ಮೊಬೈಲ್ ವಿಕಿರಣ ಸಾವಿನ ಕೂಪಕ್ಕೆ ತಳ್ಳುತ್ತಿದೆಯಾ?..ಇದು ಬೆಚ್ಚುಬೀಳಿಸುವ ಮಾಹಿತಿ!!

|

ಮೊಬೈಲ್ ಫೋನ್‌ಗಳ ತರಂಗಾಂತರಗಳು ಅಪಾಯಕರ ಎಂಬುದನ್ನು ಯಾವುದೇ ಸಂಶೋಧನೆ ಕೂಡ ಈವರೆಗೂ ಸಾಬೀತುಪಡಿಸಿಲ್ಲ. ಆದರೆ ಕೆಲವು ಅಧ್ಯಯನಗಳ ಮೂಲಕ ಈ ಕಿರಣಗಳು ಕೊಂಚವಾದರೂ ಆಪಾಯಕಾರಕ ಎಂದು ಹೇಳಿವೆ. ಸತತ ಬಳಕೆಯಿಂದ ಮೊಬೈಲಿನಿಂದ ಹೊರಹೊಮ್ಮುವ ವಿಕಿರಣಗಳು ನಮ್ಮ ಪ್ರತಿ ಜೀವಕೋಶದ ಡಿಎನ್ಎ ಅಥವಾ ಜೀವತಂತುಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಪಟ್ಟಿವೆ.

ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಿರುವ ಪ್ರಕಾರ ಈ ವಿಕಿರಣಗಳು ಕಣ್ಣಿನ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್, ಮೆಲನೋಮಾ ಎಂಬ ಒಂದು ಬಗೆಯ ಚರ್ಮದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸಹಿತ ಇನ್ನೂ ಹಲವು ಕ್ಯಾನ್ಸರ್ ರೋಗಗಳಿಗೆ ಕಾರಣವಾಗಬಹುದು. ಅದರಲ್ಲೂ ಗರ್ಭಿಣಿಯರಿಗೆ ಇದರ ಪರಿಣಾಮ ತೀರಾ ಹೆಚ್ಚಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಸಹಾ ವಿಕಿರಣಗಳ ಮೂಲಕ ಉಲ್ಬಣಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಮೊಬೈಲ್ ವಿಕಿರಣ ಸಾವಿನ ಕೂಪಕ್ಕೆ ತಳ್ಳುತ್ತಿದೆಯಾ?..ಇದು ಬೆಚ್ಚುಬೀಳಿಸುವ ಮಾಹಿತಿ!!

ಇತ್ತೀಚಿಗೆ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಮೊಬೈಲ್ ಟವರ್‌ಗಳಿಂದ ಬರುವ ರೇಡಿಯೇಷನ್‌ಗೆ ಕಡಿವಾಣ ಹಾಕಲು ಸರ್ಕಾರಗಳು ಮುಂದಾಗುತ್ತಿರುವುದು ಕೂಡ ಇದೇ ಕಾರಣಕ್ಕೆ ಇರಬಹುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಮೊಬೈಲ್ ಫೋನ್‌ಗಳ ತರಂಗಾಂತರಗಳು ಅಪಾಯಕರ ಎಂಬುದು ಸಾಬೀತಾಗದೇ ಇದ್ದರೂ ಅವುಗಳಿಂದ ಹಾನಿಯಾಗುವುದು ಖಚಿತ ಎನ್ನಬಹುದು. ಹಾಗಾಗಿ, ಈ ವಿಕಿರಣಗಳಿಂದ ದೂರವಿರುವುದೇ ಸಧ್ಯಕ್ಕೆ ನಾವು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳು ಎನ್ನಬಹುದು.

ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ.

ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ.

ಮೊಬೈಲ್‌ನ್ನು ಯಾವತ್ತೂ ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ. ನಿಮ್ಮ ತಲೆಗೆ ಹತ್ತಿರವಾದಷ್ಟು ಅದು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವುದು. ಮಾತನಾಡುವಾದ ಸ್ಪೀಕರ್ ಫೋನ್ ಬಳಸಿ. ಇದರಿಂದ ಮೊಬೈಲ್ ಅನ್ನು ನಿಮ್ಮ ದೇಹದಿಂದ ದೂರವಿಡಬಹುದು. ಪೂರ್ತಿ ನೆಟ್ ವರ್ಕ್ ಇರುವಾಗಲೇ ಮೊಬೈಲ್ ಬಳಸಿ. ಕಡಿಮೆ ಇದ್ದರೆ ಅದರಿಂದ ಹೆಚ್ಚಿನ ವಿಕಿರಣ ಹೊರಸೂಸುವುದು.

ಏರೋಪ್ಲೇನ್ ಮೋಡ್ ನಲ್ಲಿರಿಸಿ.

ಏರೋಪ್ಲೇನ್ ಮೋಡ್ ನಲ್ಲಿರಿಸಿ.

