2020ಕ್ಕೆ ಬರಲಿವೆ ಹಾರ್ಮನಿ ಓಎಸ್‌ ಒಳಗೊಂಡ ಹುವಾವೇ ಸ್ಮಾರ್ಟ್‌ಫೋನ್‌ಗಳು!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದಿನನಿತ್ಯ ಒಂದಲ್ಲ ಒಂದು ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಆಗುತ್ತೆ. ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸೋ ಮೂಲಕ ಬಳಕೆದಾರರ ಗಮನ ಸೆಳೆಯೋ ಪ್ರಯತ್ನ ಮಾಡುತ್ತವೇ. ಅಷ್ಟೇ ಅಲ್ಲ ನೂತನ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಸ್ಮಾರ್ಟ್‌ಫೋನ್‌ಗಳನ್ನ ಇನ್ನಷ್ಟು ಸ್ಮಾರ್ಟ್‌ ಮಾಡ್ತೀವೆ. ಸದ್ಯ ಈ ನಿಟ್ಟಿನಲ್ಲಿ ಹುವಾವೇ ಸ್ಮಾರ್ಟ್‌ಫೋನ್‌ ಕಂಪೆನಿ ಕೂಡ ಹೆಜ್ಜೆ ಇಟ್ಟಿದ್ದು ಮುಂದಿನ ವರ್ಷದಿಂದ, ಹುವಾವೇ ಸ್ಮಾರ್ಟ್‌ಫೋನ್‌ಗಳಲ್ಲಿ ಹಾರ್ಮನಿ ಓಎಸ್ ಅನ್ನ ಬಳಸಲಿದೆ ಎಂದು ಹೇಳಿಕೊಂಡಿದೆ.

ಸ್ಮಾರ್ಟ್‌ಫೋನ್‌

ಹೌದು, ಇತ್ತೀಚಿಗೆ ನಡೆದ ಸ್ಮಾರ್ಟ್‌ಫೋನ್‌ ಕಂಪೆನಿಯ ಸಮಾವೇಶದಲ್ಲಿ ಹುವಾವೇ ಅಧ್ಯಕ್ಷ ಡಾ. ವಾಂಗ್ ಚೆಂಗ್ಲು ಹುವಾವೇ ಸ್ಮಾರ್ಟ್‌ಫೋನ್‌ಗಳಲ್ಲಿ ಹಾರ್ಮನಿ ಓಎಸ್ ಅನ್ನ ಬಳಸಲಿದೆ ಅನ್ನೊದನ್ನ ಬಹಿರಂಗಪಡಿಸಿದ್ದಾರೆ. ಹಾಗಂತ ಹುವಾವೇ ಆಂಡ್ರಾಯ್ಡ್ ಓಎಸ್ ಅನ್ನು ಬದಲಿಸುವುದಿಲ್ಲ ಬದಲಿಗೆ ಆಂಡ್ರಾಯ್ಡ್ ಆಯ್ಕೆಯ ಮೇಲೆ ಹಾರ್ಮನಿ ಒಎಸ್ ಆಯ್ಕೆಯು ಸಹ ಇರಲಿದೆ. ಹಾರ್ಮನಿ ಓಎಸ್ ಆಪರೇಟಿಂಗ್ ಸಿಸ್ಟಮ್‌ಗೆ ಸಂಬಂಧಿಸಿದಂತೆ ಕೆಲ ಆಸಕ್ತಿಕರ ವಿಚಾರಗಳನ್ನ ಕಂಪೆನಿ ತಿಳಿಸಕೊಟ್ಟಿದೆ.

ಹುವಾವೇ

ಇನ್ನು ಹುವಾವೇ ಕಂಪೆನಿ ಪ್ರಕಾರ ಹಾರ್ಮನಿ ಓಎಸ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ಮುಂದಿನ ವರ್ಷ ಆಗಸ್ಟ್‌ ವೇಳೆಗೆ ಹಾರ್ಮನಿ ಓಎಸ್ ಅಧಿಕೃತವಾಗಿ ಸಾರ್ವಜನಿಕರಿಗೆ ಸಂಪೂರ್ಣ ಮುಕ್ತವಾಗಿ ದೊರೆಯಲಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಹಾರ್ಮನಿ ಓಎಸ್ ಕೋಡ್ ಕಡಿಮೆ ಸಂಖ್ಯೆಯ ಸಾಲುಗಳನ್ನು ಮತ್ತು ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದು 2020 ರ ಅಂತ್ಯದ ವೇಳೆಗೆ ಹಾರ್ಮನಿಓಎಸ್ ವಿಶ್ವದ ಐದನೇ ಅತ್ಯಂತ ಜನಪ್ರಿಯ ಸ್ಮಾರ್ಟ್ ಡಿಜಿಟಲ್ ಟರ್ಮಿನಲ್ ಆಪರೇಟಿಂಗ್ ಸಿಸ್ಟಮ್ ಆಗಲಿದೆ ಎಂದು ಹೇಳಿದೆ.

