ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ಬಳಕೆ ಹೆಚ್ಚಿನ ಜನಪ್ರಿಯತೆಯನ್ನ ಪಡದುಕೊಳ್ಳುತ್ತಿದೆ. ಸ್ಮಾರ್ಟ್‌ಫೊನ್‌ ಮಾರುಕಟ್ಟೆಯಂತೆಯೆ ಲ್ಯಾಪ್‌ಟಾಪ್‌ ವಲಯ ಕೂಡ ಸಾಕಷ್ಟು ಹೊಸತನದ ಲ್ಯಾಪ್‌ಟಾಪ್‌ಗಳಿಗೆ ಸಾಕ್ಷಿಯಾಗುತ್ತಿದೆ. ಸದ್ಯ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಹಲವು ವೈವಿಧ್ಯಮಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಅನೇಕ ಮಾದರಿಗಳಲ್ಲಿ ಮತ್ತು ವಿವಿಧ ಗಾತ್ರಗಳಲ್ಲಿ ದೊರೆಯುತ್ತಿದ್ದು, ಗ್ರಾಹಕರ ಅಗತ್ಯಗಳಿಗೆ ಅನುಸಾರವಾದ ಫೀಚರ್ಸ್‌ಗಳನ್ನು ಹೊಂದಿವೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿರುವಂತೆ ಇಲ್ಲಿಯೂ ಪೈಪೋಟಿ ಇದ್ದು, ಪ್ರಮುಖ ಲ್ಯಾಪ್‌ಟಾಪ್‌ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಹೊಸತನದ ಲ್ಯಾಪ್‌ಟಾಪ್‌ಗಳಿಗೆನೂ ಭರವಿಲ್ಲ. ಹಲವು ಹೊಸತನದ ಫಿಚರ್ಸ್‌ಗಳನ್ನ ಹೊಂದಿರುವ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿವೆ. ಆದರೂ ಗ್ರಾಹಕರು ಮಾತ್ರ ಬ್ರ್ಯಾಮಡ್‌ ಕಂಪೆನಿಗಳ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ನೀವು ಲ್ಯಾಪ್‌ಟಾಪ್‌ ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮ್ಯಾಕ್‌ಬುಕ್ ಏರ್

ಮ್ಯಾಕ್‌ಬುಕ್ ಏರ್

ನೀವು ಲ್ಯಾಪ್‌ಟಾಪ್‌ ಖರಿದಿಸಬೇಕು ಎಂದು ಕೊಂಡರೆ ಆಪಲ್‌ನ ಮ್ಯಾಕ್‌ಬುಕ್ ಏರ್, ಅತ್ಯುತ್ತಮ ಆಯ್ಕೆಯಾಗಿದೆ. ಇದು ಆಪಲ್ ಸಿಲಿಕಾನ್ ಎಂ 1 ಚಿಪ್‌ಸೆಟ್ ರೂಪದಲ್ಲಿ ತನ್ನ ಇತ್ತೀಚಿನ ನವೀಕರಣವನ್ನು ಪಡೆದುಕೊಂಡಿದೆ. ಇದು 13 ಇಂಚಿನ ಮ್ಯಾಕ್‌ಬುಕ್ ಆಗಿದ್ದು, ಭಾರತದಲ್ಲಿ 92,900 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಮ್ಯಾಕ್ ಬುಕ್ ಏರ್ ಸೆಕೆಂಡಿಗೆ 11 ಟ್ರಿಲಿಯನ್ ಕಾರ್ಯಾಚರಣೆಗಳನ್ನು ಸಾಧಿಸಲು 8-ಕೋರ್ ಸಿಪಿಯು ಮತ್ತು 8-ಕೋರ್ ಜಿಪಿಯು ಹೊಂದಿರುವ ಎಂ 1 ಚಿಪ್ ಅನ್ನು ಬಳಸುತ್ತದೆ. ಇದು 15 ಗಂಟೆಗಳ ವಾಯರ್‌ಲೆಸ್ ವೆಬ್ ಬ್ರೌಸಿಂಗ್ ಮತ್ತು 18 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಸಹ ಹೊಂದಿದೆ.

ಅಸುಸ್ ROG ಜೆಫೈರಸ್ G14

ಅಸುಸ್ ROG ಜೆಫೈರಸ್ G14

ಲ್ಯಾಪ್‌ಟಾಪ್‌ನಂತೆ ದ್ವಿಗುಣಗೊಳಿಸುವಂತಹ ಗೇಮಿಂಗ್ ಯಂತ್ರವನ್ನು ಖರೀದಿಸಲು ಬಯಸುವ ಬಳಕೆದಾರರಿಗೆ ಇದು ಸೂಕ್ತ ಆಯ್ಕೆಯಾಗಿದೆ. AMD ರೈಜೆನ್ 9 4900HS ಪ್ರೊಸೆಸರ್ ನಿಂದ 8 ಕೋರ್ ಮತ್ತು 16 ಥ್ರೇಡ್ಸ್‌ಗಳನ್ನು ಹೊಂದಿದ್ದು, ಪ್ರಬಲ ಕಾರ್ಯಕ್ಷಮತೆಯನ್ನು ಹೊಮದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕಸ್ಟಮ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು ಡಾಟ್ ಮ್ಯಾಟ್ರಿಕ್ಸ್ ವಿನ್ಯಾಸದಲ್ಲಿ ಫಿಂಗರ್‌ಪ್ರಿಂಟ್-ಪ್ರತಿರೋಧದೊಂದಿಗೆ ಮೆಗ್ನೀಸಿಯಮ್-ಅಲಾಯ್ ಕೀಬೋರ್ಡ್ ಫ್ರೇಮ್ ಅನ್ನು ಒಳಗೊಂಡಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ವಿಂಡೋಸ್ ಹಲೋನೊಂದಿಗೆ ಒನ್-ಟಚ್ ಲಾಗ್-ಇನ್‌ಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ಫೀಚರ್ಸ್‌ಗಳನ್ನು ಸಹ ಹೊಂದಿದೆ. ಇದರ ಬೆಲೆ 80,990 ರೂ.ಗಳಿಂದ ಪ್ರಾರಂಭವಾಗಲಿದೆ.

