ನಿಮ್ಮ ಆರೋಗ್ಯದ ಕಾಳಜಿಗಾಗಿ ಈ ಗ್ಯಾಜೆಟ್ಸ್‌ಗಳು ನಿಮ್ಮ ಮನೆಯಲ್ಲಿರಲಿ!

|

ಟೆಕ್ನಾಲಜಿ ಮುಂದುವರೆದಂತೆ ಎಲ್ಲಾ ವಲಯದಲ್ಲೂ ಟೆಕ್ನಾಲಜಿ ಆಧಾರಿತ ಡಿವೈಸ್‌ಗಳನ್ನು ನಾವು ಕಾಣಬಹುದಾಗಿದೆ. ಇದಕ್ಕೆ ವೈದ್ಯಕೀಯ ವಲಯವೂ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಲಯದ ಹಲವು ಸ್ಮಾರ್ಟ್‌ ಡಿವೈಸ್‌ಗಳು ಗಮನ ಸೆಳೆದಿವೆ. ಅದರಲ್ಲೂ ಮನೆಯಲ್ಲಿಯೇ ಕುಳಿತು ನಿಮ್ಮ ಆರೋಗ್ಯವನ್ನು ನೀವೇ ನಿಯಮಿತವಾಗಿ ಚೆಕ್‌ ಮಾಡಿಕೊಳ್ಳಬಲ್ಲ ಅನೇಕ ವೈದ್ಯಕೀಯ ಗ್ಯಾಜೆಟ್‌ಗಳು ಕೂಡ ಲಭ್ಯವಿವೆ. ಪ್ರಸ್ತುತ ಕೊರೊನಾ ಸಂದರ್ಭದಲ್ಲಿ ಈ ಮಾದರಿಯ ಗ್ಯಾಜೆಟ್‌ಗಳು ನಿಮ್ಮ ಮನೆಯಲ್ಲಿ ಇರುವುದು ಒಳಿತು.

ಆರೋಗ್ಯ

ಹೌದು, ನಿಮ್ಮ ಆರೋಗ್ಯವನ್ನ ನೀವೇ ಚೆಕ್‌ ಮಾಡಿಕೊಳ್ಳಬಹುದು. ನಿಮ್ಮ ಆರೋಗ್ಯ ಕುರಿತ ಡೇಟಾದ ಬಗ್ಗೆ ನಿಖರವಾದ ಮತ್ತು ಸ್ಥಿರವಾದ ಡೇಟಾವನ್ನು ನಿಮ್ಮ ವೈದ್ಯರಿಗೆ ಒದಗಿಸಲು ಈ ಗ್ಯಾಜೆಟ್‌ಗಳು ನಿಮಗೆ ಸಹಾಯ ಮಾಡಲಿವೆ. ನಿಯಮಿತ ಆರೋಗ್ಯ ತಪಾಸಣೆಯ ಜೊತೆಗೆ, ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿದ್ದರೆ ವೈದ್ಯರೂ ನಿಮಗೆ ಯಾವ ಆರೋಗ್ಯ ಸಮಸ್ಯೆ ಇದೆ ಎಂದು ಕಂಡುಹಿಡಿಯುವುದು ಸುಲಭವಾಗುತ್ತದೆ. ಹಾಗಾದ್ರೆ ನಿಮ್ಮ ಆರೋಗ್ಯವನ್ನು ಚೆಕ್‌ ಮಾಡಲು ನಿಮಗೆ ಅವಕಾಶ ನೀಡುವ ವೈದ್ಯಕೀಯ ಗ್ಯಾಜೆಟ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪೋರ್ಟಬಲ್ ಪರ್ಸನಲ್‌ ಇಸಿಜಿ ಮಾನಿಟರ್

ಪೋರ್ಟಬಲ್ ಪರ್ಸನಲ್‌ ಇಸಿಜಿ ಮಾನಿಟರ್

ನಿಮ್ಮ ಹೃದಯದ ಆರೋಗ್ಯವನ್ನು ಟ್ರ್ಯಾಕ್‌ ಮಾಡಲು ಪೋರ್ಟಬಲ್ ವೈಯಕ್ತಿಕ ಪರ್ಸನಲ್‌ ಮಾನಿಟರ್ ನಿಮಗೆ ಸಹಾಯ ಮಾಡಲಿದೆ. ಸ್ಮಾರ್ಟ್‌ಫೋನ್ ಕಂಪ್ಯಾನಿಯನ್ ಅಪ್ಲಿಕೇಶನ್‌ನೊಂದಿಗೆ ಪೋರ್ಟಬಲ್ ಪರ್ಸನಲ್ ಇಸಿಜಿ ಮಾನಿಟರ್ ನಿಮಗೆ ಪ್ರತಿದಿನವೂ ಹೆಚ್ಚು ತೊಂದರೆಯಿಲ್ಲದೆ ಇಸಿಜಿಯನ್ನು ರೆಕಾರ್ಡ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಪ್ರತಿನಿತ್ಯ ನಿಮ್ಮ ಹೃದಯದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತದೆ. ಆರಂಭಿಕ ಹಂತದಲ್ಲಿಯೇ ನಿಮ್ಮ ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚಲು ಈ ಗ್ಯಾಜೆಟ್‌ನ ರೆಕಾರ್ಡಿಂಗ್‌ಗಳು ವೈದ್ಯರಿಗೆ ಮಾಹಿತಿಯ ಪ್ರಮುಖ ಮೂಲವಾಗಿದೆ.

