Home
ಸುದ್ದಿಜಾಲ

ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಲ್ಲಿ ಕಂಡುಬರುವ ಈ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ತಿಳಿದಿದೆ!

ಇಯರ್‌ಫೋನ್‌ ಮಾರುಕಟ್ಟೆಯಲ್ಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಿಗೆ ಭಾರಿ ಬೇಡಿಕೆಯಿದೆ. ಅದಕ್ಕೆ ತಕ್ಕಂತೆ ಹಲವು ಕಂಪೆನಿಗಳು ವಿಶಿಷ್ಟವಾದ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಆದರೆ ಇಯರ್‌ಬಡ್ಸ್‌ಗಳಲ್ಲಿಯೂ ಸಹ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಕಿರಿಕಿರಿ ಎನಿಸಿಬಿಡುತ್ತದೆ.

ಹೌದು, ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಲ್ಲಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಇವುಗಳಲ್ಲಿ ಪ್ರಮುಖವಾಗಿ ಕಕರ್ಶ ಶಬ್ದ ಬರುವುದು, ಡಿವೈಸ್‌ನೊಂದಿಗೆ ಕನೆಕ್ಟ್‌ ಆಗದಿರುವುದು ಕೂಡ ಸೇರಿದೆ. ಇದಲ್ಲದೆ ಇಯರ್‌ಬಡ್ಸ್‌ಗಳಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾದ್ರೆ ಇಯರ್‌ಬಡ್ಸ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಸಮಸ್ಯೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಲ್ಲಿ ಕಂಡುಬರುವ ಸಮಸ್ಯೆ ಬಗ್ಗೆ ನಿಮಗೆಷ್ಟು ತಿಳಿದಿದೆ

ಮೊಬೈಲ್‌ನೊಂದಿಗೆ ಕನೆಕ್ಟ್‌ ಆಗುವುದಿಲ್ಲ
ಸಾಮಾನ್ಯವಾಗಿ ಇಯರ್‌ಬಡ್ಸ್‌ಗಳಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಇದು ಒಂದಾಗಿದೆ. ಈ ಸಮಸ್ಯೆಯು ಹಲವು ಕಾರಣಗಳಿಂದ ಉಂಟಾಗಲಿದೆ. ಹೆಚ್ಚಿನ ಫೋನ್‌ಗಳು ಮತ್ತು ವಾಯರ್‌ಲೆಸ್ ಇಯರ್‌ಫೋನ್‌ಗಳು ಏಕಕಾಲದಲ್ಲಿ ಒಂದೇ ಡಿವೈಸ್‌ಗೆ ಕನೆಕ್ಟ್‌ ಆಗಲಿವೆ. ಆದರಿಂದ ನಿಮ್ಮ ಇಯರ್‌ಬಡ್ಸ್‌ ಈಗಾಗಲೇ ಮತ್ತೊಂದು ಡಿವೈಸ್‌ಗೆ ಕನೆಕ್ಟ್‌ ಆಗಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಿ. ಇದಲ್ಲದೆ ಕೆಲವು ಸ್ಮಾರ್ಟ್‌ಫೋನ್‌ಗಳು ಚಾರ್ಜಿಂಗ್‌ ಕಡಿಮೆ ಇದ್ದಾಗ ಆಟೋಮ್ಯಾಟಿಕ್‌ ಬ್ಲೂಟೂತ್ ಕನೆಕ್ಟ್‌ ಮೋಡ್ ಅನ್ನು ನಿಷ್ಕ್ರಿಯಗೊಳಿಸುತ್ತವೆ ಇದರ ಮೇಲೂ ಕೂಡ ಗಮನವಿರಿಸಬೇಕಾಗುತ್ತದೆ.