ಡೆಲ್ G5 15

ಡೆಲ್ G5 15

ಡೆಲ್‌ G5 15 ಲ್ಯಾಪ್‌ಟಾಪ್‌ ಉತ್ಪಾದಕತೆ ಮತ್ತು ಗೇಮಿಂಗ್ ಲ್ಯಾಪ್‌ಟಾಪ್‌ಗಳಂತೆ ಬಳಸಬಹುದಾಗಿದೆ. ಇದು ಫುಲ್‌ ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ 10 ನೇ ಜನ್ ಕೋರ್ I7 10750 ಹೆಚ್ ಮೊಬೈಲ್ ಪ್ರೊಸೆಸರ್ ಅನ್ನು ಹೊಂದಿದೆ. ಹಾಗೇಯೇ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ತನ್ನ ಅದ್ಭುತ ಫೀಚರ್ಸ್‌ ಸೆಟ್ ಮತ್ತು ವಿನ್ಯಾಸಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತದೆ.

ಹಾನರ್‌ ಮ್ಯಾಜಿಕ್‌ ಬುಕ್ 15

ಹಾನರ್‌ ಮ್ಯಾಜಿಕ್‌ ಬುಕ್ 15

ಹಾನರ್ ಮ್ಯಾಜಿಕ್‌ ಬುಕ್ 15 ಲ್ಯಾಪ್‌ಟಾಪ್‌ 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಎಎಮ್‌ಡಿ ರೈಜೆನ್ 5 ಪ್ರೊಸೆಸರ್ ಜೊತೆಗೆ 8GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿಗಾಗಿ, ಇದು ಯುಎಸ್‌ಬಿ 2.0, ಯುಎಸ್‌ಬಿ 3.0, ಮತ್ತು ಯುಎಸ್‌ಬಿ 3.1 ಸೇರಿದಂತೆ 3 ಯುಎಸ್‌ಬಿ ಪೋರ್ಟ್‌ಗಳ ಜೊತೆಗೆ ಎಚ್‌ಡಿಎಂಐ ಪೋರ್ಟ್, ಹೆಡ್‌ಫೋನ್ ಮತ್ತು ಮೈಕ್ ಜ್ಯಾಕ್‌ಗಳನ್ನು ನೀಡುತ್ತದೆ. ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸಹ ಇದೆ, ಇದು 65W ನಲ್ಲಿ ವೇಗವಾಗಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಲ್ಯಾಪ್‌ಟಾಪ್‌ ಅನ್ನು ಅನ್ನು ಭಾರತದಲ್ಲಿ 42,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಮಿ ನೋಟ್‌ಬುಕ್ 14ಹೊರೈಜನ್ ಎಡಿಷನ್‌

ಮಿ ನೋಟ್‌ಬುಕ್ 14ಹೊರೈಜನ್ ಎಡಿಷನ್‌

ಮಿ ನೋಟ್‌ಬುಕ್ 14ಹೊರೈಜನ್ ಎಡಿಷನ್ ಈ ವರ್ಷ ಶಿಯೋಮಿಯಿಂದ ಬಿಡುಗಡೆ ಆದ ಪ್ರಮುಖ ಲ್ಯಾಪ್‌ಟಾಪ್ ಆಗಿದೆ. ಇದು ಕಿರಿದಾದ-ಅಂಚಿನ ಡಿಸ್‌ಪ್ಲೇ ಜೊತೆಗೆ ನಯವಾದ ವಿನ್ಯಾಸವನ್ನು ಹೊಂದಿದೆ. ಇದು 14 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ, ಇದು ಸ್ಕ್ರೀನ್-ಟು-ಬಾಡಿ 91% ಅನುಪಾತವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಯುಎಸ್‌ಬಿ 3.1 ಪೋರ್ಟ್‌ಗಳು, ಯುಎಸ್‌ಬಿ 2.0 ಪೋರ್ಟ್, ಟೈಪ್-ಸಿ ಪೋರ್ಟ್, ಎಚ್‌ಡಿಎಂಐ 1.4 ಬಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಕೋರ್ I5 ರೂಪಾಂತರವು 54,999 ರೂಗಳ ಬೆಲೆಯಲ್ಲಿ ಬರುತ್ತದೆ, ಆದರೆ ಕೋರ್ i7 ರೂಪಾಂತರವು 59,999 ರೂಗಳಿಗೆ ಲಭ್ಯವಾಗಲಿದೆ.

Best Mobiles in India

English summary
2020 has seen a number of impressive laptops being launched in the country. Here are the best that are available right now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X