2022ರಲ್ಲಿ ಆಪಲ್‌ ಕಂಪೆನಿ ಬಿಡುಗಡೆ ಮಾಡಲಿರುವ ಬಹುನಿರೀಕ್ಷಿತ ಪ್ರಾಡಕ್ಟ್‌ಗಳು!

|

ಟೆಕ್‌ ದೈತ್ಯ ಆಪಲ್‌ ಕಂಪೆನಿಯ ಪ್ರಾಡಕ್ಟ್‌ಗಳ ಬಗ್ಗೆ ಟೆಕ್‌ ವಲಯದಲ್ಲಿ ಬೆಟ್ಟದಷ್ಟು ನಿರೀಕ್ಷೆ ಇರುತ್ತದೆ. ಇದೇ ಕಾರಣಕ್ಕೆ ಆಪಲ್‌ ಕಂಪೆನಿಯ ಪ್ರಾಡಕ್ಟ್‌ಗಳು ಬಿಡುಗಡೆ ಆಗುವ ವಿಚಾರ ಸಿಕ್ಕಾಪಟ್ಟೆ ಹೈಪ್‌ ಕ್ರಿಯೆಟ್‌ ಮಾಡುತ್ತದೆ. ಇನ್ನು ಆಪಲ್‌ ಕಂಪೆನಿ ಕಳೆದ ವರ್ಷ ಅಂದರೆ 2021ರಲ್ಲಿ ಐಫೋನ್ 13 ಸೇರಿದಂತೆ ಅನೇಕ ಪ್ರಾಡಕ್ಟ್‌ಗಳನ್ನು ಲಾಂಚ್‌ ಮಾಡಿತ್ತು. ಆಪಲ್ M1 ಪ್ರೊ ಮತ್ತು M1 ಮ್ಯಾಕ್ಸ್ ಚಿಪ್‌ಸೆಟ್‌ಗಳು, ಆಪಲ್‌ ಏರ್‌ಪಾಡ್ಸ್‌ 3 ಹಾಗೂ ಮ್ಯಾಕ್‌ಬುಕ್ ಪ್ರೋಸ್ ನಂತಹ ಪ್ರಾಡಕ್ಟ್‌ಗಳನ್ನು ಪರಿಚಯಿಸಿತ್ತು. ಇದೀಗ 2022ರಲ್ಲಿಯೂ ಹಲವು ಪ್ರಾಡಕ್ಟ್‌ಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ.

ಆಪಲ್‌

ಹೌದು, 2022ರಲ್ಲಿ ಆಪಲ್‌ ಕಂಪೆನಿ ಯಾವೆಲ್ಲಾ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಬಹುದು ಎನ್ನುವ ನಿರೀಕ್ಷೆ ಸಾಕಷ್ಟು ಗರಿಗೆದರಿದೆ. ಇದರ ನಡುವೆ ಸಾಕಷ್ಟು ಉತ್ಪನ್ನಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಸೋರಿಕೆಯಾಗಿದೆ. ಅದರಂತೆ ಈ ವರ್ಷ ಆಪಲ್‌ ಹೊಸ ಐಫೋನ್‌ SE, ವೇಗವಾದ M2 ಚಿಪ್‌ಸೆಟ್‌ ಒಳಗೊಂಡ ಮ್ಯಾಕ್‌ಬುಕ್‌ ಏರ್‌, ಮ್ಯಾಕ್‌ ಪ್ರೊ, ಆಪಲ್‌ ವಾಚ್‌ ಸಿರೀಸ್‌ 8, ಹೊಸ ಐಪ್ಯಾಡ್‌ಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಹಾಗಾದ್ರೆ 2022ರಲ್ಲಿ ಆಪಲ್‌ ಕಂಪೆನಿ ಏನೆಲ್ಲಾ ಬಿಡುಗಡೆ ಮಾಡುವ ಸಾಧ್ಯತೆ ಇದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ SE+ 5G

