Subscribe to Gizbot

ಸ್ಮಾರ್ಟ್‌ಫೋನ್ ಬಳಕೆ ನಿಮಗೆ ಚಟವಾಗಿ ಬಿಟ್ಟಿದೆಯಾ?..ಪರಿಣಾಮ ಏನು ಗೊತ್ತಾ?

Written By:

ನಿದ್ದೆಯನ್ನೇ ತಪ್ಪಿಸಿ ಫೋನ್ ಬಳಕೆ ಮಾಡುವವರು ಖಿನ್ನತೆಗೆ ಜಾರಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎಂಬ ಶಾಕಿಂಗ್ ರಿಪೋರ್ಟ್ ಕೆಲವೇ ದಿನಗಳ ಹಿಂದಷ್ಟೆ ಹೊರಬಿದ್ದಿತ್ತು.! ಹೆಚ್ಚು ಸ್ಮಾರ್ಟ್‌ಫೋನ್ ಬಳಸುವ ಬಳಕೆದಾರರ ಹಲವು ಆರೋಗ್ಯದ ಏರುಪೇರಿಗೆ ಕಾರಣ ಎಂದು ಈ ವರದಿ ತಿಳಿಸಿತ್ತು.!!

ಈ ವರದಿಯು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಎಚ್ಚರಿಕೆ ಎಂದು ಹೇಳಬಹುದಾದರೂ ಸಹ ನಾವೆಲ್ಲರೂ ಇಂದು ಮೊಬೈಲ್‌ ಫೋನ್‌ಗಳಿಲ್ಲದೆ ಬದುಕಲಾರದ ಸ್ಥಿತಿಗೆ ಬಂದಿದ್ದೇವೆ.! ಸುಮ್ಮನೆ ನಡೆದುಕೊಂಡು ಹೋಗುವರು ಎದುರಿಗೆ ಏನು ಬರುತ್ತದೆ ಎಂದು ಗಮನಿಸದಷ್ಟು ಜನರು ಮೊಬೈಲ್‌ಗೆ ಅಂಟಿಕೊಂಡಿದ್ದಾರೆ.!!

ಸ್ಮಾರ್ಟ್‌ಫೋನ್ ಬಳಕೆ ನಿಮಗೆ ಚಟವಾಗಿ ಬಿಟ್ಟಿದೆಯಾ?..ಪರಿಣಾಮ ಏನು ಗೊತ್ತಾ?

ಹಾಗಾದರೆ, ನಿಜಕ್ಕೂ ನಮಗೆ ಸ್ಮಾರ್ಟ್‌ಫೋನ್‌ಗಳ ಅಗತ್ಯ ಅಷ್ಟರ ಮಟ್ಟಿಗೆ ಇದೆಯೇ? ಅಥವಾ ಸ್ಮಾರ್ಟ್‌ಫೋನ್ ಅದೊಂದು ಚಟವಾಗಿ ಬಿಟ್ಟಿದೆಯಾ? ಗ್ಯಾಜೆಟ್‌ಗಳ ಅಸಹನೀಯವಾಗುತ್ತದೆ. ? ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಮಾನವನ ಮೇಲೆ ಆಗುತ್ತಿರುವ ಪರಿಣಾಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನಿಷ್ಠ 150 ಬಾರಿ ಮೊಬೈಲ್ ವೀಕ್ಷಣೆ!!

ಕನಿಷ್ಠ 150 ಬಾರಿ ಮೊಬೈಲ್ ವೀಕ್ಷಣೆ!!

ಗ್ಯಾಜೆಟ್‌ಗಳು ಇಲ್ಲದಿದ್ದರೆ ಇಂದಿನ ನಮ್ಮ ಜೀವನ ಅಪೂರ್ಣ ಎನಿಸಿಕೊಳ್ಳುತ್ತದೆ ಎನ್ನುವಷ್ಟರ ಮಟ್ಟಿಗೆ ನಾವು ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿದ್ದೇವೆ. ಅಧ್ಯಯನದ ಪ್ರಕಾರ, ವ್ಯಕ್ತಿಯೊಬ್ಬ ಸರಾಸರಿ ದಿನಕ್ಕೆ ಕನಿಷ್ಠ 150 ಬಾರಿ ತನ್ನ ಮೊಬೈಲ್‌ ಅನ್ನು ನೋಡಿಕೊಳ್ಳುತ್ತಾನಂತೆ!

ಖಿನ್ನತೆ ತರುತ್ತಿದೆ ಸ್ಮಾರ್ಟ್‌ಫೋನ್!!

ಖಿನ್ನತೆ ತರುತ್ತಿದೆ ಸ್ಮಾರ್ಟ್‌ಫೋನ್!!

ಅತಿಯಾದ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಆತಂಕ, ಅತಿಯಾದ ಖಿನ್ನತೆ, ಆತ್ಮಹತ್ಯೆ ಪ್ರಯತ್ನಗಳು ನಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆಯಂತೆ. ಸ್ವಯಂ ನಿರ್ಧಾರ ಕೈಗೊಳ್ಳುವುದು, ಭಾಂದವ್ಯ ನಿರ್ವಹಣೆ, ಭಾವನಾತ್ಮಕ ಪ್ರಕ್ರಿಯೆ ಮತ್ತು ಏಕಾಗ್ರತೆಯ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಬ್ರೇನ್ ಕಳೆದುಕೊಳ್ಳುತ್ತದೆ.!!

ಸ್ಮರಣ ಶಕ್ತಿ ಅವಧಿ ಕಡಿಮೆಯಾಗುತ್ತದೆ.!!

