ಭಾರತದಲ್ಲಿ 50,000 ರೂ. ಒಳಗೆ ಲಭ್ಯವಿರುವ ಐದು ಅತ್ಯುತ್ತಮ 4K LED ಟಿವಿಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಟಿವಿ ವಲಯ ಸಾಕಷ್ಟು ಬದಲಾಗಿದೆ. ಗಾತ್ರಗಳ ಜೊತೆಗೆ ಹೆಚ್ಚುವರಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್‌ಟಿವಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಅದರಲ್ಲೂ 4K ಅಲ್ಟ್ರಾ ಹೈ ಡೆಫಿನಿಷನ್ ರೆಸಲ್ಯೂಶನ್ ಹೊಂದಿರುವ ಸ್ಮಾರ್ಟ್‌ಟಿವಿಗಳು ಇತ್ತೀಚಿನ ದಿನಗಳಲ್ಲಿ ಜಾಸ್ತಿ ಸೌಂಡ್‌ ಮಾಡುತ್ತಿವೆ. ಇದೇ ಕಾರಣಕ್ಕೆ ಎಲ್ಇಡಿ ಟಿವಿಗಳ ಬೆಲೆ ಕಳೆದ ಕೆಲವು ತಿಂಗಳುಗಳಲ್ಲಿ ಇಳಿದಿದೆ. ಇದರ ನಡುವೆಯೂ 4K LED ಟಿವಿಗಳು ತಮ್ಮದೇ ಆದ ಜನಪ್ರಿಯತೆಯನ್ನು ಪಡೆದುಕೊಂಡಿವೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ವಲಯದಲ್ಲಿ 4K ಎಲ್‌ಇಡಿ ಟಿವಿಗಳಿಗೆ ತನ್ನದೇ ಆದ ಬೇಡಿಕೆ ಇದೆ. ಇನ್ನು ಈ ಎಲ್‌ಇಡಿ ಸ್ಮಾರ್ಟ್‌ಟಿವಿಗಳು ಹೆಚ್ಚು ಕಡಿಮೆ ಎಲ್ಲವೂ ಒದೇ ತೆರನಾದ ವಿನ್ಯಾಸ ಹಾಗೂ ಫೀಚರ್ಸ್‌ಗಳನ್ನು ಹೊಂದಿವೆ. ಒಂದು ವೇಳೆ ನೀವು 4K ಎಲ್‌ಇಡಿ ಟಿವಿಯನ್ನು 50,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವುದಾದರೆ ಅದಕ್ಕೂ ಹಲವು ಆಯ್ಕೆಗಳಿವೆ. ನಾವು ಈ ಲೇಖನದಲ್ಲಿ ನಿಮಗಾಗಿ 50,000 ರೂ.ಗಿಂತ ಕಡಿಮೆ ಬೆಲೆ ಇರುವ ಕೆಲವು ಜನಪ್ರಿಯ 4K LED ಟಿವಿಗಳ ಬಗ್ಗೆ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಕೊಡಾಕ್ 55 UHD XSMART(55-ಇಂಚು)

ಕೊಡಾಕ್ 55 UHD XSMART(55-ಇಂಚು)