ಐಫೋನ್‌ SE+ 5G

ಆಪಲ್ ಕಂಪೆನಿ ಈ ವರ್ಷ ಬಿಡುಗಡೆ ಮಾಡಲಿರುವ ನಿರೀಕ್ಷಿತ ಪ್ರಾಡಕ್ಟ್‌ಗಳಲ್ಲಿ ಐಫೋನ್‌ SE ಕೂಡ ಒಂದಾಗಿದೆ. ಹೊಸ ತಲೆಮಾರಿನ ಐಫೋನ್‌ SE+ 5G ಪರಿಚಯಿಸುವುದಕ್ಕಾಗಿ ಆಪಲ್‌ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಆದರೆ ಈ ಡಿವೈಸ್‌ನ ಹೆಸರನ್ನು ಇನ್ನೂ ದೃಢೀಕರಿಸಲಾಗಿಲ್ಲ. ಇನ್ನು ಈ ಫೋನ್ iPhone SE 2020 ಗೆ ಸಮಾನವಾದ ಆಯಾಮಗಳಲ್ಲಿ ಬರುವ ನಿರೀಕ್ಷೆಯಿದೆ. ಆದಾಗ್ಯೂ, ಐಫೋನ್‌ SE+ 5G ಒಂದು ದರ್ಜೆಯನ್ನು ಹೊಂದಿದೆಯೇ ಅಥವಾ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ದಪ್ಪವಾದ ಚಿನ್‌ಗಳನ್ನು ಪಡೆಯುತ್ತದೆಯೇ ಎಂದು ಖಚಿತವಾಗಿಲ್ಲ. ಇನ್ನು ಈ ಡಿವೈಸ್‌ A15 ಬಯೋನಿಕ್ ಚಿಪ್‌ಸೆಟ್ ಹೊಂದಿರುವ ಸಾಧ್ಯತೆ ಇದೆ.

ಮ್ಯಾಕ್‌ಬುಕ್ ಏರ್ M2

ಮ್ಯಾಕ್‌ಬುಕ್ ಏರ್ M2

ಆಪಲ್‌ ಕಂಪೆನಿ ಹೊಸ ಮ್ಯಾಕ್‌ಬುಕ್ ಏರ್ 2022 ರಲ್ಲಿ ಅತ್ಯಂತ ನಿರೀಕ್ಷಿತ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ಫ್ಲಾಟ್ ಅಂಚುಗಳು ಮತ್ತು ಸ್ಲಿಮ್ಮರ್ ಬೆಜೆಲ್‌ ಹೊಂದಿರುವ ರಿಫ್ರೆಶ್ ವಿನ್ಯಾಸದಲ್ಲಿ ನೀಡಲಾಗುವುದು ಎಂದು ಆಪಲ್‌ ಕಂಪೆನಿ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್ ಹೊಸ ಮ್ಯಾಕ್‌ಬುಕ್ ಪ್ರೊ ಅನ್ನು ಹೋಲುತ್ತದೆ ಎಂದು ಕೆಲವು ಸೋರಿಕೆಗಳಲ್ಲಿ ವರದಿಯಾಗಿದೆ. ಇನ್ನು ಮ್ಯಾಕ್‌ಬುಕ್ ಏರ್ 2022 ಬಿಳಿ, ನೀಲಿ, ನೀಲಕ, ಕಿತ್ತಳೆ ಮತ್ತು ಕೆಂಪು ಸೇರಿದಂತೆ ಹಲವು ಬಣ್ಣಗಳ ಆಯ್ಕೆಗಳಲ್ಲಿ ಬರುವ ಸಾಧ್ಯತೆ ಇದೆ. ಮ್ಯಾಕ್‌ಬುಕ್ ಏರ್ 2022 ನಲ್ಲಿನ ಚಿಪ್‌ಸೆಟ್ ಅನ್ನು M2 ಎಂದು ಹೆಸರಿಸುವ ನಿರೀಕ್ಷೆ ಕೂಡ ಇಡಲಾಗಿದೆ.