ಸ್ಮರಣ ಶಕ್ತಿ ಅವಧಿ ಕಡಿಮೆಯಾಗುತ್ತದೆ.!!

ದಿನಕ್ಕೆ ಸರಾಸರಿ 5 ಗಂಟೆ ಆನ್‌ಲೈನ್‌ಲ್ಲಿ ಕಳೆಯುತ್ತಾರೋ ಅಂಥವರು ಜನರ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದರಲ್ಲಿ ಹಿಂದೆ ಇರುತ್ತಾರೆ ಎಂದು ವರದಿಯೊಂದು ಹೇಳಿದೆ.!! ನಿರಂತರ ತಂತ್ರಜ್ಞಾನ ಬಳಕೆಯಿಂದಾಗಿ ನಮ್ಮ ಏಕಾಗ್ರತೆಯ ಅವಧಿ 12 ನಿಮಿಷದಿಂದ 5 ನಿಮಿಷಕ್ಕೆ ಇಳಿಕೆಯಾಗುತ್ತಿದೆ ಎಂದು ಕೂಡ ಹೇಳಲಾಗಿದೆ.

ವೈಬ್ರೇಷನ್ ಸಿಂಡ್ರೋಮ್ಗೆ ಬಲಿಯಾಗಿದ್ದಾರೆ.!!

ವೈಬ್ರೇಷನ್ ಸಿಂಡ್ರೋಮ್ಗೆ ಬಲಿಯಾಗಿದ್ದಾರೆ.!!

ನಿಮ್ಮ ಸ್ಮಾರ್ಟ್‌ಫೋನ್‌ ವೈಬ್ರೇಟ್ ಅಥವಾ ರಿಂಗ್‌ ಆಗಿರುವುದಿಲ್ಲ. ಆದರೂ, ನಿಮಗೆ ಫೋನ್‌ ರಿಂಗ್‌ ಆಗಿರುವ ಹಾಗೆ ಅಥವಾ ವೈಬ್ರೇಟ್ ಆಗಿರುವ ರೀತಿ ಅನುಭವವಾಗುತ್ತದೆ. ಈ ಅನುಭವ ಅತಿಯಾಗಿ ಸ್ಮಾರ್ಟ್‌ಫೋನ್‌ ಮತ್ತು ಬೇಸಿಕ್‌ ಮೊಬೈಲ್‌ ಸೆಟ್‌ ಬಳಸುವವರಿಗೆ ಖಂಡಿತ ಆಗಿರುತ್ತದೆ. ಇದನ್ನೇ ಫ್ಯಾಂಟಮ್ ವೈಬ್ರೇಟ್ ಸಿಂಡ್ರೋಮ್ ಎಂದು ಕರೆಯುತ್ತಾರೆ.

ಗ್ರಹಿಕೆ ಮತ್ತು ನಿದ್ರೆ!!

ಗ್ರಹಿಕೆ ಮತ್ತು ನಿದ್ರೆ!!

ಹೆಚ್ಚು ಸ್ಮಾರ್ಟ್‌ಫೋನ್ ಬಳಕೆಯಿಂದ ಮಾನವನ ಸ್ಮರಣಶಕ್ತಿ, ಏಕಾಗ್ರತೆಯ ಅವಧಿ ಮತ್ತು ನಿದ್ರಾಚಕ್ರಗಳೆಲ್ಲವೂ ತಿರುವು ಮುರುವು ಆಗಿರುವುದರಿಂದ ಮಾನವನ ಮೆದುಳು ಗ್ರಹಿಸುವ ಸ್ವಭಾವ ಬದಲಾಗುತ್ತದೆಯಂತೆ. ಗ್ಯಾಜೆಟ್ ಮತ್ತು ಹೊಸ ಹೊಸ ತಂತ್ರಜ್ಞಾನಗಳ ಬಳಕೆಯೇ ಇದಕ್ಕೆ ಮುಖ್ಯ ಕಾರಣವಂತೆ.!!

How to save WhatsApp Status other than taking screenshots!! Kannada
ಸ್ಮಾರ್ಟ್‌ಫೋನ್‌ಗಳ ಅಗತ್ಯ ಅಷ್ಟರ ಮಟ್ಟಿಗಿದೆಯೇ?

ಸ್ಮಾರ್ಟ್‌ಫೋನ್‌ಗಳ ಅಗತ್ಯ ಅಷ್ಟರ ಮಟ್ಟಿಗಿದೆಯೇ?

ನಿಜವಾಗಿಯೂ ಸ್ಮಾರ್ಟ್‌ಫೋನ್ ಇಲ್ಲದೆ ಇಂದು ಬದುಕಲು ಕಷ್ಟ. ಆದರೆ, ಸ್ಮಾರ್ಟ್‌ಫೋನ್ ಎಂಬ ವಸ್ತುವನ್ನು ನಾವು ಹೇಗೆ ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಕೂಡ ನಿಂತಿದೆ. ಸ್ಮಾರ್ಟ್ಫೋನ್ ಹಚ್ಚಿಕೊಂಡರೂ ಸಹ ಸಂಬಂಧಗಳ ಬಗ್ಗೆ ನಿಮಗೆ ಉತ್ತಮ ಸಂಪರ್ಕವಿದ್ದರೆ ಸ್ಮಾರ್ಟ್‌ಫೋನ್‌ಗಳ ಅಗತ್ಯ ಹೆಚ್ಚಿರುವುದಿಲ್ಲ ಎನ್ನಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These days almost everyone has them, but did you know that mobile devices can be as addictive as drugs?. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot