ಮಾರುಕಟ್ಟೆಯಲ್ಲಿ ಲಭ್ಯವಿರುವ 16 ಇಂಚಿನ ಗ್ರಾತ್ರದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

|

ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗಿದೆ. ಹೆಚ್ಚಿನ ಕೆಲಸ ಕಾರ್ಯಗಳಿಗೆ ಲ್ಯಾಪ್‌ಟಾಪ್‌ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಆಕರ್ಷಕ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇನ್ನು ಲ್ಯಾಪ್‌ಟಾಪ್‌ಗಳು ಹಲವು ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಹೆಚ್ಚಿನ ಮಂದಿ 16 ಇಂಚಿನ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಬಯಸುತ್ತಾರೆ. ಈ ಲ್ಯಾಪ್‌ಟಾಪ್‌ನಲ್ಲಿ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಸಿಗುವುದರಿಂದ ಬಳಕೆದಾರರು ಇದನ್ನು ಹೇಚ್ಚು ಇಷ್ಟಪಡುತ್ತಾರೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಖರೀದಿಸುವಾಗ ಅದರ ಗಾತ್ರದ ಆಯ್ಕೆಯೂ ಕೂಡ ಬಹುಮುಖ್ಯವಾಗಿದೆ. ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಬೇಕು ಎನಿಸಿದರೆ ಹೆಚ್ಚಿನ ಗಾತ್ರದ ಲ್ಯಾಪ್‌ಟಾಪ್‌ ಉತ್ತಮ ಆಯ್ಕೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿ 16 ಇಂಚಿನ ಲ್ಯಾಪ್‌ಟಾಪ್‌ಗಳು ಸಾಕಷ್ಟಿವೆ. ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಖರೀದಿಗೆ ಲಭ್ಯವಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ 16 ಇಂಚಿನ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಮ್ಯಾಕ್‌ಬುಕ್ ಪ್ರೊ

ಆಪಲ್ ಮ್ಯಾಕ್‌ಬುಕ್ ಪ್ರೊ

ಆಪಲ್‌ ಕಂಪೆನಿಯ ಹೊಸ ಮ್ಯಾಕ್‌ಬುಕ್ ಪ್ರೊ 16 ಇಂಚಿನ ಅತ್ಯುತ್ತಮ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದು ಹೊಸ ಎಂ 1 ಪ್ರೊ ಅಥವಾ ಎಂ 1 ಮ್ಯಾಕ್ಸ್ ಚಿಪ್‌ ಬಲದಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ ಹೊಸ 1080 ಪಿ ಸಾಮರ್ಥ್ಯದ ಕ್ಯಾಮೆರಾ ಹೊಂದಿದೆ. ಇನ್ನು ಈ ಹೊಸ ಮ್ಯಾಕ್‌ಬುಕ್ ಪ್ರೊ 2,39,900ರೂ.ಬೆಲೆಗೆ ಲಭ್ಯವಾಗಲಿದೆ. ಆದರೆ ನೀವು ಹಳೆಯ 16-ಇಂಚಿನ ಮ್ಯಾಕ್‌ಬುಕ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಲೆನೊವೊ ಲೀಜನ್ 7

ಲೆನೊವೊ ಲೀಜನ್ 7

ಲೆನೊವೊ ಲೀಜನ್ 7 ಲ್ಯಾಪ್‌ಟಾಪ್‌ 16 ಇಂಚಿನ QHD IPS ಸ್ಕ್ರೀನ್ ಹೊಂದಿದೆ. ಇದು ರೈಜೆನ್ 9 5900HX ಪ್ರೊಸೆಸರ್ ಹೊಂದಿದ್ದು, 32GB RAM ಮತ್ತು 1TB ಸ್ಟೋರೇಜ್ ಹೊಂದಿದೆ. ಇದು ಗೇಮಿಂಗ್‌ ಲ್ಯಾಪ್‌ಟಾಪ್‌ ಆಗಿದ್ದು, ಗೇಮಿಂಗ್‌ ಪ್ರಿಯರ ನೆಚ್ಚಿನ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 165Hz ರಿಫ್ರೆಶ್ ರೇಟ್‌ ಹೊಂದಿರುವುದು ಕೂಡ ಇದರ ಪ್ರಮುಖ ಹೈಲೈಟ್‌ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ 1,69,990 ರೂ. ಬೆಲೆಗೆ ಲಭ್ಯವಾಗಲಿದೆ.

ಎಲ್‌ಜಿ ಗ್ರಾಮ್ 16

ಎಲ್‌ಜಿ ಗ್ರಾಮ್ 16

ಎಲ್‌ಜಿ ಗ್ರಾಮ್ ಸರಣಿಯ ಲ್ಯಾಪ್‌ಟಾಪ್‌ಗಳಲ್ಲಿ 16ಇಂಚಿನ ಲ್ಯಾಪ್‌ಟಾಪ್‌ ಕೂಡ ಲಭ್ಯವಿದೆ. ಇದು 2560 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 16 ಇಂಚಿನ WQXGA ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇದು ಇಂಟೆಲ್‌ ಐರಿಸ್‌ Xe ಗ್ರಾಫಿಕ್ಸ್‌ ಹೊಂದಿದ್ದು, ಇಂಟೆಲ್‌ 11ನೇ ತಲೆಮಾರಿನ i7 ಪ್ರೊಸೆಸರ್‌ ಹೊಂದಿದೆ. ಇದರ ಬೆಲೆ 92,990ರೂ. ಆಗಿದೆ.

ಹೆಚ್‌ಪಿ ವಿಕ್ಟಸ್ 16

ಹೆಚ್‌ಪಿ ವಿಕ್ಟಸ್ 16

ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ಪೈಕಿ HP ಕಂಪೆನಿಯ ಲ್ಯಾಪ್‌ಟಾಪ್‌ ಇದ್ದೆ ಇರುತ್ತದೆ. ಇನ್ನು ನೀವು 16-ಇಂಚಿನ ಲ್ಯಾಪ್‌ಟಾಪ್‌ ಖರೀದಿಸುವುದಾದರೆ ಹೆಚ್‌ಪಿ ವಿಕ್ಟಸ್ 16 ಲ್ಯಾಪ್‌ಟಾಪ್‌ ಉತ್ತಮ ಆಯ್ಕೆಯಾಗಿದೆ. ಈ ಲ್ಯಾಪ್‌ಟಾಪ್‌ 16.1-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 8GB RAM ಮತ್ತು 512GB ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ Nvidia RTX 3050 GPU ಸೇರಿದಂತೆ ಹಲವು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ರೈಜನ್ 5 5600H ವೇರಿಯಂಟ್ ಆಯ್ಕೆಯು 72,990ರೂ.ಬೆಲೆಗೆ ಲಭ್ಯವಾಗಲಿದೆ.

ಆಸುಸ್ ROG Zephyrus M16

ಆಸುಸ್ ROG Zephyrus M16

ಆಸುಸ್ ROG Zephyrus M16 ಲ್ಯಾಪ್‌ಟಾಪ್‌ ಒಂದು ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ. ಇದು 1920 X 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 16 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ i7 11800H ಪ್ರೊಸೆಸರ್ ಹೊಂದಿದೆ. ಈ ಲ್ಯಾಪ್‌ಟಾಪ್‌ 16GB RAM ಮತ್ತು 1TB SSD ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದು 1,60,990 ರೂ. ಬೆಲೆಗೆ ಲಭ್ಯವಾಗಲಿದೆ. ಇದು ಗೇಮರುಗಳಯ ಆಯ್ಕೆಮಾಡುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ.

Best Mobiles in India

English summary
Here are the best 16-inch laptops ​you can get your hands on right now.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X