ಭಾರತದಲ್ಲಿ ಲಭ್ಯವಿರುವ 49 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳು!

|

ಟೆಕ್ನಾಲಜಿ ಮುಂದುವರೆದಂತೆ ಕಲರ್‌ ಟಿವಿ ವ್ಯಾಮೋಹದಲ್ಲಿದ್ದ ಜನ ಇದೀಗ ಸ್ಮಾರ್ಟ್‌ಟಿವಿಗಳಿಗೆ ಮಾರುಹೋಗಿದ್ದಾರೆ. ಹೊಸ ಮಾದರಿಯ ವಿಭಿನ್ನ ರೆಸಲ್ಯೂಶನ್‌ ಸಾಮರ್ಥ್ಯದ ಸ್ಮಾರ್ಟ್‌ಟಿವಿಗಳಿಗೆನೂ ಭರವಿಲ್ಲ. ಟೆಕ್‌ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳು ಲಭ್ಯವಿವೆ. ವೈವಿಧ್ಯಮಯ ಗಾತ್ರದ ಸ್ಮಾರ್ಟ್‌ಟಿವಿಗಳು ಕೂಡ ಖರೀದಿಸಲು ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ಸ್ಮಾರ್ಟ್‌ಟಿವಿಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿವೆ. ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರಾಂಡ್‌ ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 35 ಸಾವಿರ ರೂ ಒಳಗಿನ ಸ್ಮಾರ್ಟ್‌ಟಿವಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿರಿ.

ಸ್ಮಾರ್ಟ್‌ಟಿವಿ

ಹೌದು, ಮಾರುಕಟ್ಟೆಯಲ್ಲಿ ಹಲವು ವೈವಿಧ್ಯಯ ಸ್ಮಾರ್ಟ್‌ಟಿವಿಗಳು ಲಭ್ಯವಿವೆ. ಸದ್ಯ ಅಮೆಜಾನ್‌ ಫ್ರೀಡಂ ಸೇಲ್‌ನಲ್ಲಿ ಹಲವು ಸ್ಮಾರ್ಟ್‌ಟಿವಿಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಸದ್ಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ನಲ್ಲಿ ಸ್ಮಾರ್ಟ್ ಟಿವಿಗಳ ಖರೀದಿಗೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಕಂಪನಿಯು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಖರೀದಿಗಳಿಗೆ 10% ರಿಯಾಯಿತಿ ಮತ್ತು ವಿನಿಮಯ ಕೊಡುಗೆಗಳಲ್ಲಿ, 500, ರಿಂದ 13,500ರೂ ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಇದೀಗ 35,000 ರೂ ಒಳಗೆ ಲಭ್ಯವಿರುವ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಂಕೊ ಟಿವಿ

ಶಿಂಕೊ ಟಿವಿ

ಶಿಂಕೊ SO50QBT ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಎರಡು ಯುಎಸ್‌ಬಿ ಮತ್ತು 3HDMI ಪೋರ್ಟ್‌ಗಳನ್ನು ಹೊಂದಿದೆ. ಅಲ್ಲದೆ ಇದು 2GB RAM ಮತ್ತು 16GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ಮತ್ತು ವೈ-ಫೈಯನ್ನು ಬೆಂಬಲಿಸಲಿದೆ. ಇದಲ್ಲದೆ ಇದು ಆಂಡ್ರಾಯ್ಡ್ 9 ನಲ್ಲಿ ಇಂಟರ್‌ಬಿಲ್ಟ್‌ ಯುನಿವಾಲ್ - UI ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಇದರಲ್ಲಿ ಡಿಸ್ನಿ + ಹಾಟ್‌ಸ್ಟಾರ್, ZEE5, ಸೋನಿ ಲಿವ್, ವೂಟ್, ಸನ್ NXT, ಜಿಯೋ ಸಿನೆಮಾ, ಹಿರೋಸ್‌ನೌ, ಹಂಗಮಾ ಪ್ಲೇ, ALTಬಾಲಾಜಿ, ಮೂವಿ ಬಾಕ್ಸ್, ಬ್ಲೂಮ್‌ಬರ್ಗ್ ಕ್ವಿಂಟ್, ದಿ ಕ್ವಿಂಟ್ , ಹೋಮ್‌ವೆಡಾ, ಎಪಿಕ್ ಆನ್ ಮತ್ತು ಡೊಕುಬೇ ಸನ್ನು ಬೆಂಬಲಿಸಲಿದೆ. ಸದ್ಯ ಶಿಂಕೊ ಟಿವಿ ಅಮೆಜಾನ್‌ನಲ್ಲಿ, 24,250 ಕ್ಕೆ ಲಭ್ಯವಿದೆ.

ಕೊಡಾಕ್ ಟಿವಿ

ಕೊಡಾಕ್ ಟಿವಿ

ಕೊಡಾಕ್ TV ಡಿಟಿಎಸ್ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಬೆಂಬಲದೊಂದಿಗೆ 30 ವ್ಯಾಟ್ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, E ಡ್‌ಇಇ 5 ಮತ್ತು ಸೋನಿ ಲಿವ್ ಸೇರಿದಂತೆ ಎಲ್ಲಾ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲವನ್ನು ಹೊಂದಿದೆ. ಇದು ಇಂಟರ್‌ಬಿಲ್ಟ್‌ Chromecast ಧ್ವನಿ-ಶಕ್ತಗೊಂಡ ದೂರಸ್ಥ ನಿಯಂತ್ರಣದೊಂದಿಗೆ ಬರುತ್ತದೆ. ಇದು ಅಮೆಜಾನ್‌ನಲ್ಲಿ, 27,999 ಕ್ಕೆ ಲಭ್ಯವಿದೆ.

ಶಿಯೋಮಿ ಮಿ ಟಿವಿ

ಶಿಯೋಮಿ ಮಿ ಟಿವಿ

ಈ ಸ್ಮಾರ್ಟ್‌ಟಿವಿ ಡೇಟಾ ಸೇವರ್ ಫೀಚರ್ಸ್‌ ಹೊಂದಿದ್ದು, ಬಹಳ ವಿಶೇಷ ಎನಿಸಿದೆ. ಇದು ಬಳಕೆದಾರರು ಕನ್ಸೂಮ್‌ ಮಾಡುವ ಡೇಟಾದ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಅನುಮತಿಸುತ್ತದೆ, ಆದರೆ ಟಿವಿಯನ್ನು ಇಂಟರ್‌ನೆಟ್‌ಗೆ ಸಂಪರ್ಕಿಸಿದಾಗ, ಸ್ಮಾರ್ಟ್‌ಫೋನ್‌ನ ಹಾಟ್‌ಸ್ಪಾಟ್ ಬಳಸುವಾಗ ಕಡಿಮೆ ಡೇಟಾವನ್ನು ಕನ್ಸೂಮ್‌ ಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದು 29,999 ರೂ ಬೆಲೆಯಲ್ಲಿ ಲಭ್ಯವಾಗಲಿದೆ.

ಟಿಸಿಎಲ್ ಟಿವಿ

ಟಿಸಿಎಲ್ ಟಿವಿ

ಇದು 4K ಪ್ಯಾನೆಲ್‌ ಹೊಂದಿರುವ ಸ್ಮಾರ್ಟ್‌ಟಿವಿ ಆಗಿದ್ದು, ಇದು HDRಗೆ ಬೆಂಬಲವನ್ನು ನೀಡುತ್ತದೆ. ಜೊತೆಗೆ ಇದು ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಗೂಗಲ್ ಪ್ಲೇ ಸ್ಟೋರ್‌ಗೆ ಬೆಂಬಲವನ್ನು ನೀಡುತ್ತದೆ. ಇದು ಇಂಟರ್‌ಬಿಲ್ಟ್‌ Chromecast ಅನ್ನು ಹೊಂದಿದ್ದು, ಈ ಸ್ಮಾರ್ಟ್‌ಟಿವಿ 34,990 ಬೆಲೆಯಲ್ಲಿ ಲಭ್ಯವಾಗಲಿದೆ..

Best Mobiles in India

Read more about:
English summary
From Xiaomi to TCL here are the top 49-inch smart TVs that you can buy at the Amazon Freedom day sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X