ಕೊಡಾಕ್ 55-ಇಂಚಿನ 4K LED ಟಿವಿ 3840x2160 ಪಿಕ್ಸೆಲ್‌ಗಳೊಂದಿಗೆ 4 ಕೆ ರೆಸಲ್ಯೂಶನ್ ನೀಡುತ್ತದೆ. ಇದು 55 ಇಂಚಿನ ಡಿಸ್ಪ್ಲೇ 60Hz ನ ರಿಫ್ರೆಶ್ ದರವನ್ನು ಹೊಂದಿದೆ. ಈ ಟಿವಿ ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ವೆಬ್ ಬ್ರೌಸಿಂಗ್, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಹಾಟ್‌ಸ್ಟಾರ್ ಮತ್ತು ಜನಪ್ರಿಯ ಅಪ್ಲಿಕೇಶನ್‌ಗಳಿಗೆ ಸ್ಥಳೀಯ ಬೆಂಬಲವನ್ನು ನೀಡುತ್ತದೆ. ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 ಎಚ್‌ಡಿಎಂಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, ಎತರ್ನೆಟ್ ಪೋರ್ಟ್ ಮತ್ತು ಎವಿ ಇನ್‌ಪುಟ್ ಬೆಂಬಲಿಸಲಿದೆ. ಅಲ್ಲದೆ ಬ್ಲೂಟೂತ್ ಮತ್ತು ವೈ-ಫೈಯನ್ನು ಬೆಂಬಲಿಸಲಿದೆ. ಇದರ ಬೆಲೆ 39,999 ರೂ.ಆಗಿದೆ.

ಶಿಯೋಮಿ ಮಿ LED ಸ್ಮಾರ್ಟ್ ಟಿವಿ 4 (55-ಇಂಚು)

ಶಿಯೋಮಿ ಮಿ LED ಸ್ಮಾರ್ಟ್ ಟಿವಿ 4 (55-ಇಂಚು)

ಶಿಯೋಮಿ ಮಿ LED ಸ್ಮಾರ್ಟ್ ಟಿವಿ 4 ಸ್ಯಾಮ್ಸಂಗ್ 10-ಬಿಟ್ ವಿಎ ಪ್ಯಾನಲ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್‌ಗಳೊಂದಿಗೆ 4 ಕೆ ರೆಸಲ್ಯೂಶನ್ ಹೊಂದಿದೆ. 54.5-ಇಂಚಿನ ಡಿಸ್ಪ್ಲೇ 60Hz ನ ರಿಫ್ರೆಶ್ ದರ ಮತ್ತು ಹೆಚ್ಚಿನ-ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಇದು ಆಂಡ್ರಾಯ್ಡ್ 6 ಆಪರೇಟಿಂಗ್ ಸಿಸ್ಟಮ್ ಆಧಾರಿತ ಪ್ಯಾಚ್‌ವಾಲ್ ಇಂಟರ್ಫೇಸ್ ಚಾಲನೆಯಲ್ಲಿರುವ ಸ್ಮಾರ್ಟ್ ಟಿವಿ ಆಗಿದೆ. ಈ ಸ್ಮಾರ್ಟ್‌ಟಿವಿ 3 ಎಚ್‌ಡಿಎಂಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, ಎತರ್ನೆಟ್ ಪೋರ್ಟ್ ಮತ್ತು ಎವಿ ಇನ್‌ಪುಟ್ ನೀಡುತ್ತದೆ. ಇದರೊಂದಿಗೆ, ಬ್ಲೂಟೂತ್ ಮತ್ತು ವೈ-ಫೈ ಸಂಪರ್ಕವನ್ನು ಸಹ ಬೆಂಬಲಿಸಲಿದೆ. ಇದರ ಬೆಲೆ 44,999 ರೂ.ಆಗಿದೆ.

VU 49SU131 ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್‌ LED ಟಿವಿ (49-ಇಂಚು)

VU 49SU131 ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್‌ LED ಟಿವಿ (49-ಇಂಚು)

