ಹಾರ್ಟ್‌ಬ್ಲೀಡ್‌ ಬಗ್‌‌: ಆತಂಕದಲ್ಲಿ ಟೆಕ್‌ ಕಂಪೆನಿಗಳು

Posted By:

ಇಂಟರ್‌ನೆಟ್‌ ಪ್ರಪಂಚದಲ್ಲಿ ಹಾರ್ಟ್‌ಬ್ಲೀಡ್‌ ಹೆಸರಿನ ಹೊಸದೊಂದು ಭಯಾನಕ ಬಗ್‌ ಸೃಷ್ಟಿಯಾಗಿದ್ದು ,ಸರ್ವರ್‌‌ನಲ್ಲಿ ಸಂಗ್ರಹಣೆಯಾಗಿರುವ ಲಕ್ಷಕ್ಕೂಅಧಿಕ ಪಾಸ್‌ವರ್ಡ್‌‌‌,ಕ್ರೆಡಿಟ್‌ ಕಾರ್ಡ್‌‌ ನಂಬರ್‌ಗಳು, ಖಾಸಗಿ ಮಾಹಿತಿಗಳು ಹ್ಯಾಕರ್‌ಗಳ ದಾಳಿಗೆ ಸಿಲುಕುವ ಸಾಧ್ಯತೆಯಿದೆ.

ಹ್ಯಾಕರ್‌‌ಗಳಿಗೆ ಗ್ರಾಹಕರ ವೈಯಕ್ತಿಕ ಮಾಹಿತಿ ಸುಲಭವಾಗಿ ಸಿಗದಂತೆ ಮಾಡಲು ಕಂಪೆನಿಗಳು ಪಾಸ್‌ವರ್ಡ್‌ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಅನುಸರಿಸುತ್ತಿರುತ್ತದೆ.

ಈ ಕೀಲಿ ಅಥವಾ ಪಾಸ್‌ವರ್ಡ್‌ನಿಂದ ಮಾತ್ರ ತೆರೆದು ಓದಬಹುದಾದ ಬರವಣಿಗೆಗಳನ್ನು ಕಂಪ್ಯೂಟರ್‌‌ ಪರಿಭಾಷೆಯಲ್ಲಿ ಗೂಢಲಿಪಿ(ಎನ್‌‌ಕ್ರಿಪ್ಷನ್) ಎಂದು ಕರೆಯಲಾಗುತ್ತದೆ. ಈ ಎನ್‌‌ಕ್ರಿಪ್ಷನ್ ಬಳಕೆದಾರರಿಗೆ ಮತ್ತು ಸೇವೆ ನೀಡುವ ಕಂಪೆನಿಗಳಿಗೆ ಮಾತ್ರ ತಿಳಿದಿರುತ್ತದೆ.

ಹಾರ್ಟ್‌ಬ್ಲೀಡ್‌ ಬಗ್‌‌: ಆತಂಕದಲ್ಲಿ ಟೆಕ್‌ ಕಂಪೆನಿಗಳು

ಈಗ ಹೊಸದಾಗಿ ಕಂಡುಹಿಡಿದ ಬಗ್‌ನಿಂದಾಗಿ ಹ್ಯಾಕ್‌ರ್‌‌ಗಳು ಸುಲಭವಾಗಿ ಎನ್‌‌ಕ್ರಿಪ್ಷನ್ ಪತ್ತೆ ಮಾಡಬಹುದು ಎಂದು ಕಂಪ್ಯೂಟರ್‌‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಓಪನ್‌ ಸೋರ್ಸ್‌ ಕೋಡ್‌‌ನಲ್ಲಿ ಬರೆದ ಸಣ್ಣ ತಪ್ಪಿನಿಂದ ಈ ಬಗ್‌‌ ಸೃಷ್ಟಿಯಾಗಿದ್ದು, ಓಪನ್‌ ಸೋರ್ಸ್‌ ಟೂಲ್‌‌ಕಿಟ್‌ ಬಳಸಿ ಸಿದ್ದಪಡಿಸಲಾದ ವೆಬ್‌ಸೈಟ್‌ಗಳಿಗೆ ಈ ಬಗ್‌ನಿಂದ‌ ತೊಂದರೆಯಾಗಲಿದೆ.

ಫಿನ್ಲೆಂಡ್‌ನ ಇಂಟರ್‌ನೆಟ್‌ ಭದ್ರತಾ ಸೇವೆಗಳನ್ನು ನೀಡುವ Codenomicon ಕಂಪೆನಿ ಮತ್ತು ಗೂಗಲ್‌‌ನ ಸಂಶೋಧಕರ ತಂಡ ಈ ಬಗ್‌ನ್ನು ಕಂಡುಹಿಡಿದಿದ್ದಾರೆ.

ಬಗ್‌ ನಿವಾರಣೆಯಾಗುವರೆಗೂ ಗ್ರಾಹಕರು ಪಾಸ್‌ವರ್ಡ್‌ ಬದಲಾವಣೆ ಮಾಡಿದ್ದರೂ ಏನು ಪ್ರಯೋಜನವಿಲ್ಲ.ಈ ಬಗ್‌ ಫಿಕ್ಸ್‌ ಮಾಡಲು ಕಂಪೆನಿಗಳು ಈಗಾಗಲೇ ಕಾರ್ಯೋ‌ನ್ಮುಖವಾಗಿದ್ದು ತಜ್ಞರ ತಂಡ ಕೋಡಿಂಗ್‌ ಸರಿ ಮಾಡಲು ಮುಂದಾಗುತ್ತಿವೆ.

ಹೆಚ್ಚಿನ ಮಾಹಿತಿಗೆ ಈ ಎರಡು ತಾಣಗಳಿಗೆ ಭೇಟಿ ನೀಡಬಹುದು:

heartbleed.com
LastPass Heartbleed checker

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot