ರಾಜ್ಯದಲ್ಲಿ 'ರಾತ್ರಿ ಫೋನ್ ಗೀಳು' ಎಷ್ಟಿದೆ ಗೊತ್ತಾ?..ಶಾಕಿಂಗ್ ರಿಪೋರ್ಟ್!

|

ಕರ್ನಾಟಕ ರಾಜ್ಯದಲ್ಲಿ ಶೇ.92 ಮಂದಿ ರಾತ್ರಿ ಮಲಗುವ ವೇಳೆ ಫೋನ್, ಲ್ಯಾಪ್​ಟಾಪ್ ಬಳಸುತ್ತಿರುವುದರಿಂದ ನಿದ್ರಾಹೀನತೆ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಶೇ.25 ಜನ ದಿನವೊಂದಕ್ಕೆ 7 ಗಂಟೆಗಳಿಗಿಂತಲೂ ಕಡಿಮೆ ಕಾಲ ನಿದ್ರಿಸುತ್ತಿದ್ದಾರೆ. ಇನ್ನು ಶೇ.11 ಜನತೆ ಪ್ರತಿ ದಿನ ಬೆಳಗ್ಗೆ ಕೆಲಸದದ ಬಹುತೇಕ ನಿದ್ದೆ ಮಂಪರಿನಲ್ಲಿರುತ್ತಾರೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.

ಹೌದು, ರಾತ್ರಿ ವೇಳೆ ಸ್ಮಾರ್ಟ್‌ಫೋನಿನಿಂದ ನಿದ್ದೆ ಬರದಿರಬಹುದು ಅಥವಾ ನಿದ್ದೆ ಬರದೇ ಸ್ಮಾರ್ಟ್‌ಪೋನ್ ಬಳಸುವವರಾಗಿರಬಹುದು. ಆದರೆ, ಮೊಬೈಲ್ ಫೋನ್ ಗೀಳು ಜನರನ್ನೀಗ ಮತ್ತಷ್ಟು ನಿತ್ರಾಣವನ್ನಾಗಿಸುತ್ತಿದೆ. ರಾತ್ರಿವೇಳೆ ಅತಿಯಾಗಿ ಫೋನ್ ಹಾಗೂ ಲ್ಯಾಪ್​ಟಾಪ್ ಬಳಸುವವರು ಕಣ್ಣಿನ ಬೇನೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ 'ರಾತ್ರಿ ಫೋನ್ ಗೀಳು' ಎಷ್ಟಿದೆ ಗೊತ್ತಾ?..ಶಾಕಿಂಗ್ ರಿಪೋರ್ಟ್!

ಮೊಬೈಲ್ ಸೇರಿ ವಿವಿಧ ಆಧುನಿಕ ಸಾಧನ ಬಳಕೆ ಕಣ್ಣಿನ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದ್ದು, ಇದು ಮಾನಸಿಕ ಒತ್ತಡವನ್ನು ಉಂಟು ಮಾಡುತ್ತಿವೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಅವರು ಹೇಳಿದ್ದಾರೆ. ಹಾಗಾದರೆ, ಏನಿದು ಶಾಕಿಂಗ್ ವರದಿ?, ರಾಜ್ಯದಲ್ಲಿ ಈ ಸಮಸ್ಯೆ ಪರಿಣಾಮ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ರಾಜ್ಯದಲ್ಲಿ ಫೋನ್ ಗೀಳು ಹಾವಳಿ!

ರಾಜ್ಯದಲ್ಲಿ ಫೋನ್ ಗೀಳು ಹಾವಳಿ!

ರಾಜ್ಯದಲ್ಲಿ 18ರಿಂದ 29ವರ್ಷದ ವಯೋಮಾನದವರು ಅಬಳಕೆಯಿಂದ ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಶೇ. 20 ಮಂದಿ ಇದೀಗ ನಿದ್ರೆ ಸಮಸ್ಯೆ ಎದುರಿಸುತ್ತಿರುವುದು ಖಾಸಗಿ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಅದೇ ರೀತಿ, ​ಫೋನಿನಿಂದ ಉಂಟಾಗುವ ರೇಡಿಯೇಷನ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ.

ಜನರಲ್ಲಿ ದೃಷ್ಟಿ ಸಮಸ್ಯೆ ಹೆಚ್ಚುತ್ತಿದೆ.

ಜನರಲ್ಲಿ ದೃಷ್ಟಿ ಸಮಸ್ಯೆ ಹೆಚ್ಚುತ್ತಿದೆ.

ರಾತ್ರಿವೇಳೆ ಹತ್ತಿರದಿಂದ ಮೊಬೈಲ್ ವೀಕ್ಷಿಸುವುದರಿಂದ ಅದರ ನೀಲಿ ಬೆಳಕು ಕಣ್ಣಿಗೆ ನೇರವಾಗಿ ತಾಕಿ ಹಂತ ಹಂತವಾಗಿ ದೃಷ್ಟಿ ಸಮಸ್ಯೆ ಆವರಿಸುತ್ತದೆ. ಮೊಬೈಲ್‌ನಿಂದಾಗಿ ಶೇ.20 ಮಂದಿಗೆ ನಿದ್ರಾ ಸಮಸ್ಯೆ ಎದುರಿಸುತ್ತಿದ್ದಾರೆ.ಲ್ಯಾಪ್​ಟಾಪ್ ಬಳಸುವವರು ಕಣ್ಣಿನ ಬೇನೆ ಜತೆಯಲ್ಲೇ ನಿದ್ರೆಯನ್ನೂ ಕಳೆದುಕೊಳ್ಳುತ್ತಿದ್ದಾರೆಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಡಾ. ಸುಜಾತಾ ರಾಥೋಡ್ ಹೇಳಿದ್ದೇನು?

ಡಾ. ಸುಜಾತಾ ರಾಥೋಡ್ ಹೇಳಿದ್ದೇನು?

ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗವಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗುತ್ತದೆ. ಮೊಬೈಲ್ ಸೇರಿ ಆಧುನಿಕ ಸಾಧನಗಳು ಕಣ್ಣಿನ ಸಮಸ್ಯೆಗೆ ದಾರಿ ಮಾಡಿಕೊಡುತ್ತಿವೆ. ಮಾನಸಿಕ ಒತ್ತಡ ಉಂಟು ಮಾಡಲಿದೆ. ಇದಕ್ಕೆ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಆಗಮಿಸುವ ಸಂಖ್ಯೆ ಏರಿಕೆಯೇ ಉದಾಹರಣೆ ಎಂದು ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ಆಗಮಿಸುವವರ ಸಂಖ್ಯೆ ಏರಿಕೆ

ಚಿಕಿತ್ಸೆಗಾಗಿ ಆಗಮಿಸುವವರ ಸಂಖ್ಯೆ ಏರಿಕೆ

ನಿದ್ರೆ ಬಾರದೆ ರಾತ್ರಿಹೊತ್ತು ಹಾಸಿಗೆಯಲ್ಲೇ ಹೊರಳಾಡುವ ಬಹುತೇಕರು ಸಮಯ ಕಳೆಯಲು ಸ್ಮಾರ್ಟ್​ಫೋನ್, ಲ್ಯಾಪ್​ಟ್ಯಾಪ್ ಮೊರೆ ಹೋಗುತ್ತಿರುವುದು ಅವರ ಕಣ್ಣಿನ ಆರೋಗ್ಯವನ್ನು ಕೆಡಿಸುತ್ತಿದೆ ಬೆಂಗಳೂರಿನ ನಾರಾಯಣ ನೇತ್ರಾಲಯ, ಮಿಂಟೋ, ಅಗರವಾಲ್ ಸೇರಿ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಆಗಮಿಸುವವರ ಸಂಖ್ಯೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಮೊಬೈಲ್ ಗೀಳಿನಿಂದ ಏನೇನು ಸಮಸ್ಯೆ?

ಮೊಬೈಲ್ ಗೀಳಿನಿಂದ ಏನೇನು ಸಮಸ್ಯೆ?

ರಾತ್ರಿಹೊತ್ತು ಅತಿಯಾಗಿ ಸ್ಮಾರ್ಟ್​ಫೋನ್ ಅಥವಾ ಯಾವುದೇ ಡಿಜಿಟಲ್ ಸಾಧನದಿಂದ ಆಗುತ್ತಿರುವ ಪರಿಣಾಮಗಳು ಹಲವಿವೆ. ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿರುವುದರಿಂದ ಕಣ್ಣಿಗೆ ಆಯಾಸ, ನಿದ್ರಾಹೀನತೆ, ದೃಷ್ಟಿ ದೋಷ, ಬೆನ್ನು ಹುರಿ ಸಮಸ್ಯೆ, ಕಣ್ಣು ಬೇನೆ ಹೆಚ್ಚುತ್ತಿದೆ. ಇವುಗಳು ಮಾನವನ ಆರೋಗ್ಯ ಮತ್ತಷ್ಟು ಹದಗೆಡಲು ಪ್ರಮುಖ ಕಾರಣಗಳಾಗಿವೆ.

ಸಮೀಕ್ಷೆಯಲ್ಲಿ ಹೇಳುವುದೇನು?

ಸಮೀಕ್ಷೆಯಲ್ಲಿ ಹೇಳುವುದೇನು?

​ಫೋನ್, ಲ್ಯಾಪ್​ಟಾಪ್ ಬಳಕೆಯಿಂದ ನಿದ್ರೆ ಸಮಸ್ಯೆ ಕಾಡುತ್ತಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ನಿದ್ರಾ ಆರೋಗ್ಯ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ವೇಕ್​ಫಿಟ್.ಕೊ ಸಂಸ್ಥೆ ಸಹಸಂಸ್ಥಾಪಕ ಅಂಕಿತ್ ಗರ್ಗ್ ಅವರು ಹೇಳಿದ್ದಾರೆ. ರಾತ್ರಿ ಮೊಬೈಲ್ ಬಳಕೆ ಈಗ ಎಲ್ಲೆಡೆ ಸಾಮಾನ್ಯ ಎಂಬಂತಾಗಿದೆ. ಆದರೆ,ಅದರ ಪರಿಣಾಮ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
Your Tablet and Smartphone Is Ruining Your Sleep. Harmful Effects of Using Your Phone Before You Sleep. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X