ಯಾವ ಹೊತ್ತಿನಲ್ಲಿ ಕರೆಗಳು ಬರುವುದಿಲ್ಲವೋ ಆಗ ಮೊಬೈಲನ್ನು ಏರೋಪ್ಲೇನ್ ಮೋಡ್ ನಲ್ಲಿರಿಸಿ. ಇದರಿಂದ ವಿಕಿರಣದ ಸಾಧ್ಯತೆ ಕಡಿಮೆಯಾಗುತ್ತದೆ.ಸಾಧ್ಯವಾದಷ್ಟು ಹೆಚ್ಚು ಇಯರ್ ಫೋನ್ ಬಳಸಿ. ಇದರಿಂದ ಮೊಬೈಲಿನ ವಿಕಿರಣಗಳು ನೇರವಾಗಿ ಮೆದುಳಿಗೆ ತಲುಪುವುದನ್ನು ತಡೆಯಬಹುದು. ಆದರೆ ಬ್ಲೂಟೂಥ್ ಕೂಡ ಬೇಡ ಏಕೆಂದರೆ ಇದರಲ್ಲಿಯೂ ವಿಕಿರಣಗಳಿವೆ.!

ಎಸ್‌ಎಂಎಸ್ ಸೇವೆ ಬಳಸಿ.

ಎಸ್‌ಎಂಎಸ್ ಸೇವೆ ಬಳಸಿ.

ಮೊಬೈಲ್‌ನಲ್ಲಿ ತುಂಬಾ ಕಡಿಮೆ ಮಾತನಾಡಿ ಕಡಿಮೆ ಮಾತನಾಡಿದಷ್ಟು ವಿಕಿರಣವು ಕಡಿಮೆ ಸೂಸುವುದು. ಇತರರಿಗೆ ನಿಮ್ಮ ಸಂದೇಶಗಳನ್ನು ತಿಳಿಸಲು ಆದಷ್ಟು ಎಸ್‌ಎಂಎಸ್ ಸೇವೆಯನ್ನು ಬಳಸಿ. ಇದರಿಂದ ಮೊಬೈಲ್ ನಿಮ್ಮ ದೇಹದಿಂದ ದೂರವಿರುತ್ತದೆ ಮತ್ತು ವಿಕಿರಣಕ್ಕೆ ನಿಮ್ಮ ದೇಹವು ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ ಎಂದು ಹೇಳಬಹುದು.

ಅಂಗದಲ್ಲಿ ಲೋಹ ಹೊಂದಿರುವವರು!

ಅಂಗದಲ್ಲಿ ಲೋಹ ಹೊಂದಿರುವವರು!

ದೇಹದ ಯಾವುದಾದರೂ ಅಂಗದಲ್ಲಿ ಲೋಹ ಅಳವಡಿಸಿಕೊಂಡಿರುವವರು ಆದಷ್ಟು ಮೊಬೈಲ್‌ನಿಂದ ದೂರವಿರಬೇಕು. ಕೂದಲು ಒದ್ದೆಯಾಗಿರುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ಯಾಕೆಂದರೆ ನೀರು ಮತ್ತು ಲೋಹವು ವಿಕಿರಣಗಳನ್ನು ಬೇಗನೆ ಸೆಳೆಯುತ್ತದೆ. ಸಿಗ್ನಲ್ ಕಡಿಮೆ ಇರುವಲ್ಲಿ ತುರ್ತಾದ ಕರೆ ಮಾಡಲೇಬೇಕಾದ ಅಗತ್ಯವಿಲ್ಲದ ವಿನಃ ಕರೆ ಮಾಡಲು ಹೋಗಬೇಡಿ.

ಮೊಬೈಲಿಗೆ ದಾಸರಾಗಬೇಡಿ.

ಮೊಬೈಲಿಗೆ ದಾಸರಾಗಬೇಡಿ.

ಮೊಬೈಲು ನಮ್ಮ ಅನುಕೂಲಕ್ಕೆ ಇದೆಯೇ ಹೊರತು ನಾವು ಅದರ ಅನುಕೂಲಕ್ಕಲ್ಲ. ಸುಮ್ಮಸುಮ್ಮನೇ ಕರೆ ಮಾಡಲು ಹೋಗಬೇಡಿ. ಅಗತ್ಯವಿದ್ದರೆ ಮಾತ್ರ ಕರೆ ಮಾಡಿ, ಚುಟುಕಾಗಿ ಹೇಳಬೇಕೆಂದಿದ್ದನ್ನು ತಿಳಿಸಿ ಇಟ್ಟುಬಿಡಿ. ಮೊಬೈಲಿನಲ್ಲಿರುವ ಸಾವಿರಾರು ಆಪ್ ಗಳನ್ನು ಪ್ರಯತ್ನಿಸಲು ಹೋಗಬೇಡಿ. ನಿಮಗೆ ನಿಜವಾಗಿಯೂ ಅಗತ್ಯವಿದ್ದರಷ್ಟೇ ಮೊಬೈಲ್ ಬಳಸಿ.

Best Mobiles in India

English summary
mobile phone radiations can be severely destructive to our brain cells! Here’s why you should be wary.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X