ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

|

ಕೊರೊನಾ ವೈರಸ್‌ನ ಆರ್ಭಟ ಶುರುವಾದ ನಂತರ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗಿದೆ. ಕೊರೊನಾ ಕಾರಣದಿಂದಾಗಿ ಇನ್ನು ಕೂಡ ಕೆಲವು ರಾಜ್ಯಗಳಲ್ಲಿ ಹಲವು ಸಂಸ್ಥೆಗಳ ನೌಕರರು ವರ್ಕ್‌ ಫ್ರಂ ಹೋಮ್‌ನಲ್ಲಿದ್ದಾರೆ. ಇದೇ ಕಾರಣಕ್ಕೆ ಲ್ಯಾಪ್‌ಟಾಪ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ. ಬಳಕೆದಾರರ ಆಯ್ಕೆಗೆ ಅನುಗುಣವಾಗಿ ಹಲವು ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿವೆ.

ಲ್ಯಾಪ್‌ಟಾಪ್‌

ಹೌದು, ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರಿಂದ ಹಲವು ಪ್ರಮುಖ ಬ್ರಾಂಡ್‌ಗಳು ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಆದರೂ ಗ್ರಾಹಕರು ತಮ್ಮ ನೆಚ್ಚಿನ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಬಯಸುತ್ತಾರೆ. ಹಾಗಾದ್ರೆ ನೀವು ಮಾರುಕಟ್ಟೆಯಲ್ಲಿ ಖರೀದಿಸುಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್‌ಪಿ ಕ್ರೋಮ್‌ಬುಕ್‌ x360

ಹೆಚ್‌ಪಿ ಕ್ರೋಮ್‌ಬುಕ್‌ x360

ಹೆಚ್‌ಪಿ ಕ್ರೋಮ್‌ಬುಕ್‌ x360 ಲ್ಯಾಪ್‌ಟಾಪ್‌ ಕ್ರೋಮ್‌ OS ಬೆಂಬಲಿಸುವ ಲ್ಯಾಪ್‌ಟಾಪ್ ಆಗಿದೆ. ಇದು 1366x768 ಪಿಕ್ಸೆಲ್‌ ಸ್ಕ್ರಿನ್‌ ರೆಸಲ್ಯೂಶನ್‌ ಸಾಮರ್ಥ್ಯದ 12 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್‌ Celeron N4020 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು ಸಾಕಷ್ಟು ವೇಗವಾಗಿದೆ ಮತ್ತು ಬಹುಕಾರ್ಯಕವನ್ನು ನಿಭಾಯಿಸಬಲ್ಲದು. ವೆಬ್ ಬ್ರೌಸಿಂಗ್ ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವುದು ಸೇರಿದಂತೆ ಲಘು ಬಳಕೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಲ್ಯಾಪ್‌ಟಾಪ್‌ ಅನ್ನು14 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲು ರೇಟ್ ಮಾಡಲಾಗಿದೆ. ಹೆಚ್‌ಪಿ ಕ್ರೋಮ್‌ಬುಕ್‌ x360 ಅನ್ನು ಅಮೆಜಾನ್‌ನಲ್ಲಿ 34,500ರೂ.ಗಳಿಗೆ ಪಟ್ಟಿ ಮಾಡಲಾಗಿದೆ.

ಡೆಲ್ ಇನ್ಸ್ಪಿರಾನ್ 3501

ಡೆಲ್ ಇನ್ಸ್ಪಿರಾನ್ 3501

ಡೆಲ್ ಇನ್ಸ್ಪಿರಾನ್ 3501 ಲ್ಯಾಪ್‌ಟಾಪ್‌ 39,893ರೂ.ಗಳಿಗೆ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್ 10ನೇ ಕೋರ್ i3 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು 15.6-ಇಂಚಿನ ಫುಲ್‌ HD ಆಂಟಿ-ಗ್ಲೇರ್ ಡಿಸ್ಪ್ಲೇ ಅನ್ನು ಹೊಂದಿದೆ. ಇದು ಏಳು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ರಿಯಲ್‌ಮಿ ಬುಕ್‌ ಸ್ಲಿಮ್‌

ರಿಯಲ್‌ಮಿ ಬುಕ್‌ ಸ್ಲಿಮ್‌

ರಿಯಲ್‌ಮಿ ಬುಕ್‌ ಸ್ಲಿಮ್‌ ಮಿಡ್‌ರೇಂಜ್‌ ಬಳಕೆಗಾಗಿ ಉತ್ತಮ ಲ್ಯಾಪ್‌ಟಾಪ್ ಆಗಿದೆ. ಇದು 2K ಡಿಸ್ಪ್ಲೇ ಮತ್ತು 11 ನೇ Gen Intel Core i3 ಪ್ರೊಸೆಸರ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ Iris Xe ಗ್ರಾಫಿಕ್ಸ್‌ನೊಂದಿಗೆ ಜೋಡಿಸಲಾಗಿದೆ. ವೆಬ್ ಬ್ರೌಸಿಂಗ್ ಮಾಡಲು, ಫೋಟೋ ಎಡಿಟಿಂಗ್ ಮಾಡಲು ಇದನ್ನು ಬಳಸಬಹುದು. ಉತ್ತಮ ಕಾರ್ಯಕ್ಷಮತೆಗಾಗಿ ನೀವು ಕೋರ್ i5 ಮಾದರಿಯನ್ನು ಸಹ ಖರೀದಿಸಬಹುದು. ಕೋರ್ i3 ರೂಪಾಂತರವು ನಿಮಗೆ 46,999ರೂ.ಗಳಿಗೆ ದೊರೆಯಲಿದ್ದು, ಕೋರ್ i5 ಮಾದರಿಯು 59,999ರೂ.ಗಳಿಗೆ ಲಭ್ಯವಾಗಲಿದೆ.

ಆಪಲ್‌ ಮ್ಯಾಕ್‌ಬುಕ್‌ ಏರ್‌ M1

ಆಪಲ್‌ ಮ್ಯಾಕ್‌ಬುಕ್‌ ಏರ್‌ M1

ನೀವು MacOS ಲ್ಯಾಪ್‌ಟಾಪ್‌ಗಾಗಿ ಹುಡುಕುತ್ತಿದ್ದರೆ, ಆಪಲ್‌ನ ಮ್ಯಾಕ್‌ಬುಕ್‌ ಏರ್‌ M1 ಅನ್ನು ಪರಿಶೀಲಿಸಬಹುದು. ಪ್ರಸ್ತುತ, ಈ ಡಿವೈಸ್‌ ನಿಮಗೆ ವಿಜಯ್ ಸೇಲ್ಸ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಇದು Apple ನ ಹೊಸ 5nm M1 ಪ್ರೊಸೆಸರ್ ಅನ್ನು ಪ್ಯಾಕ್ ಮಾಡುತ್ತದೆ. ಬಳಕೆದಾರರು 18 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯುತ್ತಾರೆ ಎಂದು ಬ್ರ್ಯಾಂಡ್ ಭರವಸೆ ನೀಡಿದೆ.

Best Mobiles in India

Read more about:
English summary
This might help you decide which one will work best for you and even fall in your price range.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X