ಪ್ಯಾಚಿ ಆಡಿಯೊ ಗುಣಮಟ್ಟ
ಇನ್ನು ಇಯರ್‌ಬಡ್ಸ್‌ಗಳಲ್ಲಿ ಕಂಡುಬರುವ ಪ್ರಮುಖ ಸಮಸ್ಯೆ ಎಂದರೆ ಪ್ಯಾಚಿ ಆಡಿಯೊ ಗುಣಮಟ್ಟ ಕೂಡ ಒಂದು. ಬ್ಲೂಟೂತ್ ಸಂಪರ್ಕವು ಸೀಮಿತ ಶ್ರೇಣಿ ಮತ್ತು ಬ್ಯಾಂಡ್‌ವಿಡ್ತ್ ಅನ್ನು ಹೊಂದಿರುವುದರಿಂದ, ನೀವು ಪ್ಯಾಚಿ ಆಡಿಯೊವನ್ನು ಅನುಭವಿಸಬೇಕಾಗುತ್ತದೆ. ಇದು ಮೊಗ್ಗುಗಳು ಮತ್ತು ಸ್ಮಾರ್ಟ್‌ಫೋನ್ ನಡುವಿನ ಅಂತರದಿಂದ ಸೃಷ್ಟಿಯಾಗಲಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಇಯರ್‌ಬಡ್ಸ್‌ (TWS) ಸುಮಾರು 10 ಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ಫೋನ್ ಮತ್ತು ಇಯರ್‌ಬಡ್ಸ್‌ ಆ ವ್ಯಾಪ್ತಿಯಲ್ಲಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಬೇಕಿದೆ.

ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಲ್ಲಿ ಕಂಡುಬರುವ ಸಮಸ್ಯೆ ಬಗ್ಗೆ ನಿಮಗೆಷ್ಟು ತಿಳಿದಿದೆ

ಚಾರ್ಜಿಂಗ್ ಪ್ರಾಬ್ಲಂ
ಇಯರ್‌ಬಡ್ಸ್‌ಗಳು ಕೆಲವೊಮ್ಮೆ ಚಾರ್ಜಿಂಗ್‌ ಸಮಸ್ಯೆ ಎದುರಿಸುತ್ತವೆ. ಅದರಲ್ಲೂ ಒಂದೆರಡು ವರ್ಷ ಹಳೆಯದಾದ ಇಯರ್‌ಬಡ್ಸ್‌ಗಳಲ್ಲಿ ಇದು ಸಾಮಾನ್ಯವಾಗಿದೆ. ಆದರಿಂದ ಇಯರ್‌ಬಡ್ಸ್‌ ಚಾರ್ಜ್‌ ಮಾಡುವಾಗ ಸೂಕ್ತವಾದ ಪೋರ್ಟ್‌ನಿಂದಾಗಿ ಚಾರ್ಜ್ ಮಾಡಲು ಪ್ರಯತ್ನಿಸಿ

ಒಂದು ಕಡೆ ಮಾತ್ರ ಸೌಂಡ್‌ ಬರುವುದು
ಬಜೆಟ್ ವೈರ್‌ಲೆಸ್ ಇಯರ್‌ಬಡ್‌ಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಇದಾಗಿದೆ. ಅದಂತೆ ಒಂದು ಬಡ್ ಫೋನ್‌ಗೆ ಕನೆಕ್ಟ್‌ ಆಗಿದ್ದರೆ ಮತ್ತೊಂದು ಇಯರ್‌ಬಡ್ಸ್‌ ಬ್ರಿಡ್ಸ್‌ನಂತೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೇ ಆಡಿಯೊವನ್ನು ಒಂದೇ ಇಯರ್‌ಬಡ್‌ಗೆ ಸೀಮಿತಗೊಳಿಸಲಿದೆ.

ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಲ್ಲಿ ಕಂಡುಬರುವ ಸಮಸ್ಯೆ ಬಗ್ಗೆ ನಿಮಗೆಷ್ಟು ತಿಳಿದಿದೆ

ಇನ್ನು ಇಯರ್‌ಬಡ್ಸ್‌ಗಳನ್ನು ಸೂಕ್ತವಾಗಿರಿಸಿಕೊಳ್ಳುವುದಕ್ಕೆ ಕೂಡ ಕೆಲವು ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾದ ವಿಚಾರಗಳು ಈ ಕೆಳಗಿನಂತಿವೆ.
ಇಯರ್‌ಬಡ್‌ಗಳನ್ನು ಸರಿಯಾಗಿ ಒರೆಸಿ
ಇಯರ್‌ಬಡ್‌ ಪ್ರತಿ ಬಳಕೆಯ ನಂತರ ಬಳಕೆದಾರರು ಇಯರ್‌ಬಡ್‌ಗಳನ್ನು ರಬ್ಬಿಂಗ್ ಆಲ್ಕೋಹಾಲ್ ವೈಪ್‌ನೊಂದಿಗೆ ಒರೆಸುವುದು ಅವಶ್ಯಕ. ಇದು ಕೇವಲ ಅವುಗಳನ್ನು ಸ್ವಚ್ಛಗೊಳಿಸುವುದಿಲ್ಲ ಆದರೆ ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯಾವನ್ನು ಹಿಡಿಯುವುದನ್ನು ತಪ್ಪಿಸುತ್ತದೆ. ಮೆಡಿಕಲ್ ಅಂಗಡಿಗಳಲ್ಲಿ ಅಥವಾ ಯಾವುದೇ ಕಿರಾಣಿ ಅಂಗಡಿಯಲ್ಲಿ ನೀವು ಆಲ್ಕೋಹಾಲ್ ವೈಪ್ ಅನ್ನು ಕಾಣಬಹುದು. ಇಯರ್‌ಬಡ್‌ಗಳು ಸ್ವಚ್ಛವಾಗಿಷ್ಟು ಚೆನ್ನ.

ಸ್ವಚ್ಛ ಮಾಡುವಾಗ ಮೃದುವಾದ ಬಟ್ಟೆ ಬಳಕೆ ಮಾಡಿರಿ
ಇಯರ್‌ಬಡ್‌ಗಳನ್ನು ಸ್ವಚ್ಛಗೊಳಿಸುವಾಗ ಮೈಕ್ರೋಫೈಬರ್ ಬಟ್ಟೆ ಅಥವಾ ಮೃದುವಾದ ಬಟ್ಟೆ ಯನ್ನು ಬಳಕೆ ಮಾಡುವುದು ಉತ್ತಮ. ಇದರಿಂದ ಡಿವೈಸ್‌ಗಳಿಗೆ ಯಾವುದೇ ಗೀರುಗಳು ಬೀಳುವುದಿಲ್ಲ.

ಡಿವೈಸ್‌ಗಳನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ
ಇಯರ್‌ಬಡ್ ಗಳನ್ನು ಚಾರ್ಜಿಂಗ್ ಕೇಸ್ ನಲ್ಲಿ ಇಡುವುದು ಉತ್ತಮ. ಏಕೆಂದರೇ ಚಾರ್ಜಿಂಗ್ ಕೇಸ್ ನಲ್ಲಿ ಇಯರ್‌ಬಡ್‌ಗಳನ್ನು ಕೊಳಕು, ನೀರು ಮತ್ತು ಹಲವಾರು ಇತರ ಕೊಳೆಯಿಂದ ರಕ್ಷಿಸುತ್ತದೆ. ಆದರೆ ಇಯರ್‌ಬಡ್‌ಗಳನ್ನು ಡಾಕ್ ಮಾಡುವ ಮೊದಲು ಚಾರ್ಜಿಂಗ್ ಕೇಸ್ ಸಹ ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ. ಯಾವುದೇ ತೇವಾಂಶ ಅಥವಾ ದ್ರವವು ನಿಮ್ಮ ಇಯರ್‌ಬಡ್‌ಗಳಿಗೆ ತೊಂದರೆ ಉಂಟುಮಾಡಬಹುದು.

Best Mobiles in India

English summary
Here are five of the most occurring issues with wireless earbuds! Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+