Just In
Don't Miss
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಫೇಸ್‌ಬುಕ್' ಮೂಲಕ ಹುಡುಗಿರನ್ನು ಪಟಾಯಿಸಲು ಬರುತ್ತಿದೆ ಹೊಸ ಆಯ್ಕೆ!!
ಡೇಟಿಂಗ್ ಆಪ್‌ಗಳ ಬೆಳವಣಿಗೆಯನ್ನು ಸಹಿಸಿಕೊಳ್ಳದ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ 'ಸೀಕ್ರೆಟ್ ಕ್ರಶ್' ಎಂಬ ಆಯ್ಕೆಯನ್ನು ತರುತ್ತಿದೆ. ನೀವು ಫೇಸ್ಬುಕ್ನಲ್ಲಿ ನೋಡಿದ ಯಾವುದೇ ವ್ಯಕ್ತಿ ನಿಮಗೆ ಇಷ್ಟವಾದರೆ, ಅವರಿಗೆ 'ಸೀಕ್ರೆಟ್ ಕ್ರಶ್' ಆಯ್ಕೆಯ ಮೂಲಕ ರಿಕ್ವೆಸ್ಟ್ ಕಳುಹಿಸಬಹುದು. ನಂತರ ಅವರು ನಿಮ್ಮ ರಿಕ್ವೆಸ್ಟ್ಗೆ ಸ್ಪಂದಿಸಿದರೆ ' ಪ್ರೈವೇಟ್ ಕ್ರಶ್ ಲಿಸ್ಟ್'ನಲ್ಲಿ ಗೋಚರವಾಗುತ್ತದೆ. ಈ ಮೂಲಕ ನಿಮ್ಮಿಷ್ಟದವರೊಂದಿಗೆ ನೀವು ಡೇಟಿಂಗ್ ಮಾಡಬಹುದು.
ಹೌದು, ವಿಶ್ಬಮಟ್ಟದಲ್ಲಿ ಯುವಸಮೂಹ ಡೇಟಿಂಗ್ ಆಪ್‌ಗಳತ್ತ ಹೆಚ್ಚು ಆಸಕ್ತಿ ಹೊಂದುತ್ತಿದ್ದು, ಈ ದೃಷ್ಠಿಕೋನದಿಂದ ಫೇಸ್‌ಬುಕ್ ಡೇಟಿಂಗ್ ಪ್ರಿಯ ಬಳಕೆದಾರರನ್ನು ಆಕರ್ಷಿಸಲು ಡೇಟಿಂಗ್ ಫೀಚರ್ ಅನ್ನು ಪರಿಚಯಿಸಲು ಸಜ್ಜಾಗಿದೆ. ನೇರವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಇರುವವರು ಡೇಟಿಂಗ್ ವೆಬ್‌ಸೈಟ್‌ಗಳಲ್ಲಿ ಇರುವಂತೆಯೇ ಫೇಸ್‌ಬುಕ್ ಮೂಲಕ ತಾವು ಕೂಡ ಪ್ರೇಮ ನಿವೇದನೆ ಮಾಡಿಕೊಳ್ಳಬಹುದಾದ ಒಂದು ವಿಶೇಷ ಆಯ್ಕೆ ಇದಾಗಿದೆ.