ವಿಯು 49SU131 ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್‌ LED ಟಿವಿ 3840x2160 ಪಿಕ್ಸೆಲ್‌ಗಳೊಂದಿಗೆ 4ಕೆ ರೆಸಲ್ಯೂಶನ್ ನೀಡುತ್ತದೆ. ಇದು ಯೂಟ್ಯೂಬ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮತ್ತು ಇತರ ಅಪ್ಲಿಕೇಶನ್‌ಗಳ ಬೆಂಬಲದೊಂದಿಗೆ ಆಂಡ್ರಾಯ್ಡ್ ಓಎಸ್ ಚಾಲನೆಯಲ್ಲಿರುವ 49 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ ಆಗಿದೆ. ಈ ಸ್ಮಾರ್ಟ್‌ಟಿವಿ 3HDMI ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು ಮತ್ತು ಎವಿ ಇನ್‌ಪುಟ್ ನೀಡುತ್ತದೆ. ಇದರೊಂದಿಗೆ, ಈ ಸ್ಮಾರ್ಟ್‌ಟಿವಿ ಬ್ಲೂಟೂತ್ ಮತ್ತು ವೈ-ಫೈ ಸಂಪರ್ಕವನ್ನು ಬೆಂಬಲಿಸಲಿದೆ. ಇದರ ಬೆಲೆ 46,999 ರೂ.ಆಗಿದೆ.

ಬಿಪಿಎಲ್ 4K ಅಲ್ಟ್ರಾ ಹೆಚ್‌ಡಿ LED ಸ್ಮಾರ್ಟ್ ಟಿವಿ (49-ಇಂಚುಗಳು)

ಬಿಪಿಎಲ್ 4K ಅಲ್ಟ್ರಾ ಹೆಚ್‌ಡಿ LED ಸ್ಮಾರ್ಟ್ ಟಿವಿ (49-ಇಂಚುಗಳು)

ಬಿಪಿಎಲ್ 4K ಅಲ್ಟ್ರಾ ಹೆಚ್‌ಡಿ LED ಸ್ಮಾರ್ಟ್ ಟಿವಿ 3840x2160 ಪಿಕ್ಸೆಲ್‌ಗಳೊಂದಿಗೆ 4 ಕೆ ರೆಸಲ್ಯೂಶನ್‌ ಹೊಂದಿದೆ. ಇದು 49 ಇಂಚಿನ ಎಲ್‌ಇಡಿ ಸ್ಕ್ರೀನ್‌ ಹೊಂದಿದೆ. ಇದು ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಇತರರ ಬೆಂಬಲದೊಂದಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ 3 ಎಚ್‌ಡಿಎಂಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, ವಿಜಿಎ ​​ಮತ್ತು ಎವಿ ಇನ್‌ಪುಟ್ ನೀಡುತ್ತದೆ. ಇದರೊಂದಿಗೆ, ವೈ-ಫೈ ಸಂಪರ್ಕವನ್ನು ಸಹ ನೀಡುತ್ತದೆ. ಇದರ ಬೆಲೆ 38,990 ರೂ. ಆಗಿದೆ.

ಪ್ಯಾನಸೋನಿಕ್ VIERA 4K UHD LED TV (43-ಇಂಚು)

ಪ್ಯಾನಸೋನಿಕ್ VIERA 4K UHD LED TV (43-ಇಂಚು)

ಪ್ಯಾನಾಸೋನಿಕ್ ವೈರಾ ಟಿವಿ 3840 x 2160 ಪಿಕ್ಸೆಲ್‌ಗಳ 4ಕೆ ರೆಸಲ್ಯೂಶನ್‌ ಹೊದಿದೆ. ಇದು 43-ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60Hz ನ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 4000: 1 ರ ವ್ಯತಿರಿಕ್ತ ಅನುಪಾತವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 3 ಎಚ್‌ಡಿಎಂಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, ವಿಜಿಎ ​​ಮತ್ತು ಎವಿ ಇನ್‌ಪುಟ್ ನೀಡುತ್ತದೆ. ಇದರೊಂದಿಗೆ ಈ ಸ್ಮಾರ್ಟ್‌ಟಿವಿ ಬ್ಲೂಟೂತ್ ಸಂಪರ್ಕವನ್ನು ಸಹ ನೀಡುತ್ತದೆ. ಇದರ ಬೆಲೆ 45,930 ರೂ.ಆಗಿದೆ.

Best Mobiles in India

Read more about:
English summary
Here are some popular 4K LED TVs under Rs 50,000 that you can consider.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X