ಮ್ಯಾಕ್ ಪ್ರೊ

ಮ್ಯಾಕ್ ಪ್ರೊ

ಇದಲ್ಲದೆ ಆಪಲ್‌ ಕಂಪೆನಿ ಈ ವರ್ಷ ಮ್ಯಾಕ್ ಪ್ರೊ ಅನ್ನು ಲಾಂಚ್‌ ಮಾಡಲಿದೆ ಎನ್ನಲಾಗಿದೆ. 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ಇದನ್ನು ಬಿಡುಗಡೆ ಮಾಡಲಿದೆ ಎಂದು ಆನ್‌ಲೈನ್‌ನಲ್ಲಿ ಮಾಹಿತಿ ಸೋರಿಕೆಯಾಗಿದೆ. ಹೊಸ ವರದಿಯ ಪ್ರಕಾರ ಮ್ಯಾಕ್‌ ಪ್ರೊ M1 ಮ್ಯಾಕ್ಸ್‌ ಗಿಂತ ಹೆಚ್ಚು ಶಕ್ತಿಯುತವಾದ ಚಿಪ್‌ಸೆಟ್ ಅನ್ನು ಪಡೆಯುತ್ತದೆ ಎನ್ನಲಾಗಿದೆ. ಇದಲ್ಲದೆ ಈ ಹೊಸ ಚಿಪ್‌ಸೆಟ್ M1 ಮ್ಯಾಕ್ಸ್‌ಗಿಂತ ಹೆಚ್ಚುವರಿ ಕೋರ್‌ಗಳನ್ನು ಪಡೆಯುತ್ತದೆ ಎಂದು ವರದಿಯಾಗಿದೆ. ಇನ್ನೊಂದೆಡೆ ಮ್ಯಾಕ್ ಪ್ರೊ ಅನ್ನು 20 ಅಥವಾ 40 ಕಂಪ್ಯೂಟಿಂಗ್ ಕೋರ್ ಕಾನ್ಫಿಗರೇಶನ್‌ಗಳಲ್ಲಿ ನೀಡಬಹುದು ಎಂದು ಸಹ ಹೇಳಲಾಗಿದೆ.

ಐಫೋನ್ 14

ಐಫೋನ್ 14

ಇನ್ನು ಈ ವರ್ಷದ ಬಹು ನಿರೀಕ್ಷಿತ ಡಿವೈಸ್‌ಗಳಲ್ಲಿ ಐಫೋನ್ 14ಕೂಡ ಸೇರಿದೆ. ಈ ಫೋನ್ ದೊಡ್ಡ ವಿನ್ಯಾಸ ಮತ್ತು ಹಾರ್ಡ್‌ವೇರ್ ಬದಲಾವಣೆಗಳನ್ನು ನೋಡುವ ನಿರೀಕ್ಷೆಯಿದೆ. ಐಫೋನ್ 14 ಪಂಚ್-ಹೋಲ್ ಕ್ಯಾಮೆರಾದೊಂದಿಗೆ ಬರಲಿದೆ ಎನ್ನುವ ಸಾಕಷ್ಟು ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದಲ್ಲದೆ ಐಫೋನ್ 14 ಕ್ಯಾಮೆರಾ ವಿಭಾಗದಲ್ಲಿ ಹೊಸ ಅಪ್ಡೇಟ್‌ನಲ್ಲಿ ಬರಲಿದೆ ಎನ್ನಲಾಗಿದೆ. ಅದರಂತೆ ಇದರ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಲೆನ್ಸ್‌ನೊಂದಿಗೆ ಬದಲಾಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಆಪಲ್ ವಾಚ್ ಸರಣಿ 8