ಹಾರ್ಮನಿ

ಸದ್ಯ ಮುಂದಿನ ವರ್ಷ ಹುವಾವೇ ಪಿ 40 ಸ್ಮಾರ್ಟ್‌ಫೋನ್‌ ಹಾರ್ಮನಿ ಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗ್ತಿದೆ. ಆದರೆ ವಾಸ್ತವವಾಗಿ ಹುವಾವೇಯ ಪ್ರಮುಖ ಸಾಧನಗಳಲ್ಲಿ ಹಾರ್ಮನಿಓಎಸ್ ಕಾಣಿಸಿಕೊಳ್ಳುತ್ತದೆಯೇ ಅನ್ನೊ ಪ್ರಶ್ನೆ ಕೂಡ ಇದೆ. ಈಗಾಗ್ಲೆ ಈ ಆಪರೇಟಿಂಗ್‌ ಸಿಸ್ಟಮ್‌ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಅನ್ನೊದು ಎಲ್ಲರಿಗೂ ಗೊತ್ತಿರುವಂತಹದ್ದೆ .ಆದ್ದರಿಂದ ಹುವಾವೇ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಡ್ಯುಯಲ್ ಬೂಟ್ ಮಾಡಬಹುದು ಎನ್ನಲಾಗಿದೆ.

ಸಂಪೂರ್ಣ

ಹಾರ್ಮನಿ ಓಎಸ್ ಅನ್ನು ಸ್ಮಾರ್ಟ್‌ಫೋನ್‌ಗಳಿಗೆ ಶಕ್ತಿ ತುಂಬುವ ಸಾಮರ್ಥ್ಯವನ್ನು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಪೂರ್ಣ ಓಎಸ್ ಆಗಿ ಅಭಿವೃದ್ಧಿಪಡಿಸುವ ಯೋಜನೆ ಇದ್ದರೂ, ಕಂಪನಿಯು ಆಂಡ್ರಾಯ್ಡ್‌ನ ಜೊತೆಯಲ್ಲಿಯೆ ಬಳಸಲು ಆದ್ಯತೆ ಮುಂದುವರಿಸಲು ಕಂಪನಿಯು ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದಿನ ಯುಎಸ್ ವ್ಯಾಪಾರ ನಿಷೇಧದ ನಿಯಮಗಳ ಪ್ರಕಾರ, ಗೂಗಲ್ ಆಂಡ್ರಾಯ್ಡ್ ಪರವಾನಗಿಯನ್ನು ಹುವಾವೇಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿತ್ತು.

ಕೋಡ್

ಈ ನಿರ್ಬಂಧದ ಪ್ರಕಾರ ಹುವಾವೇ ಸ್ಮಾರ್ಟ್‌ಫೋನ್‌ಗಳು ಓಪನ್-ಸೋರ್ಸ್ ಕೋಡ್ ಅನ್ನು ಬಳಸಬಹುದಾಗಿತ್ತು, ಆದರೆ ಎಲ್ಲ ಪ್ರಮುಖ ಪ್ಲೇ ಸ್ಟೋರ್ ಮತ್ತು ಗೂಗಲ್ ಅಪ್ಲಿಕೇಶನ್‌ಗಳಿಗೆ ಹುವಾವೇ ಸ್ಮಾರ್ಟ್‌ಫೋನ್‌ ಆಪ್ಲೀಕೇಶನ್‌ಗಳಿಂದ ಪ್ರವೇಶವಿರಲಿಲ್ಲ.ಇದೇ ಕಾರಣಕ್ಕೆ ಹುವಾವೇ ಹಾರ್ಮನಿಒಎಸ್ ಸ್ಮಾರ್ಟ್‌ಫೋನ್‌ ತರುವ ಆಲೋಚನೆಯಲ್ಲಿದೆ. ಹುವಾವೇ ಕಂಪನಿಯು ಈಗಾಗಲೇ ಹಾನರ್ ವಿಷನ್ ಟಿವಿ ಸರಣಿಯಲ್ಲಿ "ಹಾರ್ಮನಿ ಓಎಸ್" ಅನ್ನು ಪ್ರಾರಂಭಿಸಿದ್ದು, ಇದನ್ನ ಇದೀಗ ಹುವಾವೇ ತನ್ನ ಹೊಸ ಆವೃತ್ತಿಯಾದ ಪಿ 40 ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ ಬದಲಿಗೆ "ಹಾರ್ಮನಿ ಓಎಸ್" ಅನ್ನು ಅಳವಡಿಸಲಿದೆ

Most Read Articles
Best Mobiles in India

English summary
In Huawei‘s recent conference, Huawei President Dr. Wang Chenglu revealed that starting next year, HarmonyOS will finally be making its long awaited appearance on smartphones. Dr. Wang emphasized that Harmony won’t be replacing Android. On top of that, Android is still Huawei’s preferred OS of choice and remain as the basis for most of their devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more