ಆಟೋಮ್ಯಾಟಿಕ್‌ ಎಲೆಕ್ಟ್ರಾನಿಕ್ ಬ್ಲಡ್‌ ಪ್ರೆಷರ್‌ ಮಾನಿಟರ್

ಆಟೋಮ್ಯಾಟಿಕ್‌ ಎಲೆಕ್ಟ್ರಾನಿಕ್ ಬ್ಲಡ್‌ ಪ್ರೆಷರ್‌ ಮಾನಿಟರ್

ಆಟೋಮ್ಯಾಟಿಕ್‌ ಎಲೆಕ್ಟ್ರಾನಿಕ್ ಬ್ಲಡ್‌ ಪ್ರೆಷರ್‌ ಮಾನಿಟರ್ ಹೊಂದಿರುವ ಅಗತ್ಯ ಗ್ಯಾಜೆಟ್ ಆಗಿದೆ. ಇದರ ಮೂಲಕ ನಿಮ್ಮ ರಕ್ಷದೊತ್ತಡವನ್ನು ಪರಿಶೀಲಿಸಿಕೊಳ್ಳಬಹುದು. ನಿಮ್ಮ ನಾಡಿ ದರವನ್ನು ತೋರಿಸುವ ಸಾಧನವನ್ನು ಆರಿಸಿ. ಅತ್ಯುತ್ತಮ ಡಿವೈಸ್‌ಗಾಗಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮವಾಗಿದೆ.

ಫಿಂಗರ್‌ಟಿಪ್ ಪಲ್ಸ್ ಆಕ್ಸಿಮೀಟರ್

ಫಿಂಗರ್‌ಟಿಪ್ ಪಲ್ಸ್ ಆಕ್ಸಿಮೀಟರ್

ಆಕ್ಸಿಮೀಟರ್ ನಿಮ್ಮ ರಕ್ತದಲ್ಲಿನ ಆಮ್ಲಜನಕದ ಹರಿವಿನ ಪ್ರಮಾಣವನ್ನು ಉಸಿರಾಟದ ದರದೊಂದಿಗೆ ಅಳೆಯುತ್ತದೆ. ಇದು ಸಣ್ಣ ಮತ್ತು ಅತ್ಯುತ್ತಮ ಡಿವೈಸ್‌ ಆಗಿದ್ದು, ಮಾಹಿತಿ ಪಡೆಯಲು ನಿಮ್ಮ ತೋರು ಬೆರಳನ್ನು ಸೇರಿಸಬೇಕಾಗಿದೆ. ಆಕ್ಸಿಮೀಟರ್‌ಗಳ ಬಗ್ಗೆ ಶಿಫಾರಸುಗಳಿಗಾಗಿ ವೈದ್ಯಕೀಯ ವೃತ್ತಿಪರರ ಬಳಿ ತಿಳಿದುಕೊಳ್ಳುವುದು ಉತ್ತಮ.

ಪೈನ್ ರಿಲೀಫ್ ಡಿವೈಸ್‌

ಪೈನ್ ರಿಲೀಫ್ ಡಿವೈಸ್‌

ಮನೆಯಲ್ಲಿ ನೋವು ನಿವಾರಕ ಸಾಧನವನ್ನು ಹೊಂದಿದ್ದರೆ ಯಾವುದೇ ಸಮಯದಲ್ಲಿ ಸೂಕ್ತವಾಗಿ ಬರಬಹುದು. ಹಾಟ್ ಪ್ಯಾಡ್, ಮಸಾಜರ್ಸ್ ಮತ್ತು ನರ ಉತ್ತೇಜಕಗಳಂತಹ ಹಲವಾರು ರೀತಿಯ ನೋವು ನಿವಾರಕ ಸಾಧನಗಳಿವೆ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸರಿಯಾದ ರೀತಿಯ ಸಾಧನವನ್ನು ಪಡೆಯಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ

ಕಂಟ್ಯಾಕ್ಟ್‌ಲೆಸ್‌ ಐಆರ್ ಥರ್ಮಾಮೀಟರ್

ಕಂಟ್ಯಾಕ್ಟ್‌ಲೆಸ್‌ ಐಆರ್ ಥರ್ಮಾಮೀಟರ್

ಸಂಪರ್ಕವಿಲ್ಲದ, ಇನ್ಫ್ರಾ-ರೆಡ್ ಥರ್ಮಾಮೀಟರ್ ಅತ್ಯಗತ್ಯ ಸಾಧನವಾಗಿದ್ದು ಅದು ಹೆಚ್ಚು ಅಗತ್ಯವಾಗಿರುತ್ತದೆ. ಐಆರ್ ಥರ್ಮಾಮೀಟರ್ ಇತ್ತೀಚಿನ ದಿನಗಳಲ್ಲಿ ಅತಗತ್ಯವಾಗಿದ್ದು, ಉತ್ತಮ ಡಿವೈಸ್‌ಗಾಗಿ ವೈದ್ಯರ ಸಲಹೆ ಉತ್ತಮವಾಗಿದೆ.

Best Mobiles in India

English summary
Here are five medical gadgets you may want to keep at home to track your health regularly.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X