ದೇಶದಲ್ಲಿಯೇ ಮೊದಲ 'ಹೆಲಿ ಟ್ಯಾಕ್ಸಿ' ಸೇವೆ ನಮ್ಮ ಬೆಂಗಳೂರಿನಲ್ಲಿ!!.ಪ್ರಯಾಣದ ದರ ಎಷ್ಟು ಗೊತ್ತಾ?

Written By:

ಪ್ರಯಾಣಿಕರಿಗಾಗಿ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ 'ಹೆಲಿ ಟ್ಯಾಕ್ಸಿ ಸೇವೆ' ಆರಂಭವಾಗಲಿದೆ.!! ಹೌದು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಥುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ ಸಹಯೋಗದಲ್ಲಿ ಆರಂಭಿಸಿರುವ ವಿನೂತನ ಸೇವೆಗೆ ಹಸಿರು ನಿಶಾನೆ ತೋರಲಾಗಿದೆ.!!

ನಗರದಲ್ಲಿ 'ಹೆಲಿ ಟ್ಯಾಕ್ಸಿ ಸೇವೆ' ವಾಣಿಜ್ಯ ಸೇವೆ ಇನ್ನೂ ಮೂರು ತಿಂಗಳೊಳಗೆ ಆರಂಭವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.!! ಹಾಗಾದರೆ, ಹೆಲಿ ಟ್ಯಾಕ್ಸಿ ಸೇವೆ ಹೆಗೆ ಕಾರ್ಯನಿರ್ವಹಿಸುತ್ತದೆ? ಪ್ರಯಾಣದ ದರ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ!!

ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ!!

ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ 'ಹೆಲಿ ಟ್ಯಾಕ್ಸಿ ಸೇವೆ'ಯನ್ನು ಆರಂಭಿಕ ಹಂತದಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀಡಲಾಗುತ್ತದೆ. ನಂತರ ವೈಟ್‌ಫೀಲ್ಡ್‌ನಿಂದಲೂ ಈ ಸೇವೆ ಆರಂಭವಾಗಲಿದೆ.

ಎಷ್ಟು ಜನರು ಪ್ರಯಾಣಿಸಬಹುದು?

ಎಷ್ಟು ಜನರು ಪ್ರಯಾಣಿಸಬಹುದು?

2 ಹೆಲಿಕಾಪ್ಟರ್‌ಗಳಿಂದ ಹೆಲಿ ಟ್ಯಾಕ್ಸಿ ಸೇವೆ ನೀಡಲಿದ್ದು, ಒಬ್ಬ ಪೈಲೆಟ್ ಹಾಗೂ ಐವರು ಪ್ರಯಾಣಿಸುವ ಸಾಮರ್ಥ್ಯದ ಬೆಲ್‌ -405 ಮಾದರಿ ಹೆಲಿಕಾಪ್ಟರ್ ಮತ್ತು ಇಬ್ಬರು ಪೈಲೈಟ್‌ಗಳು ಹಾಗೂ 13 ಪ್ರಯಾಣಿಕರು ಪ್ರಯಾಣಿಸಬಹುದಾದ ಬೆಲ್‌- 412 ಅನ್ನು 'ಹೆಲಿ ಟ್ಯಾಕ್ಸಿ ಸೇವೆ'ಗೆ ಬಳಕೆ ಮಾಡಲಾಗುತ್ತಿದೆ.!!

ಹೆಲಿ ಟ್ಯಾಕ್ಸಿ ಸೇವೆಯಿಂದ ಯಾರಿಗೆ ಅನುಕೂಲ?

ಹೆಲಿ ಟ್ಯಾಕ್ಸಿ ಸೇವೆಯಿಂದ ಯಾರಿಗೆ ಅನುಕೂಲ?

ಹೆಚ್ಚು ವಿಮಾನ ಪ್ರಯಾಣ ಮಾಡುವ ಉದ್ಯಮಿಗಳು, ಕಾರ್ಪೋರೆಟ್‌ ವಲಯದ ಪ್ರಯಾಣಿಕರು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರಿಗೆ ಹೆಲಿ ಟ್ಯಾಕ್ಸಿ ಹೆಚ್ಚು ಅನುಕೂಲಕರವಾಗಲಿದೆ. ಕಡಿಮೆ ಸಮಯದಲ್ಲಿ ಇತರೆ ಸ್ಥಳವನ್ನು ತಲುಪಲು ಇದು ಸಹಾಯಕವಾಗುತ್ತದೆ.

ಹೆಲಿ ಟ್ಯಾಕ್ಸಿ ಸೇವೆಯ ಪ್ರಯಾಣದ ಅವಧಿ ಎಷ್ಟು?

ಹೆಲಿ ಟ್ಯಾಕ್ಸಿ ಸೇವೆಯ ಪ್ರಯಾಣದ ಅವಧಿ ಎಷ್ಟು?

ಭಾರಿ ಟ್ರಾಫಿಕ್‌ನಿಮದಾಗಿ ಬೆಂಗಳುರಿನ ದಾರಿಗಳಲ್ಲಿ ಓಡಾಡುವುದೇ ಕಷ್ಟವಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸಲು ಕನಿಷ್ಟ ಎಂದರೂ 3 ಗಂಟೆಗಳ ಕಾಲಾವಕಾಶ ಬೇಕಿದೆ. ಆದರೆ, ಹೆಲಿ ಟ್ಯಾಕ್ಸಿ ಸೇವೆಯಿಂದ ಇದೇ ಅಂತರವನ್ನು ಕೇವಲ 15 ನಿಮಿಷಗಳಲ್ಲಿ ತಲುಪಬಹುದು.

ಕಡಿಮೆ ದರದಲ್ಲಿ ಸೇವೆ!!

ಕಡಿಮೆ ದರದಲ್ಲಿ ಸೇವೆ!!

ಇನ್ನು ಇದೇ ಮೊದಲ ಬಾರಿ ದೇಶದಲ್ಲಿಯೇ ಹೆಲಿ ಕ್ಯಾಬ್ ಸೇವೆಯನ್ನು ಒದಗಿಸುತ್ತಿದ್ದು, ಕಡಿಮೆ ದರದಲ್ಲಿ ಸೇವ ಒದಗಿಸಲು ಥುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ ಮುಂದಾ ಪ್ರಯಾಣ ದರ 2800 ರಿಂದ 3,000 ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bengaluru's heli-taxi service to be a model for other cities in India.to know more visit to kannad.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot