ಭಾರತದ ಮಾರುಕಟ್ಟೆಯಲ್ಲಿ ಹರ್ಮನ್ ಕಾರ್ಡನ್ ಸೌಂಡ್ ಸ್ಟಿಕ್ಸ್ 4 ಲಾಂಚ್‌!

|

ಯುಎಸ್ ಮೂಲದ ಹರ್ಮನ್ ಕಾರ್ಡನ್ ಕಂಪೆನಿ ತನ್ನ ವೈವಿಧ್ಯಮಯ ಸೌಂಡ್‌ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಸ್ಪೀಕರ್‌ಗಳನ್ನು ಪರಿಚಯಿಸಿರುವ ಹರ್ಮನ್‌ ಕಾರ್ಡನ್‌ ಇದೀಗ ಹೊಸ ಸೌಂಡ್‌ಸ್ಟಿಕ್ಸ್ 4 ಬ್ಲೂಟೂತ್ ಸ್ಪೀಕರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಪೀಕರ್‌ ಸಾಂಪ್ರದಾಯಿಕ ಪಾರದರ್ಶಕ ಗುಮ್ಮಟ-ಆಕಾರದ ಸಬ್ ವೂಫರ್‌ ಅನ್ನು ಹೊಂದಿದ್ದು, ಐಕಾನಿಕ್ ಸೌಂಡ್ ಸ್ಟಿಕ್ಸ್ ವಿನ್ಯಾಸವನ್ನು ಹೊಂದಿದೆ.. ಇದಲ್ಲದೆ ಹರ್ಮನ್ ಕಾರ್ಡನ್ ಸೌಂಡ್ ಸ್ಟಿಕ್ಸ್ 4 ಅನ್ನು ಅರಳುತ್ತಿರುವ ಬಾಸ್‌ನೊಂದಿಗೆ ಕ್ಲೀನ್ ಟ್ರಿಪಲ್‌ ಟೆರಿಬಲ್‌ ಅನ್ನು ನೀಡಲಾಗಿದೆ.

ಹರ್ಮನ್ ಕಾರ್ಡನ್

ಹೌದು, ಹರ್ಮನ್ ಕಾರ್ಡನ್ ಸಂಸ್ಥೆ ತನ್ನ ಹೊಸ ಸೌಂಡ್‌ಸ್ಟಿಕ್ಸ್ 4 ಬ್ಲೂಟೂತ್ ಸ್ಪೀಕರ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಸೌಂಡ್‌ಸ್ಪೀಕ್ಸ್‌ 4 ಗುಮ್ಮಟ ಮದರಿಯು ಸಬ್‌ವೂಪರ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಪೀಕರ್‌ಗಳು ಬ್ಲುಟೂತ್‌ 4.2 ಅನ್ನು ಬೆಂಬಲಿಸಲಿದೆ. ಇದು ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಪೀಕರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹರ್ಮನ್ ಕಾರ್ಡನ್

ಹರ್ಮನ್ ಕಾರ್ಡನ್ ಸೌಂಡ್‌ಸ್ಟಿಕ್ಸ್ 4 ಒಂದೇ ಪಾರದರ್ಶಕ ವಸ್ತುಗಳಿಂದ ತಯಾರಿಸಿದ ಸ್ಪೀಕರ್‌ ಆಗಿದೆ. ಇದು ಪಾರದರ್ಶಕ ಸಬ್ ವೂಫರ್ ಮತ್ತು ಎರಡು ಲಂಬವಾಗಿ ನಿಂತಿರುವ ಸ್ಯಾಟಲೈಟ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಗುಮ್ಮಟ ಸಬ್ ವೂಫರ್ 100W ನ ಔಟ್‌ಪುಟ್‌ ನೀಡಿದರೆ, ಸ್ಯಾಟ್‌ಲೈಟ್‌ ಸ್ಪೀಕರ್‌ಗಳು ವೈಬ್ರಾಂಟ್, ರೂಮ್ ಫಿಲಿಂಗ್‌ ಸೌಂಡ್‌ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಪ್ರೀಮಿಯಂ ಸ್ಪೀಕರ್‌ಗಳು ಬ್ಲೂಟೂತ್ 4.2 ಮತ್ತು ವೈ-ಫೈ ಅನ್ನು ಬೆಂಬಲಿಸಲಿದೆ.

ಹರ್ಮನ್ ಕಾರ್ಡನ್

ತನ್ನ ಕನಿಷ್ಠ ವಿನ್ಯಾಸಕ್ಕೆ ಅಂಟಿಕೊಂಡಿರುವ ಹರ್ಮನ್ ಕಾರ್ಡನ್ ಸೌಂಡ್‌ಸ್ಟಿಕ್ಸ್ 4 ಪೆಟ್ಟಿಗೆಯಲ್ಲಿ ಕೇವಲ ಪವರ್ ಕೇಬಲ್‌ನೊಂದಿಗೆ ಬರುತ್ತದೆ. ಇನ್ನು ಈ ಸ್ಪೀಕರ್‌ಗಳು ಗುಣಮಟ್ಟದ ವಿನ್ಯಾಸವನ್ನು ಹೊಂದಿರುವುದರಿಂದ ಪಾರ್ಟಿ, ಸಮಾರಂಭಗಳಿಗೆ ಸೂಕ್ತವಾಗಿರಲಿವೆ. ಸದ್ಯ ಯುವ ಜನತೆಯ ಆಶಯಕ್ಕೆ ತಕ್ಕಂತೆ ಈ ಸೌಂಡ್‌ಸ್ಪೀಕರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಹರ್ಮನ್‌ ಕಾರ್ಡನ್‌ ಸಂಸ್ಥೆ ಕಳೆದ ವರ್ಷ ಆಗಸ್ಟ್‌ನಲ್ಲಿ, ತನ್ನ ಫ್ಲೈ ಸರಣಿಯ ಹೆಡ್‌ಸೆಟ್‌ಗಳನ್ನು ಸಹ ಬಿಡುಗಡೆ ಮಾಡಿತ್ತು.

ಹರ್ಮನ್ ಕಾರ್ಡನ್

ಸದ್ಯ ಹೊಸ ಹರ್ಮನ್ ಕಾರ್ಡನ್ ಸೌಂಡ್‌ಸ್ಟಿಕ್ಸ್ 4 ಸ್ಪೀಕರ್‌ಗಳ ಬೆಲೆ ಭಾರತದಲ್ಲಿ 25,999 ರೂ. ಆಗಿದೆ. ಇದು ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳೊಂದಿಗೆ ಪಾರದರ್ಶಕ ಬಾಡಿ ವಿನ್ಯಾಸದಲ್ಲಿ ಲಭ್ಯವಾಗಲಿವೆ. ಇನ್ನು ಈ ಸೌಂಡ್‌ಸ್ಟಿಕ್ಸ್ 4 ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಮತ್ತು ಅಧಿಕೃತ ಹರ್ಮನ್ ಕಾರ್ಡನ್ ವೆಬ್‌ಸೈಟ್‌ನಲ್ಲಿ ಖರೀದಿಸಲು ಲಭ್ಯವಿದೆ.

Best Mobiles in India

English summary
Harman Kardon SoundSticks 4 Bluetooth Speakers Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X