ಹಳೆಯ ಫೋನ್ ಹಳತಾದರೂ ಚಿನ್ನಕ್ಕೆ ಸಮ!!!

Written By:

ಹೊಸ ಫೋನ್ ಖರೀದಿಸಿದಾಗ ಹಳೆಯ ಫೋನ್‌ಗೆ ನಾವು ಅಷ್ಟೊಂದು ಮಾಹಿತಿಯನ್ನು ನೀಡುವುದಿಲ್ಲ. ಹಳೆಯದು ಎಂದಿಗೂ ಹಳತಾಗಿರುತ್ತದೆ ಎಂಬ ಭಾವನೆ ನಮ್ಮದಾಗಿದೆ. ಆದರೆ ಹಳೆಯ ಫೋನ್ ಅನ್ನು ಬಳಸಿ ನಿಮಗೆ ಬೇಕಾದಷ್ಟು ಮಹತ್ವಪೂರ್ಣ ಕೆಲಸಗಳನ್ನು ನೆರವೇರಿಸಿಕೊಳ್ಳಬಹುದಾಗಿದೆ. ನಿಮ್ಮ ಹಳೆಯ ಫೋನ್ ಅನ್ನು ಇನ್ನಷ್ಟು ಪ್ರಯೋಜನಕಾರಿಯಾಗಿ ಬಳಸಿ ಅದಕ್ಕೆ ಮಹತ್ವವನ್ನು ನೀಡಬಹುದಾಗಿದೆ ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ.

ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಹಳೆಯ ಫೋನ್‌ಗಳಿಂದ ನೀವು ನೆರವೇರಿಸಿಕೊಳ್ಳಬಹುದಾದ ಸಾಕಷ್ಟು ಪ್ರಯೋಜನಗಳನ್ನು ಕುರಿತು ಇಂದಿನ ಲೇಖನದಲ್ಲಿ ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಾರಿಟಿಗೆ ನೀಡಿ

ಸಲಹೆ: 1

ಹಳೆಯ ಫೋನ್ ಅನ್ನು ಸ್ವೀಕರಿಸುವ ಕೆಲವೊಂದು ಚಾರಿಟಿಗಳಿದ್ದು ಅದಕ್ಕೆ ನಿಮ್ಮ ಫೋನ್ ಅನ್ನು ನೀಡಬಹುದಾಗಿದೆ. ಈ ಚಾರಿಟಿಗಳು ಹಳೆಯ ಫೋನ್ ಅನ್ನು ಬಳಸಿ ಹಲವು ಕೆಲಸಗಳನ್ನು ನಡೆಸುತ್ತವೆ.

ವೈಜ್ಞಾನಿಕ ಸಂಶೋಧನೆ

ಸಲಹೆ: 2

ಇನ್ನು ವೈಜ್ಞಾನಿಕಾ ಸಂಶೋಧನಾ ಕೇಂದ್ರಗಳಿಗೂ ನಿಮ್ಮ ಫೋನ್ ಅನ್ನು ಬಳುವಳಿಯಾಗಿ ನೀಡಬಹುದಾಗಿದೆ. ಅವರುಗಳು ತಮ್ಮ ಸಂಶೋಧನಾ ವಿಷಯಗಳಿಗೆ ಹಳೆಯ ಫೋನ್‌ಗಳನ್ನು ಬಳಸಿ ಯೋಜನೆಗಳನ್ನು ನಡೆಸುತ್ತಾರೆ.

ಎಮರ್ಜನ್ಸಿ ಫೋನ್

ಸಲಹೆ: 3

ಇನ್ನು ತುರ್ತು ಪರಿಸ್ಥಿತಿಗಳಂತಹ ಸಂದರ್ಭಗಳಲ್ಲಿ ಕೂಡ ನಿಮ್ಮ ಫೋನ್ ಆಪ್ತಬಾಂಧವನಂತೆ ಕೆಲಸ ಮಾಡುವುದರಿಂದ ಆ ಸಮಯದಲ್ಲಿ ನಿಮ್ಮ ಹಳೆಯ ಫೋನ್‌ನ ಬಳಕೆಯನ್ನು ಮಾಡಬಹುದಾಗಿದೆ.