ಗರಿಷ್ಠ 9 ಜನರನ್ನು ನಿಮ್ಮ 'ಸೀಕ್ರೆಟ್ ಕ್ರಶ್' ಲೀಸ್ಟ್ಗೆ ಸೇರಿಸಿ ಅವರ ಬಳಿ ನಿಮ್ಮ ಖಾಸಾಗಿತನವನ್ನು ಹಂಚಿಕೊಳ್ಳುವ ಆಯ್ಕೆ ಇದಾಗಿರಲಿದೆ. ಹಾಗಾದರೆ, ಈಗಾಗಲೇ 19 ರಾಷ್ಟ್ರಗಳಲ್ಲಿ ಆಯ್ಕೆ ಪರಿಚಿತವಾಗಿರುವ ಸಿಕ್ರೇಟ್ ಕ್ರಶ್ ಫೇಸ್‌ಬುಕ್ ಡೇಟಿಂಗ್ ಅಪ್ಲಿಕೇಶನ್ ಹೇಗಿರಲಿದೆ ಮತ್ತು ಫೇಸ್‌ಬುಕ್ ಬಳಕೆದಾರರು ಈ ಆಪ್ ಅನ್ನು ಬಳಸುವುದು ಹೇಗೆ? ಈ ಆಪ್ ಭಾರತಕ್ಕೆ ಬರುವುದು ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಏನಿದು ಸಿಕ್ರೇಟ್ ಕ್ರಶ್ ಫೀಚರ್
ಡೇಟಿಂಗ್ ಆಪ್ ಈ ಫೀಚರ್‌ನಲ್ಲಿ ಬಳಕೆದಾರರು ತಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿರುವ ಯಾರ ಮೇಲಾದರೂ ಕ್ರಶ್ ಆಗಿದ್ದರೇ ಅದನ್ನು ವ್ಯಕ್ತಪಡಿಸಲು ಫೇಸ್‌ಬುಕ್ ಈ ಸಿಕ್ರೇಟ್ ಕ್ರಶ್ ಆಯ್ಕೆಯನ್ನು ಪರಿಚಯಿಸಿದೆ. ಹೀಗಾಗಿ ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿ ಇಷ್ಟವಾಗುವವರಿಗೆ ನೀವು ನಿಮ್ಮ ಕ್ರಶ್ ಇಂಗಿತವನ್ನು ತಿಳಿಸಲು ಆಯ್ಕೆ ಇದಾಗಿರಲಿದೆ. ಇದು ಡೇಟಿಂಗ್‌ಗೆ ಅವಕಾಶ ಮಾಡಿಕೊಡುತ್ತದೆ.

ಹೇಗಿರಲಿದೆ ಸಿಕ್ರೇಟ್ ಕ್ರಶ್ ಆಯ್ಕೆ?
ಈಗಾಗಲೇ ಜನಪ್ರಿಯವಾಗಿರುವ ಡೇಟಿಂಗ್ ಆಪ್‌ಗಳಾದ Hinge ಮತ್ತು Tinder ನಂತೆಯೇ, ಡೇಟಿಂಗ್ ಫೀಚರ್‌ಗಳನ್ನು ಈ ಸಿಕ್ರೇಟ್ ಕ್ರಶ್ ಆಯ್ಕೆ ಹೊಂದಿರಲಿದೆ. ಫೇಸ್‌ಬುಕ್ ಬಳಕೆದಾರರು ತಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿರುವ ಬಳಕೆದಾರರಲ್ಲಿ ಯಾರ ಮೇಲಾದರೂ ಕ್ರಶ್ ಆಗಿದ್ದರೇ, ಅದನ್ನು ವ್ಯಕ್ತಪಡಿಸಲು ಫೇಸ್‌ಬುಕ್‌ನ ಈ ಸಿಕ್ರೇಟ್ ಕ್ರಶ್ ಆಯ್ಕೆ ನೆರವಾಗಲಿದೆ.

ಮ್ಯೂಚಲ್ ಕ್ರಶ್ ಬಳಕೆ ಹೇಗೆ
ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿ ನಿಮಗೆ ಇಷ್ಟವಾಗಿರುವವರಿಗೆ ನೀವು ಕ್ರಶ್ ಇಂಗಿತವನ್ನು ತಿಳಿಸಬಹುದು. ಅದರಲ್ಲಿ ಯಾರಾದರೂ ಮರಳಿ ಅವರ ಕ್ರಶ್ ಇಂಗಿತವನ್ನು ತಿಳಿಸಿದರೇ ನಂತರ ಪರಸ್ಪರ ಮ್ಯೂಚಲ್ ಕ್ರಶ್ ( ಗರಿಷ್ಠ 9 ಜನರನ್ನು) ಎಂದು ಪರಿಗಣಿಸಿಕೊಳ್ಳಬಹುದು. ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿದ್ದವರೂ ಈ ಆಯ್ಕೆಯನ್ನು ಬಳಸದಿದ್ದರೂ ನೀವು ಕ್ರಶ್ ಇಂಗಿತವನ್ನು ತಿಳಿಸಿಬಹುದು.

ವಯಸ್ಕರಿಗೆ ಮಾತ್ರ
ಫೇಸ್‌ಬುಕ್‌ನ ಈ ಸಿಕ್ರೇಟ್ ಕ್ರಶ್ ಫೀಚರ್ ಅನ್ನು ಫೇಸ್‌ಬುಕ್ ಬಳಕೆದಾರರು ಬಳಕೆಮಾಡಬಹುದಾಗಿದ್ದು, ಆದರೆ 18 ವಯಸ್ಸು ಮತ್ತು 18 ವಯಸ್ಸಿಗಿಂತ ಮೇಲ್ಪಟ್ಟ ಬಳಕೆದಾರರು ಆಪ್ ಬಳಸಬಹುದಾಗಿದೆ. ಇದು ಪ್ರೀತಿಯ ವಿಷಯವಾಗಿದ್ದರಿಂದ ಫೇಸ್‌ಬುಕ್ ಈ ಆಪ್‌ನ ಸೇವೆಯನ್ನು ಕೇವಲ ವಯಸ್ಕರಿಗೆ ಮಾತ್ರ ಸೀಮಿತ ಮಾಡಿದೆ.

ಜಾಹಿರಾತು ಮುಕ್ತ
ಬಹುತೇಕ ಡೇಟಿಂಗ್ ಆಪ್‌ಗಳು ಜಾಹಿರಾತುಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಫೇಸ್‌ಬುಕ್‌ನ ಸಿಕ್ರೇಟ್ ಕ್ರಶ್ ಡೇಟಿಂಗ್ ಆಪ್ ಸಂಪೂರ್ಣ ಜಾಹಿರಾತು ಮುಕ್ತವಾಗಿದ್ದು, ಯಾವುದೇ ಪೇಯ್ಡ್ ಫೀಚರ್ಸ್‌ಗಳು ಸಹ ಇರುವುದಿಲ್ಲ ಎನ್ನಲಾಗಿದೆ. ಮುದೊಂದು ದಿನ ಡೇಟಿಂಗ್ ಆಪ್‌ಗಳನ್ನು ಮೀರಿಸುವ ಸಲುವಾಗಿ ಫೇಸ್‌ಬುಕ್ ಈಗ ಜಾಹಿರಾತು ನೀಡುತ್ತಿಲ್ಲ ಎನ್ನಲಾಗಿದೆ.

19 ರಾಷ್ಟ್ರಗಳಲ್ಲಿ ಲಭ್ಯ
ಫೇಸ್‌ಬುಕ್‌ನ ಈ ಹೊಸ ಡೇಟಿಂಗ್ ಆಪ್ ಪ್ರಸ್ತುತ ಬ್ರೆಜಿಲ್, ಮೆಕ್ಸಿಕೊ, ಕೆನಡಾ, ಕೊಲಂಬಿಯಾ, ಥೈಲ್ಯಾಂಡ್, ಸಿಂಗಪೂರ್, ಮಲೇಷ್ಯಾ, ಮತ್ತು ಫಿಲಿಫೈನ್ಸ್ ರಾಷ್ಟ್ರಗಳನ್ನು ಒಳಗೊಂಡಂತೆ ಸುಮಾರು 19 ರಾಷ್ಟ್ರಗಳಲ್ಲಿನ ಬಳಕೆದಾರರಿಗೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ರಾಷ್ಟ್ರಗಳಿಗೂ ವಿಸ್ತರಿಸಲಿದೆ ಎನ್ನಲಾಗಿದೆ. ಹಾಗಾಗಿ, ಭಾರತೀಯರಿಗೂ ಶೀಘ್ರವೇ ಸಿಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470