ನಾಡೆಲ್ಲಾ'ರವರು ವಾಷಿಂಗ್ಟನ್‌ನ ಬೆಲ್ಲೆವ್ಯೂನಲ್ಲಿ ವಾಸಿಸುತ್ತಿದ್ದಾರೆ.

ನಾಡೆಲ್ಲಾ ಕ್ರಿಕೆಟ್ ಅಭಿಮಾನಿ
ನಾಡೆಲ್ಲಾ'ರವರು ಬಹುಸಂಖ್ಯಾತ ಭಾರತೀಯರ ರೀತಿ ಕ್ರಿಕೆಟ್ ಅಭಿಮಾನಿ. ಶಾಲಾದಿನಗಳಲ್ಲಿಯೂ ಸಹ ಕ್ರಿಕೆಟ್ ಪಂದ್ಯದಲ್ಲಿ ಆಟವಾಡುತ್ತಿದ್ದರು. ಇವರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ ಎಂದರೆ ಅಚ್ಚುಮೆಚ್ಚು.

ಕವಿತೆಗಳು ಎಂದರೆ ಅಚ್ಚುಮೆಚ್ಚು
ಸತ್ಯ ನಾಡೆಲ್ಲಾ'ರವರು ಕವನಗಳೆಂದರೆ ಭಾವನಾತ್ಮಕವಾಗಿ ಹೆಚ್ಚು ಇಷ್ಟಪಡುತ್ತಾರೆ. ಮೈಕ್ರೋಸಾಫ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸತ್ಯ ನಾಡೆಲ್ಲಾ'ರವರು ತಮ್ಮ ಹವ್ಯಾಸದಲ್ಲಿ ಕವನಗಳನ್ನು ಓದುವ ಬಗ್ಗೆ ಹೇಳಿದ್ದಾರೆ.

ಹೆಚ್ಚು ಸಂಭಾವನೆ ಪಡೆಯುವ ಸಿಇಓ
ಈಕ್ವಿಲಾರ್ ಪ್ರಕಾರ '200 ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಓ'ಗಳ ಪಟ್ಟಿಯಲ್ಲಿ ಸತ್ಯ ನಾಡೆಲ್ಲಾ'ರವರು ಅತಿ ಹೆಚ್ಚು ಸಂಭಾವನೆ ಪಡೆಯುವ ಟೆಕ್ ಸಿಇಓ ಆಗಿದ್ದರೆ. ಮೈಕ್ರೋಸಾಫ್ಟ್ ಸಿಇಓ ಒಟ್ಟಾರೆ ಪಟ್ಟಿಯಲ್ಲಿ ನಂಬರ್ 4 ನೇ ಸ್ಥಾನದಲ್ಲಿದ್ದು, ಒಂದು ವರ್ಷದ ಒಟ್ಟಾರೆ ಪರಿಹಾರ ಧನ $84,308,755 (5642991528.60 ರೂ) ಪಡೆಯುತ್ತಾರೆ. ಈ ಮೌಲ್ಯದಲ್ಲಿ ಮೂಲ ವೇತನ, ಬೋನಸ್ ಹಣ ಮತ್ತು ವಿಶೇಷ ಸೌಕರ್ಯಕ್ಕೆ ನೀಡುವ ಹಣ ಸೇರಿರುತ್ತದೆ.

ಬಿಲ್ ಗೇಟ್ಸ್ ಆಪ್ತ ಸಲಹೆಗಾರ
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್'ರವರು ಸತ್ಯ ನಾಡೆಲ್ಲಾ'ರವರನ್ನು ತಮ್ಮ ಆಪ್ತ ಸಲಹೆಗಾರರಾಗಿ ನೇಮಿಸಿಕೊಂಡಿದ್ದರು. ಬಿಲ್ ಗೆಟ್ಸ್'ರವರು ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ಏರಿದ ನಂತರ ಸತ್ಯ ನಾಡೆಲ್ಲಾ'ರವರು ಸಿಇಓ ಆದರು.

ಸಿಯಾಟಲ್ ಸೀಹಾಕ್ಸ್ ಅಭಿಮಾನಿ
ಹಲವು ವರದಿಗಳ ಪ್ರಕಾರ ಸತ್ಯ ನಾಡೆಲ್ಲಾ'ರವರು ವಾಷಿಂಗ್ಟನ್ ಮೂಲದ ವೃತ್ತಿಪರ ಅಮೇರಿಕನ್ ಫುಟ್ಬಾಲ್ ಫ್ರ್ಯಾಂಚೈಸ್ ಸಿಯಾಟಲ್ ಸೀಹಾಕ್ಸ್ ಅಭಿಮಾನಿ ಎನ್ನಲಾಗಿದೆ.

ಅವರ ಪುಸ್ತಕದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ
ಸತ್ಯ ನಾಡೆಲ್ಲಾ'ರವರು ಅವರ ಸ್ವಂತ ಪುಸ್ತಕ "ಹಿಟ್ ರಿಫ್ರೆಶ್" ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪುಸ್ತಕವು 3 ಸ್ಟೋರಿಲೈನ್‌ಗಳನ್ನು ಹೊಂದಿದೆ. ನಾಡೆಲ್ಲಾ'ರವರ ವೈಯಕ್ತಿಕ ಪ್ರಯಾಣದ ರೂಪಾಂತರ, ಟೆಕ್ನಾಲಜಿ ಕಂಪನಿಯಲ್ಲಿನ ಬದಲಾವಣೆ ಬಗ್ಗೆ ಈ ಪುಸ್ತಕದಲ್ಲಿ ನೋಡಬಹುದಾಗಿದೆ.

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470