Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸಂಭ್ರಮದ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ?

ಯುವಜನರ ಪಾಲಿನ ಕಲರ್‌ ಫುಲ್‌ ಹಬ್ಬ, ಬಣ್ಣಗಳ ಚೆಲ್ಲಾಟದಲ್ಲಿ ಮೈ ಮರೆಯುವ ಹೋಳಿ ಹಬ್ಬ ಮರಳಿ ಬಂದಿದೆ. ಆದರೆ ಬಣ್ಣದ ಹೋಕುಳಿಯಲ್ಲಿ ಮಿಂದೆಳಲು ನಿಮ್ಮ ಸ್ನೇಹಿತರು, ಪ್ರೀತಿ ಪಾತ್ರರು ದೂರದ ಊರಿನಲ್ಲಿದ್ದಾರೆ. ಹಾಗಂತ ಚಿಂತಿಸಬೇಕಾಗಿಲ್ಲಲ್ಲ. ಯಾಕೆಂದ್ರೆ ಇಂದಿನ ಸೊಶೀಯಲ್‌ ಮೀಡಿಯಾ ಜಮಾನ ಹಬ್ಬದ ಸಂಭ್ರಮಗಳನ್ನು ತನ್ನ ವೇದಿಕೆಯಲ್ಲಿ ಆಚರಿಸುವುದಕ್ಕೆ ಅವಕಾಶ ನೀಡುತ್ತಾ ಬಂದಿವೆ.

ಹೌದು, ವಾಟ್ಸಾಪ್‌ ಎಲ್ಲಾ ಹಬ್ಬ ಹರದಿನಗಳ ಸಂಭ್ರಮಕ್ಕೆ ಸೂಕ್ತವಾದ ವೇದಿಕೆಯಾಗಿದೆ. ದೂರವಿದ್ದರೂ ಕೂಡ ನಿಮ್ಮ ಪ್ರೀತಿ ಪಾತ್ರರೊಡನೆ ಹಬ್ಬದ ಸಂಭ್ರಮವನ್ನು ಆಚರಿಸುವುದಕ್ಕೆ ಅವಕಾಶ ನೀಡುತ್ತಾ ಬಂದಿದೆ. ಅದರಂತೆ ಹೋಳಿ ಹಬ್ಬದ ಸಂಭ್ರಮದಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸಂಭ್ರಮದ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ

ಯಾವುದೇ ಸಂಭ್ರಮದ ವಿಚಾರವಿರಲಿ, ಸಂಕಟದ ವಿಚಾರವಿರಲಿ ಮೊದಲಿಗೆ ಸುದ್ದಿ ಶೇರ್‌ ಆಗುವುದೇ ವಾಟ್ಸಾಪ್‌ ಮೂಲಕ. ಅಷ್ಟರ ಮಟ್ಟಿಗೆ ವಾಟ್ಸಾಪ್‌ ಅಪ್ಲಿಕೇಶನ್‌ ಎಲ್ಲರನ್ನು ಆವರಿಸಿಕೊಂಡಿದೆ. ಅದರಲ್ಲೂ ಹಬ್ಬ ಹರಿದಿನಗಳಲ್ಲಿ ವಾಟ್ಸಾಪ್‌ ತುಂಬೆಲ್ಲಾ ಸಂತೋಷ ವಿಚಾರಗಳ ವಿನಿಮಯ, ಹಬ್ಬದ ಸಂಭ್ರಮದ ಸ್ಟಿಕ್ಕರ್‌ಗಳ ಸುರಿಮಳೆಯನ್ನೇ ಕಾಣಬಹುದು. ಇದೀಗ ನೀವು ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಕಲರ್‌ಫುಲ್‌ ಆಗಿ ಆಚರಿಸಬಹುದಾಗಿದೆ. ಇದಕ್ಕಾಗಿ ಹಲವು ಹೊಸ ಸ್ಟಿಕ್ಕರ್‌ಗಳನ್ನು ಕೂಡ ವಾಟ್ಸಾಪ್‌ ಪರಿಚಯಿಸಿದೆ.

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸಂಭ್ರಮದ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಮೂಲಕ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.
ಹಂತ:2 ಎಮೋಜಿ ಬಟನ್ ಮೇಲೆ ಟ್ಯಾಪ್ ಮಾಡಿ. ನಂತರ, ಕೆಳಭಾಗದಲ್ಲಿರುವ ಸ್ಟಿಕ್ಕರ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ನಿಮ್ಮಲ್ಲಿ ಸ್ಟಿಕ್ಕರ್‌ಗಳನ್ನು ನೋಡಲು '+' ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:4 ನಿಮ್ಮ ವಾಟ್ಸಾಪ್‌ ಚಾಟ್‌ನಲ್ಲಿ ಹೋಳಿ ಸ್ಟಿಕ್ಕರ್‌ಗಳನ್ನು ಸೇರ್ಪಡೆ ಮಾಡಲು ನೀವು ಥರ್ಡ್‌ ಪಾರ್ಟಿಗಳ ಮೂಲಕ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಬೇಕು.
ಹಂತ:5 ಇದೀಗ '+' ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ 'ಸೇರಿಸು' ಮೇಲೆ ಟ್ಯಾಪ್ ಮಾಡಿ.
ಹಂತ:6 ನೀವು 'ಸೇರಿಸು' ಅನ್ನು ಟ್ಯಾಪ್ ಮಾಡಿದರೆ, ಸ್ಟಿಕ್ಕರ್ ಪ್ಯಾಕ್ ಅನ್ನು ನಿಮ್ಮ ವಾಟ್ಸಾಪ್‌ನ ಸ್ಟಿಕ್ಕರ್ ವಿಭಾಗಕ್ಕೆ ಸೇರಿಸಬೇಕಾಗುತ್ತದೆ.
ಹಂತ:7 ನಂತರ ವಾಟ್ಸಾಪ್‌ ಅನ್ನು ತೆರೆಯಿರಿ ನೀವು ಸೇರ್ಪಡೆ ಮಾಡಿದ ಸ್ಟಿಕ್ಕರ್ ಪ್ಯಾಕ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮಗೆ ಬೇಕಾದ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸಂಭ್ರಮದ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ

ಐಫೋನ್‌ನಲ್ಲಿ ವಾಟ್ಸಾಪ್‌ ಹೋಳಿ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಐಫೋನ್‌ನಲ್ಲಿ ಫೋಟೋಸ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದರಲ್ಲಿ ನೀವು ಫೋಟೋವನ್ನು ಆಯ್ಕೆಮಾಡಿ ಮತ್ತು ಅದರ ಬ್ಯಾಕ್‌ಗ್ರೌಂಡ್‌ ಕಂಟೆಂಟ್‌ ಬದಲಾಯಿಸಲು ಲಾಂಗ್‌ ಪ್ರೆಸ್‌ ಮಾಡಿ.
ಹಂತ:3 ಇದೀಗ ನೀವು ಕಸ್ಟಮೈಸ್‌ ಮಾಡಿದ ಸ್ಟಿಕ್ಕರ್ ಅನ್ನು ಕಳುಹಿಸಲು ಬಯಸುವ ವಾಟ್ಸಾಪ್‌ ಚಾಟ್‌ಗೆ ಕಂಟೆಂಟ್‌ ಎಳೆಯಿರಿ.
ಹಂತ:4 ಫೋಟೋವನ್ನು ಅನ್ನು ಡ್ರ್ಯಾಗ್‌ ಮಾಡಿದ ನಂತರ, ಕಂಟೆಂಟ್‌ ಅನ್ನು ಸ್ಟಿಕ್ಕರ್‌ ಆಗಿ ಕನ್ವರ್ಟ್‌ ಮಾಡಲು ವಾಟ್ಸಾಪ್‌ ನಿಮ್ಮನ್ನು ಕೇಳಲಿದೆ.
ಹಂತ:5 ನೀವು ಸ್ಟಿಕ್ಕರ್ ಅನ್ನು ರಚಿಸಿದ ನಂತರ, ಅದನ್ನು ನಿಮ್ಮ WhatsApp ಸ್ಟಿಕ್ಕರ್ ಸಂಗ್ರಹಣೆಯಲ್ಲಿ ಉಳಿಸಲಾಗುತ್ತದೆ. ನಂತರ ನೀವು ಇತರ ಚಾಟ್‌ಗಳಲ್ಲಿ ಅದೇ ಸ್ಟಿಕ್ಕರ್‌ಗಳನ್ನು ಬಳಸಬಹುದು.

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ ಸಂಭ್ರಮದ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ

ವಾಟ್ಸಾಪ್‌ನಲ್ಲಿ ಹೋಳಿ ಹಬ್ಬದ GIF ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ವಾಟ್ಸಾಪ್‌ ತೆರೆಯಿರಿ ಮತ್ತು ನೀವು GIF ಅನ್ನು ಕಳುಹಿಸಲು ಬಯಸುವ ಚಾಟ್‌ಗೆ ಹೋಗಿ.
ಹಂತ:2 ಈಗ ಅಟ್ಯಾಚ್ಮೆಂಟ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ವೀಡಿಯೊ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ನೀವು ಗ್ಯಾಲರಿಯಿಂದ GIF ಆಗಿ ಪರಿವರ್ತಿಸಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
ಹಂತ:4 ವಾಟ್ಸಾಪ್‌ನಲ್ಲಿ ವೀಡಿಯೊ ಪ್ರಿವ್ಯೂ ವಿಂಡೋ, GIF ಗೆ ವೀಡಿಯೊ ಆಯ್ಕೆಯನ್ನು ಟಾಗಲ್ ಮಾಡಿ.
ಹಂತ:5 ಈ ಆಯ್ಕೆಯು ನಿಮ್ಮ ವೀಡಿಯೊವನ್ನು GIF ಆಗಿ ಪರಿವರ್ತಿಸುತ್ತದೆ. ಚಾಟ್‌ನಲ್ಲಿ ಕಳುಹಿಸಲು GIF ಅನ್ನು ಟ್ಯಾಪ್ ಮಾಡಿ.

Best Mobiles in India

English summary
Share the festive greetings over WhatsApp with messages and add your personal touch with GIFs and stickers. know more deatails in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+