ಮಕ್ಕಳ ಆಟಿಕೆ

ಸಲಹೆ: 4

ಮಕ್ಕಳು ಬಳಸಬಹುದಾದ ಅಪ್ಲಿಕೇಶನ್‌ಗಳನ್ನು ನಿಮ್ಮ ಹಳೆಯ ಫೋನ್‌ನಲ್ಲಿ ಅಳವಡಿಸಿ ಅವರಿಗೆ ನೀಡಿ. ಅದನ್ನು ಬಳಸುವುದು ಹೇಗೆ ಅದರಿಂದ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ಅವರಿಗೆ ತಿಳಿಸಿ.

ಬೇಬಿ ಮಾನಿಟರ್

ಸಲಹೆ: 5

ಡೋರ್ಮಿ, ಮತ್ತು ಬೇಬಿ ಮಾನಿಟರ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿ ನಿಮ್ಮ ಹಳೆಯ ಫೋನ್ ಅನ್ನು ಬೇಬಿ ಮಾನಿಟರ್‌ನಂತೆ ಪರಿವರ್ತಿಸಬಹುದಾಗಿದೆ.

ರೊಬೋಟ್ ಬ್ರೈನ್

ಸಲಹೆ: 6

ರೊಬೋಟ್‌ಗಳನ್ನು ಪವರ್ ಅಪ್ ಮಾಡಲು ಸ್ಮಾರ್ಟ್‌ಫೋನ್‌ಗಳನ್ನು ಬಳಸಲಾಗುತ್ತದೆ. ಆದ್ದರಿಂದ ನಿಮ್ಮ ಹಳೆಯ ಫೋನ್ ಅನ್ನು ಈ ರೀತಿಯಾಗಿ ಕೂಡ ಉಪಯೋಗಿಸಬಹುದಾಗಿದೆ.

ಡಿಜಿಟಲ್ ಫೋಟೋ ಫ್ರೇಮ್

ಸಲಹೆ: 7

ಡೇ ಫ್ರೇಮ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಅದನ್ನು ಡಿಜಿಟಲ್ ಫ್ರೇಮ್ ಅನ್ನಾಗಿ ಪರಿವರ್ತಿಸಬಹುದು.

ಭದ್ರತಾ ಕ್ಯಾಮೆರಾ

ಸಲಹೆ: 8

ನಿಮ್ಮ ಹಳೆಯ ಡಿವೈಸ್ ಅನ್ನು ನಿಮ್ಮ ಮನೆಯ ಭದ್ರತಾ ಕ್ಯಾಮೆರಾವನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ.

ರೈನ್ ಫಾರೆಸ್ಟ್ ಸಂರಕ್ಷಣೆ

ಸಲಹೆ: 9

ರೈನ್‌ಫಾರೆಸ್ಟ್ ಕನೆಕ್ಶನ್‌ನಂತಹ ಸಂಸ್ಥೆಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ದಾನ ಮಾಡಬಹುದಾಗಿದೆ.

ವೈಫೈ ಎಕ್ಸ್‌ಟೆಂಡರ್

ಸಲಹೆ: 10

ದುರ್ಬಲ ವೈಫೈ ಸಿಗ್ನಲ್‌ ಬಳಸುತ್ತಿದ್ದೀರಾ? fqrouter2 ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸಿಗ್ನಲ್ ಅನ್ನು ಸಾಧಿಸಿಕೊಳ್ಳಬಹುದಾಗಿದೆ. ಇದಕ್ಕೆ ನಿಮ್ಮ ಡಿವೈಸ್ ರೂಟ್ ಆಗಿರಬೇಕು.

ಮೀಡಿಯಾ ಸೆಂಟರ್

ಸಲಹೆ: 11

ಕ್ರೋಮ್‌ಕಾಸ್ಟ್ ಸ್ಟ್ರೀಮಿಂಗ್ ಡಿವೈಸ್ ಅನ್ನು ಬಳಸಿಕೊಂಡು ನಿಮ್ಮ ಹಳೆಯ ಫೋನ್ ಅನ್ನು ಮೀಡಿಯಾ ಸೆಂಟರ್ ಅನ್ನಾಗಿ ಪರಿವರ್ತಿಸಿಕೊಳ್ಳಬಹುದು.

