200ರೂ.ಒಳಗೆ ಲಭ್ಯವಾಗುವ ಅತ್ಯುತ್ತಮ ಪ್ರಿಪೇಯ್ಡ್ ಪ್ಲಾನ್‌ಗಳು ಇಲ್ಲಿವೆ!
ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವಿ ಟೆಲಿಕಾಂ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ ತಮ್ಮ ಚಂದಾದಾರರಿಗೆ ವಿವಿಧ ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನ ಸೇವೆ ನೀಡುವ ಅನೇಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಹೊಂದಿವೆ. ಇವುಗಳಲ್ಲಿ ಅಲ್ಪಾವಧಿಯಿಂದ ಹಿಡಿದು ದೀರ್ಘಾವಧಿ ಪ್ರಿಪೇಯ್ಡ್ ಪ್ಲಾನ್‌ಗಳು ಕೂಡ ಸೇರಿವೆ. ಇವುಗಳಲ್ಲಿ ಅಗ್ಗದ ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ.

ಹೌದು, ಏರ್‌ಟೆಲ್, ಜಿಯೋ, ವಿ ಟೆಲಿಕಾಂಗಳು ಹಲವು ವಿಧದ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ 200ರೂ.ಬೆಲೆ ಒಳಗಿನ ಪ್ರಿಪೇಯ್ಡ್ ಪ್ಲಾನ್‌ಗಳು ಗಮನ ಸೆಳೆದಿವೆ. ಈ ಪ್ಲಾನ್‌ಗಳು 1GB ಯಿಂದ 1.5GB ವರೆಗೆ ಡೇಟಾ ಪ್ರಯೋಜನವನ್ನು ನೀಡಲಿವೆ. ಹಾಗಾದ್ರೆ ಏರ್‌ಟೆಲ್, ಜಿಯೋ ಮತ್ತು ವಿ ಟೆಲಿಕಾಂನ 200ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಪ್ರಿಪೇಯ್ಡ್ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ನ 155ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 1GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಒಟ್ಟು 300 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯ ಆಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ ಏರ್‌ಟೆಲ್ ಆಪ್ಸ್ ಸೇವೆ ಲಭ್ಯ.

ಏರ್‌ಟೆಲ್ 179 ರೂ. ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ ಟೆಲಿಕಾಂ 179ರೂ. ಪ್ರಿಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಅವಧಿಯಲ್ಲಿ ಪ್ರತಿದಿನ 100 SMS ಮತ್ತು ಅನಿಯಮಿತ ಕರೆ ಪ್ರಯೋಜನಗಳು ಲಭ್ಯವಾಗಲಿವೆ. ಇದಲ್ಲದೆ ಒಟ್ಟು 2GB ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋದ 119ರೂ. ಪ್ರಿಪೇಯ್ಡ್ ಪ್ಲ್ಯಾನ್
ಜಿಯೋದ ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 14 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 21 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಒಟ್ಟು 300 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯ ಆಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ ಜಿಯೋ ಆಪ್ಸ್ ಸೇವೆ ಲಭ್ಯ.

ಜಿಯೋದ 199ರೂ. ಪ್ರಿಪೇಯ್ಡ್ ಪ್ಲ್ಯಾನ್
ಜಿಯೋದ ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 23 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಆಗಲಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 34.5GB ಡೇಟಾ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ ಜಿಯೋ ಆಪ್ಸ್ ಸೇವೆ ಲಭ್ಯ.

ಜಿಯೋ 179ರೂ.ಪ್ರಿಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂ ನ 179ರೂ.ಪ್ರಿಪೇಯ್ಡ್ ಪ್ಲಾನ್ 24ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಸಮಯದಲ್ಲಿ ಪ್ರತಿನಿತ್ಯ 1GB ಡೇಟಾ, ಅನಿಯಮಿತ ಕರೆಗಳು ಹಾಗೂ 100 SMS ಪ್ರಯೋಜನ ಲಭ್ಯವಾಗಲಿದೆ. ಇದಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಪ್ರವೇಶಿಸಬಹುದು.

ವಿ ಟೆಲಿಕಾಂ 149ರೂ. ಪ್ರಿಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 1 GB ಡೇಟಾ ಪ್ರಯೋಜನ ದೊರೆಯಲಿದೆ. ಎಸ್‌ಎಮ್‌ಎಸ್ ಸೌಲಭ್ಯ ಲಭ್ಯತೆ ಇಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ.

ವಿ ಟೆಲಿಕಾಂ 199ರೂ. ಪ್ರಿಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 18 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆ ಯಲ್ಲಿ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಲಭ್ಯ.


Click it and Unblock the Notifications








