Home
ಸುದ್ದಿಜಾಲ

ಭಾರತದಲ್ಲಿ ಆಪಲ್ ಮಾರುಕಟ್ಟೆ ಅಧಿಕವಾಗಿರುವುದಕ್ಕೆ 6 ಪ್ರಮುಖ ಕಾರಣಗಳು

By Gizbot Bureau

ಕ್ಯೂಪರ್ಟಿನೋ ಮೂಲಕ ಟೆಕ್ ಸಂಸ್ಥೆ ಆಪಲ್ ತನ್ನ ಅರ್ಧವಾರ್ಷಿಕ ಆದಾಯದ ವಿವರವನ್ನು ನೀಡಿದೆ. ಅರ್ಧ ವರ್ಷದಲ್ಲಿ ಕಂಪೆನಿಯ ಒಟ್ಟು ಆದಾಯ 64 ಬಿಲಿಯನ್ ಡಾಲರ್. ಕಳೆದ ವರ್ಷದ ಅರ್ಧವಾರ್ಷಿಕಕ್ಕೆ ಹೋಲಿಸಿದರೆ 2 ಶೇಕಡಾ ಆದಾಯ ಅಧಿಕವಾಗಿದೆ. ಅಂತರಾಷ್ಟ್ರೀಯ ಮಾರಾಟದ 60 ಶೇಕಡಾ ಆದಾಯವು ಅರ್ಧ ವರ್ಷದಲ್ಲೇ ಬಂದಿದೆ ಎಂದು ಹೇಳಿದೆ. ಭಾರತವು ಆಪಲ್ ಗೆ ಪ್ರಮುಖ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ ಆದರೆ ಐಫೋನ್ ಗಳ ಮಾರಾಟ ಸ್ವಲ್ಪ ಭಾರತದಲ್ಲಿ ಕಡಿಮೆಯೇ ಇದೆ. ಆದರೆ ಹೊಸ ಸಂಖ್ಯೆಯು ಆಪಲ್ ಗೆ ಭಾರತಕ್ಕೆ ಐಫೋನ್ ಗಿಂತ ಹೆಚ್ಚಿನದ್ದನ್ನು ಸಲಹೆ ನೀಡುತ್ತಿದೆ ಎಂಬುದು ಮಾತ್ರ ಸತ್ಯ. ಹೇಗೆ ಎಂದು ಕೇಳುತ್ತಿದ್ದೀರಾ? ಈ ಆರು ವಿಚಾರಗಳನ್ನು ಗಮನಿಸಿ.

ಆಪಲ್ ಮ್ಯಾಕ್ ಬುಕ್ ಗಳು ಭಾರತದಲ್ಲಿ ಅತ್ಯಧ್ಬುತವಾಗಿ ಮಾರಾಟ ಕಾಣುತ್ತವೆ

ಆಪಲ್ ಮ್ಯಾಕ್ ಬುಕ್ ಗಳು ಭಾರತದಲ್ಲಿ ಅತ್ಯಧ್ಬುತವಾಗಿ ಮಾರಾಟ ಕಾಣುತ್ತವೆ

ಕಳೆದ ಅರ್ಧವಾರ್ಷಿಕದಲ್ಲಿ ಆಪಲ್ ಮ್ಯಾಕ್ ಬುಕ್ ವಿಚಾರದಲ್ಲಿ ತನ್ನೆಲ್ಲಾ ಹಳೆಯ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿ ಮುಂದೆ ಸಾಗಿದೆ. ಅಂದರೆ ಅತೀ ಹೆಚ್ಚು ಮಾರಾಟವನ್ನು ಭಾರತದಲ್ಲಿ ಕಂಡಿದೆ.

ಆಪಲ್ ವಾಚ್ ಗಳು ಬಹಳ ಪ್ರಸಿದ್ಧಿಯಾಗುತ್ತಿವೆ

ಆಪಲ್ ವಾಚ್ ಗಳು ಬಹಳ ಪ್ರಸಿದ್ಧಿಯಾಗುತ್ತಿವೆ

ಆಪಲ್ ಇತ್ತೀಚೆಗೆ ವಾಚ್ ಗಳ ಸರಣಿ 5 ನ್ನು ಬಿಡುಗಡೆಗೊಳಿಸಿದೆ ಮತ್ತು ಇವುಗಳ ಮಾರಾಟದ ಸಂಖ್ಯೆಯನ್ನು ಗಮನಿಸಿದರೆ ಭಾರತವು ಅತ್ಯಂತ ಉತ್ಕೃಷ್ಟವಾಗಿ ಖರೀದಿಸುತ್ತಿದೆ. ಆಪಲ್ ಧರಿಸಬಹುದಾದ ವಸ್ತುಗಳ ಮಾರಾಟದಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ಅತೀ ಹೆಚ್ಚಿನ ರೆಕಾರ್ಡ್ ನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಾಪಿಸಿದೆ. ಅದರಲ್ಲಿ ವಾಚ್ ಗಳು ಕೂಡ ಸೇರಿವೆ.

ಆಪಲ್ ಏರ್ ಪಾಡ್ ಗಳನ್ನು ಕೂಡ ಅತೀ ಹೆಚ್ಚು ಮಂದಿ ಖರೀದಿಸುತ್ತಿದ್ದಾರೆ

ಆಪಲ್ ಏರ್ ಪಾಡ್ ಗಳನ್ನು ಕೂಡ ಅತೀ ಹೆಚ್ಚು ಮಂದಿ ಖರೀದಿಸುತ್ತಿದ್ದಾರೆ

ಧರಿಸಬಹುದಾದ ವಸ್ತುಗಳಲ್ಲಿ ಏರ್ ಪಾಡ್ ಗಳು ಕೂಡ ಸೇರಿವೆ. ಆದಾಯದ ಸಂಖ್ಯೆಯನ್ನು ಗಮನಿಸಿದಾಗ ಇವುಗಳ ಮಾರಾಟದ ಸಂಖ್ಯೆಯೂ ಕೂಡ ಅಧಿಕಗೊಂಡಿದೆ.

ಭಾರತದಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ರೆಕಾರ್ಡ್

ಭಾರತದಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ರೆಕಾರ್ಡ್

ಭಾರತದಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ರೆಕಾರ್ಡ್ ದಾಖಲಾದ ಮಾರಾಟದ ವಿವರವನ್ನು ಆಪಲ್ ಪೋಸ್ಟ್ ಮಾಡಿದೆ ಮತ್ತು ಕೇವಲ ಐಫೋನ್ ಮಾತ್ರವೇ ಸೇರಿಲ್ಲ ಎಂಬುದನ್ನು ಎಲ್ಲರೂ ಗಮನಿಸಬೇಕಾಗಿದೆ.

ಐಫೋನ್ ಗಳು ಈಗಲೂ ಕೂಡ ಬಹಳ ಮುಖ್ಯವಾದ ಪ್ರೊಡಕ್ಟ್ ಆಗಿಯೇ ಉಳಿದಿದೆ.

ಐಫೋನ್ ಗಳು ಈಗಲೂ ಕೂಡ ಬಹಳ ಮುಖ್ಯವಾದ ಪ್ರೊಡಕ್ಟ್ ಆಗಿಯೇ ಉಳಿದಿದೆ.

ಇತರೆ ಪ್ರೊಡಕ್ಟ್ ಗಳು ನಂಬಿಕೆಗೆ ಅರ್ಹವೆನಿಸುವಂತಹ ಬೆಳವಣಿಗೆಯನ್ನು ಮಾರುಕಟ್ಟೆಯಲ್ಲಿ ಸ್ಥಾಪಿಸಿದರೆ, ಐಫೋನ್ ಗಳ ಮಾರಾಟವನ್ನು ಆಪಲ್ ಸಂಸ್ಥೆ ಭಾರತದಲ್ಲಿ ಸ್ಥಾಪಿಸುವುದಕ್ಕಾಗಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಬೇಕಾದ ಅಗತ್ಯತೆ ಕಾಣುತ್ತಿದೆ.

ಭಾರತದಲ್ಲಿ ಆಪಲ್ ಸ್ಟೋರ್ ಕೆಲವೇ ದಿನಗಳಲ್ಲಿ ಆರಂಭವಾಗುವ ಸಾಧ್ಯತೆ

ಭಾರತದಲ್ಲಿ ಆಪಲ್ ಸ್ಟೋರ್ ಕೆಲವೇ ದಿನಗಳಲ್ಲಿ ಆರಂಭವಾಗುವ ಸಾಧ್ಯತೆ

ತನ್ನ ಒಟ್ಟಾರೆ ಸ್ಥಾನಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದಾಗಿ ಆಪಲ್ ಸಂಸ್ಥೆ ದೇಶದಲ್ಲಿ ತನ್ನ ಮೊದಲ ರೀಟೈಲ್ ಔಟ್ ಲೆಟ್ ನ್ನು ಸದ್ಯದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಮುಂಬೈ ನಲ್ಲಿ ಈ ಮೊದಲ ಔಟ್ ಲೆಟ್ ಸ್ಥಾಪನೆಯಾಗುವ ನಿರೀಕ್ಷೆ ಇದೆ.

Best Mobiles in India

English summary
Here are 6 reasons why India is important for Apple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+