ಆಪಲ್ ವಾಚ್ ಸರಣಿ 8

ಪ್ರಸ್ತುತ ವರ್ಷ ಆಪಲ್‌ ಕಂಪೆನಿ ಹೊಸ ತಲೆಮಾರಿನ ಆಪಲ್ ವಾಚ್ ಸರಣಿ 8ಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಸರಣಿಯ ವಾಚ್ ಫ್ಲಾಟ್ ಸೈಡ್‌ಗಳು ಮತ್ತು ಡ್ಯುಯಲ್ ಮೈಕ್ರೊಫೋನ್ ಕಟೌಟ್‌ಗಳನ್ನು ಹೊಂದಿರಬಹುದು. ಅಲ್ಲದೆ ಹೆಲ್ತ್‌ ಫೀಚರ್ಸ್‌ಗಳ ಮೇಲೆ ಹೆಚ್ಚನ ಗಮನ ನೀಡುವ ಸಾಧ್ಯತೆ ಇದೆ. ಆದರಿಂದ ಈ ವಾಚ್‌ನಲ್ಲಿ ತಾಪಮಾನ ಮಾನಿಟರಿಂಗ್, ಸ್ಲೀಪ್ ಅಪ್ನಿಯಾ ಪತ್ತೆ, ಕಾರ್ ಕ್ರ್ಯಾಶ್ ಪತ್ತೆ ಮತ್ತು ಹೆಚ್ಚಿನ ಫೀಚರ್ಸ್‌ಗಳನ್ನು ಕಾಣಬಹುದು ಎಂದು ಹೇಳಲಾಗಿದೆ.

ಆಪಲ್‌ ಏರ್‌ಪಾಡ್ಸ್‌ ಪ್ರೊ 2

ಆಪಲ್‌ ಏರ್‌ಪಾಡ್ಸ್‌ ಪ್ರೊ 2

ಆಪಲ್‌ನ ಪ್ರೀಮಿಯಂ TWS ನ ಮೊದಲ ಆವೃತ್ತಿಯನ್ನು 2019 ರಲ್ಲಿ ಪ್ರಾರಂಭಿಸಲಾಗಿತ್ತು. ಅದರ ಮುಂದಿನ ಆವೃತ್ತಿ ಈ ವರ್ಷ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಆಪಲ್‌ ಏರ್‌ಪಾಡ್ಸ್‌ ಪ್ರೊ 2 ಕಾಂಡದ ವಿನ್ಯಾಸವನ್ನು ತೊಡೆದುಹಾಕುತ್ತದೆ. ಅಲ್ಲದೆ ಇದು ಬೀಟ್ಸ್ ಫಿಟ್ ಪ್ರೊನಂತೆಯೇ ವಿನ್ಯಾಸದಲ್ಲಿ ನೀಡಲಾಗುವುದು ಎನ್ನಲಾಗಿದೆ.

ಆಪಲ್‌ AR/AR ಹೆಡ್‌ಸೆಟ್

ಆಪಲ್‌ AR/AR ಹೆಡ್‌ಸೆಟ್

ಆಪಲ್‌ AR/VR ಹೆಡ್‌ಸೆಟ್ 2022 ರಲ್ಲಿ ಬಿಡುಗಡೆ ಆಗುವ ಬಹುನಿರೀಕ್ಷಿತ ಡಿವೈಸ್‌ಗಳಲ್ಲಿ ಒಂದಾಗಿದೆ. ಈ ಡಿವೈಸ್‌ನ ಮಾಹಿತಿ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಂತೆ ಈ ಹೆಡ್‌ಸೆಟ್ ಜೋಡಿ 8K ಡಿಸ್ಪ್ಲೇಗಳೊಂದಿಗೆ ಸಜ್ಜುಗೊಂಡಿದೆ ಎಂದು ಸೂಚಿಸುತ್ತದೆ. ಅಲ್ಲದೆ ಈ ಡಿವೈಸ್‌ನಲ್ಲಿ ಹೊಸ MacBook Pro ನಲ್ಲಿ ಬಳಸಲಾದ M1 Pro ಪವರ್‌ ಅನ್ನು ನೀಡುವ ಸಾಧ್ಯತೆ ಇದೆ.

Best Mobiles in India

English summary
Apple is expected to shift to Apple Silicon completely with the launch of the new Mac Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X