ಅಲರಾಮ್ ಕ್ಲಾಕ್

ಸಲಹೆ: 12

ಕ್ಲಾಕ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಹಳೆಯ ಫೋನ್ ಅನ್ನು ಅಲರಾಮ್ ಕ್ಲಾಕ್‌ನಂತೆ ಬಳಸಿಕೊಳ್ಳಬಹುದಾಗಿದೆ.

ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್

ಸಲಹೆ: 13

ಗೂಗಲ್ ಕಾರ್ಡ್‌ಬೋರ್ಡ್ ಅದ್ಭುತ ಯೋಜನೆ ಎಂದೆನಿಸಿದ್ದು ನಿಮ್ಮ ಹಳೆಯ ಫೋನ್ ಅನ್ನು DIY VR ಹೆಡ್‌ಸೆಟ್‌ನಂತೆ ಬಳಸಿಕೊಳ್ಳಬಹುದಾಗಿದೆ.

ಕಾರಿನ ಜಿಪಿಎಸ್

ಸಲಹೆ: 14

ಸಿಟಿ ಮ್ಯಾಪರ್, ಗೂಗಲ್ ಮ್ಯಾಪ್ಸ್ ಮುಂತಾದ ಮ್ಯಾಪಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಿಮ್ಮ ಹಳೆಯ ಫೋನ್ ಅನ್ನು ಜಿಪಿಎಸ್‌ನಂತೆ ಉಪಯೋಗಿಸಿಕೊಳ್ಳಬಹುದಾಗಿದೆ.

ಡೆಸ್ಕ್‌ಟಾಪ್ ಕಂಪ್ಯೂಟರ್

ಸಲಹೆ: 15

ನಿಮ್ಮ ಹಳೆಯ ಫೋನ್ ಹೆಚ್ಚು ಸ್ಮಾರ್ಟ್ ಮತ್ತು ಶಕ್ತಿಯುತ ಎಂದೆನಿಸಿದ್ದು ಇದನ್ನು ಡೆಸ್ಕ್‌ಟಾಪ್‌ನಂತೆ ಬಳಸಿಕೊಳ್ಳಬಹುದಾಗಿದೆ.

ಜಿಮ್ ಡಿವೈಸ್

ಸಲಹೆ: 16

ಯಾವುದೇ ಫಿಟ್‌ನೆಸ್ ಅಪ್ಲಿಕೇಶನ್‌ಗಳನ್ನು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಕೊಳ್ಳಿ. ಇದಕ್ಕೆ ಮ್ಯೂಸಿಕ್ ಅನ್ನು ಅಳವಡಿಸಿಕೊಂಡು ನಿಮಗೆ ಟ್ರೆಡ್‌ಮಿಲ್‌ನಲ್ಲಿ ನಡೆದಾಡಬಹುದಾಗಿದೆ.

ರೆಟ್ರೊ ಗೇಮ್ಸ್ ಕನ್ಸೋಲ್

ಸಲಹೆ: 17

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ಸಂಪರ್ಕಪಡಿಸುವುದಕ್ಕಾಗಿ ನಿಮಗೆ ಕ್ರೋಮ್‌ಕಾಸ್ಟ್ ಅನ್ನು ಬಳಸಿಕೊಳ್ಳಬಹುದು.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಆನ್‌ಲೈನ್‌ ಡೇಟಾ ಸುರಕ್ಷತೆ ಎಷ್ಟು ಮುಖ್ಯ ಗೊತ್ತೇ ?
ನೀವೇ ತಯಾರಿಸಿಕೊಳ್ಳಬಹುದಾದ ಫೋನ್ ಚಾರ್ಜರ್
ಸೆಕೆಂಡ್ ಫೋನ್ ಖರೀದಿ ಪಾಲಿಸಬೇಕಾದ ನಿಯಮಗಳು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are many things you can do – that are smart and innovative – than throwing your old phone away or giving it to a friend who would be facing the same scenario in a couple of months. Check out the following amazing 17 uses of old smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot